ಜಮ್ಮುವಿನ ಏರ್ ಫೋರ್ಸ್ ಸ್ಟೇಶನ್ ಒಳಗೆ ಎರಡು ಬಾರಿ ಸ್ಫೋಟ; ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ
ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ತೆರಳಿದ್ದು, ಪರಿಶೀಲನೆ ನಡೆಯುತ್ತಿದೆ. ಇಷ್ಟು ಪ್ರಮಾಣದ ಭದ್ರತೆಯಿದ್ದರೂ ಸ್ಫೋಟ ಹೇಗಾಯಿತು ಎಂಬ ಬಗ್ಗೆ ತನಿಖೆಯೂ ಅದಾಗಲೇ ಶುರುವಾಗಿದೆ.
ಜಮ್ಮುವಿನ ವಾಯುನೆಲೆ ಸ್ಟೇಶನ್ ಒಳಗೆ, 5 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದೆ. ಜೂ.26-27ರ ಮಧ್ಯರಾತ್ರಿ ಹೊತ್ತಿಗೆ ಈ ವಾಯುನೆಲೆ ಉನ್ನತ ಭದ್ರತಾ ಪ್ರದೇಶವಾಗಿದ್ದು, ಏರ್ಪೋರ್ಟ್ ಬಳಿಯೇ ಇದೆ. ಸ್ಫೋಟದಿಂದ ಇಬ್ಬರು ಗಾಯಗೊಂಡಿದ್ದು, ಯಾರದ್ದೂ ಪ್ರಾಣ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ತಡರಾತ್ರಿ 1.50 ಗಂಟೆ ಹೊತ್ತಿಗೆ ಮೊದಲು ಕಟ್ಟಡದ ಮೇಲ್ಭಾಗದಲ್ಲಿ ಸ್ಫೋಟಗೊಂಡಿತು. ಅದಾದ 5 ನಿಮಿಷಗಳಲ್ಲಿ ನೆಲಭಾಗದಲ್ಲಿ ಮತ್ತೇ ಅದೇ ತರಹದ ಸ್ಫೋಟ ಉಂಟಾಗಿದೆ.
ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ತೆರಳಿದ್ದು, ಪರಿಶೀಲನೆ ನಡೆಯುತ್ತಿದೆ. ಇಷ್ಟು ಪ್ರಮಾಣದ ಭದ್ರತೆಯಿದ್ದರೂ ಸ್ಫೋಟ ಹೇಗಾಯಿತು ಎಂಬ ಬಗ್ಗೆ ತನಿಖೆಯೂ ಅದಾಗಲೇ ಶುರುವಾಗಿದೆ. ಏರ್ಫೋರ್ಸ್ ಸ್ಟೇಶನ್ನಲ್ಲಿದ್ದ ಯಾವುದೇ ಉಪಕರಣಗಳಿಗೂ ಹಾನಿಯುಂಟಾಗಿಲ್ಲ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಭದ್ರತೆಗೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇತರ ಗಣ್ಯರು ಸಭೆ ನಡೆಸಿದ್ದಾರೆ. ಮುಂದಿನ ವರ್ಷ ಅಲ್ಲಿ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡುತ್ತಿದೆ.
Jammu and Kashmir: Explosion heard inside Jammu airport’s technical area; forensic team reaches the spot
Details awaited pic.twitter.com/duWctZvCNx
— ANI (@ANI) June 27, 2021
ಇದನ್ನೂ ಓದಿ:Bigg Boss Kannada: ದಿವ್ಯಾಗಾಗಿ ಬಿಗ್ ಬಾಸ್ ಬಿಟ್ಟುಕೊಡ್ತೀನಿ ಎಂದ ಅರವಿಂದ್; ಹಾಗಾದ್ರೆ ದಿವ್ಯಾ ಆಯ್ಕೆ ಏನು?
Published On - 9:03 am, Sun, 27 June 21