ಮತ್ತೊಂದು ನಾಟಕ ಪರ್ವ: ರಂಗಭೂಮಿ ಪ್ರಿಯರ ಸ್ವರ್ಗ ಎನಿಸಿದೆ ಧಾರವಾಡ ರಂಗಾಯಣ

ಮಾರ್ಚ್ 1 ರಿಂದ 7 ರವರೆಗೆ ಉಮೇಶ ತೇಲಿ ನಿರ್ದೇಶನದ ‘ಹುಚ್ಚರ ಸಂತೆ' ಪ್ರದರ್ಶನಗೊಳ್ಳಲಿದೆ. ಈ ನಾಟಕ ಈಗಾಗಲೇ 160 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು, ಇದು ಶುದ್ಧ ಹಾಸ್ಯ, ಮನರಂಜನೆಯ ವಸ್ತುವುಳ್ಳ ನಾಟಕವಾಗಿದೆ.

ಮತ್ತೊಂದು ನಾಟಕ ಪರ್ವ: ರಂಗಭೂಮಿ ಪ್ರಿಯರ ಸ್ವರ್ಗ ಎನಿಸಿದೆ ಧಾರವಾಡ ರಂಗಾಯಣ
ರಂಗಾಯಣ ಧಾರವಾಡ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 28, 2021 | 1:39 PM

ಧಾರವಾಡ: ಈಗಾಗಲೇ ರಂಗಾಯಣ ಆವರಣದಲ್ಲಿ ಒಂಭತ್ತು ದಿನ ಒಂಭತ್ತು ನಾಟಕಗಳ ರಂಗ ನವಮಿ ನಾಟಕೋತ್ಸವ ಯಶಸ್ವಿಯಾಗಿದೆ. ಇದರಿಂದ ಉತ್ಸಾಹಗೊಂಡಿರುವ ರಂಗಾಯಣ ತಂಡ ಹಾಗೂ ರಂಗ ಕಲಾವಿದರು ಮತ್ತೊಂದು ನಾಟಕೋತ್ಸವಕ್ಕೆ ಅಣಿಯಾಗಿದ್ದಾರೆ. ಆದರೆ ಈ ಬಾರಿ ನಡೆಯುವ ನಾಟಕೋತ್ಸವ ಬರೋಬ್ಬರಿ 21 ದಿನಗಳ ಕಾಲ ನಡೆಯಲಿದ್ದು, ಕೆಲ ಹಾಸ್ಯ ನಾಟಕಗಳೂ ಈ ಬಾರಿಯ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

ಮಾರ್ಚ್ 1 ರಿಂದ 21ರವರೆಗೆ ಹಾಸ್ಯ ರಂಗ ಜಾತ್ರೆ ಈಗಷ್ಟೇ ರಂಗನವಮಿ ಹೆಸರಿನಲ್ಲಿ 9 ದಿನಗಳ ಕಾಲ ನಾಟಕ ಪ್ರದರ್ಶನ ಮಾಡಲಾಗಿತ್ತು. ಒಂಬತ್ತು ದಿನಗಳ ಕಾಲ ನಾಡಿನ ವಿವಿಧ ಕಲಾ ತಂಡಗಳ ನಾಟಕಗಳು ಪ್ರದರ್ಶನಗೊಂಡಿದ್ದು, ಈ ರಂಗ ನವಮಿಗೆ ಅಭೂತಪೂರ್ವ ಪ್ರೋತ್ಸಾಹ ವ್ಯಕ್ತವಾಗಿತ್ತು. ಇದೀಗ ಮತ್ತೊಂದು ನಾಟಕೋತ್ಸವಕ್ಕೆ ಸಿದ್ಧವಾಗಿರುವ ರಂಗಾಯಣ ಮತ್ತು ರಂಗ ಕಲಾವಿದರು 21 ದಿನಗಳ ಕಾಲ ನಿತ್ಯವೂ ಹಾಸ್ಯ ರಂಗ ಜಾತ್ರೆಯ ಹೆಸರಿನಲ್ಲಿ ನಾಟಕೋತ್ಸವವನ್ನು ಆಯೋಜಿಸಿದ್ದು, ಮಾರ್ಚ್ 1 ರಿಂದ 21 ದಿನಗಳ ಕಾಲ ಹಾಸ್ಯ ರಂಗ ಜಾತ್ರೆಯ ಹೆಸರಿನಲ್ಲಿ ನಾಟಕೋತ್ಸವ ನಡೆಯಲಿದೆ.

ಈ ಕುರಿತು ಟಿವಿ-9 ಡಿಜಿಟಲ್​ನೊಂದಿಗೆ ಮಾತನಾಡಿದ ರಂಗಾಯಣದ ನಿರ್ದೇಶಕ ರಮೇಶ ಪರವೀನಾಯ್ಕರ, ರಂಗಾಯಣ, ಆಟಮಾಟ ತಂಡ ಮತ್ತು ಟೂರಿಂಗ್ ಟಾಕೀಸ್ ತಂಡಗಳು ಜಂಟಿಯಾಗಿ 21 ದಿನಗಳ ಈ ಹಾಸ್ಯ ನಾಟಕೋತ್ಸವ ಆಯೋಜಿಸುತ್ತಿವೆ. ಪ್ರತಿ ತಂಡದ ಒಂದು ನಾಟಕದ ಏಳು ಪ್ರದರ್ಶನಗಳು ನಡೆಯಲಿವೆ ಎಂದು ಹೇಳಿದರು.

drama Parva

ಮಾರ್ಚ್ 1 ರಿಂದ 21ರವರೆಗೆ ನಾಟಕ ಪ್ರದರ್ಶನ

ಯಾವ ನಾಟಕಗಳು? ಮಾರ್ಚ್ 1 ರಿಂದ 7 ರವರೆಗೆ ಉಮೇಶ ತೇಲಿ ನಿರ್ದೇಶನದ ‘ಹುಚ್ಚರ ಸಂತೆ’ ಪ್ರದರ್ಶನಗೊಳ್ಳಲಿದೆ. ಈ ನಾಟಕ ಈಗಾಗಲೇ 160 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು, ಶುದ್ಧ ಹಾಸ್ಯ, ಮನರಂಜನೆಯ ವಸ್ತುವುಳ್ಳ ನಾಟಕವಾಗಿದೆ. ಮಾರ್ಚ್ 8 ರಿಂದ 14 ರವರೆಗೆ ರಂಗಾಯಣ ರೆಪರ್ಟರಿ ಕಲಾವಿದರು ಅಭಿನಯಿಸಿರುವ, ಯಶವಂತ ಸರದೇಶಪಾಂಡೆ ನಿರ್ದೇಶನದ ‘ಅಕಸ್ಮಾತ್ ಹಿಂಗಾದ್ರ!’ ನಾಟಕ ಪ್ರದರ್ಶನಗೊಳ್ಳಲಿದೆ. ಮಾರ್ಚ್ 15 ರಿಂದ 21 ರವರೆಗೆ ಆಟ ಮಾಟ ತಂಡದ, ಮಹದೇವ ಹಡಪದ ನಿರ್ದೇಶನದ ‘ಕಾರ್ಪೋರೇಟರ್ ಕೊಟ್ರೆಗೌಡ’ ನಾಟಕ ಪ್ರದರ್ಶನಗೊಳ್ಳಲಿದೆ. ಹವ್ಯಾಸಿ ಕಲಾತಂಡಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ರಂಗಾಯಣ ಈ ರಂಗಜಾತ್ರೆಗೆ ಸಹಕಾರ ನೀಡಿದೆ.

drama Parva

ರಂಗಾಯಣದ ಹೊರವಲಯದ ಚಿತ್ರಣ

ಇನ್ನು ಈ ನಾಟಕೋತ್ಸವದ ಬಗ್ಗೆ ಟೂರಿಂಗ್ ಟಾಕೀಸ್ ತಂಡದ ಉಮೇಶ ತೇಲಿ ಮಾತನಾಡಿದ್ದು, ಇದೊಂದು ಪ್ರಯೋಗ. ಒಂದು ಉತ್ತಮ ನಾಟಕದ ಮರು ಪ್ರದರ್ಶನಗಳು ಆಗುವ ಅಗತ್ಯವಿದ್ದು, ಒಂದು ಪ್ರದರ್ಶನ ತಪ್ಪಿಸಿಕೊಂಡ ಪ್ರೇಕ್ಷಕ ಅದನ್ನು ನೋಡಬೇಕು ಎನ್ನಿಸಿದರೆ ಅದಕ್ಕೆ ಅವಕಾಶ ದೊರೆಯಬೇಕು. ಹಿಂದೆ ಕಂಪನಿಗಳು ತಿಂಗಳುಗಟ್ಟಲೇ ಒಂದೇ ನಾಟಕದ ಪ್ರದರ್ಶನ ಮಾಡಿ ಯಶಸ್ವಿಯಾದ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ಹವ್ಯಾಸಿ ತಂಡಗಳು ಇಂತಹದೊಂದು ಪ್ರಯೋಗಕ್ಕೆ ಮುಂದಾಗಿವೆ. ನಗರ ಕೇಂದ್ರಿತ ನಾಟಕಗಳನ್ನು ಗ್ರಾಮೀಣ ಪ್ರದೇಶದ ಜನರೂ ನೋಡಬೇಕು. ಹೀಗಾಗಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲೂ ಕಂಪನಿ ನಾಟಕಗಳ ಪ್ರಚಾರ ಶೈಲಿ ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

drama Parva

ರಂಗಾಯಣದಲ್ಲಿ ನಾಟಕ ಪ್ರದರ್ಶನ

ರಂಗಜಾತ್ರೆಯಲ್ಲಿ ಸಾವಯವ ಸಂತೆ ರಂಗಜಾತ್ರೆಯಲ್ಲಿ ಸಂಜೆ ನಾಟಕಗಳ ಪ್ರದರ್ಶನವಿದ್ದರೆ, ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ರಂಗಾಯಣ ಆವರಣದಲ್ಲಿ ಸಾವಯವ ಸಂತೆ, ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಅಲ್ಲದೇ ರಂಗಭೂಮಿಗೆ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸುವ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ.

drama Parva

ರಂಗಪ್ರಿಯರ ಪಾಲಿಗೆ ಸ್ವರ್ಗವಾಗಿರುವ ಧಾರವಾಡ ರಂಗಾಯಣ

ಇದನ್ನೂ ಓದಿ: ಧಾರವಾಡ ಜಿಲ್ಲೆಯ ರಂಗಾಯಣದ ರಂಗ ನವಮಿ ನಾಟಕೋತ್ಸವಕ್ಕೆ ಚಾಲನೆ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ