AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Session 2026 Live: ಹಂಗಾಮಿ ಸ್ಪೀಕರ್ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಕಲಾಪ ಪ್ರಾರಂಭ

Karnataka Assembly Session 2026 Live: ಹಂಗಾಮಿ ಸ್ಪೀಕರ್ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಕಲಾಪ ಪ್ರಾರಂಭ

ಅಕ್ಷಯ್​ ಪಲ್ಲಮಜಲು​​
|

Updated on: Aug 13, 2026 | 11:28 AM

Share

ಕರ್ನಾಟಕ ವಿಧಾನಸಭೆ ಅಧಿವೇಶನ 2026 ನೇರಪ್ರಸಾರ: ಕರ್ನಾಟಕ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆಗಸ್ಟ್ 13 ರಂದು ಆರಂಭಗೊಂಡಿತು. ವಿಧಾನಸಭೆ ಮತ್ತು ವಿಧಾನಪರಿಷತ್ ಎರಡರಲ್ಲೂ ಪ್ರಮುಖ ಕಲಾಪಗಳು ನಡೆದವು. ಹಂಗಾಮಿ ಸ್ಪೀಕರ್ ಟಿ.ಬಿ. ಜಯಚಂದ್ರ ಕಲಾಪ ಪ್ರಾರಂಭಿಸಿದರು. ಹೊಸ ಸಚಿವರ ಪರಿಚಯದ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಅವರ ಮನವಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೌರವಿಸಿದರು. ಡಾ. ಯತೀಂದ್ರ ಸಿದ್ದರಾಮಯ್ಯ ವಿಧಾನಪರಿಷತ್ ಸಭಾನಾಯಕರಾಗಿ ಕಾರ್ಯಾರಂಭ ಮಾಡಿದರು.

ಬೆಂಗಳೂರು,ಆ.13: ಕರ್ನಾಟಕ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವು ಇಂದು (ಆಗಸ್ಟ್ 13) ಅಧಿಕೃತವಾಗಿ ಪ್ರಾರಂಭಗೊಂಡಿದೆ. ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡೂ ಸದನಗಳಲ್ಲಿ ಮೊದಲ ದಿನದ ಕಲಾಪಗಳು ಪ್ರಮುಖ ರಾಜಕೀಯ ಬೆಳವಣಿಗೆಗಳು ಮತ್ತು ನಾಯಕರ ಅಭಿನಂದನೆಗಳೊಂದಿಗೆ ಜರುಗಿದವು. ಹಂಗಾಮಿ ಸ್ಪೀಕರ್ ಆಗಿ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರು ವಿಧಾನಸಭೆ ಕಲಾಪವನ್ನು ಆರಂಭಿಸಿದರು. ಸದನಕ್ಕೆ ಹೊಸ ಸಚಿವರನ್ನು ಪರಿಚಯ ಮಾಡಿಕೊಡುವಂತೆ ಸ್ಪೀಕರ್ ಜಯಚಂದ್ರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದರು. ಆದರೆ, “ಇಂದು ಮೊದಲು ಸಂತಾಪ ಸೂಚನಾ ಕಲಾಪವನ್ನು ನಡೆಸಿ, ನಾಳೆ ನೂತನ ಸಚಿವರ ಪರಿಚಯ ಮಾಡಿಕೊಡಿ” ಎಂದು ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದರು. ವಿಪಕ್ಷಗಳ ಈ ಭಾವನೆಯನ್ನು ಗೌರವಿಸುವುದಾಗಿ ಮುಖ್ಯಮಂತ್ರಿಗಳು ಸಮ್ಮತಿಸಿದರು. ವಿಧಾನಪರಿಷತ್ತಿನ ನೂತನ ಸಭಾನಾಯಕರಾಗಿ ನೇಮಕಗೊಂಡಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ವಿಪಕ್ಷ ಸದಸ್ಯರ ಬಳಿಗೆ ತೆರಳಿ ಕುಶಲೋಪಚಾರಿ ಮಾತನಾಡಿ ಅಭಿನಂದನೆಗಳನ್ನು ಸ್ವೀಕರಿಸಿದರು. ಪರಿಷತ್ ವಿಪಕ್ಷ ನಾಯಕರ ಪಕ್ಕದಲ್ಲೇ ಬಸವರಾಜ ಹೊರಟ್ಟಿ ಅವರ ಆಸನವನ್ನು ವ್ಯವಸ್ಥೆಗೊಳಿಸಲಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನೂತನವಾಗಿ ಆಯ್ಕೆಯಾದ ಪರಿಷತ್ ಸದಸ್ಯರಾದ ವಿನಯ್ ಕಾರ್ತಿಕ್, ಮಳವಳ್ಳಿ ಶಿವಣ್ಣ, ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್ ಹಾಗೂ ಪಿ.ವಿ. ಮೋಹನ್ ಪರಸ್ಪರ ಶುಭಾಶಯ ಕೋರಿಕೊಂಡರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us