’ಜೈಡಸ್ ಕ್ಯಾಡಿಲಾ ಕೊವಿಡ್​ 19 ಲಸಿಕೆ ಮಕ್ಕಳ ಮೇಲಿನ ಕ್ಲಿನಿಕಲ್​ ಪ್ರಯೋಗ ಮುಕ್ತಾಯ, ಶೀಘ್ರದಲ್ಲೇ ಬಳಕೆಗೆ ಲಭ್ಯ‘

ಕೇಂದ್ರ ಸರ್ಕಾರ ಒಟ್ಟು 380 ಪೇಜ್​ಗಳ ಅಫಿಡವಿಟ್​​ನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದು, ಅದರಲ್ಲಿ ಕೊರೊನಾ ಲಸಿಕೆಗಳ ಬೆಲೆಯ ಬಗ್ಗೆಯೂ ಮಾಹಿತಿ ನೀಡಿದೆ. ಕೊವ್ಯಾಕ್ಸಿನ್​ ಲಸಿಕೆಯ ಒಂದು ಡೋಸ್​ಗೆ 150 ರೂ.ನಿಗದಿಪಡಿಸಲಾಗಿದ್ದು, ಅದನ್ನು ಯಾವ ಕಾರಣಕ್ಕೂ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

’ಜೈಡಸ್ ಕ್ಯಾಡಿಲಾ ಕೊವಿಡ್​ 19 ಲಸಿಕೆ ಮಕ್ಕಳ ಮೇಲಿನ ಕ್ಲಿನಿಕಲ್​ ಪ್ರಯೋಗ ಮುಕ್ತಾಯ, ಶೀಘ್ರದಲ್ಲೇ ಬಳಕೆಗೆ ಲಭ್ಯ‘
ಜೈಡಿಸ್ ಕ್ಯಾಡಿಲಾ
Follow us
| Updated By: Lakshmi Hegde

Updated on:Jun 27, 2021 | 10:56 AM

ದೇಶದ ಕೊವಿಡ್​ 19 ಲಸಿಕೆ ನೀತಿ ಬಗ್ಗೆ ಸುಪ್ರೀಂಕೋರ್ಟ್​ ಕೇಳಿದ್ದ ಪ್ರಶ್ನೆಗೆ ಉತ್ತರ ರೂಪವಾಗಿ ಕೇಂದ್ರ ಸರ್ಕಾರ ಅಫಿಡವಿಟ್​ ಸಲ್ಲಿಸಿದೆ. ದೇಶದ ಕೊವಿಡ್​ 19 ಲಸಿಕೆ ನೀತಿಯನ್ನು ಈ ತಿಂಗಳ ಪ್ರಾರಂಭದಲ್ಲಿ ಕೂಲಂಕಷವಾಗಿ ಪರಿಶೀಲಿಸಲಾಗಿದೆ ಎಂದು ಅಫಿಡವಿಟ್​​ನಲ್ಲಿ ಹೇಳಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಕೊರೊನಾ ಲಸಿಕೆ ಲಭ್ಯತೆ ಮತ್ತು ಡಿಸೆಂಬರ್​ ಅಂತ್ಯದೊಳಗೆ ದೇಶದ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೂ ಕೊರೊನಾ ಲಸಿಕೆ ಕೊಟ್ಟು ಪೂರ್ಣಗೊಳಿಸಬೇಕು ಎಂಬುದು ತಮ್ಮ ಯೋಜನೆ ಎಂದು ವಿವರಿಸಿದೆ.

ಇನ್ನು ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ, ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆಯನ್ನು 2-17ವರ್ಷದವರ ಮೇಲೆ ಕ್ಲಿನಿಕಲ್​ ಟೆಸ್ಟ್​​ ನಡೆಸಲು ಮೇ 12ರಂದು ಡ್ರಗ್ಸ್​ ಕಂಟ್ರೋಲರ್​ ಜನರಲ್ ಆಫ್​ ಇಂಡಿಯಾ (DCGI) ಅನುಮತಿ ನೀಡಿದೆ. ಈ ಕ್ಲಿನಿಕಲ್​ ಪ್ರಯೋಗಕ್ಕಾಗಿ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ತಿಳಿಸಿದೆ. ಕೊವಿಡ್​ 19 ಲಸಿಕೆ ಲಭ್ಯತೆ

ದೇಶದಲ್ಲಿ ವೇಗವಾಗಿ, ದೊಡ್ಡ ಪ್ರಮಾಣದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಜೂ.26ರ ಹೊತ್ತಿಗೆ ದೇಶದಲ್ಲಿ 35.6 ಕೋಟಿ ಡೋಸ್ ಲಸಿಕೆ ಲಭ್ಯವಿದೆ. ಅದರಲ್ಲಿ 26.6 ಕೋಟಿ ಡೋಸ್​ಗಳಷ್ಟು ಕೊವಿಶೀಲ್ಡ್​ ಮತ್ತು 8 ಕೋಟಿ ಡೋಸ್​​ ಕೊವ್ಯಾಕ್ಸಿನ್​ ಲಭ್ಯವಿರಲಿದೆ. COVAX ವ್ಯವಸ್ಥೆಯಡಿ ಸರಕು ಸಹಾಯದ ರೂಪದಲ್ಲಿ ಹೆಚ್ಚುವರಿಯಾಗಿ 1 ಕೋಟಿ ಡೋಸ್​​ ಲಸಿಕೆ ಲಭ್ಯವಿದೆ ಎಂದು ಕೇಂದ್ರದ ಅಫಿಡವಿಟ್​​ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಜುಲೈ 31ರ ಹೊತ್ತಿಗೆ ದೇಶದಲ್ಲಿ 51.6 ಕೋಟಿ ಡೋಸ್​ ವ್ಯಾಕ್ಸಿನ್​ ಲಭ್ಯವಿರಬೇಕು. ಅದರಲ್ಲಿ 35.6 ಕೋಟಿ ಈಗಾಗಲೇ ಇದೆ. ಉಳಿದವುಗಳು ಜುಲೈ ಅಂತ್ಯದೊಳಗೆ ಪೂರೈಕೆ ಆಗುತ್ತದೆ ಎಂದು ಹೇಳಿದೆ.

ಮತ್ತೆರಡು ಹೊಸ ಲಸಿಕೆಗಳು ದೇಶದಲ್ಲಿ ಸದ್ಯ ಕೊವ್ಯಾಕ್ಸಿನ್​, ಕೊವಿಶೀಲ್ಡ್​ ಮತ್ತು ಸ್ಪುಟ್ನಿಕ್​ ವಿ ಲಸಿಕೆ ಬಳಕೆಗೆ ಲಭ್ಯವಿದೆ. ಇವುಗಳ ಹೊರತಾಗಿ ಬೇರೆ ಕೆಲವು ಲಸಿಕೆಗಳೂ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗಲಿವೆ. ಅವುಗಳಲ್ಲಿ ಬಯಲಾಜಿಕಲ್​ ಇ ಮತ್ತು ಜೈಡಸ್ ಕ್ಯಾಡಿಲಾ ಕಂಪನಿಗಳ ದೇಶೀಯ ಲಸಿಕೆಗಳು ಕ್ಲಿನಿಕಲ್​ ಪ್ರಯೋಗದ ಕೊನೇ ಹಂತದಲ್ಲಿವೆ. ಅವುಗಳಿಗೆ ಅನುಮೋದನೆ ಸಿಕ್ಕ ಕೂಡಲೇ, ಲಸಿಕೆಗಳ ಲಭ್ಯತೆ ಇನ್ನೂ ಹೆಚ್ಚಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದೆ. ಅದರಲ್ಲೂ ಜೈಡಸ್​ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಡಿಎನ್​ಎ ಕೊರೊನಾ ಲಸಿಕೆಯನ್ನು 12-18 ವರ್ಷದವರ ಮೇಲೆ ಕ್ಲಿನಿಕಲ್​ ಪ್ರಯೋಗ ಮಾಡಲಾಗಿದೆ. ಇದು ಶೀಘ್ರದಲ್ಲೇ ಮಕ್ಕಳ ಬಳಕೆಗೆ ಲಭ್ಯವಾಗಲಿದೆ ಎಂದೂ ತಿಳಿಸಿದೆ.

ಕೇಂದ್ರ ಸರ್ಕಾರ ಒಟ್ಟು 380 ಪೇಜ್​ಗಳ ಅಫಿಡವಿಟ್​​ನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದು, ಅದರಲ್ಲಿ ಕೊರೊನಾ ಲಸಿಕೆಗಳ ಬೆಲೆಯ ಬಗ್ಗೆಯೂ ಮಾಹಿತಿ ನೀಡಿದೆ. ಕೊವ್ಯಾಕ್ಸಿನ್​ ಲಸಿಕೆಯ ಒಂದು ಡೋಸ್​ಗೆ 150 ರೂ.ನಿಗದಿಪಡಿಸಲಾಗಿದ್ದು, ಅದನ್ನು ಯಾವ ಕಾರಣಕ್ಕೂ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆ ಎಂದೂ ತಿಳಿಸಿದೆ. ಕೊರೊನಾ ವಿರುದ್ಧ ಹೋರಾಟದ ಪ್ರಯತ್ನಗಳೆಲ್ಲ ಮುಂದುವರಿದ ಹಂತದಲ್ಲಿವೆ. ಹಾಗಾಗಿ ಈ ಬಗ್ಗೆ ಸಮಗ್ರ ಮಾಹಿತಿ ನೀಡುವುದು ಸಾಧ್ಯವಿಲ್ಲ ಮತ್ತು ಅದು ಅಪೇಕ್ಷಣೀಯವೂ ಅಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: Coronavirus cases in India: ದೇಶದಲ್ಲಿ 50,040 ಹೊಸ ಕೊವಿಡ್ ಪ್ರಕರಣ ಪತ್ತೆ, 1258 ಮಂದಿ ಸಾವು

Published On - 10:50 am, Sun, 27 June 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ