ಗಂಡ ಹೋದಲ್ಲಿ, ಬಂದಲ್ಲಿ ಹೂಸು ಬಿಟ್ಟು ಮರ್ಯಾದೆ ತೆಗೀತಾನೆ ಎಂದು ತಕರಾರು ತೆಗೆದ ಹೆಂಡತಿ: ವೈರಲ್ ಆಯ್ತು ಸುದ್ದಿ

ಪತಿಯ ಹೂಸು ಬಿಡುವ ಅಭ್ಯಾಸದ ಬಗ್ಗೆ ಮೊದಲೇ ತಿಳಿದಿದ್ದ ಪತ್ನಿ ಅದೊಮ್ಮೆ ಆಕೆಯ ಬಾಸ್ ಹಾಗೂ ಗೆಳತಿಯರೊಂದಿಗಿನ ಪಾರ್ಟಿಗೆ ಪತಿರಾಯನನ್ನು ಕರೆದುಕೊಂಡು ಹೋಗಿದ್ದಳಂತೆ. ಸ್ನೇಹಿತೆಯರಿಗೆ ಗಂಡನನ್ನು ಪರಿಚಯಿಸಿ ಬಾಸ್ ಬಂದಾಗ ಕೈಕುಲುಕಲು ಹೇಳುತ್ತಿದ್ದಂತೆಯೇ ಪತಿ ಮಹಾಶಯ ದೊಡ್ಡದಾಗಿ ಸದ್ದು ಮಾಡುತ್ತಾ ಹೂಸು ಬಿಟ್ಟನಂತೆ.

ಗಂಡ ಹೋದಲ್ಲಿ, ಬಂದಲ್ಲಿ ಹೂಸು ಬಿಟ್ಟು ಮರ್ಯಾದೆ ತೆಗೀತಾನೆ ಎಂದು ತಕರಾರು ತೆಗೆದ ಹೆಂಡತಿ: ವೈರಲ್ ಆಯ್ತು ಸುದ್ದಿ
ಸಾಂಕೇತಿಕ ಚಿತ್ರ
TV9kannada Web Team

| Edited By: Skanda

Jul 20, 2021 | 11:10 AM

ಕೆಲವೊಂದು ವಿಷಯಗಳು ಹೇಳುವುದಕ್ಕೂ, ಕೇಳುವುದಕ್ಕೂ ತಮಾಷೆ (Funny) ಎನ್ನಿಸಬಹುದಾದರೂ ಅವುಗಳು ಸೃಷ್ಟಿಸುವ ಗಂಭೀರತೆ ಅನುಭವಿಸಿದವರಿಗಷ್ಟೇ ಅರ್ಥವಾಗುತ್ತದೆ. ಎಷ್ಟೋ ಬಾರಿ ನಮಗೆ ಸಮಸ್ಯೆಯೇ ಆಗಿರದ ವಿಷಯ ಬೇರೆಯವರ ಪಾಲಿಗೆ ತೀರಾ ತೊಂದರೆ ಉಂಟುಮಾಡಬಹುದು. ಅದರಲ್ಲೂ ಈ ಸಮಸ್ಯೆ (Problem) ಎನ್ನುವುದು ಗಂಡ, ಹೆಂಡತಿ (Husband and Wife) ಮಧ್ಯೆ ಉದ್ಭವಿಸಿದರಂತೂ ಅದಕ್ಕೆ ಪರಿಹಾರ ಸೂಚಿಸುವುದು ಸವಾಲಿನ ವಿಷಯ. ಅಂದಹಾಗೆ, ಇಲ್ಲೊಬ್ಬ ವ್ಯಕ್ತಿ ಉಂಟುಮಾಡುತ್ತಿರುವ ಸಮಸ್ಯೆ ವಿರುದ್ಧ ಆತನ ಪತ್ನಿ ಧ್ವನಿ ಎತ್ತಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ. ಅಷ್ಟಕ್ಕೂ ಆಕೆ ಧ್ವನಿ ಎತ್ತಲು ಕಾರಣವಾದ ವಿಷಯ ಏನೆಂದು ಹೇಳಿದರೆ ಅದು ಹಾಸ್ಯಾಸ್ಪದ ಎಂದೆನಿಸದೇ ಇರದು. ಏಕೆಂದರೆ ಆಕೆ ಧ್ವನಿ ಎತ್ತಲು ಕಾರಣ ಆತ ಮಾಡುವ ಶಬ್ಧ ಅರ್ಥಾತ್ ಅಪಾನವಾಯುವಿನ (Fart) ಸದ್ದು!

ಅಪಾನವಾಯು ಎಂದು ಹೇಳಿದರೆ ಒಂಚೂರು ಸಭ್ಯ ಪದದಂತೆ ಕಾಣುತ್ತದೆ. ಆದರೆ, ಅದರ ಗಂಭೀರತೆ ಅರ್ಥವಾಗಬೇಕೆಂದರೆ ಹೂಸು ಎಂದೇ ಹೇಳಬೇಕಾಗುತ್ತದೆ. ಇಲ್ಲಿ ಆಗಿರುವುದೇ ಹೂಸಿನ ಸಮಸ್ಯೆಯೇ. ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳಗಳನ್ನೂ ಲೆಕ್ಕಿಸದೇ ಅತ್ಯಂತ ಹೆಮ್ಮೆಯಿಂದ ಸದ್ದು ಮಾಡುತ್ತಾ ಹೂಸು ಬಿಡುವುದು ಆತನ ಪತ್ನಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತನ್ನ ಪತಿಯ ಆ ಹವ್ಯಾಸದಿಂದ ಆಕೆ ಬೇಸತ್ತು ಅಸಮಾಧಾನವನ್ನು ಹಂಚಿಕೊಂಡಿದ್ದಾಳೆ.

ತನ್ನ ಪತಿಯ ಹೂಸು ಬಿಡುವ ಅಭ್ಯಾಸದಿಂದ ತಾನೆಷ್ಟು ಮುಜುಗರಕ್ಕೆ ಈಡಾಗಬೇಕಾಯಿತು ಎಂಬ ಕೆಲ ಪ್ರಸಂಗಗಳನ್ನು ಆಕೆ ಹಂಚಿಕೊಂಡಿದ್ದು, ಅದು ಬೇರೆಯವರಿಗೆ ನಗು ತರಿಸುವಂತೆಯೇ ಇವೆ. ಪತಿಯ ಹೂಸು ಬಿಡುವ ಅಭ್ಯಾಸದ ಬಗ್ಗೆ ಮೊದಲೇ ತಿಳಿದಿದ್ದ ಪತ್ನಿ ಅದೊಮ್ಮೆ ಆಕೆಯ ಬಾಸ್ ಹಾಗೂ ಗೆಳತಿಯರೊಂದಿಗಿನ ಪಾರ್ಟಿಗೆ ಪತಿರಾಯನನ್ನು ಕರೆದುಕೊಂಡು ಹೋಗಿದ್ದಳಂತೆ. ಸ್ನೇಹಿತೆಯರಿಗೆ ಗಂಡನನ್ನು ಪರಿಚಯಿಸಿ ಬಾಸ್ ಬಂದಾಗ ಕೈಕುಲುಕಲು ಹೇಳುತ್ತಿದ್ದಂತೆಯೇ ಪತಿ ಮಹಾಶಯ ದೊಡ್ಡದಾಗಿ ಸದ್ದು ಮಾಡುತ್ತಾ ಹೂಸು ಬಿಟ್ಟನಂತೆ. ಆ ಸದ್ದು ಕೇಳಿ ಆಕೆಯ ಗೆಳತಿಯರೆಲ್ಲಾ ಮೂಗು ಮುರಿಯುತ್ತಿದ್ದರೆ ಈ ಪುಣ್ಯಾತ್ಮ ಮಾತ್ರ ಏನೂ ಆಗಿಯೇ ಇಲ್ಲವೆಂಬಂತೆ ಬೇರೆಯವರನ್ನು ಪರಿಚಯಿಸಿಕೊಳ್ಳುತ್ತಿದ್ದನಂತೆ.

ಈ ರೀತಿಯ ಅನೇಕ ಪೇಚಿನ ಪ್ರಸಂಗಗಳಿಗೆ ಸಿಲುಕಿದ ಪತ್ನಿ ಹೂಸಿನ ಬಗ್ಗೆ ಎಷ್ಟೇ ತಕರಾರೆತ್ತಿದರೂ ಆಕೆಯ ಗಂಡ ಮಾತ್ರ ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲವಂತೆ. ಅದರ ಬಗ್ಗೆ ತನ್ನ ಮುಕ್ತ ಅಭಿಪ್ರಾಯವನ್ನು ಹೇಳುವ ಆತ, ಒಳಗೆ ಇಟ್ಟುಕೊಳ್ಳುವುದಕ್ಕಿಂತ ಹೊರ ಬಿಡುವುದೇ ಲೇಸು ಎಂದು ನಗುತ್ತಾನಂತೆ. ಹೋದಲ್ಲಿ ಬಂದಲ್ಲಿ ಬಿಡುವುದಕ್ಕಿಂತ ಮನೆಯೊಳಗಿದ್ದಾಗ ಎಷ್ಟು ಬೇಕಾದರೂ ಸದ್ದು ಮಾಡಿ ಬಿಟ್ಟಕೊಳ್ಳಿ, ಕಡೇಪಕ್ಷ ಹೊರಗೆ ಹೋದಾಗ ಶೌಚಾಲಯಕ್ಕಾದರೂ ಹೋಗಿ ಹೂಸು ಬಿಡಿ ಎಂದರೆ ಗಂಡ ಮಾತ್ರ ಅತ್ಯಂತ ಆತ್ಮವಿಶ್ವಾಸದಿಂದ ಇದೊಂದು ಸಮಸ್ಯೆಯೇ ಅಲ್ಲ ಎನ್ನುತ್ತಾನಂತೆ. ಹೀಗಾಗಿ ಇದನ್ನೆಲ್ಲಾ ನೋಡಿ ನೋಡಿ ಸಹಿಸಿಕೊಳ್ಳಲು ಶುರುಮಾಡಿರುವ ಪತ್ನಿ ಈಗೀಗ ಹೊರಗೆ ಸುತ್ತಾಡಲು ಹೋದಾಗ ಗಂಡ ಪಕ್ಕದಲ್ಲಿದ್ದರೂ ಅಪರಿಚಿತಳಂತೆ ವರ್ತಿಸುವುದನ್ನು ಕಲಿತಿದ್ದಾಗಿ ಹೇಳಿಕೊಂಡಿದ್ದಾಳೆ. ಈ ಸುದ್ದಿಯೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರೂ ಈ ಅನಾಮಿಕ ಗಂಡ, ಹೆಂಡತಿಯ ಅನುಭವವನ್ನು ಓದಿ ನಕ್ಕು ಹಗುರಾಗುತ್ತಿದ್ದಾರೆ.

ಇದನ್ನೂ ಓದಿ: 30 ವರ್ಷ ದಾಟಿದ ಮಹಿಳಾವಾದಿಗೆ 25-28 ವರ್ಷದ, ಹೂಸು ಬಿಡದ, ತೇಗದ, ಅಡುಗೆ ಬಲ್ಲ ವರ ಬೇಕಾಗಿದ್ದಾನೆ: ವೈರಲ್​ ಆಯ್ತು ಜಾಹೀರಾತು 

ಸಿಇಓ ಜತೆ ಆನ್​ಲೈನ್​ ಮೀಟಿಂಗ್​ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada