ಬೈಕ್​ ಸವಾರನಿಗೆ ರಾಡ್​ನಿಂದ ಹೊಡೆದ ಆರೋಪಿಗಳು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವೈಕ್​ ಸವಾರನ ಮೇಲೆ ಹಲ್ಲೆ ನಡೆಯುತ್ತಿರುವಾಗ ಹತ್ತಿರದಲ್ಲಿದ್ದ ಮಹಿಳೆಯೋರ್ವರು ಜಗಳವನ್ನು ಬಿಡಿಸಲು ಪ್ರಯತ್ನಿಸುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು.

ಬೈಕ್​ ಸವಾರನಿಗೆ ರಾಡ್​ನಿಂದ ಹೊಡೆದ ಆರೋಪಿಗಳು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೆಹಲಿ: ಪಾಲಂ ಪ್ರದೇಶದಲ್ಲಿ ಬೈಕ್​ ಸವಾರ​ ಮತ್ತು ಆತನ ಹಿಂದೆ ಕುಳಿತಿದ್ದ ವ್ಯಕ್ತಿಯ ಮೇಲೆ ಆರೋಪಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ. ಜೂನ್​ 18 ನೇ ತಾರೀಕಿನಂದು ಘಟನೆ ನಡೆದಿದ್ದು ಹತ್ತಿರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಆರೋಪಿಗಳು ಬೈಕ್​ ಸವಾರನಿಗೆ ರಾಡ್​ನಿಂದ ಹೊಡೆದಿದ್ದಾರೆ. ಈ ಪರಿಣಾಮ ಸವಾರನಿಗೆ ಗಂಭೀರ ಗಾಯಗಳಾಗಿವೆ. ಈ ಸಂಬಂಧ ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.

ಸಿಸಿಟಿವಿ ದೃಶ್ಯವನ್ನು ಗಮನಿಸುವಂತೆ ಬೈಕ್​ ಅವಾರ ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ. ಇಬ್ಬರು ವ್ಯಕ್ತಿಗಳ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಹೆಲ್ಮೆಟ್​ ಹಿಡಿದು ನಿಂತಿದ್ದ ಬೈಕ್​ ಸವಾರ ನಿಂತಿರುತ್ತಾನೆ. ಆ ಸಂದರ್ಭದಲ್ಲಿ ಆತನ ಮೇಲೆ ಹಲ್ಲೆ ಆಗುತ್ತಿರುವುದು ಕಂಡು ಬರುತ್ತದೆ.

ಘಟನೆ ನಡೆಯುತ್ತಿರುವಾಗ ಹತ್ತಿರದಲ್ಲಿದ್ದ ಮಹಿಳೆಯೋರ್ವರು ಜಗಳವನ್ನು ಬಿಡಿಸಲು ಪ್ರಯತ್ನಿಸುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ಆರೋಪಿಯು ಹೊಡೆಯುವುದನ್ನು ನಿಲ್ಲಿದ ಬಳಿಕ ಬೈಕ್​ ಸವಾರನಿಗೆ ಗಾಯವಾಗಿ ತಲೆಯಿಂದ ರಕ್ತಸ್ರಾವವಾಗುತ್ತಿರುವುದು ಗೋಚರಿಸುತ್ತದೆ. ಘಟನೆ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ, ಬೈಕ್​ ಸವಾರನ ಮೇಲೆ ಹಲ್ಲೆ ನಡೆಸುತ್ತಿರುವ  ಆರೋಪಿಯ ತಾಯಿ ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

Click on your DTH Provider to Add TV9 Kannada