ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ಸ್ಟೇಶನ್ ಗೋಡೆ ಹತ್ತಿದ ಯುವತಿಯನ್ನು ಆಕೆಗೆ ಗೊತ್ತಾಗದಂತೆ ಕಾಪಾಡಿದ ಪೊಲೀಸ್; ವಿಡಿಯೋ ವೈರಲ್
ಯುವತಿ ಮೆಟ್ರೋಸ್ಟೇಶನ್ನ ಸೆಕ್ಟರ್ 28ರ ಗೋಡೆಯ ಮೇಲೆ ಕುಳಿತಿದ್ದಳು. ಆಕೆಯ ಮನವೊಲಿಸಲು ಹಲವರು ಪ್ರಯತ್ನಿಸುತ್ತಿದ್ದರು. ಮೆಟ್ರೋ ಸ್ಟೇಶನ್ನ ಸೆಕ್ಯೂರಿಟಿ ಸಿಬ್ಬಂದಿಯೂ ಆಕೆಯ ಬಳಿ ಸುರಕ್ಷಿತವಾಗಿ ಕೆಳಗೆ ಬರುವಂತೆ ಕೇಳಿಕೊಳ್ಳುತ್ತಿದ್ದರು.
ಮೆಟ್ರೋ ಸ್ಟೇಶನ್ನ ಎತ್ತರದ ಗೋಡೆಯೊಂದನ್ನು ಹತ್ತಿ, ಅಲ್ಲಿಂದ ಹಾರಲು ಯತ್ನಿಸುತ್ತಿದ್ದ ಯುವತಿಯನ್ನು ಅದೇ ಸ್ಟೇಶನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವು ಪೊಲೀಸ್ ಸಿಬ್ಬಂದಿ ಸರಿಯಾದ ಸಮಯದಲ್ಲಿ ರಕ್ಷಿಸಿದ್ದಾರೆ. ದೆಹಲಿ ಸಮೀಪದ ಫರಿದಾಬಾದ್ನಲ್ಲಿರುವ ಮೆಟ್ರೋಸ್ಟೇಶನ್ನಲ್ಲಿ ಘಟನೆ ನಡೆದಿದ್ದು, 45 ಸೆಕೆಂಡ್ಗಳ ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್ ಆಗಿದೆ.
ಆ ಯುವತಿ ಮೆಟ್ರೋಸ್ಟೇಶನ್ನ ಸೆಕ್ಟರ್ 28ರ ಗೋಡೆಯ ಮೇಲೆ ಕುಳಿತಿದ್ದಳು. ಆಕೆಯ ಮನವೊಲಿಸಲು ಹಲವರು ಪ್ರಯತ್ನಿಸುತ್ತಿದ್ದರು. ಮೆಟ್ರೋ ಸ್ಟೇಶನ್ನ ಸೆಕ್ಯೂರಿಟಿ ಸಿಬ್ಬಂದಿಯೂ ಆಕೆಯ ಬಳಿ ಸುರಕ್ಷಿತವಾಗಿ ಕೆಳಗೆ ಬರುವಂತೆ ಕೇಳಿಕೊಳ್ಳುತ್ತಿದ್ದರು. ಆದರೆ ಆಕೆ ಅಲ್ಲೇ ಮೌನವಾಗಿ ಕುಳಿತಿದ್ದಳು. ಕೆಳಗೆ ಹಾರಲೂ ಇಲ್ಲ..ಮೇಲೆ ಬರಲೂ ಇಲ್ಲ. ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿಯೂ ಅಲ್ಲಿ ಬಂದಿದ್ದಾರೆ. ಅದರಲ್ಲಿ ಕಾನ್ಸ್ಟೆಬಲ್ ಒಬ್ಬರು, ಆಕೆಗೆ ಗೊತ್ತಾಗದಂತೆ ಸುಮ್ಮನೆ ಆಕೆ ಇದ್ದ ಸ್ಥಳಕ್ಕೆ ಹೋಗಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಪೊಲೀಸ್ ಕಾನ್ಸ್ಟೆಬಲ್ ಬಂದಿದ್ದು ಹುಡುಗಿಗೆ ಗೊತ್ತಾಗಲೇ ಇಲ್ಲ. ಅವರು ಹಿಡಿದುಕೊಂಡ ಬಳಿಕ, ಇನ್ನೊಬ್ಬರೂ ಮೇಲಿನಿಂದಲೇ ಹಾಕಿ ಬಂದು ಆಕೆಯನ್ನು ಹಿಡಿದುಕೊಂಡಿದ್ದಾರೆ. ನಂತರ ಅವರಿಬ್ಬರೂ ಸೇರಿ ಆಕೆಯನ್ನು ಕಾಪಾಡಿದ್ದಾರೆ.
ಹುಡುಗಿಯನ್ನು ಯಶಸ್ವಿಯಾಗಿ ರಕ್ಷಿಸಿದ ಕಾನ್ಸ್ಟೆಬಲ್ ಸರ್ಫ್ರಾಜ್ ಅವರನ್ನು ಪೊಲೀಸ್ ಕಮಿಷನರ್ ಒಪಿ ಸಿಂಗ್ ಶ್ಲಾಘಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರೂ ಫುಲ್ ಖುಷಿ ವ್ಯಕ್ತಪಡಿಸಿದ್ದಾರೆ. ಅವರ ಸಮಯಪ್ರಜ್ಞೆಗೆ ದೊಡ್ಡ ಸಲಾಂ ಎಂದಿದ್ದಾರೆ. ಈ ವಿಡಿಯೋ ನೋಡಿ..
ಇದನ್ನೂ ಓದಿ: Uttara Kannada Flood: ಉತ್ತರ ಕನ್ನಡ ಪ್ರವಾಹ; ಭೂಕುಸಿತಕ್ಕೆ ತತ್ತರಿಸಿದ ಯಲ್ಲಾಪುರದ ಗ್ರಾಮಗಳು
@FBDPolice @cmohry फरीदाबाद पुलिस के सबइंस्पेक्टर धनप्रकाश और कॉन्स्टेबल सरफराज की बहादुरी,खुदकुशी के आमादा एक लड़को को मेट्रो स्टेशन पर कुछ इस तरह बचाया,लड़की काम को लेकर डिप्रेशन में थी pic.twitter.com/yEN5WJnA59
— Mukesh singh sengar मुकेश सिंह सेंगर (@mukeshmukeshs) July 25, 2021
Girl Who Attempting Suicide is saved by Police In Delhi
Published On - 6:56 pm, Sun, 25 July 21