Delta Variant: ಡೆಲ್ಟಾ ವೈರಾಣು ಮಿದುಳಿಗೆ ಅಟ್ಯಾಕ್ ಆದ್ರೆ ಏನಾಗುತ್ತದೆ?-ಐಸಿಎಂಆರ್ ಮಾಜಿ ಮುಖ್ಯ ವಿಜ್ಞಾನಿ ನೀಡಿದ್ದಾರೆ ಮತ್ತೊಂದು ಎಚ್ಚರಿಕೆ..
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರೂ ಸಹ ಈ ಡೆಲ್ಟಾ ವೈರಸ್ ತುಂಬ ಹಾನಿಕಾರಿ ಎಂದು ಹೇಳಿದ್ದಾರೆ. ಕೊರೊನಾದ ರೂಪಾಂತರವಾದ ಈ ವೈರಾಣು ಮೊದಲು ಹುಟ್ಟಿದ್ದು ಭಾರತದಲ್ಲಾದರೂ ಸದ್ಯ ಸುಮಾರು 85 ರಾಷ್ಟ್ರಗಳಿಗೆ ವ್ಯಾಪಿಸಿದೆ.
ದೆಹಲಿ: ಕೊರೊನಾ ರೂಪಾಂತರ ತಳಿಗಳಲ್ಲಿ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ವೈರಾಣುಗಳು ಅತ್ಯಂತ ಮಾರಣಾಂತಿಕವಾಗಿದ್ದು, ಅತಿ ವೇಗವಾಗಿ ಹರಡಬಲ್ಲವು ಎಂದು ಹೇಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನೇ ಹೇಳಿದೆ. ಹಾಗೇ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ(ಐಸಿಎಂಆರ್) ಮಾಜಿ ಮುಖ್ಯ ವಿಜ್ಞಾನಿ ರಾಮನ್ ಗಂಗಖೇಡ್ಕರ್ ಕೂಡ ಇದೇ ವಿಚಾರವನ್ನು ಹೊರಹಾಕಿದ್ದಾರೆ. ಅದರೊಂದಿಗೆ ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ವೈರಸ್ಗಳು ನರ ನರವೈಜ್ಞಾನಿಕ ಸಂಬಂಧ ಕಾಯಿಲೆಗಳನ್ನು ಉಂಟು ಮಾಡಬಲ್ಲವು ಎಂದು ಹೇಳಿದ್ದಾರೆ.
ಡೆಲ್ಟಾ ರೂಪಾಂತರಿ ವೈರಸ್ಗಳು ಕೋಶದಿಂದ ಕೋಶಕ್ಕೆ ವರ್ಗಾವಣೆಯಾಗಬಲ್ಲವು. ಇದು ಒಮ್ಮೆ ಮಿದುಳಿಗೆ ತಗುಲಿದರೆ ಸಾಮಾನ್ಯವಾಗಿ ನರವೈಜ್ಞಾನಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಡೆಲ್ಟಾ ವೈರಸ್ ನಮ್ಮ ದೇಹದೊಳಗೆ ಯಾವ ಅಂಗಕ್ಕೆ ತಗುಲುತ್ತದೆಯೂ ಅದಕ್ಕೆ ಸಂಬಂಧಪಟ್ಟ ರೋಗ ಲಕ್ಷಣವನ್ನು ಹೊರಹಾಕುತ್ತದೆ. ಆ ನಿರ್ದಿಷ್ಟ ಅಂಗಕ್ಕೆ ಹಾನಿಯನ್ನುಂಟುಮಾಡುತ್ತದೆ ಎಂದು ರಾಮನ್ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರೂ ಸಹ ಈ ಡೆಲ್ಟಾ ವೈರಸ್ ತುಂಬ ಹಾನಿಕಾರಿ ಎಂದು ಹೇಳಿದ್ದಾರೆ. ಕೊರೊನಾದ ರೂಪಾಂತರವಾದ ಈ ವೈರಾಣು ಮೊದಲು ಹುಟ್ಟಿದ್ದು ಭಾರತದಲ್ಲಾದರೂ ಸದ್ಯ ಸುಮಾರು 85 ರಾಷ್ಟ್ರಗಳಿಗೆ ವ್ಯಾಪಿಸಿದೆ. ಉಳಿದೆಲ್ಲ ರೂಪಾಂತರಿ ವೈರಸ್ಗಳಿಗೆ ಹೋಲಿಸಿದರೆ ಡೆಲ್ಟಾ ಅತ್ಯಂತ ವೇಗವಾಗಿ ಹರಡುತ್ತದೆ ಎಂದು ಹೇಳಿದ್ದಾರೆ. ಡೆಲ್ಟಾ ವೈರಸ್ ಕಂಡು ಬಂದ ಪ್ರದೇಶದಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಜನರು ಗುಂಪುಗೂಡುವನ್ನು ತಡೆಯಬೇಕು. ತಪಾಸಣೆ ಪ್ರಮಾಣ ಹೆಚ್ಚಿಸಬೇಕು ಮತ್ತು ಲಸಿಕೆ ನೀಡುವ ವೇಗವನ್ನೂ ಹೆಚ್ಚಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
When I said #DeltaVariant can go for cell to cell transfer, what does it mean in terms of damage to organs? If it goes into brain, what will happen? It’s more likely to produce neurological symptoms as common manifestation: Raman Gangakhedkar, ex-Head Scientist, ICMR pic.twitter.com/2q1Rv1AL7Y
— ANI (@ANI) June 26, 2021
ಇದನ್ನೂ ಓದಿ: ಆನ್‌ಲೈನ್ ರಂಗಭೂಮಿ ತರಬೇತಿ; ರಂಗ ಚಟುವಟಿಕೆ ಆರಂಭಕ್ಕೆ ಮೈಸೂರಿನಲ್ಲಿ ಚಾಲನೆ ನೀಡಿದ ನಟ ಮಂಡ್ಯ ರಮೇಶ್
Published On - 9:42 am, Sun, 27 June 21