ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಕೊವಿಡ್​ ಲಸಿಕೆ ಸಿದ್ಧ; ಜುಲೈ-ಅಗಸ್ಟ್​​ನಿಂದ 12 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಶನ್​​

Zydus Cadila: ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಕೂಡ ಜೈಡಸ್​ ಕ್ಯಾಡಿಲಾ ಲಸಿಕೆಯ ಪ್ರಯೋಗ ಬಹುತೇಕ ಸಂಪೂರ್ಣವಾಗಿದೆ. ಈ ಕಂಪನಿ ZyCoV-D ಎಂಬ ಹೆಸರಿನ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಬಳಕೆಗೆ ಲಭ್ಯವಾಗಲಿದೆ ಎಂದು ತಿಳಿಸಿದೆ.

ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಕೊವಿಡ್​ ಲಸಿಕೆ ಸಿದ್ಧ; ಜುಲೈ-ಅಗಸ್ಟ್​​ನಿಂದ 12 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಶನ್​​
ಜೈಡಸ್​ ಕ್ಯಾಡಿಲಾ ಕಂಪನಿ
Follow us
TV9 Web
| Updated By: Lakshmi Hegde

Updated on: Jun 28, 2021 | 9:54 AM

ದೆಹಲಿ: ದೇಶದಲ್ಲಿ ಜುಲೈ ಅಂತ್ಯ ಅಥವಾ ಆಗಸ್ಟ್​ನಿಂದ 12-18ವರ್ಷದವರಿಗೆ ಕೊವಿಡ್​ 19 ಲಸಿಕೆ ನೀಡುವ ಅಭಿಯಾನ ಶುರುವಾಗಲಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ. ಜೈಡಸ್​ ಕ್ಯಾಡಿಲಾದ ಕೊರೊನಾ ಲಸಿಕೆ ಪ್ರಯೋಗ ಬಹುತೇಕ ಮುಕ್ತಾಯವಾಗಿದೆ. ಜುಲೈ ಅಂತ್ಯ ಅಥವಾ ಆಗಸ್ಟ್​​ನಿಂದ ಈ ಲಸಿಕೆಯನ್ನು 12-18ವರ್ಷದವರಿಗೆ ನೀಡಲು ಶುರು ಮಾಡುತ್ತೇವೆ ಎಂದು ಕೊವಿಡ್​-19 ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್​​ಟಿಎಜಿಐ) ಮುಖ್ಯಸ್ಥ ಡಾ. ಎನ್​.ಕೆ.ಅರೋರಾ ತಿಳಿಸಿದ್ದಾರೆ.

ಸದ್ಯಕ್ಕೆ ದೇಶದಲ್ಲಿ 18ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುತ್ತಿದೆ. ದೇಶದಲ್ಲಿರುವ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ನೀಡುವ ಮೂಲಕ ಸೋಂಕನ್ನು ನಿಯಂತ್ರಣ ಮಾಡಲು ದಿನಕ್ಕೆ ಒಂದು ಕೋಟಿ ಡೋಸ್​​ಗಳಷ್ಟು ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಹೀಗೆ ದಿನಕ್ಕೆ ಒಂದು ಕೋಟಿ ಡೋಸ್ ಲಸಿಕೆ ನೀಡಿದರೆ ಏಳೆಂಟು ತಿಂಗಳಲ್ಲಿ ದೇಶದ ಪ್ರತಿಯೊಬ್ಬರಿಗೂ ಲಸಿಕೆ ಕೊಟ್ಟು ಮುಗಿಯಲಿದೆ. ಭಾರತದಲ್ಲಿ ಬಳಕೆಯಾಗುತ್ತಿರುವ ಎಲ್ಲ ಲಸಿಕೆಗಳೂ ಶೇ.95-96ರಷ್ಟು ಸುರಕ್ಷಿತವಾಗಿದ್ದು, ಯಾವುದೇ ರೂಮರ್​​ಗಳನ್ನೂ ನಂಬಬಾರದು ಎಂದು ತಿಳಿಸಿದ್ದಾರೆ.

ಮೂರನೇ ಅಲೆ ಇಷ್ಟು ಬೇಗ ಬರುವುದಿಲ್ಲ ಎಂದು ಐಸಿಎಂಆರ್​ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಸಂಶೋಧನೆ ತಿಳಿಸಿದೆ. ಅದರಿಂದ ಜನರನ್ನು ರಕ್ಷಿಸಲು ಕೊವಿಡ್​ 19 ಲಸಿಕೆ ನೀಡುವುದೊಂದೇ ಮಾರ್ಗ. ಇನ್ನು ಆರರಿಂದ ಎಂಟು ತಿಂಗಳಲ್ಲಿ ಪ್ರತಿಯೊಬ್ಬರ ದೇಹದಲ್ಲೂ ರೋಗನಿರೋಧಕ ಶಕ್ತಿ ಬೆಳೆಸಬೇಕು. ಆದರೆ ಕೊರೊನಾ ಲಸಿಕೆ ಬಗ್ಗೆ ಒಂದಷ್ಟು ತಪ್ಪು ಕಲ್ಪನೆಗಳೂ ಹುಟ್ಟಿಕೊಂಡಿವೆ. ಇದರಿಂದ ಅಡ್ಡಪರಿಣಾಮಗಳಾಗುತ್ತವೆ..ಲಸಿಕೆ ಸುರಕ್ಷಿತವಲ್ಲ ಎಂಬಿತ್ಯಾದಿ ರೂಮರ್​ಗಳೂ ಹಬ್ಬಿವೆ. ಆದರೆ ಜನರು ಇದನ್ನೆಲ್ಲ ನಂಬದೆ, ಧೈರ್ಯದಿಂದ ಕೊರೊನಾ ಲಸಿಕೆ ಸ್ವೀಕರಿಸಬೇಕು ಎಂದಿದ್ದಾರೆ. ಕೊವಿಡ್​ 19 ಲಸಿಕೆ ಪಡೆದ ಶೇ.95-96ರಷ್ಟು ಜನರಲ್ಲಿ ಸಣ್ಣ ಜ್ವರ, ಮೈಕೈ ನೋವು ಕಾಣಿಸಿಕೊಳ್ಳುತ್ತಿದೆ. ಕೇವಲ 4-5 ಪರ್ಸಂಟ್​ ಜನರಿಗೆ ಮಾತ್ರ ಅಲರ್ಜಿ ಹೆಚ್ಚಾಗಿ ಆಸ್ಪತ್ರೆ ಸೇರುವ ಪರಿಸ್ಥಿತಿ ಎದುರಾಗುತ್ತಿದೆ. ಆದರೆ ಈ ವ್ಯಾಕ್ಸಿನ್​ಗಳು ಸುರಕ್ಷಿತವಾಗಿದ್ದು, ಹೆದರುವಂತಹ ಅವಶ್ಯಕತೆ ಇಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಕೂಡ ಜೈಡಸ್​ ಕ್ಯಾಡಿಲಾ ಲಸಿಕೆಯ ಪ್ರಯೋಗ ಬಹುತೇಕ ಸಂಪೂರ್ಣವಾಗಿದೆ. ಅತಿ ಶೀಘ್ರದಲ್ಲೇ ಮಕ್ಕಳಿಗೆ ಇದನ್ನು ನೀಡಬಹುದಾಗಿದೆ. ಈ ಕಂಪನಿ ZyCoV-D ಎಂಬ ಹೆಸರಿನ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಶೀಘ್ರದಲ್ಲೇ ಡಿಸಿಜಿಐ ಅನುಮೋದನೆ ನೀಡಲಿದೆ ಎಂದು ಹೇಳಿದೆ. ಹಾಗೇ ಈ ಲಸಿಕೆಯನ್ನು ಕೇವಲ ಮಕ್ಕಳಿಗೆ ಮಾತ್ರವಲ್ಲ ವಯಸ್ಕರಿಗೂ ನೀಡಬಹುದಾಗಿದೆ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ’ಜೈಡಸ್ ಕ್ಯಾಡಿಲಾ ಕೊವಿಡ್​ 19 ಲಸಿಕೆ ಮಕ್ಕಳ ಮೇಲಿನ ಕ್ಲಿನಿಕಲ್​ ಪ್ರಯೋಗ ಮುಕ್ತಾಯ, ಶೀಘ್ರದಲ್ಲೇ ಬಳಕೆಗೆ ಲಭ್ಯ‘

Zydus Cadila Covid 19 vaccination to children will begin from July end or August

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ