Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax Exemptions: ಕೊವಿಡ್​ ವೆಚ್ಚಕ್ಕೆ ಆದಾಯ ತೆರಿಗೆ ವಿನಾಯಿತಿ ಅಂದರೇನು? ಇಲ್ಲಿದೆ ಮಾಹಿತಿ

ಕೊವಿಡ್ ವೆಚ್ಚದ ಮೇಲೆ ಆದಾಯ ತೆರಿಗೆ ವಿನಾಯಿತಿ ಅಂದರೇನು? ಅದರ ಲೆಕ್ಕಾಚಾರ ಹೇಗೆ? ಇತ್ಯಾದಿ ವಿಚಾರಗಳ ಬಗ್ಗೆ ಆಸಕ್ತಿಕರವಾದ ಮಾಹಿತಿ ಇಲ್ಲಿದೆ.

Income Tax Exemptions: ಕೊವಿಡ್​ ವೆಚ್ಚಕ್ಕೆ ಆದಾಯ ತೆರಿಗೆ ವಿನಾಯಿತಿ ಅಂದರೇನು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 26, 2021 | 4:21 PM

ಕೇಂದ್ರ ಸರ್ಕಾರವು ಆದಾಯ ತೆರಿಗೆಯ ವಿವಿಧ ನಿಯಮಾವಳಿಗಳ ಗಡುವನ್ನು ಜೂನ್ 25ರ ಶುಕ್ರವಾರ ವಿಸ್ತರಣೆ ಮಾಡಲಾಗಿದೆ. ಆ ಪ್ರಕಾರ, ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಕೊವಿಡ್-19 ಚಿಕಿತ್ಸೆಗೆ ನೀಡುವ ಮೊತ್ತಕ್ಕೆ ತೆರಿಗೆಯಿಂದ ವಿನಾಯಿತಿ ದೊರೆಯಲಿದೆ. ಕೊವಿಡ್- 19 ಸನ್ನಿವೇಶಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪರಿಹಾರ ಒದಗಿಸಲಾಗುತ್ತದೆ. ಒಂದು ವೇಳೆ ಉದ್ಯೋಗಿ ಕೊರೊನಾ ಕಾರಣಕ್ಕೆ ಮೃತಪಟ್ಟು, ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಕಂಪೆನಿಗಳಿಂದ ನೀಡುವ ಪರಿಹಾರಕ್ಕೆ ತೆರಿಗೆಯಿಂದ ವಿನಾಯಿತಿ ಸಿಗುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಘೋಷಣೆಯಂತೆ, ಒಬ್ಬ ವ್ಯಕ್ತಿಯು ಉದ್ಯೋಗಿಯ ಕೊವಿಡ್ ಚಿಕಿತ್ಸೆಗೆ ಮಾಡುವ ವೆಚ್ಚವು ತೆರಿಗೆಯಿಂದ ಮುಕ್ತವಾಗಿದೆ. ಜತೆಗೆ ಒಬ್ಬ ವ್ಯಕ್ತಿಯು ಚಿಕಿತ್ಸೆಗೆ ಪಾವತಿಸುವ ವೆಚ್ಚವು ಮತ್ತು ಆ ಪಾವತಿಯ ಫಲಾನುಭವಿಗಳಿಗೆ ಯಾವುದೇ ತೆರಿಗೆ ಜವಾಬ್ದಾರಿ ಬರುವುದಿಲ್ಲ. ಹಲವು ತೆರಿಗೆದಾರರಿಗೆ ತಮ್ಮ ಉದ್ಯೋಗದಾತರು ಅಥವಾ ಹಿತೈಷಿಗಳ ಮೂಲಕವಾಗಿ ಕೊವಿಡ್- 19 ಚಿಕಿತ್ಸೆಗೆ ಹಣಕಾಸಿನ ನೆರವು ಪಡೆದಿದ್ದಾರೆ. ಹೀಗೆ ಉದ್ಯೋಗದಾತರು ಅಥವಾ ಯಾವುದೇ ವ್ಯಕ್ತಿಯಿಂದ ಹಣ ಪಡೆದುಕೊಂಡಿದ್ದರೂ ಆ ಮೊತ್ತಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ ಎಂದು ಹೇಳಲಾಗಿದೆ.

ಕೊವಿಡ್- 19ನಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಸ್ಥರಿಗೆ ಉದ್ಯೋಗದಾತರು ಹಣಕಾಸು ನೆರವು ನೀಡುತ್ತಿದ್ದಾರೆ. ದುಡಿಯುವ ಕುಟುಂಬ ಸದಸ್ಯರ ದಿಢೀರ್ ಸಾವಿನ ಕಷ್ಟದ ಸಂದರ್ಭದಲ್ಲಿ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಕುಟುಂಬ ಸದಸ್ಯರಿಗೆ ಇನ್ನಷ್ಟು ನೆರವಾಗಬೇಕು ಎಂಬ ಕಾರಣಕ್ಕೆ ಹಣಕಾಸಿನ ನೆರವಿನ ಮೊತ್ತದ ಮೇಲೆ ಆದಾಯ ತೆರಿಗೆಯಲ್ಲಿ ಸರ್ಕಾರದಿಂದ ವಿನಾಯಿತಿ ಘೋಷಿಸಲಾಗಿದೆ. ಉದ್ಯೋಗದಾತರಿಂದ ಬರುವ ನೆರವಿನ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಆದರೆ ಇತರ ವ್ಯಕ್ತಿಗಳಿಂದ ಪಡೆವ ಮೊತ್ತಕ್ಕೆ 10 ಲಕ್ಷ ರೂಪಾಯಿಯ ಸರಾಸರಿಯ ಮಿತಿ ಇದೆ.

ಕೊರೊನಾ ಬಿಕ್ಕಟ್ಟು ಇರುವುದರಿಂದ ತೆರಿಗೆ ವಿನಾಯಿತಿಯನ್ನು ಹೊರತುಪಡಿಸಿದಂತೆ, ತೆರಿಗೆ ನಿಯಮಾವಳಿಗಳ ಗಡುವನ್ನು ವಿಸ್ತರಿಸಲಾಗಿದೆ. ಇನ್ನು ಪ್ಯಾನ್ ಕಾರ್ಡ್ ಜತೆಗೆ ಆಧಾರ್ ಜೋಡಣೆ ಮಾಡುವ ಅವಧಿಯನ್ನು ಸೆಪ್ಟೆಂಬರ್ 30, 2021ರ ತನಕ ವಿಸ್ತರಿಸಲಾಗಿದೆ. ಮೂರನೇ ಬಾರಿಗೆ ಈ ಜೋಡಣೆ ಮುಂದೂಡಲಾಗಿದೆ. ಟಿಡಿಎಸ್ ರಿಟರ್ನ್ ಅಥವಾ ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್ ರಿಟರ್ನ್ ಫೈಲ್ ಮಾಡುವುದಕ್ಕೆ ಕೊನೆ ದಿನವನ್ನು ಜೂನ್ 30ರಿಂದ ಜುಲೈ 31, 2021ಕ್ಕೆ ವಿಸ್ತರಣೆ ಆಗಿದೆ.

ಇದನ್ನೂ ಓದಿ: Tax free interest income: ಈ ಐದು ಹೂಡಿಕೆಗಳ ಮೇಲಿನ ಬಡ್ಡಿ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ ಎಂಬ ಸಂಗತಿ ಗೊತ್ತೆ?

(Personal finance: How covid- 19 expenses treated under Income Tax? Here is an explainer)

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ