Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವರಮಾಲಾ ಕಾರ್ಯಕ್ರಮದಲ್ಲಿ ಕಬಡ್ಡಿ ಆಡಿದ ವಧು; ಆಟದಲ್ಲಿ ಗೆದ್ದು ಬೀಗಿದ ವರ ಹಾರ ಹಾಕಿಯೇ ಬಿಟ್ಟ!

ವಧು ಮತ್ತು ವರನಿಗೆ ಕಾಲೆಳೆಯುವುದರ ಜತೆಗೆ ಹಾರ ಹಾಕುವ ಸಂದರ್ಭದಲ್ಲಿಯೂ ಕಾಡಿಸುವ ಅದೆಷ್ಟೋ ವಿಡಿಯೋಗಳನ್ನು ನೋಡಿದ್ದೇವೆ. ಅಂಥಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡುತ್ತಾ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

Viral Video: ವರಮಾಲಾ ಕಾರ್ಯಕ್ರಮದಲ್ಲಿ ಕಬಡ್ಡಿ ಆಡಿದ ವಧು; ಆಟದಲ್ಲಿ ಗೆದ್ದು ಬೀಗಿದ ವರ ಹಾರ ಹಾಕಿಯೇ ಬಿಟ್ಟ!
ವರಮಾಲಾ ಕಾರ್ಯಕ್ರಮದಲ್ಲಿ ಕಬಡ್ಡಿ ಆಡಿದ ವಧು
Follow us
TV9 Web
| Updated By: shruti hegde

Updated on:Jul 26, 2021 | 1:44 PM

ಮದುವೆ ಅಂದಾಕ್ಷಣ ಮೋಜು, ಮಸ್ತಿ ಎಲ್ಲವೂ ಇದೆ. ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಸಂತೋಷದಿಂದ ವಿವಾಹ ಮಹೋತ್ಸವವನ್ನು(Wedding) ಆಚರಿಸಲಾಗುತ್ತದೆ. ವಧು(Bride) ಮತ್ತು ವರನಿಗೆ(Groom) ಕಾಲೆಳೆಯುವುದರ ಜತೆಗೆ ಹಾರ ಹಾಕುವ ಸಂದರ್ಭದಲ್ಲಿಯೂ ಕಾಡಿಸುವ ಅದೆಷ್ಟೋ ವಿಡಿಯೋಗಳನ್ನು ನೋಡಿದ್ದೇವೆ. ಅಂಥಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ. ವಿಡಿಯೋ ನೋಡುತ್ತಾ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ವಿಡಿಯೋವನ್ನು ಉತ್ತರ ಪ್ರದೇಶದ ಪರ್ತಕರ್ತ ಮನೀಶ್ ಮಿಶ್ರಾ ಹಂಚಿಕೊಂಡಿದ್ದಾರೆ. ವಧು ವರಮಾಲಾ ಕಾರ್ಯಕ್ರಮದಲ್ಲಿ ಕಬಡ್ಡಿ ಆಟವನ್ನೇ ಆಡುತ್ತಿದ್ದಾಳೆ. ವಧುವು ಹಾರ ಹಾಕುವಾಗ ವರ ತಲೆತಗ್ಗಿಸಿ ಹಾರ ಹಾಕಿಸಿಕೊಳ್ಳುತ್ತಾನೆ. ಬಳಿಕ ವರ ಹಾರ ಹಾಕಲು ಬಂದಾಗ ವಧು ತಪ್ಪಿಸಿಕೊಂಡು ಓಡುತ್ತಿದ್ದಾಳೆ. ವಿಡೀಯೋ ಇದೀಗ ಭಾರೀ ಸುದ್ದಿಯಲ್ಲಿದೆ.

ಮದುವೆ ಸಮಾರಂಭದಲ್ಲಿ ನಡೆಯುವ ಘಟನೆಗಳು ಮನಸ್ಸಿಗೆ ಹೆಚ್ಚು ಇಷ್ಟವಾಗುತ್ತದೆ. ಅದರಲ್ಲಿಯೂ ನಗು ತರಿಸುವ ಎಲ್ಲಾ ವಿಡಿಯೋಗಳು ಬಹುಬೇಗ ಮನಸ್ಸಿಗೆ ಇಷ್ಟವಾಗುತ್ತವೆ. ಅಂಥಹುದೇ ಒಂದು ವಿಡಿಯೋ ಇದಾಗಿದ್ದು ನೆಟ್ಟಿಗರು ನಗುತ್ತಾ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ವಧು ವರನಿಂದ ಹಾರ ಹಾಕಿಸಿಕೊಳ್ಳಲು ಸತಾಯಿಸುತ್ತಿದ್ದಾಳೆ. ಬಹುಷಃ ವರನೊಂದಿಗೆ ಕಬಡ್ಡಿ ಆಟ ಆಡುವ ಆಸೆ ಇತ್ತೇನೋ.. ಆದರೆ ವಧುವಿಗೆ ಇದು ಮದುವೆಯ ಸಮಾರಂಭವಾಗಿತ್ತು. ವಧುವಿಗೆ ಹಾರ ಹಾಕಲು ವರನಿಗೆ ಸಹಾಯ ಮಾಡಿದ ಎಲ್ಲಾ ಸ್ನೇಹತರಿಗೆ ಧನ್ಯವಾದಗಳು ಎಂದು ಬರೆಯುವ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ.

ಹಾರ ಹಾಕುವ ಸಮಯದಲ್ಲಿ ನಡೆದ ತಮಾಷೆಯ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳಲಾಗಿದೆ. ವರನು ಹಾರ ಹಾಕಲು ಹೋದಂತೆಲ್ಲಾ ವಧು ಹಿಂದೆ .. ಹಿಂದೆ .. ಸರಿಯುತ್ತಿದ್ದಾಳೆ. ಇನ್ನೇನು ಹಾರ ಹಾಕುತ್ತಾನೆ ಅನ್ನುವಷ್ಟರಲ್ಲಿ ತಪ್ಪಿಸಿಕೊಳ್ಳುತ್ತಾಳೆ. ಇಡೀ ವಿವಾಹದ ವೇದಿಕೆಯ ತುಂಬಾ ಓಡಾಡಿದ್ದಾಳೆ. ವಿಡಿಯೋವನ್ನು ನೆಟ್ಟಿಗರು ಇಷ್ಟಪಟ್ಟಿದ್ದು ನಗುವ ಎಮೋಜಿ ಕಳುಹಿಸುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಮದುವೆ ಮಂಟಪದಲ್ಲಿಯೂ ಲ್ಯಾಪ್​ಟಾಪ್​ ಹಿಡಿದು ಕುಳಿತ ವರ; ವಧುವಿನ ರಿಯಾಕ್ಷನ್ ಮಿಸ್ ಮಾಡ್ಕೊಳ್ಳೊ ಹಾಗೇ ಇಲ್ಲಾ!

(Bride play kabaddi in wedding hall video goes viral)

Published On - 1:42 pm, Mon, 26 July 21

ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ