AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್​ಟೆಲ್​ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್​ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ

Airtel scraps its popular Rs 299 plan: ದಿನಕ್ಕೆ 1 ಜಿಬಿ ಡೇಟಾವನ್ನು 28 ದಿನಗಳ ಕಾಲ ನೀಡುತ್ತಿದ್ದ 299 ರೂ ಪ್ಲಾನ್ ಅನ್ನು ಏರ್​ಟೆಲ್ ಕೈಬಿಟ್ಟಿದೆ. ಈಗ ದಿನವೂ ಡೇಟಾ ಬಯಸುವವರು ಕನಿಷ್ಠ 349 ರೂ ಪ್ಲಾನ್ ಖರೀದಿಸಬೇಕಾಗುತ್ತದೆ. ಈ ಪ್ಲಾನ್​ನಲ್ಲಿ ದಿನಕ್ಕೆ 1.5 ಜಿಬಿ ಡೇಟಾ ಸಿಗುತ್ತದೆ. ಏರ್​ಟೆಲ್ ಇನ್ನೂ ಕೆಲ ಪ್ಲಾನ್​ಗಳನ್ನು ಕೈಬಿಟ್ಟಿದೆ. ಆದರೆ, 199 ರೂ ಮತ್ತು 219 ರೂಗಳ ಪ್ಲಾನ್ ಅನ್ನು ಉಳಿಸಿಕೊಂಡಿದೆ.

ಏರ್​ಟೆಲ್​ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್​ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ
ಏರ್‌ಟೆಲ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 13, 2026 | 2:01 PM

Share

ನವದೆಹಲಿ, ಆಗಸ್ಟ್ 13: ಭಾರ್ತಿ ಏರ್‌ಟೆಲ್ (Bharti Airtel) ತನ್ನ ಗ್ರಾಹಕರಿಗೆ ನೀಡುತ್ತಿದ್ದ ಅತ್ಯಂತ ಜನಪ್ರಿಯ ₹299 ರ ಅನ್‌ಲಿಮಿಟೆಡ್ ಬೇಸ್ ಪ್ರಿಪೇಡ್ ಪ್ಲಾನ್ ಅನ್ನು ರದ್ದುಗೊಳಿಸಿದೆ. ಇದರೊಂದಿಗೆ ಕಂಪನಿಯ ಕನಿಷ್ಠ ಅನ್‌ಲಿಮಿಟೆಡ್ ಪ್ರಿಪೇಡ್ ಪ್ಲಾನ್ ಆರಂಭಿಕ ಬೆಲೆ ಈಗ ₹349 ಕ್ಕೆ ಏರಿಕೆಯಾಗಿದೆ. ಈ ಬದಲಾವಣೆಯು ಕಂಪನಿಯ ಬೇಸ್ ಎಆರ್‌ಪಿಯು (ARPU) ದರದಲ್ಲಿ 16.7% ನಷ್ಟು ಏರಿಕೆಗೆ ಕಾರಣವಾಗಿದೆ. ಎಆರ್​ಪಿಯು ಎಂದರೆ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ.

ಏರ್​ಟೆಲ್ ದರ ಬದಲಾವಣೆಗಳು

  • ₹299 ಪ್ಲಾನ್ ರದ್ದು: ದಿನಕ್ಕೆ 1GB ಡೇಟಾ ನೀಡುತ್ತಿದ್ದ 28 ದಿನಗಳ ಅವಧಿಯ ₹299 ರ ಪ್ಲಾನ್ ಅನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ.
  • ಇತರ ರದ್ದುಗೊಂಡ ಪ್ಲಾನ್‌ಗಳು: ಏರ್‌ಟೆಲ್ ತನ್ನ ಪೋರ್ಟ್‌ಫೋಲಿಯೋದಿಂದ ₹319, ₹649 ಮತ್ತು ₹799 ಬೆಲೆಯ ಪ್ರಿಪೇಡ್ ಪ್ಲಾನ್‌ಗಳನ್ನು ಸಹ ತೆಗೆದುಹಾಕಿದೆ. ಆದರೆ, ಕೆಲ ಪ್ರದೇಶಗಳಲ್ಲಿ ₹579, ₹619 ಪ್ಲಾನ್​ಗಳನ್ನು ಕೈಬಿಡಲಾಗಿರುವುದು ತಿಳಿದುಬಂದಿದೆ.
  • ಹೊಸ ಬೇಸ್ ಪ್ಲಾನ್ (₹349): ಈಗ ಗ್ರಾಹಕರು ದಿನಕ್ಕೆ 1.5GB ಡೇಟಾ ಮತ್ತು 28 ದಿನಗಳ ವ್ಯಾಲಿಡಿಟಿಯ ಪ್ಲಾನ್ ಪಡೆಯಲು ₹299 ಬದಲು ಕನಿಷ್ಠ ₹349 ವೆಚ್ಚ ಮಾಡಬೇಕಾಗುತ್ತದೆ.
  • ಬೆಲೆ ಏರಿಕೆ: ₹859 ಪ್ಲಾನ್ ಬೆಲೆಯನ್ನು ಹೆಚ್ಚಿಸಲಾಗಿದ್ದು, ಈಗ ಅದು ₹899 ಕ್ಕೆ ದೊರೆಯಲಿದೆ.
  • ಬದಲಾಗದ ಪ್ಲಾನ್​ಗಳು: ₹199 ಮತ್ತು ₹219 ಪ್ಲಾನ್​ಗಳು ಹಾಗೆಯೇ ಮುಂದುವರಿಯಲಿವೆ. ₹199 ಪ್ಲಾನ್ 28 ದಿನ ವ್ಯಾಲಿಡಿಟಿ ಇದ್ದು ಒಟ್ಟಾರೆ 2ಜಿಬಿ ಡೇಟಾ ನೀಡುತ್ತದೆ. ₹219 ಪ್ಲಾನ್ ಒಟ್ಟು 3ಜಿಬಿ ಡೇಟಾ ನೀಡುತ್ತದೆ.

ಇದನ್ನೂ ಓದಿ: ಲಲಿತಾ ಜ್ಯುವೆಲ್ಲರಿ ಐಪಿಒ ಆಗಸ್ಟ್ 17ರಿಂದ 19ರವರೆಗೆ; ಶೇರು ಬೆಲೆ 190-201 ರೂ; ಕನಿಷ್ಠ ಹೂಡಿಕೆ 14,060 ರೂ

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಏರ್‌ಟೆಲ್ ಒಂದೇ ದಿನದಲ್ಲಿ ಮಾಡಿದ ಅತಿ ದೊಡ್ಡ ಪ್ರಿಪೇಡ್ ಪೋರ್ಟ್‌ಫೋಲಿಯೋ ಬದಲಾವಣೆ ಇದಾಗಿದೆ. ಕಂಪನಿಯು ತನ್ನ ಆದಾಯವನ್ನು ಹೆಚ್ಚಿಸಲು ಮತ್ತು ಟ್ಯಾರಿಫ್ ವ್ಯವಸ್ಥೆಯನ್ನು ಮರುಹೊಂದಿಸಲು (Tariff Rationalisation) ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More