ಆನ್‌ಲೈನ್ ರಂಗಭೂಮಿ ತರಬೇತಿ; ರಂಗ ಚಟುವಟಿಕೆ ಆರಂಭಕ್ಕೆ ಮೈಸೂರಿನಲ್ಲಿ ಚಾಲನೆ ನೀಡಿದ ನಟ ಮಂಡ್ಯ ರಮೇಶ್

ಮೈಸೂರಿನ ವಿವಿಧ ಭಾಗದ ಮಕ್ಕಳು. ಮನೆಯಲ್ಲೇ ಕುಳಿತು ರಂಗಭೂಮಿಯ ನಟನೆ, ರಂಗಗೀತೆಗಳನ್ನು ಕಲಿಯುತ್ತಿದ್ದಾರೆ. ಕೊರೊನಾ ನಡುವೆಯೂ ಇದೆಲ್ಲಾ ಸಾಧ್ಯವಾಗಿರುವುದು ಹೇಗೆ ಎಂದು ಹುಬ್ಬೇರಿಸುವವರಿಗೆ ಉತ್ತರ ಮೈಸೂರಿನ ನಟನ ರಂಗಶಾಲೆ.

ಆನ್‌ಲೈನ್ ರಂಗಭೂಮಿ ತರಬೇತಿ; ರಂಗ ಚಟುವಟಿಕೆ ಆರಂಭಕ್ಕೆ ಮೈಸೂರಿನಲ್ಲಿ ಚಾಲನೆ ನೀಡಿದ ನಟ ಮಂಡ್ಯ ರಮೇಶ್
ಆನ್‌ಲೈನ್ ರಂಗಭೂಮಿ ತರಬೇತಿ
Follow us
TV9 Web
| Updated By: preethi shettigar

Updated on: Jun 27, 2021 | 9:40 AM

ಮೈಸೂರು: ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿತ್ತು. ಇದರಿಂದಾಗಿ ವ್ಯಾಪಾರ ವ್ಯವಹಾರ ನಿಂತಿದ್ದು, ಜನರು ಮನೆಯಲ್ಲೇ ಕಾಲ ಕಳೆಯಬೇಕಾಯಿತು. ರೈತರು ದಿನಗೂಲಿಕಾರರು ಸೇರಿ ಎಲ್ಲರ ಆರ್ಥಿಕ ಮೂಲ ಬಂದ್ ಆಗಿತ್ತು. ಜತೆಗೆ ಎಲ್ಲಾ ಕ್ಷೇತ್ರದ ಚಟುವಟಿಕೆಗೆಗಳು ಬಹುತೇಕ ಸ್ಥಗಿತವಾಗಿದೆ. ಆದರೆ ಲಾಕ್‌ಡೌನ್ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಗಭೂಮಿ ಕಲರವ ಜೋರಾಗಿದ್ದು, ಮೊಬೈಲ್​ನಲ್ಲಿಯೇ ಅಭಿನಯ ಶುರುವಾಗಿದೆ.

ಮೈಸೂರಿನ ವಿವಿಧ ಭಾಗದ ಮಕ್ಕಳು. ಮನೆಯಲ್ಲೇ ಕುಳಿತು ರಂಗಭೂಮಿಯ ನಟನೆ, ರಂಗಗೀತೆಗಳನ್ನು ಕಲಿಯುತ್ತಿದ್ದಾರೆ. ಕೊರೊನಾ ನಡುವೆಯೂ ಇದೆಲ್ಲಾ ಸಾಧ್ಯವಾಗಿರುವುದು ಹೇಗೆ ಎಂದು ಹುಬ್ಬೇರಿಸುವವರಿಗೆ ಉತ್ತರ ಮೈಸೂರಿನ ನಟನ ರಂಗಶಾಲೆ. ನಟ ಮಂಡ್ಯ ರಮೇಶ್ ಅವರ ವಿಭಿನ್ನ ಪ್ರಯತ್ನದಿಂದಾಗಿ ಮಕ್ಕಳು ಆನ್‌ಲೈನ್ ಮೂಲಕವೇ ರಂಗಭೂಮಿ ಚಟುವಟಿಕೆಗಳನ್ನು ಕಲಿಯಲು ಸಾಧ್ಯವಾಗಿದೆ.

ಮೈಸೂರಿನ ದಟ್ಟಗಳ್ಳಿಯಲ್ಲಿರುವ ನಟನ ರಂಗಶಾಲೆಯಲ್ಲಿ ವರ್ಷ ಪೂರ್ತಿ ರಂಗ ಚಟುವಟಿಕೆ‌ ನಡೆಯುತ್ತಿತ್ತು. ಪ್ರತಿ ಬೇಸಿಗೆ ರಜೆಯಲ್ಲೂ ಬೇಸಿಗೆ ಶಿಬಿರವನ್ನು ನಡೆಸಿ ಮಕ್ಕಳಿಗೆ ಅಭಿನಯದ ತರಬೇತಿ ನೀಡಲಾಗುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಇದು ಸಾಧ್ಯವಾಗಿಲ್ಲ. ಇದರಿಂದ ರಂಗಚಟುವಟಿಕೆ ಕಲಿಕೆ ಸಂಪೂರ್ಣ ಬಂದ್ ಆಗಿತ್ತು. ಇದಕ್ಕೊಂದು ತಿಲಾಂಜಲಿ ಇಡಲು ನಟ ಮಂಡ್ಯ ರಮೇಶ್ ಕಂಡುಕೊಂಡಿದ್ದೇ ಆನ್‌ಲೈನ್ ರಂಗಭೂಮಿ ತರಬೇತಿ. ಆ ಮೂಲಕ ತಮ್ಮ ರಂಗಮಂದಿರದಲ್ಲೇ ಕುಳಿತು ಮಕ್ಕಳಿಗೆ ಆನ್‌ಲೈನ್ ಮೂಲಕ ತರಬೇತಿ ನೀಡುವ ಕೆಲಸಕ್ಕೆ ಚಾಲನೆ ನೀಡಿದರು.

ಆನ್‌ಲೈನ್ ಮೂಲಕ ತರಬೇತಿ ನೀಡುವ ಕೆಲಸ  ಫಲ ಕೊಟ್ಟಿದೆ. ನೂರಾರು ಮಕ್ಕಳು ಈ ಮೂಲಕ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅತ್ಯಂತ ಶ್ರದ್ಧೆಯಿಂದ ಎಲ್ಲವನ್ನೂ ಕಲಿತಿದ್ದಾರೆ. ಕೇವಲ‌ ಮೈಸೂರಿನ ಮಕ್ಕಳು ಮಾತ್ರವಲ್ಲ ಸಿಂಗಪೂರ, ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶದ ಮಕ್ಕಳು ಇದರ ಸದುಪಯೋಗ ಪಡೆದಿರುವುದು ವಿಶೇಷ ಎಂದು ನಟ ಮಂಡ್ಯ ರಮೇಶ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಮಂಡ್ಯ ರಮೇಶ್ ಪ್ರಯತ್ನಕ್ಕೆ ಮಗಳು ದಿಶಾ ರಮೇಶ್ ಹಾಗೂ ಕಲಾವಿದರಾದ ಮೇಘಾ ಸಮೀರಾ ಸೇರಿ ಹಲವರು ಸಾಥ್ ನೀಡಿದ್ದಾರೆ. ಅಪ್ಪ ಮಗಳು ಸೇರಿ ರಂಗಭೂಮಿ ಚಟುವಟಿಕೆಯನ್ನು ಜೀವಂತವಾಗಿರಿಸಿದ್ದಾರೆ. ಈ ಮೂಲಕ ನಮ್ಮ ಕಲೆ‌ ಸಂಸ್ಕೃತಿ ಪರಂಪರೆಯ ಉಳಿವಿಗೆ ಕಟ್ಟುಬದ್ಧರಾಗಿದ್ದಾರೆ. ಇವರ ಪ್ರಯತ್ನ ಎಲ್ಲರಿಗೂ ಪ್ರೇರಣೆಯಾಗಲಿ, ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಯಶಸ್ವಿಯಾಗಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ:

ಆನ್​ಲೈನ್ ಯಕ್ಷಗಾನ; ಉಡುಪಿಯಿಂದಲೇ ಬ್ರಿಟನ್‌ ಮತ್ತು ಜರ್ಮನ್​ನಲ್ಲಿರುವವರಿಗೆ ತರಬೇತಿ

ಮತ್ತೊಂದು ನಾಟಕ ಪರ್ವ: ರಂಗಭೂಮಿ ಪ್ರಿಯರ ಸ್ವರ್ಗ ಎನಿಸಿದೆ ಧಾರವಾಡ ರಂಗಾಯಣ

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ