Mann ki Baat: ಕೊವಿಡ್ ಲಸಿಕೆ ಪಡೆಯಲು ಹಿಂಜರಿಕೆ ಬೇಡ, ಲಸಿಕೆ ಪಡೆದುಕೊಳ್ಳಿ: ನರೇಂದ್ರ ಮೋದಿ

PM Narendra Modi: ಮನ್ ಕಿ ಬಾತ್​​ನ 78 ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಟೊಕಿಯೊ ಒಲಿಂಪಿಕ್ಸ್ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾತು ಆರಂಭಿಸಿದ್ದಾರೆ.

Mann ki Baat: ಕೊವಿಡ್ ಲಸಿಕೆ ಪಡೆಯಲು ಹಿಂಜರಿಕೆ ಬೇಡ, ಲಸಿಕೆ  ಪಡೆದುಕೊಳ್ಳಿ: ನರೇಂದ್ರ ಮೋದಿ
ಮೋದಿ ಮನ್ ಕಿ ಬಾತ್
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jun 27, 2021 | 11:48 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದು ರೇಡಿಯೊ ಕಾರ್ಯಕ್ರಮದ 78 ನೇ ಸಂಚಿಕೆಯಾಗಿದ್ದು, ಪ್ರಧಾನಿ ಮೋದಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಪಿಎಂಒನಲ್ಲಿ ಪ್ರಸಾರವಾಗುತ್ತಿದೆ. 

ಟೊಕಿಯೊ ಒಲಿಂಪಿಕ್ಸ್  ಸಂದರ್ಭದಲ್ಲಿಒಲಿಂಪಿಕ್ಸ್ ಬಗ್ಗೆ ಪ್ರಶ್ನೆಗಳನ್ನು ಕೇಳಿ  ಮೋದಿ  ಮಾತು ಆರಂಭಿಸಿದ್ದಾರೆ .ಇತ್ತೀಚೆಗೆ ಕೊವಿಡ್​ನಿಂದ ತೀರಿಕೊಂಡ ಮಿಲ್ಖಾ  ಸಿಂಗ್  ಅವರನ್ನು ನೆನಪಿಸಿಕೊಂಡ  ಮೋದಿ ಅವರ ಜೀವನ ಎಲ್ಲರಿಗೂ  ಸ್ಫೂರ್ತಿ ಎಂದಿದ್ದಾರೆ.

ಮೋದಿ ಮನದ ಮಾತು

ಟೋಕಿಯೊ ಒಲಿಂಪಿಕ್ಸ್‌ಗೆ ಹೋಗುವ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದರು, ಇತ್ತೀಚೆಗೆ ಕೊವಿಡ್ -19 ಗೆ ಪ್ರಾಣ ಕಳೆದುಕೊಂಡ ‘ಫ್ಲೈಯಿಂಗ್ ಸಿಖ್’ ಮಿಲ್ಖಾ ಸಿಂಗ್ ಅವರನ್ನು ಮೋದಿ ನೆನೆದರು.

ಒಲಿಂಪಿಕ್ಸ್ ಬಗ್ಗೆ ಮಾತನಾಡುವಾಗ, ನಾವು ಮಿಲ್ಖಾ ಸಿಂಗ್ ಜಿ ಅವರನ್ನು ನೆನಪಿಸಿಕೊಳ್ಳದಿದ್ದರೆ ಹೇಗೆ? ಅವರು ಆಸ್ಪತ್ರೆಗೆ ದಾಖಲಾದಾಗ, ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು ಟೋಕಿಯೊ ಒಲಿಂಪಿಕ್ಸ್‌ಗೆ ಹೋಗುವ ಕ್ರೀಡಾಪಟುಗಳನ್ನು ಪ್ರೇರೇಪಿಸುವಂತೆ ನಾನು ಅವರನ್ನು ವಿನಂತಿಸಿದ್ದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಆಟಗಾರರ ಬದುಕು ಅನೇಕ ಜನರಿಗೆ ಸ್ಫೂರ್ತಿಯಾಗಿದೆ.

ಪ್ರತಿಭೆ, ಸಮರ್ಪಣೆ, ನಿರ್ಣಯ ಮತ್ತು ಕ್ರೀಡಾಸ್ಫೂರ್ತಿ ಎಲ್ಲವೂ ಒಟ್ಟಿಗೆ ಸೇರಿದಾಗ ವ್ಯಕ್ತಿ ಚಾಂಪಿಯನ್ ಆಗುತ್ತಾರೆ. ಟೋಕಿಯೊಗೆ ಹೋಗುವ ನಮ್ಮ ಒಲಿಂಪಿಕ್ ತಂಡವು ಅಂತಹ ಅನೇಕ ಆಟಗಾರರನ್ನು ಸಹ ಒಳಗೊಂಡಿದೆ, ಅವರ ಜೀವನವು ಬಹಳಷ್ಟು ಸ್ಫೂರ್ತಿ ನೀಡುತ್ತದೆ.

ಟೋಕಿಯೊಗೆ ಹೋಗುವ ಪ್ರತಿಯೊಬ್ಬ ಕ್ರೀಡಾಪಟು ತನ್ನ ಬದುಕಿನಲ್ಲಿ ತನ್ನದೇ  ಆದ ಹೋರಾಟವನ್ನು ಮಾಡುತ್ತಿರುತ್ತಾರೆ. ವರ್ಷಗಳಿಂದ ಕಠಿಣ ಪರಿಶ್ರಮ ಪಡುತ್ತಾರೆ.  ಅವರು ತಮಗಾಗಿ ಮಾತ್ರವಲ್ಲ ದೇಶಕ್ಕಾಗಿ ಹೋಗುತ್ತಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಈ ಆಟಗಾರರನ್ನು ಸಾಮಾಜಿಕ ಮಾಧ್ಯಮಗಳಲ್ಲಿ  #Cheer4India ಹ್ಯಾಶ್​ಟ್ಯಾಗ್ ಜತೆ   ಪ್ರೋತ್ಸಾಹಿಸಬಹುದು.

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಿಲ್ಲುಗಾರ ಪ್ರವೀಣ್ ಜಾಧವ್ ಬಗ್ಗೆ ಮಾತನಾಡಿದ ಮೋದಿ”ಮಹಾರಾಷ್ಟ್ರದ ಸತಾರಾದ ಪ್ರವೀಣ್ ಜಾಧವ್ ಅತ್ಯುತ್ತಮ ಬಿಲ್ಲುಗಾರರಾಗಿದ್ದಾರೆ. ಅವರ ಪೋಷಕರು ಕೂಲಿ ಕೆಲಸ ಮಾಡುತ್ತಾರೆ ಮತ್ತು ಈಗ ಜಾಧವ್ ಟೋಕಿಯೊದಲ್ಲಿ ಮೊದಲ ಬಾರಿ ಭಾಗವಹಿಸುತ್ತಿದ್ದಾರೆ.

ಕೊರೊನಾ ಅವಧಿಯಲ್ಲಿ ಭಾರತದ ಹಳ್ಳಿಗಳ ಜನರು, ನಮ್ಮ ಅರಣ್ಯವಾಸಿಗಳು-ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ತಮ್ಮ ಶಕ್ತಿ ಮತ್ತು ತಿಳುವಳಿಕೆಯನ್ನು ಹೇಗೆ ತೋರಿಸಿದರು ಎಂಬುದು ಜಗತ್ತಿಗೆ ಅಧ್ಯಯನದ ವಿಷಯವಾಗಿದೆ.

ಮಧ್ಯಪ್ರದೇಶದ ಸತ್ನಾ ನಿವಾಸಿ ರಾಮ್​ಲೋಟನ್   ಕುಶ್ವಾಹ ಜಿ ಅವರು , ಅವರು ಬಹಳ ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ. ರಾಮ್‌ಲೋಟನ್ ಜಿ ತಮ್ಮ ಜಮೀನಿನಲ್ಲಿ ಕಂಟ್ರಿ ಮ್ಯೂಸಿಯಂ ನಿರ್ಮಿಸಿದ್ದಾರೆ. ಈ ವಸ್ತುಸಂಗ್ರಹಾಲಯದಲ್ಲಿ ಅವರು ನೂರಾರು ಔ ಷಧೀಯ ಸಸ್ಯಗಳು ಮತ್ತು ಬೀಜಗಳನ್ನು ಸಂಗ್ರಹಿಸಿದ್ದಾರೆ.

ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ – “ನಾಸ್ತಿ ಮೂಲಂ ಅನೌಶಧಮ್”. ಅಂದರೆ, ಯಾವುದೇ ಔಷಧೀಯ ಗುಣಗಳನ್ನು ಹೊಂದಿರದ ಅಂತಹ ಯಾವುದೇ ಸಸ್ಯ ಭೂಮಿಯಲ್ಲಿಲ್ಲ. ನಮ್ಮ ಸುತ್ತಲೂ ಅಂತಹ ಅನೇಕ ಮರಗಳು ಮತ್ತು ಸಸ್ಯಗಳಿವೆ, ಅವುಗಳು ಅದ್ಭುತ ಗುಣಗಳನ್ನು ಹೊಂದಿವೆ, ಆದರೆ ಅನೇಕ ಬಾರಿ ನಮಗೆ ಅವುಗಳ ಬಗ್ಗೆ ಸಹ ತಿಳಿದಿಲ್ಲ

ನಮ್ಮ ದೇಶದಲ್ಲಿ ಮಳೆಗಾಲ ಬಂದಿದೆ. ಮಳೆ ಬಂದಾಗ, ಅದು ನಮಗೆ ಮಾತ್ರ ಮಳೆಯಾಗುವುದಿಲ್ಲ, ಆದರೆ ಮುಂದಿನ ಪೀಳಿಗೆಗೆ ಮಳೆಯಾಗುತ್ತದೆ. ಅದಕ್ಕಾಗಿಯೇ ನಾನು ನೀರಿನ ಸಂರಕ್ಷಣೆಯನ್ನು ರಾಷ್ಟ್ರದ ಸೇವೆಯ ರೂಪವೆಂದು ಪರಿಗಣಿಸುತ್ತೇನೆ.

ಕೊರೊನಾವೈರಸ್ ವಿರುದ್ಧದ ಯುದ್ಧದಲ್ಲಿ ನಾವು ಅನೇಕ ಅಸಾಧಾರಣ ಮೈಲಿಗಲ್ಲುಗಳನ್ನು ಸಾಧಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. “ನಾವು ದೇಶವಾಸಿಗಳು ಕೊರೊನಾ  ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ಈ ಹೋರಾಟದಲ್ಲಿ ನಾವು ಒಟ್ಟಾಗಿ ಅನೇಕ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದೇವೆ. ಕೆಲವೇ ದಿನಗಳ ಹಿಂದೆ ನಮ್ಮ ದೇಶ ಅಭೂತಪೂರ್ವ ಸಾಧನೆ ಮಾಡಿದೆ.

ಲಸಿಕೆ ಪಡೆಯಲು  ಜನರು  ಹಿಂಜರಿಯಬಾರದು. ಕೊವಿಡ್ ವಿರುದ್ಧದಹೋರಾಟದಲ್ಲಿ ಲಸಿಕೆ ಮುಖ್ಯ.ಹಾಗಾಗಿ ಎಲ್ಲರೂ ಲಸಿಕೆ ಪಡೆಯಿರಿ.  ಭಯ ಬೇಡ. ಕೆಲವೊಮ್ಮೆ ಜನರಿಗೆ ಜ್ವರ ಬರಬಹುದು ಆದರೆ ಇದು ತುಂಬಾ ಸೌಮ್ಯವಾಗಿರುತ್ತದೆ ಮತ್ತು ಕೆಲವೇ ಗಂಟೆಗಳವರೆಗೆ ಇರುತ್ತದೆ. ಕೊವಿಡ್ ಲಸಿಕೆಯನ್ನು ತಪ್ಪಿಸುವುದು ತುಂಬಾ ಅಪಾಯಕಾರಿ. ನೀವು ನಿಮ್ಮನ್ನು ಮಾತ್ರವಲ್ಲದೆ ನಿಮ್ಮ ಕುಟುಂಬ, ಇಡೀ ಗ್ರಾಮವನ್ನು ಸಹ ಅಪಾಯಕ್ಕೆ ದೂಡುತ್ತಿದ್ದೀರಿ.

ಪಿಎಂ ಮೋದಿ ಅವರು ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ದುಲಾರಿಯಾ ಗ್ರಾಮದ ಜನರೊಂದಿಗೆ ಮಾತನಾಡಿದ್ದು, ಕೊವಿಡ್ ಲಸಿಕೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. “ಲಸಿಕೆ ಭಯವನ್ನು ತೊಡೆದುಹಾಕಿ ಎಂದು ನಾನು ಗ್ರಾಮಸ್ಥರಿಗೆ ಹೇಳಲು ಬಯಸುತ್ತೇನೆ. ಭಾರತದಲ್ಲಿ ಶೇ  100 ಲಸಿಕೆ ಹಾಕಿಸಿಕೊಂಡಿರುವ ಅನೇಕ ಗ್ರಾಮಗಳಿವೆ. ಲಸಿಕೆ ಬಗ್ಗೆ ಯಾವುದೇ ಭಯ, ಅನುಮಾನ ಬೇಡ.

ವದಂತಿಯನ್ನು ಹರಡುವವರು ಅದನ್ನು ಹರಡುತ್ತಲೇ ಇರುತ್ತಾರೆ. ಆದರೆ ನಾವು ದೇಶವಾಸಿಗಳೇ ಜೀವ ಉಳಿಸಬೇಕಾಗಿದೆ. ಕೊವಿಜ್ ಮುಗಿದಿದೆ ಎಂಬ ಭ್ರಮೆಯಲ್ಲಿ ಉಳಿಯಬೇಡಿ, ಇದು ಒಂದು ರೀತಿಯ ರೋಗವಾಗಿದ್ದು, ಇದರಲ್ಲಿ ವೈರಸ್ ತನ್ನ ಸ್ವರೂಪವನ್ನು ಬದಲಾಯಿಸುತ್ತಲೇ ಇರುತ್ತದೆ. ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ನಮ್ಮ ವಿಜ್ಞಾನಿಗಳ ಮೇಲೆ ನಮಗೆ ನಂಬಿಕೆ ಇಡಿ.

ಇದನ್ನೂ  ಓದಿ:  Coronavirus cases in India: ದೇಶದಲ್ಲಿ 50,040 ಹೊಸ ಕೊವಿಡ್ ಪ್ರಕರಣ ಪತ್ತೆ, 1258 ಮಂದಿ ಸಾವು

Published On - 11:12 am, Sun, 27 June 21

ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ