ಸಿಇಓ ಜತೆ ಆನ್​ಲೈನ್​ ಮೀಟಿಂಗ್​ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ

ಚಾರ್ಲೋಟ್ ಕೊಜಿನೆಟ್ಸ್ ಎಂಬ ಮಹಿಳಾ ಉದ್ಯೋಗಿಯ ವಿಡಿಯೋ ವೈರಲ್​ ಆಗಿದ್ದು, ಸಂಸ್ಥೆಯ ಸಿಇಓ ಜತೆಗಿನ ಆನ್​ಲೈನ್​ ಮೀಟಿಂಗ್​ನಲ್ಲಿ ಭಾಗವಹಿಸಿದ್ದ ವೇಳೆ ಆಕೆ ಕುಳಿತಿದ್ದ ಕುರ್ಚಿ ಏಕಾಏಕಿ ಮುರಿದುಹೋದ ಕಾರಣ ಯಡವಟ್ಟಾಗಿದೆ.

ಸಿಇಓ ಜತೆ ಆನ್​ಲೈನ್​ ಮೀಟಿಂಗ್​ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ
ವೈರಲ್​ ವಿಡಿಯೋದ ತುಣುಕು
Follow us
| Updated By: Skanda

Updated on: Jun 28, 2021 | 11:41 AM

ಕೊರೊನಾ ಸೋಂಕು ಜಗತ್ತಿನೆಲ್ಲೆಡೆ ವ್ಯಾಪಿಸಿ ಸರಿಸುಮಾರು ಒಂದೂವರೆ ವರ್ಷವೇ ಕಳೆದುಹೋಗಿದೆ. ಸೋಂಕು ನಿಯಂತ್ರಣದ ಸಲುವಾಗಿ ಸಾಮಾಜಿಕ ಜೀವಿ ಎಂದು ಕರೆದುಕೊಳ್ಳುತ್ತಿದ್ದ ನಮ್ಮನ್ನು ನಾಲ್ಕು ಗೋಡೆಯ ಮಧ್ಯೆ ಬಂಧಿಸಿಕೊಳ್ಳಬೇಕಾದ ದುಃಸ್ಥಿತಿಯನ್ನು ಅನುಭವಿಸಿದ್ದೇವೆ. ಎಲ್ಲರ ಜೀವನ ಶೈಲಿಯೇ ಬದಲಾಗಿ ಹೋಗಿದ್ದು ಹೆಚ್ಚಿನ ಕೆಲಸ ಕಾರ್ಯಗಳೆಲ್ಲಾ ಮನೆಯಿಂದಲೇ ಆಗುತ್ತಿವೆ. ಈಗಂತೂ ಅನೇಕ ಸಂಸ್ಥೆಗಳು ವರ್ಕ್​ ಫ್ರಂ ಹೋಮ್ ಪದ್ಧತಿಯನ್ನು ಖಾಯಂಗೊಳಿಸಿವೆ. ಎಷ್ಟಂದರೂ ಮನೆಯಲ್ಲಿ ಕುಳಿತು ಕೆಲಸ ಮಾಡುವಾಗ ಆಫೀಸಿಗೆ ಹೋಗುವಾಗ ತಯಾರಿ ಆಗುವಂತೆ ಸಿದ್ಧವಾಗುವ ಅವಶ್ಯಕತೆ ಇರುವುದಿಲ್ಲವೆಂದು ಜನ ಆರಾಮಾಗಿ ತಮಗೆ ಬೇಕಾದಂತೆ ಕುಳಿತು ಕೆಲಸ ಮಾಡುತ್ತಾರೆ. ಆದರೆ, ಅದುವೇ ಎಷ್ಟೋ ಬಾರಿ ಅನಾಹುತಗಳಿಗೆ ದಾರಿಯಾಗಿದ್ದು, ಕೆಲವರ ಮುಖಭಂಗಕ್ಕೂ ಕಾರಣವಾಗಿದೆ. ಇನ್ನು ಕೆಲವೊಮ್ಮೆ ಪರಿಸ್ಥಿತಿ ಕೈ ಮೀರಿ ಹೋಗಿ ಅಚಾನಕ್​ ಆಗಿ ಪೇಚಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿರುವುದೂ ಇದೆ. ಈಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯೊಬ್ಬರು ಸಂಸ್ಥೆಯ ಸಿಇಓ ಜತೆ ಮಾತನಾಡುವಾಗ ಕುರ್ಚಿ ಮುರಿದುಹೋಗಿ ಕೆಳಗೆ ಬಿದ್ದಿದ್ದಾರೆ.

ಈ ಘಟನೆ ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಾದರೂ ಇದರ ವಿಡಿಯೋ ಜಗತ್ತಿನ ಮೂಲೆಮೂಲೆಯಲ್ಲೂ ಹರಿದಾಡಿದೆ. ಇದನ್ನು ನೋಡಿದ ಎಷ್ಟೋ ಜನರು ತಮಗಾದ ಅವಸ್ಥೆಯನ್ನು ನೆನೆಸಿಕೊಂಡು ನಕ್ಕಿದ್ದಾರೆ. ಚಾರ್ಲೋಟ್ ಕೊಜಿನೆಟ್ಸ್ ಎಂಬ ಮಹಿಳಾ ಉದ್ಯೋಗಿಯ ವಿಡಿಯೋ ವೈರಲ್​ ಆಗಿದ್ದು, ಸಂಸ್ಥೆಯ ಸಿಇಓ ಜತೆಗಿನ ಆನ್​ಲೈನ್​ ಮೀಟಿಂಗ್​ನಲ್ಲಿ ಭಾಗವಹಿಸಿದ್ದ ವೇಳೆ ಆಕೆ ಕುಳಿತಿದ್ದ ಕುರ್ಚಿ ಏಕಾಏಕಿ ಮುರಿದುಹೋದ ಕಾರಣ ಯಡವಟ್ಟಾಗಿದೆ.

ಮೀಟಿಂಗ್​ ನಡೆಯುತ್ತಿದ್ದ ವೇಳೆ ಕುರ್ಚಿ ಮುರಿದುಹೋಗಿದ್ದು, ಚಾರ್ಲೋಟ್ ಕೊಜಿನೆಟ್ಸ್ ಪಲ್ಟಿ ಹೊಡೆದಿದ್ದಾರೆ. ಕೆಳಕ್ಕೆ ಬೀಳುತ್ತಲೇ ನಗಲಾರಂಭಿಸಿದ ಅವರು ಕೊನೆಗೆ ವಿಡಿಯೋ ಆಫ್​ ಮಾಡಿ ಬೇರೆ ಖುರ್ಚಿಯೊಂದನ್ನು ಹುಡುಕಿ ತಂದು ಕೂತರಾದರೂ, ಮೈಕ್ ಆಫ್ ಮಾಡಲು ಮರೆತಿದ್ದ ಕಾರಣ ಹಿಂಬದಿಯಲ್ಲಿ ಅವರು ಮಾತಾಡಿದ್ದೆಲ್ಲಾ ಕೇಳಿಸಿದೆ.

View this post on Instagram

A post shared by Charlotte (@charkozy)

ಅಲ್ಲದೇ, ಈ ವಿಡಿಯೋ ರೆಕಾರ್ಡ್​ ಆಗುತ್ತಿದ್ದ ಕಾರಣ ಈ ಎಲ್ಲವೂ ಮೀಟಿಂಗ್ ಮುಗಿದ ನಂತರವೂ ನೋಡಲು ಸಿಕ್ಕಿದ್ದು, ತಮ್ಮ ಅವಸ್ಥೆಯನ್ನು ನೆನೆಸಿಕೊಂಡು ಬಿದ್ದು ಬಿದ್ದು ನಕ್ಕಿದ್ದಾರಂತೆ. ಪುಣ್ಯಕ್ಕೆ ಸಿಇಓ ಜತೆ ನಾಲ್ಕೈದು ಜನ ಮಾತ್ರ ಮೀಟಿಂಗ್​ನಲ್ಲಿದ್ದರು. ನಮ್ಮ ಮಾರ್ಕೆಟಿಂಗ್ ವಿಭಾಗದ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಗಂಭೀರ ಚರ್ಚೆ ಮಾಡಬೇಕು ಎಂದುಕೊಂಡಾಗಲೇ ಹೀಗೆ ಕುರ್ಚಿ ಮುರಿದುಹೋಗಿ ಯಡವಟ್ಟಾಗಿದೆ. ಜಾಸ್ತಿ ಜನ ಏನಾದರೂ ಇದ್ದಿದ್ದರೆ ಭಾರೀ ಕಷ್ಟವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಆದರೂ, ಧೈರ್ಯ ಮಾಡಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಚಾರ್ಲೋಟ್ ಕೊಜಿನೆಟ್ಸ್, ಸಹೋದ್ಯೋಗಿಗಳ ಪ್ರತಿಕ್ರಯೆಯನ್ನೂ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಆಗುತ್ತಲೇ ಲಕ್ಷಾಂತರ ಜನರ ವೀಕ್ಷಣೆ ಗಿಟ್ಟಿಸಿಕೊಂಡಿದ್ದು, ಅನೇಕರು ಇದನ್ನು ಹಂಚಿಕೊಳ್ಳುವ ಮನಸ್ಸು ಮಾಡಿದ್ದಕ್ಕೆ ಚಾರ್ಲೋಟ್ ಕೊಜಿನೆಟ್ಸ್​ಗೆ ಭೇಷ್​ ಎಂದಿದ್ದಾರೆ. ಅಲ್ಲದೇ, ಈ ವಿಡಿಯೋವನ್ನು ಸೇವ್​ ಮಾಡಿಟ್ಟುಕೊಂಡು ಬೇಜಾರಾದಾಗಲೆಲ್ಲಾ ನೋಡುತ್ತಿರುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ: 30 ವರ್ಷ ದಾಟಿದ ಮಹಿಳಾವಾದಿಗೆ 25-28 ವರ್ಷದ, ಹೂಸು ಬಿಡದ, ತೇಗದ, ಅಡುಗೆ ಬಲ್ಲ ವರ ಬೇಕಾಗಿದ್ದಾನೆ: ವೈರಲ್​ ಆಯ್ತು ಜಾಹೀರಾತು 

ಪ್ರವಾಸಿಗರನ್ನು ಹೊತ್ತ ದೈತ್ಯ ಬೋಟ್​ಗೆ ಸವಾಲೊಡ್ಡಿದ 400 ಡಾಲ್ಫಿನ್​ಗಳ ಬೃಹತ್​ ಗುಂಪು: ಜಟಾಪಟಿಯ ವಿಡಿಯೋ ಇಲ್ಲಿದೆ ನೋಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ