ಜಮ್ಮು ಏರ್ಫೋರ್ಸ್ ಸ್ಟೇಶನ್ನಲ್ಲಿ ಅವಳಿ ಸ್ಫೋಟ ನಡೆಸಲು ಡ್ರೋನ್ ಬಳಕೆ; ಇಂಥ ಪ್ರಯೋಗ ಇದೇ ಮೊದಲು
ಜಮ್ಮು ಏರ್ಪೋರ್ಟ್ನ ತಾಂತ್ರಿಕ ವಲಯದಲ್ಲಿರುವ ಹೆಲಿಪ್ಯಾಡ್ ಸಮೀಪದಲ್ಲಿ ಈ ಅವಳಿ ಸ್ಫೋಟಗಳು ನಡೆದಿದೆ. ಇದು ಕಡಿಮೆ ಸಾಂದ್ರತೆಯ ಸ್ಫೋಟವಾಗಿದ್ದು ಯಾರದ್ದೂ ಪ್ರಾಣ ಹಾನಿಯಾಗಿಲ್ಲ. ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ವಿಮಾನನಿಲ್ದಾಣದಲ್ಲಿರುವ ಏರ್ಫೋರ್ಸ್ ಸ್ಟೇಶನ್ ಒಳಗೆ ನಿನ್ನೆ ತಡರಾತ್ರಿ ಅವಳಿ ಸ್ಫೋಟ ಉಂಟಾಗಿದ್ದು, ಒಂದು ಬಾಂಬ್ ಕಟ್ಟಡದ ಮೇಲ್ಛಾವಣಿಯಿಂದ ಸ್ಫೋಟಗೊಂಡಿದ್ದರೆ, ಇನ್ನೊಂದು ನೆಲದಲ್ಲಿ ಸ್ಫೋಟವಾಗಿದೆ. 5 ನಿಮಿಷಗಳ ಅಂತರದಲ್ಲಿ ನಡೆದ ಈ ಎರಡು ಸ್ಫೋಟಗಳ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಏರ್ಫೋರ್ಸ್ ಸ್ಟೇಶನ್ನ್ನು ಸ್ಫೋಟಿಸಲು ಡ್ರೋನ್ ಬಳಸಿದ್ದಾಗಿ ಪ್ರಾಥಮಿಕ ಹಂತದ ತನಿಖೆಯಲ್ಲೇ ಗೊತ್ತಾಗಿದೆ. ಹೀಗೆ ಸ್ಫೋಟಕವನ್ನು ಎಸೆಯಲು ಎದುರಾಳಿ ಪಡೆಯ ಸೈನಿಕರು ಡ್ರೋನ್ ಬಳಕೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.
ಜಮ್ಮು ಏರ್ಪೋರ್ಟ್ನ ತಾಂತ್ರಿಕ ವಲಯದಲ್ಲಿರುವ ಹೆಲಿಪ್ಯಾಡ್ ಸಮೀಪದಲ್ಲಿ ಈ ಅವಳಿ ಸ್ಫೋಟಗಳು ನಡೆದಿದೆ. ಇದು ಕಡಿಮೆ ಸಾಂದ್ರತೆಯ ಸ್ಫೋಟವಾಗಿದ್ದು ಯಾರದ್ದೂ ಪ್ರಾಣ ಹಾನಿಯಾಗಿಲ್ಲ. ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಏರ್ಪೋರ್ಟ್ ಹೊರಗೆ ನಿಲ್ಲಿಸಲಾಗಿದ್ದ ಯುದ್ಧ ವಿಮಾನವನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಈ ಏರ್ಫೋರ್ಸ್ ಸ್ಟೇಶನ್ನಿಂದ ಭಾರತ-ಪಾಕಿಸ್ತಾನ ಗಡಿ 14 ಕಿಮೀ ದೂರ ಇದೆ. ಈ ಹಿಂದೆ ಡ್ರೋಣ್ಗಳನ್ನು ಬಳಸಿ ಭಾರತೀಯ ಭೂಪ್ರದೇಶದ 12 ಕಿಮೀ ಒಳಗೆ ಶಸ್ತ್ರಾಸ್ತ್ರಗಳನ್ನು ಬಿಸಾಡಿದ ಉದಾಹರಣೆಗಳು ಇವೆ. ಅಂದರೆ ಪಾಕಿಸ್ತಾನ ಇಲ್ಲಿ ಜಮ್ಮು-ಕಾಶ್ಮೀರ, ಪಂಜಾಬ್ಗಳಲ್ಲಿರುವ ಉಗ್ರರಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ. ಹೀಗೆ ಶಸ್ತ್ರಾಸ್ತ್ರ ಪೂರೈಕೆ ಡ್ರೋನ್ಗಳನ್ನು ಭಾರತೀಯ ಸೇನಾ ಪಡೆಗಳು ಹೊಡೆದು ಉರುಳಿಸಿದ್ದೂ ಇದೆ. ಆದರೆ ಡ್ರೋನ್ಗಳ ಮೂಲಕ ಸ್ಫೋಟಿಸಿದ್ದು ಇದೇ ಮೊದಲು ಎಂದೂ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಬಗ್ಗೆ ಚರ್ಚಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭಾರತೀಯ ವಾಯು ಪಡೆ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ.
Damage caused due to explosions by the drones at the Jammu airbase at 1.27am and 1.32 am today. Initial inputs suggest that shaped charge (explosive device) used for the explosions: Sources pic.twitter.com/53euEdNpfD
— ANI (@ANI) June 27, 2021
ಇದನ್ನೂ ಓದಿ: ಬೀದಿ ಪ್ರಾಣಿಗಳಿಗೆ ಆಸರೆಯಾದ ಕೋಲಾರದ ವ್ಯಕ್ತಿ; ನಾಯಿ, ಕೋತಿಗಳಿಗೆ ನಿತ್ಯ ಆಹಾರ ನೀಡಿ ಪೋಷಣೆ
Published On - 12:06 pm, Sun, 27 June 21