ಎರಡು ತಲೆ ಹಾವು ಊಟ ಮಾಡೋದು ಹೇಗೆ ಗೊತ್ತಾ? ಎರಡೂ ಬಾಯಲ್ಲಿ ಒಂದೇ ಸಲಕ್ಕೆ ಇಲಿಗಳನ್ನು ಗುಳುಂ ಮಾಡಿದ ವಿಡಿಯೋ ಇಲ್ಲಿದೆ

ಅಚ್ಚರಿಯ ವಿಚಾರವೆಂದರೆ ಈ ಎರಡು ತಲೆಗಳಿಗೂ ಒಂದೊಂದು ಹೆಸರಿಡಲಾಗಿದೆ. ಒಂದು ತಲೆಗೆ ಬೆನ್​ ಎಂದೂ ಮತ್ತೊಂದಕ್ಕೆ ಜೆರ್ರಿ ಎಂದೂ ಹೆಸರಿಡಲಾಗಿದ್ದು, ಪ್ರಾಣಿಪ್ರಿಯನಾದ ಬ್ರಿಯಾನ್ ತಾನೂ ಚಿತ್ರೀಕರಿಸಿ ಇಟ್ಟುಕೊಂಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾನೆ.

ಎರಡು ತಲೆ ಹಾವು ಊಟ ಮಾಡೋದು ಹೇಗೆ ಗೊತ್ತಾ? ಎರಡೂ ಬಾಯಲ್ಲಿ ಒಂದೇ ಸಲಕ್ಕೆ ಇಲಿಗಳನ್ನು ಗುಳುಂ ಮಾಡಿದ ವಿಡಿಯೋ ಇಲ್ಲಿದೆ
ಮೂಷಿಕನನ್ನು ಭಕ್ಷಿಸುತ್ತಿರುವ ಎರಡು ತಲೆ ಹಾವು
Follow us
TV9 Web
| Updated By: Skanda

Updated on: Jul 25, 2021 | 2:40 PM

ಈ ಭೂಮಿಯ ಮೇಲಿರುವ ಅಸಂಖ್ಯಾತ ಜೀವಿಗಳಲ್ಲಿ ಒಂದೊಂದು ಪ್ರಬೇಧವೂ ವಿಶಿಷ್ಟತೆಗಳೊಂದಿಗೆ ರೂಪುಗೊಂಡಿರುತ್ತವೆ. ಮನುಷ್ಯ ತನ್ನನ್ನು ತಾನು ಬುದ್ಧಿಜೀವಿ ಎಂದು ಕರೆದುಕೊಂಡರೂ ಪ್ರಕೃತಿಯ ಕೆಲ ಸೃಷ್ಟಿ ಆತನನ್ನು ಮೂಕ ವಿಸ್ಮಿತನನ್ನಾಗಿಸದೇ ಇರದು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿರುವ ವಿಡಿಯೋ (Viral Video) ಒಂದು ನೋಡುಗರ ಮೈ ಜುಂ ಎನ್ನುವಂತೆ ಮಾಡುತ್ತದೆ. ಒಂದುವೇಳೆ ನೀವು ಉರಗಗಳಿಗೆ ಹೆದರುವ ವ್ಯಕ್ತಿಯಾಗಿದ್ದರೆ ಇದನ್ನು ನೋಡದಿರುವುದೇ ಉತ್ತಮ. ಹಾಗಂತ ಈ ವಿಡಿಯೋದಲ್ಲಿ (Video) ಅತೀ ಕ್ರೂರವಾಗಿದ್ದು ಏನೂ ಇಲ್ಲ. ಪ್ರಕೃತಿ ಸಹಜ ನಿಯಮವೆಂಬಂತೆ ಹಾವೊಂದು ತನ್ನ ಆಹಾರವನ್ನು (Food) ಭಕ್ಷಿಸುತ್ತಿರುವುದು ಕಾಣಿಸುತ್ತದೆ. ಆದರೆ, ಈ ಹಾವು ಎಲ್ಲಾ ಹಾವುಗಳಂತೆ ಕೇವಲ ಒಂದು ತಲೆಯನ್ನು ಹೊಂದಿರದೇ ಎರಡೆರೆಡು ತಲೆ (Two Headed Snake) ಉಳ್ಳದಾಗಿದ್ದು, ಎರಡೂ ತಲೆಗಳಿಂದ ಏಕಕಾಲಕ್ಕೆ ಆಹಾರ ಕಬಳಿಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ವಿಡಿಯೋದಲ್ಲಿ ಕಾಣುವ ಎರಡು ತಲೆ ಹಾವು ಏಕಕಾಲಕ್ಕೆ ಎರಡು ಇಲಿಗಳನ್ನು ಭಕ್ಷಿಸುತ್ತಿರುವುದು ಕಾಣಿಸುತ್ತದೆ. ಸಾಧಾರಣವಾಗಿ ಕೆಲ ವರ್ಷಗಳಿಂದೀಚೆಗೆ ಎರಡು ತಲೆ ಹಾವಿಗೆ ಭಾರೀ ಡಿಮ್ಯಾಂಡ್, ಎರಡು ತಲೆ ಹಾವನ್ನು ಕದ್ದು ಸಾಗಿಸುತ್ತಿದ್ದವರ ಬಂಧನ ಎಂಬೆಲ್ಲಾ ಸುದ್ದಿಗಳನ್ನು ಓದಿರುತ್ತೇವೆ, ನೋಡಿರುತ್ತೇವೆ. ಆದರೆ, ಆ ಎರಡು ತಲೆ ಹಾವು ಹೇಗಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ಬಲ್ಲವರ ಸಂಖ್ಯೆ ಕಡಿಮೆ. ಅಂತಹವರು ಈ ವಿಡಿಯೋ ನೋಡುವ ಮೂಲಕ ತಮ್ಮ ಕುತೂಹಲಕ್ಕೆ ಉತ್ತರ ಕಂಡುಕೊಳ್ಳಬಹುದು.

ಬ್ರಿಯಾನ್​ ಎಂಬಾತ ಸ್ನೇಕ್​​ಬೈಟ್ಸ್​ಟಿವಿ ಎಂಬ ಇನ್​ಸ್ಟಾಗ್ರಾಂ ಪೇಜಿನಲ್ಲಿ ಎರಡು ತಲೆ ಹಾವು ಎರಡು ಮೂಷಿಕಗಳನ್ನು ಭಕ್ಷಿಸುತ್ತಿರುವ ಅಪರೂಪದ ವಿಡಿಯೋ ಹಂಚಿಕೊಂಡಿದ್ದು, ಅದನ್ನು ಈಗಾಗಲೇ ಸಾವಿರಾರು ಜನ ವೀಕ್ಷಿಸಿದ್ದಾರೆ. ಅಚ್ಚರಿಯ ವಿಚಾರವೆಂದರೆ ಈ ಎರಡು ತಲೆಗಳಿಗೂ ಒಂದೊಂದು ಹೆಸರಿಡಲಾಗಿದೆ. ಒಂದು ತಲೆಗೆ ಬೆನ್​ ಎಂದೂ ಮತ್ತೊಂದಕ್ಕೆ ಜೆರ್ರಿ ಎಂದೂ ಹೆಸರಿಡಲಾಗಿದ್ದು, ಪ್ರಾಣಿಪ್ರಿಯನಾದ ಬ್ರಿಯಾನ್ ತಾನೂ ಚಿತ್ರೀಕರಿಸಿ ಇಟ್ಟುಕೊಂಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾನೆ.

ಈ ವಿಡಿಯೋವನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಚ್ಚರಿ ವ್ಯಕ್ತಪಡಿಸಿದ್ದು, ತರಹೇವಾರಿ ಕಮೆಂಟುಗಳ ಮೂಲಕ ತಮ್ಮ ಆಶ್ಚರ್ಯವನ್ನು ಹೊರಹಾಕಿದ್ದಾರೆ. ಕೆಲವರು ಎರಡು ತಲೆ ಹಾವು ಎಲ್ಲಿ ಸಿಗುತ್ತದೆ? ನನಗೂ ಒಂದು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನು ಕೆಲವರಂತೂ ನಾನು ನನ್ನ ಜೀವಮಾನದಲ್ಲಿ ಇಂಥಹದ್ದೊಂದು ಹಾವನ್ನು ನೋಡಿರಲಿಲ್ಲ. ಅವು ಇರುತ್ತವೆ ಎನ್ನುವುದೂ ಗೊತ್ತಿರಲಿಲ್ಲ, ಇದನ್ನು ನೋಡಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಂಡ ಹೋದಲ್ಲಿ, ಬಂದಲ್ಲಿ ಹೂಸು ಬಿಟ್ಟು ಮರ್ಯಾದೆ ತೆಗೀತಾನೆ ಎಂದು ತಕರಾರು ತೆಗೆದ ಹೆಂಡತಿ: ವೈರಲ್ ಆಯ್ತು ಸುದ್ದಿ 

ಗರಿಬಿಚ್ಚಿ ಕುಣಿಯುತ್ತಿದ್ದ ನವಿಲಿನ ಮೇಲೆ ಹುಲಿ ದಾಳಿ; ರಾಷ್ಟ್ರಪಕ್ಷಿ ಹಾಗೂ ರಾಷ್ಟ್ರಪ್ರಾಣಿ ಮುಖಾಮುಖಿಯಾದ ವಿಡಿಯೋ ವೈರಲ್

(Two Headed Snake eating mice simultaneously video goes viral do not forget to watch)

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ