AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರನೇ ವ್ಯಕ್ತಿ ಜೊತೆ ಅಕ್ರಮ ಸಂಬಂಧ; ಗಂಡ, ಪ್ರಿಯಕರನಿಂದ ಮಹಿಳೆಯ ಬರ್ಬರ ಹತ್ಯೆ

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಉಪ್ಪಲಪಾಡುವಿನಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಆಕೆಯ ಪತಿ ಈಶ್ವರಯ್ಯ ಮತ್ತು ಆಕೆಯ ಬಾಯ್​​ಫ್ರೆಂಡ್ ನಾಗೇಶ್ವರ ರಾವ್ ಸೇರಿ ಮಲ್ಲೇಶ್ವರಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಮಲ್ಲೇಶ್ವರಿ ಎಂಬ ಮಹಿಳೆ ನಾಗೇಶ್ವರ ರಾವ್​ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು. ಇದಾದ ನಂತರ ಮತ್ತೆ ಮೂರನೇ ವ್ಯಕ್ತಿಯ ಜೊತೆ ಆಕೆ ಅನೈತಿಕ ಸಂಬಂಧ ಹೊಂದಿರುವುದರಿಂದ ಕೋಪಗೊಂಡ ಆಕೆಯ ಗಂಡ ಈಶ್ವರಯ್ಯ ಹಾಗೂ ಪ್ರಿಯಕರ ನಾಗೇಶ್ವರ ರಾವ್ ಮದ್ಯ ಸೇವಿಸಿ ರಾತ್ರಿ ಆಕೆಯೊಂದಿಗೆ ಜಗಳವಾಡಿದ್ದರು. ಈ ಜಗಳದ ಸಮಯದಲ್ಲಿ ಮಲ್ಲೇಶ್ವರಿಯ ತಲೆಗೆ ಹೊಡೆದು ಉಸಿರುಗಟ್ಟಿ ಕೊಲ್ಲಲಾಗಿದೆ.

ಮೂರನೇ ವ್ಯಕ್ತಿ ಜೊತೆ ಅಕ್ರಮ ಸಂಬಂಧ; ಗಂಡ, ಪ್ರಿಯಕರನಿಂದ ಮಹಿಳೆಯ ಬರ್ಬರ ಹತ್ಯೆ
Andhra Crime
ಸುಷ್ಮಾ ಚಕ್ರೆ
|

Updated on: Mar 03, 2026 | 4:08 PM

Share

ಪಲ್ನಾಡು, ಮಾರ್ಚ್ 3: ಆಂಧ್ರಪ್ರದೇಶದಲ್ಲಿ ಮಹಿಳೆಯೊಬ್ಬರು ತನ್ನ ಪತಿ ಮತ್ತು ಪ್ರಿಯಕರನಿಂದ ದಾರುಣವಾಗಿ ಕೊಲೆಯಾಗಿದ್ದಾರೆ. ಈ ಘಟನೆ ಫೆಬ್ರವರಿ 26ರಂದು ಪಲ್ನಾಡು ಜಿಲ್ಲೆಯ ರಾಜುಪಾಲಂ ಮಂಡಲದ ಉಪ್ಪಲಪಾಡುವಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಈ ಗ್ರಾಮದ ಕೊಟ್ಟಿಗೆಯಲ್ಲಿ 44 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವುದು ಪತ್ತೆಯಾಗಿತ್ತು. ಆಕೆಯ ಶವವನ್ನು ಪರೀಕ್ಷಿಸಿದ ಸ್ಥಳೀಯರಿಗೆ ಇದು ಕೊಲೆ ಎಂದು ಗೊತ್ತಾಯಿತು. ಕೊನೆಗೆ ಆ ಮಹಿಳೆಯ ಮಗಳ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ತನಿಖೆ ವೇಳೆ ಆಕೆಯ ಪತಿ ಮತ್ತು ಪ್ರಿಯಕರ ಒಟ್ಟಿಗೆ ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಕಂಡುಬಂದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

ಉಪ್ಪಲಪಾಡುವಿನ ವೇಲ್ಪುಲ ಈಶ್ವರಯ್ಯ ಮತ್ತು ಮಲ್ಲೇಶ್ವರಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಗ್ರಾಮದ ಹೊರಗೆ ವಾಸಿಸುತ್ತಿದ್ದರು. ಮಲ್ಲೇಶ್ವರಿ ಕೆಲವು ಸಮಯದಿಂದ ಅದೇ ಊರಿನ ವೇಲ್ಪುಲ ನಾಗೇಶ್ವರ ರಾವ್ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಈ ವಿಷಯ ಆಕೆಯ ಪತಿ ಈಶ್ವರಯ್ಯ ಮತ್ತು ಅವರ ಕುಟುಂಬಕ್ಕೂ ತಿಳಿದಿತ್ತು. ನಾಗೇಶ್ವರ ರಾವ್ ಆಕೆಯ ಕುಟುಂಬಕ್ಕೆ ದುಡ್ಡು ಕೂಡ ಕೊಡುತ್ತಿದ್ದುದರಿಂದ ಈಶ್ವರಯ್ಯ ಈ ಸಂಬಂಧದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಲಿವ್-ಇನ್ ಸಂಗಾತಿಯ 2 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಡಿಎಂಕೆ ಕಾರ್ಯಕರ್ತ

ಆದರೆ, ಇತ್ತೀಚಿನ ದಿನಗಳಲ್ಲಿ ಮಲ್ಲೇಶ್ವರಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದ ನಂತರ ಈಶ್ವರಯ್ಯ ಹಾಗೂ ನಾಗೇಶ್ವರ ರಾವ್ ಇಬ್ಬರಿಗೂ ಕೋಪ ಬಂದಿತ್ತು. ಫೆಬ್ರವರಿ 25ರಂದು ಹೊರಗೆ ಹೋಗಿದ್ದ ಮಲ್ಲೇಶ್ವರಿ ತಡರಾತ್ರಿ ಮನೆಗೆ ವಾಪಾಸ್ ಬಂದರು. ಅವರು ಮನೆಗೆ ಬಂದಾಗ ಈಶ್ವರಯ್ಯ ಮತ್ತು ನಾಗೇಶ್ವರ ರಾವ್ ಒಟ್ಟಿಗೆ ಕುಳಿತು ಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಲ್ಲೇಶ್ವರಿಯ ನಡವಳಿಕೆಯನ್ನು ಪ್ರಶ್ನಿಸಿದರು. ಆಗ ಮಲ್ಲೇಶ್ವರಿ ಈಶ್ವರಯ್ಯ ಮತ್ತು ನಾಗೇಶ್ವರ ರಾವ್ ಜೊತೆ ಜಗಳವಾಡಿದರು. ಈ ಜಗಳದ ಸಮಯದಲ್ಲಿ ಕೋಪದಿಂದ ಅವರಿಬ್ಬರೂ ಮಲ್ಲೇಶ್ವರಿಯ ತಲೆಗೆ ಹೊಡೆದರು. ಆಕೆ ಪ್ರಜ್ಞೆ ಕಳೆದುಕೊಂಡರು. ಕುಡಿದ ಅಮಲಿನಲ್ಲಿದ್ದ ಅವರು ತಕ್ಷಣ ಆಕೆಯನ್ನು ಹತ್ತಿರದ ಕೊಟ್ಟಿಗೆಗೆ ಎಳೆದೊಯ್ದು, ಉಸಿರುಗಟ್ಟಿಸಿ ಕೊಲೆ ಮಾಡಿದರು. ನಂತರ, ಅವರು ಅಲ್ಲಿಂದ ಓಡಿಹೋದರು.

ಇದನ್ನೂ ಓದಿ: ಹೃದಯಾಘಾತವಲ್ಲ ಇದು ವ್ಯವಸ್ಥಿತ ಕೊಲೆ? ಪತ್ನಿಯ 3ನೇ ಮದುವೆಯಿಂದ ಬಯಲಾಯ್ತು ಪರಮೇಶ್ ಸಾವಿನ ರಹಸ್ಯ!

ಬೆಳಗಿನ ಜಾವ ಊರಿಗೆಲ್ಲ ಈ ವಿಷ ಗೊತ್ತಾಯಿತು. ಮಲ್ಲೇಶ್ವರಿಯ ಕೊಲೆ ಗ್ರಾಮದಲ್ಲಿ ಕೋಲಾಹಲ ಸೃಷ್ಟಿಸಿತು. ಆಕೆಯನ್ನು ಯಾರು ಕೊಂದಿರಬಹುದು? ಎಂದು ಎಲ್ಲರಿಗೂ ಆತಂಕ ಮತ್ತು ಕುತೂಹಲವಿತ್ತು. ಪೊಲೀಸರು ಮೊದಲು ಈಶ್ವರಯ್ಯನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ, ಅವರು ಎಲ್ಲವನ್ನೂ ಒಪ್ಪಿಕೊಂಡರು. ಕೊನೆಗೆ ಪೊಲೀಸರು ಈಶ್ವರಯ್ಯ ಮತ್ತು ನಾಗೇಶ್ವರ ರಾವ್ ಇಬ್ಬರನ್ನು ಬಂಧಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು