Coronavirus cases in India: ದೇಶದಲ್ಲಿ 50,040 ಹೊಸ ಕೊವಿಡ್ ಪ್ರಕರಣ ಪತ್ತೆ, 1258 ಮಂದಿ ಸಾವು
Covid 19: ಭಾರತದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ 5,95,565 ಆಗಿದ್ದು ಒಟ್ಟು ಪ್ರಕರಣಗಳಲ್ಲಿ 2.03% ಕ್ಕೆ ಇಳಿದಿದೆ. ಈವರೆಗೆ 2,91,93,085 ರೋಗಿಗಳು ಚೇತರಿಸಿಕೊಂಡಿದ್ದು, 64,818 ಜನರುಕಳೆದ 24 ಗಂಟೆಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ .
ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 50,040 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಕೇರಳದಲ್ಲಿ 12,118 ಹೊಸ ಪ್ರಕರಣಗಳು ವರದಿಯಾಗಿದ್ದರೆ, ಮಹಾರಾಷ್ಟ್ರದಲ್ಲಿ 9,812 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ದೇಶದಾದ್ಯಂತ 1,258 ಸಾವು ಪ್ರಕರಣಗಳುದಾಖಲಾಗಿವೆ. ಭಾರತದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ 5,95,565 ಆಗಿದ್ದು ಒಟ್ಟು ಪ್ರಕರಣಗಳಲ್ಲಿ 2.03% ಕ್ಕೆ ಇಳಿದಿದೆ. ಈವರೆಗೆ 2,91,93,085 ರೋಗಿಗಳು ಚೇತರಿಸಿಕೊಂಡಿದ್ದು, 64,818 ಜನರುಕಳೆದ 24 ಗಂಟೆಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ . ಕೊರೊನಾವೈರಸ್ ಡೆಲ್ಟಾ ಪ್ಲಸ್ ರೂಪಾಂತರವು ಹೆಚ್ಚು ಸಾಂಕ್ರಾಮಿಕ. ವ್ಯಾಕ್ಸಿನೇಷನ್ ಮತ್ತು ಮಾಸ್ಕ್ ಧರಿಸುವಂತಹ ಸುರಕ್ಷತಾ ಕ್ರಮಗಳ ಬಗ್ಗೆ ಗಮನಹರಿಸಬೇಕಾಗಿದೆ ಎಂದು ರಷ್ಯಾದ ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರತಿನಿಧಿ ಮೆಲಿಟಾ ವುಜ್ನೋವಿಕ್ ಹೇಳಿದ್ದಾರೆ. “ವ್ಯಾಕ್ಸಿನೇಷನ್ ಜೊತೆಗೆ ಮಾಸ್ಕ್ ಧರಿಸುವುದು ಕಡ್ಡಾಯ. ಏಕೆಂದರೆ ‘ಡೆಲ್ಟಾ’ ವಿರುದ್ಧ ಹೋರಾಡಲುಕೇವಲ ಲಸಿಕೆ ಸಾಕಾಗುವುದಿಲ್ಲ. ನಾವು ಅಲ್ಪಾವಧಿಯಲ್ಲಿಯೇ ಪ್ರಯತ್ನವನ್ನು ಮಾಡಬೇಕಾಗಿದೆ, ಇಲ್ಲದಿದ್ದರೆ ಲಾಕ್‌ಡೌನ್ ಆಗುತ್ತದೆ ಎಂದು ವುಜ್ನೋವಿಕ್ ಲೈವ್ ಯೂಟ್ಯೂಬ್ ಶೋನಲ್ಲಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
COVID19 | India reports 50,040 new cases in last 24 hours; active cases decline to 5,86,403. The country’s rate recovery rate rises to 96.75% pic.twitter.com/C7EgtRRZz8
— ANI (@ANI) June 27, 2021
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರ ಕೊವಿಡ್ ವ್ಯಾಕ್ಸಿನೇಷನ್ ಹೆಚ್ಚಳವಾಗಿರುವುದರ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಮತ್ತು ಇದನ್ನು ಮುಂದುವರಿಸುವುದು ಮುಖ್ಯವಾಗಿದೆ ಎಂದಿದ್ದಾರೆ. ವ್ಯಾಕ್ಸಿ ನೇಷನ್ ಡ್ರೈವ್ ಅನ್ನು ವಿಸ್ತರಿಸಲು ಎನ್ಜಿಒ ಮತ್ತು ಇತರ ಸಂಸ್ಥೆಗಳ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಮೋದಿ ಒತ್ತಿಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
COVID19 | India reports 50,040 fresh cases, 57,944 recoveries, and 1,258 deaths in the last 24 hours, as per the Union Health Ministry.
Total cases: 3,02,33,183 Total recoveries: 2,92,51,029 Death toll: 3,95,751 Active cases: 5,86,403 pic.twitter.com/6A2o3DMtSs
— ANI (@ANI) June 27, 2021
ಮಹಾರಾಷ್ಟ್ರ: ಥಾಣೆಯಲ್ಲಿ 432 ಹೊಸ ಕೊವಿಡ್ -19 ಪ್ರಕರಣ, 18 ಸಾವುಗಳು ಹೊಸದಾಗಿ 432 ಕೊರೊನಾವೈರಸ್ ಪ್ರಕರಣಗಳು ಸೇರ್ಪಡೆಯಾಗಿದ್ದು, ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ 5,30,720 ಕ್ಕೆ ಏರಿದೆ. ಶನಿವಾರ ವರದಿಯಾದ ಈ ಹೊಸ ಪ್ರಕರಣಗಳಲ್ಲದೆ 18 ಜನರ ರೋಗಕ್ಕೆ ಬಲಿಯಾಗಿದ್ದು , ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 10,629 ಕ್ಕೆ ಏರಿದೆ. ಥಾಣೆಯಲ್ಲಿನ ಕೊವಿಡ್ -19 ಮರಣ ಪ್ರಮಾಣವು ಶೇಕಡಾ ಎರಡು ಆಗಿದೆ ಎಂದು ಅವರು ಹೇಳಿದರು. ಚೇತರಿಸಿಕೊಂಡ ಮತ್ತು ಚಿಕಿತ್ಸೆ ಪಡೆಯದ ರೋಗಿಗಳ ವಿವರಗಳನ್ನು ಜಿಲ್ಲಾಡಳಿತ ಒದಗಿಸಿಲ್ಲ. ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ,ಕೊವಿಡ್ -19 ಪ್ರಕರಣಗಳ ಸಂಖ್ಯೆ 1,16,033 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 2,537 ಕ್ಕೆ ತಲುಪಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಅಂಡಮಾನ್‌ನಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ 7,446 ಕ್ಕೆ ಏರಿಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೊವಿಡ್ -19 ಪ್ರಕರಣಗಳ ಸಂಖ್ಯೆ ಭಾನುವಾರ 7,446 ಕ್ಕೆ ಏರಿದೆ. 20 ಜನರು ಈ ಕಾಯಿಲೆಯಿಂದ ಗುಣಮುಖರಾಗಿದ್ದು ಒಟ್ಟು ಚೇತರಿಕೆಯ ಸಂಖ್ಯೆಯನ್ನು 7,265 ಕ್ಕೇರಿದೆ. ಕೇಂದ್ರಾಡಳಿತ ಪ್ರದೇಶವು ಈಗ 54 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಈ ದ್ವೀಪಸಮೂಹದಲ್ಲಿ ಈವರೆಗೆ ಕೊರೊನಾವೈರಸ್ನಿಂದ 127 ಮಂದಿ ಸಾವಿಗೀಡಾಗಿದ್ದಾರೆ. ಆಡಳಿತವು ಈವರೆಗೆ ಕೊವಿಡ್ -19 ಗಾಗಿ 4 ಲಕ್ಷ ಮಾದರಿಗಳನ್ನು ಪರೀಕ್ಷಿಸಿದೆ.
ಇದನ್ನೂ ಓದಿ: Income Tax Exemptions: ಕೊವಿಡ್ ವೆಚ್ಚಕ್ಕೆ ಆದಾಯ ತೆರಿಗೆ ವಿನಾಯಿತಿ ಅಂದರೇನು? ಇಲ್ಲಿದೆ ಮಾಹಿತಿ
Published On - 10:36 am, Sun, 27 June 21