FDA | ತಡವಾಗಿ ಬಂದಿದಕ್ಕೆ ಪರೀಕ್ಷಾರ್ಥಿಗಳಿಗೆ ಎಕ್ಸಾಂಗೆ ಅವಕಾಶ ನೀಡದ ಸಿಬ್ಬಂದಿ.. ಪ್ರವೇಶ ಪತ್ರ ಸಿಗದೆ ಪರೀಕ್ಷಾರ್ಥಿಗಳ ಪರದಾಟ

ಇಂದು ಬೆಳಗ್ಗೆ 10 ರಿಂದ 11:30 ರವರೆಗೆ ಸಾಮಾನ್ಯ ಜ್ಞಾನ ಪತ್ರಿಕೆ ಮತ್ತು ಮಧ್ಯಾಹ್ನ 2 ರಿಂದ 3.30 ರವರೆಗೆ ಸಾಮಾನ್ಯ ಕನ್ನಡ ಪತ್ರಿಕೆ ಇದೆ. ಆದ್ರೆ ಕೆಲ ಅಭ್ಯರ್ಥಿಗಳು ತಡವಾಗಿ ಬಂದಿದ್ದಕ್ಕೆ FDA ಪರೀಕ್ಷೆಗೆ ಅವಕಾಶ ನೀಡಿಲ್ಲ. ಹೀಗಾಗಿ ಕಾಲೇಜು ಸಿಬ್ಬಂದಿ, ಪರೀಕ್ಷಾರ್ಥಿಗಳ ವಾಗ್ವಾದ ಉಂಟಾಗಿದ್ದ ಘಟನೆ ನಡೆದಿದೆ.

FDA | ತಡವಾಗಿ ಬಂದಿದಕ್ಕೆ ಪರೀಕ್ಷಾರ್ಥಿಗಳಿಗೆ ಎಕ್ಸಾಂಗೆ ಅವಕಾಶ ನೀಡದ ಸಿಬ್ಬಂದಿ.. ಪ್ರವೇಶ ಪತ್ರ ಸಿಗದೆ ಪರೀಕ್ಷಾರ್ಥಿಗಳ ಪರದಾಟ
ತಡವಾಗಿ ಬಂದಿದಕ್ಕೆ ಪರೀಕ್ಷಾರ್ಥಿಗಳಿಗೆ ಎಕ್ಸಾಂಗೆ ಅವಕಾಶ ನೀಡದ ಸಿಬ್ಬಂದಿ
Follow us
ಆಯೇಷಾ ಬಾನು
|

Updated on: Feb 28, 2021 | 11:38 AM

ಬೆಂಗಳೂರು: ಇಂದು ರಾಜ್ಯಾದ್ಯಂತ ಪ್ರಥಮ ದರ್ಜೆ ಸಹಾಯ ಹುದ್ದೆ ಪರೀಕ್ಷೆ ಶುರುವಾಗಿದೆ. ಆದ್ರೆ ಅಭ್ಯರ್ಥಿಗಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂದು ಬೆಳಗ್ಗೆ 10 ರಿಂದ 11:30 ರವರೆಗೆ ಸಾಮಾನ್ಯ ಜ್ಞಾನ ಪತ್ರಿಕೆ ಮತ್ತು ಮಧ್ಯಾಹ್ನ 2 ರಿಂದ 3.30 ರವರೆಗೆ ಸಾಮಾನ್ಯ ಕನ್ನಡ ಪತ್ರಿಕೆ ಇದೆ. ಆದ್ರೆ ಕೆಲ ಅಭ್ಯರ್ಥಿಗಳು ತಡವಾಗಿ ಬಂದಿದ್ದಕ್ಕೆ FDA ಪರೀಕ್ಷೆಗೆ ಅವಕಾಶ ನೀಡಿಲ್ಲ. ಹೀಗಾಗಿ ಕಾಲೇಜು ಸಿಬ್ಬಂದಿ, ಪರೀಕ್ಷಾರ್ಥಿಗಳ ವಾಗ್ವಾದ ಉಂಟಾಗಿದ್ದ ಘಟನೆ ನಡೆದಿದೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಬಳಿ FDA ಪರೀಕ್ಷೆಗೆ 10 ಪರೀಕ್ಷಾರ್ಥಿಗಳು ಬೆಳಗ್ಗೆ 9.50ಕ್ಕೆ ಬಂದಿದ್ದರು. ಹೀಗಾಗಿ ಸಿಬ್ಬಂದಿ ಪರೀಕ್ಷಾ ಕೇಂದ್ರಕ್ಕೆ ಸೇರಿಸಿಕೊಂಡಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಿಬ್ಬಂದಿಯ ಜೊತೆ ಗಲಾಟೆ ಶುರು ಮಾಡಿದ್ದಾರೆ. ಟ್ರಾಫಿಕ್‌ನಿಂದಾಗಿ ಪರೀಕ್ಷೆಗೆ ಬರುವುದಕ್ಕೆ ತಡವಾಯಿತು. ಹೀಗಾಗಿ ದಯವಿಟ್ಟು ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಸಿಬ್ಬಂದಿ ಬಳಿ ಪರೀಕ್ಷಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಪ್ರವೇಶ ಪತ್ರ ಸಿಗದೆ KPSC ಪರೀಕ್ಷಾರ್ಥಿಗಳ ಪರದಾಟ ಇನ್ನು ಮತ್ತೊಂದು ಕಡೆ ಕೆಪಿಎಸ್‌ಸಿ ವೆಬ್‌ಸೈಟ್ ಪೋರ್ಟಲ್ ಸಮಸ್ಯೆ ಹಿನ್ನೆಲೆಯಲ್ಲಿ ಎಫ್‌ಡಿಎ ಪರೀಕ್ಷೆಗೆ ಪ್ರವೇಶ ಪತ್ರ ಸಿಗದೆ ಪರೀಕ್ಷಾರ್ಥಿಗಳು ಪರದಾಡುತ್ತಿದ್ದಾರೆ. ಪರೀಕ್ಷೆಗಾಗಿ 5 ವರ್ಷದಿಂದ ಸಿದ್ಧತೆ ಮಾಡಿಕೊಂಡಿದ್ದೇವೆ. ನೂರಾರು ಕನಸುಗಳಿಗೆ ತಣ್ಣೀರೆರೆಚಿದೆ KPSC. ಟೋಲ್ ಫ್ರಿ ನಂಬರ್ ಹಾಗೂ MAIL ID ಗೆ ಕಂಪ್ಲೇಂಟ್ ಮಾಡಲು ತಿಳಿಸಿದ್ದಾರೆ. ಆದ್ರೆ ಈವರೆಗೆ ರಿಪ್ಲೈ ಸಿಕ್ಕಿಲ್ಲ . ಒಂದು ವಾರದಿಂದ ಹಾಲ್ ಟಿಕೆಟ್ ಡೌನ್ ಲೋಡ್​ಗೆ ಪ್ರಯತ್ನಿಸಿದ್ರೂ ಆಗ್ತಿಲ್ಲ ಎಂದು ಪರೀಕ್ಷಾ ಕೇಂದ್ರದ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪ್ರವೇಶ ಪತ್ರ ಸಿಗದ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳು ಕಂಗಾಲಾಗಿದ್ದಾರೆ.

ರಾಜ್ಯದಲ್ಲಿ ಇಂದು 1,057 ಕೇಂದ್ರಗಳಲ್ಲಿ ಕೆಪಿಎಸ್‌ಸಿ ಪರೀಕ್ಷೆ ನಡೆಯುತ್ತಿದೆ. ಕೆಪಿಎಸ್​ಸಿ ಜೊತೆಗೆ ಸಿಸಿಬಿ ಪೊಲೀಸರಿಂದಲೂ ಮಾನಿಟರ್ ಮಾಡಲಾಗುತ್ತಿದೆ. ಜ.24ರಂದು ನಿಗದಿಯಾಗಿದ್ದ ಪರೀಕ್ಷೆ FDA ಕೀ ಆನ್ಸರ್ ಸೋರಿಕೆ ಹಿನ್ನೆಲೆ ಮುಂದೂಡಿಕೆಯಾಗಿತ್ತು. ಕಳೆದ ಬಾರಿಯಾದ ಎಡವಟ್ಟು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ. FDA ಪರೀಕ್ಷೆ ಸಂಬಂಧ ಅಧಿಕಾರಿ, ಸಿಬ್ಬಂದಿ ಮೇಲೂ ನಿಗಾ ಇಡಲಾಗಿದೆ. ಜಿಲ್ಲಾ ಖಜಾನೆ ಆಧಿಕಾರಿಗಳ ಜತೆ ಸಿಸಿಬಿ ಪೊಲೀಸರ ಸಂಪರ್ಕ ಇರುತ್ತೆ. ಪೇಪರ್ ಖಜಾನೆ ಸೇರಿ ಎಕ್ಸಾಂ ಸೆಂಟರ್ ತಲುಪೋವರೆಗೆ ಹಾಗೂ ಸಿಬ್ಬಂದಿ ದೂರವಾಣಿ ಕರೆಗಳು, ಚಲನವಲನ ಬಗ್ಗೆಯೂ ನಿಗಾ ವಹಿಸಲಾಗುತ್ತೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿ ಕಡ್ಡಾಯ. ಜ.24ರಂದು ಡೌನ್‌ಲೋಡ್ ಮಾಡಿದ್ದ ಪ್ರವೇಶ ಪತ್ರ ರದ್ದು ಮಾಡಲಾಗಿದ್ದು ಹೊಸ ಪ್ರವೇಶ ಪತ್ರ ತಂದರೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗುತ್ತಿದೆ.

ಕಠಿಣ ರೂಲ್ಸ್ -ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಜಾಮರ್ ಅಳವಡಿಕೆ -ಕಿವಿಯ ಓಲೆಗೂ ನಿಷೇಧ ಹೇರಿದ KPSC -ಆಭರಣಗಳ ಮೇಲೂ ತೀವ್ರ ನಿಗಾ -ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿ ಕಡ್ಡಾಯ -ಪರೀಕ್ಷಾ ಸಾಮಾಗ್ರಿಗಳನ್ನ ಗೌಪ್ಯವಾಗಿಡಲು ವ್ಯವಸ್ಥೆ -ಪಿಯು ಪರೀಕ್ಷಾ ಮಂಡಳಿಯ‌ ಕರ್ನಾಟಕ ಸೆಕ್ಯೂರ್ಡ್ ಎಕ್ಸಾಮಿನೇಷನ್ ಸಿಸ್ಟಂ ಅಳವಡಿಕೆ -ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ಫೋನ್, ಬ್ಲೂ ಟೂಥ್, ವೈಫೈ, ಮೈಕ್ರೋಚಿಪ್, ಎಲೆಕ್ಟ್ರಾನಿಕ್ ಹಾಗೂ ಲೋಹದ ವಸ್ತುಗಳನ್ನು ಕೊಂಡೊಯ್ಯದಂತೆ ನಿಗಾ -ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ -ಪರೀಕ್ಷಾ ಸಾಮಾಗ್ರಿ ಸಾಗಿಸುವ ವಾಹನಗಳಿಗೆ GPS ಅಳವಡಿಕೆ -ಪ್ರತೀ ಪರೀಕ್ಷಾ ಕೇಂದ್ರಗಳಲ್ಲೂ ನಿರೀಕ್ಷಕರ ನೇಮಕ -ದಿನದ 24 ಗಂಟೆಯೂ ಶಿಫ್ಟ್ ಪ್ರಕಾರ ಕಾರ್ಯ ನಿರ್ವಹಣೆ -ಜ.24 ರಂದು ಡೌನ್ ಲೋಡ್ ಮಾಡಿಕೊಂಡಿದ್ದ ಹಾಲ್ ಟಿಕೆಟ್ ರದ್ದು -ಹೊಸ ಪ್ರವೇಶ ಪತ್ರ ಡೌನ್ ಲೋಡ್ ಪಡೆಯೋದು ಕಡ್ಡಾಯ

FDA Exam

ಪ್ರವೇಶ ಪತ್ರಗಳನ್ನು ಪರಿಶೀಲಿಸುತ್ತಿರುವುದು

FDA Exam

ಪ್ರವೇಶ ಪತ್ರಗಳನ್ನು ಪರಿಶೀಲಿಸುತ್ತಿರುವುದು

ಇದನ್ನೂ ಓದಿ: KPSC 2021 FDA Admit Card: ಎಫ್​ಡಿಎ ಹಾಲ್​ ಟಿಕೆಟ್​ ಬಿಡುಗಡೆ; ಆನ್​ಲೈನ್​​ನಲ್ಲಿ ಡೌನ್​ ಮಾಡೋದು ಹೇಗೆ? ಇಲ್ಲಿದೆ ವಿವರ

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ