Work From Home: ವರ್ಕ್​ ಫ್ರಮ್ ಹೋಮ್ ಮುಗಿದು ಮತ್ತೆ ಕೆಲಸಕ್ಕೆ ಹೋಗವಂತಾಗುತ್ತದೆಯೇ? ಯಾರು ಏನಂತಾರೆ?

ಕೊರೊನಾ ಕಾರಣಕ್ಕೆ ಈಗ ಕಂಪೆನಿಗಳು ನೀಡಿರುವ ವರ್ಕ್ ಫ್ರಮ್ ಹೋಮ್ ಮುಗಿದು ಕಚೇರಿಗಳಿಗೆ ಹಿಂತಿರುಗಬಹುದಾ? ಈ ಬಗ್ಗೆ ಒಂದೊಂದು ವಲಯದಲ್ಲಿ ಇರುವವರು ಒಂದೊಂದು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Work From Home: ವರ್ಕ್​ ಫ್ರಮ್ ಹೋಮ್ ಮುಗಿದು ಮತ್ತೆ ಕೆಲಸಕ್ಕೆ ಹೋಗವಂತಾಗುತ್ತದೆಯೇ? ಯಾರು ಏನಂತಾರೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 26, 2021 | 7:35 PM

“ಈ ಕೊರೊನಾ ಮುಗಿದು ಮತ್ತೆ ನಾವು ಆಫೀಸ್​ಗಳಿಗೆ ಹೋಗ್ತೀವಿ ಅನ್ನೋ ಯಾವ ನಂಬಿಕೆ ಕೂಡ ನನಗಿಲ್ಲ,” ಹೀಗೆ ಹೇಳಿದ್ದರು ಪುನೀತ್. ಕನ್ನಡದ ಟೀವಿ ಚಾನೆಲ್​ವೊಂದರಲ್ಲಿ ಪ್ರಮುಖ ಜವಾಬ್ದಾರಿ ಅವರದು. 2020ನೇ ಇಸವಿಯಲ್ಲಿ ಬೆಂಗಳೂರಿನ ಮಟ್ಟಿಗೆ ಪುನೀತ್ ಹೇಳಿದ್ದ ಮಾತುಗಳು ಈಗ ಜಾಗತಿಕ ಮಟ್ಟದಲ್ಲಿ ಕೆಲವು ಕಂಪೆನಿಗಳ ವಿಷಯಕ್ಕೆ ನಿಜವಾಗುತ್ತಿದೆ. 2020ರ ಮಾರ್ಚ್ ಮಧ್ಯದಲ್ಲಿ ಉದ್ಯೋಗಿಗಳಿಗೆ ವರ್ಕ್ ಫ್ರಮ್​ ಹೋಮ್​ಗೆ ಅವಕಾಶ ಕೊಟ್ಟ ಅದೆಷ್ಟೋ ಕಂಪೆನಿಗಳು ಮನೆಗಳಲ್ಲಿ ಇರುವಾಗಲೇ ಕೆಲಸದಿಂದ ತೆಗೆದ ಉದಾಹರಣೆಯೂ ಬೇಕಾದಷ್ಟು ಸಿಗುತ್ತವೆ. ಇನ್ನು ಕಿಶೋರ್ ನಾರಾಯಣ್ ಅವರು ಅಮೆರಿಕ ಮೂಲದ ಕಂಪೆನಿಯೊಂದಕ್ಕೆ ಬೆಂಗಳೂರಿನಿಂದ ಕೆಲಸ ಮಾಡುತ್ತಿದ್ದರು. ಉಳಿದೆಲ್ಲ ಸಂಸ್ಥೆಗಳಂತೆಯೂ ಅವರಿಗೂ ಕಳೆದ ವರ್ಷದ ಮಾರ್ಚ್​ನಲ್ಲಿ ವರ್ಕ್ ಫ್ರಮ್ ಹೋಮ್ ನೀಡಲಾಯಿತು. ಮನೆ ಕಟ್ಟುವುದಕ್ಕಾಗಿ ಸಾಲ ಪಡೆದುಕೊಂಡಿರುವ ಕಿಶೋರ್​ಗೆ ತನ್ನ ಇತರ ಕೆಲ ಸ್ನೇಹಿತರ ಉದ್ಯೋಗದ ಪರಿಸ್ಥಿತಿ ಕಂಡು ಆತಂಕ. ಆ ಕಾರಣಕ್ಕೆ ಗಡಿಯಾರ ನೋಡಿಕೊಳ್ಳದೆ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ಬೆಂಗಳೂರಿನಲ್ಲಿನ ಕಂಪೆನಿಯ ಕಟ್ಟಡವನ್ನು ಶಾಶ್ವತವಾಗಿ ಖಾಲಿ ಮಾಡಲಾಗಿದೆ. ಜತೆಗೆ ಪರ್ಮನೆಂಟ್ ವರ್ಕ್​ ಫ್ರಮ್​ ಎಂದು ಘೋಷಿಸಲಾಗಿದೆ. ಅಮೆರಿಕದಲ್ಲಿ ಇರುವ ಗ್ರಾಹಕರು ಸಹ ಕಳೆದೊಂದು ವರ್ಷದ ಕೆಲಸದ ರೀತಿ ಕಂಡು ಖುಷಿಯಾಗಿದ್ದಾರೆ. ಆದ್ದರಿಂದ ಏನೂ ಸಮಸ್ಯೆ ಇಲ್ಲದೆ ನಡೆದುಕೊಂಡು ಹೋಗುತ್ತಿದೆ.

– ಹೀಗೆ 2020ರಿಂದ ಈಚೆಗೆ ಕೊರೊನಾ ಕಾರಣಕ್ಕೆ ಬಹುತೇಕರು, ಅದರಲ್ಲೂ ಐಟಿ, ಬಿಪಿಒ, ಅಷ್ಟೇ ಅಲ್ಲ, ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರು, ಮನರಂಜನೆ ವಲಯದವರು ವರ್ಕ್​ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಬೆಂಗಳೂರಿನ ಪ್ರಮುಖ ಬಿಪಿಒ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುವ ಕುಮಾರ ಅವರು ಟಿವಿ9 ಕನ್ನಡ ಡಿಜಿಟಲ್ ಜತೆಗೆ ಮಾತನಾಡಿ, ವರ್ಕ್ ಫ್ರಮ್ ಹೋಮ್ ನೀಡುವ ಬಗ್ಗೆ ನಮ್ಮ ಕಂಪೆನಿಯಲ್ಲಿ ಮುಂಚಿನಿಂದ ಪ್ರಸ್ತಾವ ಇತ್ತು. ಬಿಪಿಒಗಳು ಪ್ರಮುಖವಾಗಿ ಕಾಸ್ಟ್ (ವೆಚ್ಚ) ಮೇಲೆ ಯಶಸ್ಸು ಕಾಣುತ್ತವೆ. ನಿಮ್ಮ ಗ್ರಾಹಕರಿಗೆ ಅದೆಷ್ಟು ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ನೀಡುತ್ತೀರೋ ಅಷ್ಟು ಪ್ರಾಜೆಕ್ಟ್​ಗಳು ಬರುತ್ತವೆ. ಈಗ ಒಂದೂಕಾಲು ವರ್ಷದಿಂದ ನಮ್ಮ ಪ್ರಾಜೆಕ್ಟ್​ನಲ್ಲಿ ಏನೂ ಸಮಸ್ಯೆ ಆಗಿಲ್ಲ. ಇಂಟರ್​ನೆಟ್​, ಫರ್ನೀಚರ್ ಕಂಪೆನಿಯಿಂದ ಕೊಡಲಾಗಿದೆ. ತಿಂಗಳಿಗೆ ಎರಡು ಬಾರಿ ಸ್ನ್ಯಾಕ್ಸ್​ಗೆ ಅಂತ ಸ್ವಲ್ಪ ಮೊತ್ತ ನೀಡುತ್ತಾರೆ. ಅಷ್ಟೇ ಅಲ್ಲ, ವರ್ಕ್​ ಫ್ರಮ್ ಹೋಮ್ ಅಂತ ಬಂದ ಮೇಲೆ ರಜಾ ಹಾಕುವುದು ಕಡಿಮೆ ಆಗಿದೆ, ಪ್ರೊಡಕ್ಟಿವಿಟಿ ಜಾಸ್ತಿ ಆಗಿದೆ. ಕಂಪೆನಿಯ ಕಟ್ಟಡದ ಬಾಡಿಗೆ, ಟ್ರಾನ್ಸ್​​ಪೋರ್ಟೇಷನ್ ಮತ್ತಿತರ ವೆಚ್ಚಗಳು ಸಹ ಕಡಿಮೆ ಆಗಿವೆ ಎಂದರು.

ಬೆಂಗಳೂರಿನಲ್ಲೇ ಇರುವ ಬ್ರಿವರೀಸ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ಅನಿಲ್ ಮಾತನಾಡಿ, ವ್ಯಾಕ್ಸಿನೇಷನ್ ಪೂರ್ತಿ ಆದ ಮೇಲೆ ಕಂಪೆನಿಗಳಿಗೆ ಬರುವಂತೆ ಹೇಳುವ ಸಾಧ್ಯತೆ ಇದೆ. ಆದರೆ ಅದು ಕೇವಲ ತಿಂಗಳ ಮೀಟಿಂಗ್ ಮತ್ತಿತರ ಕಾರಣಗಳಿಗೆ ಮಾತ್ರ ಆಗಿರುವ ಸಾಧ್ಯತೆ ಇದೆ. ಹೊಸದಾಗಿ ಉದ್ಯೋಗಿಗಳನ್ನು ತೆಗೆದುಕೊಂಡಾಗ ಟ್ರೇನಿಂಗ್, ಟೀಮ್ ಜತೆಗೆ ಮಾತುಕತೆ ಇಂಥವಕ್ಕೆಲ್ಲ ಕಷ್ಟ ಆಗುವುದು ಹೌದು. ಆದರೆ ಒಟ್ಟಾರೆ ಪ್ರೊಡಕ್ಷನ್ ದೃಷ್ಟಿಯಿಂದ ಸಮಸ್ಯೆ ಅಂತೇನೂ ಆಗಿಲ್ಲ. ಎಲ್ಲರಿಗೂ ವ್ಯಾಕ್ಸಿನೇಷನ್ ಆದ ಮೇಲೆ ಆಫೀಸಿಗೆ ಹೋಗಬೇಕಾಗಬಹುದು. ಆದರೆ ಈಗಲೇ ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇನ್ನು ಅವರ ಸ್ನೇಹಿತ ಮಧುಕರ್ ಮತ್ತೊಂದು ಕಂಪೆನಿಯ ಉದ್ಯೋಗಿಯಾಗಿದ್ದಾರೆ. ಅವರು ಮಾತನಾಡಿ, ನಮ್ಮ ಕಂಪೆನಿಯಲ್ಲಿ 35ರಿಂದ 50 ವರ್ಷದ ಆಸುಪಾಸಿನಲ್ಲಿ ಇರುವವರೇ ಬಹಳ ಮಂದಿ ತೀರಿಕೊಂಡಿದ್ದಾರೆ. ಎಲ್ಲ ಈ ಕೊರೊನಾದಿಂದ. ಮೊದಮೊದಲಿಗೆ ವಾಟ್ಸಾಪ್ ಗ್ರೂಪ್​ನಲ್ಲಿ, ಮೇಲ್​ಗಳಲ್ಲಿ ಈ ಬಗ್ಗೆ ಮಾಹಿತಿ ಬರುತ್ತಿತ್ತು. ಈಚೆಗೆ ಅದನ್ನು ಕೂಡ ಕಳುಹಿಸುವುದು ನಿಲ್ಲಿಸಿದ್ದಾರೆ. ಒಂದು ವೇಳೆ ಕಚೇರಿಗೆ ಬರುವಂತೆ ಹೇಳಿದರೂ ಅದಕ್ಕೆ ಮಾನಸಿಕವಾಗಿ ಸಿದ್ಧವಾಗುವುದು ಬಹಳ ಕಷ್ಟ ಎಂದರು.

ಆಫೀಸಿಗಿಂತ ಹೆಚ್ಚಿನ ಕೆಲಸ ಮನೆಗಳಿಂದಲೇ ಆಗುತ್ತಿದೆ, ಮನೆಯಿಂದ ಆಚೆ ಹೋಗಿಬಂದ ಮೇಲೆ ಏನೋ ಹೇಗೋ ಎಂಬ ಆತಂಕ ಇದ್ದೇ ಇದೆ. ಮಕ್ಕಳು, ಹಿರಿಯರು ಇರುವುದರಿಂದ ಆಚೆಗೆ ಹೋಗುವುದಕ್ಕೆ ಅಂಜಿಕೆ ಆಗುತ್ತದೆ ಎನ್ನುವವರೇ ಹೆಚ್ಚು. ಹಾಗಿದ್ದರೆ ಮುಂದಿನ ದಿನಗಳಲ್ಲಿ ಏನಾಗಬಹುದು? ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿಯವರಾದ ವರುಣ್ ಹೇಳುವಂತೆ, ಬೆಂಗಳೂರಿಗೆ ಬಂದರೂ ಅಲ್ಲಿನ ಮನೆ ಬಾಡಿಗೆ, ಖರ್ಚು- ವೆಚ್ಚ, ಓಡಾಟ ಇವೆಲ್ಲ ನೋಡಿದರೆ ಊರಿಂದ ಕೆಲಸ ಮಾಡುವುದು ಉತ್ತಮ ಅನಿಸುತ್ತದೆ. ಅದಕ್ಕಾಗಿಯೇ ಊರಿನಲ್ಲೇ ಪ್ರತ್ಯೇಕ ಕೋಣೆ, ಇಂಟರ್​ನೆಟ್​ ಸಿಗುವುದಕ್ಕೆ ಬೂಸ್ಟರ್​ ಇತ್ಯಾದಿ ವ್ಯವಸ್ಥೆ ಮಾಡಿಕೊಂಡಿದ್ದೇನೆ. ನಮ್ಮ ಕಂಪೆನಿಯಲ್ಲಿ ಡಿಸೆಂಬರ್​ ತನಕ ವರ್ಕ್​ ಫ್ರಮ್ ಹೋಮ್ ಅಂತ ಹೇಳಿದ್ದಾರೆ. ಅದು ಇನ್ನೂ ಮುಂದಕ್ಕೆ ಹೋಗಬಹುದು. ಈ ಹಿಂದೆ ನಾನು ರಿಟೈರ್​ಮೆಂಟ್ ಪ್ಲಾನ್, ಮತ್ತೆ ಊರಿಗೆ ಬರುವ ಆಲೋಚನೆ ಅಂತ ಹಾಕಿಕೊಂಡಿದ್ದ ಗುರಿಯನ್ನು ಇನ್ನೂ ಬೇಗ ಬರುವಂತೆ ಮಾಡಿಕೊಂಡಿದ್ದೇನೆ. ಮದುವೆಯನ್ನು ಮುಂದಕ್ಕೆ ಹಾಕಿಕೊಂಡಿದ್ದೇನೆ ಎಂದರು. ಅಂದಹಾಗೆ ವರುಣ್ ಅವರು ಬೆಂಗಳೂರಿನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಾರೆ.

ಈಗಾಗಲೇ ಹಲವರು ತಂತಮ್ಮ ಊರುಗಳಲ್ಲಿ ಆದಾಯ ಕಂಡುಕೊಳ್ಳಲು ಆರಂಭಿಸಿದ್ದಾರೆ. ಗದ್ದೆ- ತೋಟಗಳ ಅಭಿವೃದ್ಧಿ ಶುರು ಮಾಡಿದ್ದಾರೆ. ಹೊಸದಾಗಿ ವ್ಯಾಪಾರ- ವ್ಯವಹಾರಗಳನ್ನು ಸಣ್ಣದಾಗಿ ಆರಂಭಿಸುತ್ತಿದ್ದಾರೆ. ಹೀಗೆ ಒಂದರ ಹಿಂದೆ ಒಂದರಂತೆ ಕೊರೊನಾ ಅಲೆ ಬಂದಲ್ಲಿ ತಮ್ಮ ಉದ್ಯೋಗಕ್ಕೆ ಖಾತ್ರಿ ಇಲ್ಲ ಎಂಬ ಭಾವನೆ ಹಲವರಲ್ಲಿದೆ. ಮುಖ್ಯವಾಗಿ ಕಾಸ್ಟ್ ಆಫ್ ಲಿವಿಂಗ್ (ಜೀವನ ವೆಚ್ಚ) ಕಡಿಮೆ ಮಾಡಿಕೊಳ್ಳುವ ಕಡೆಗೆ ಯೋಚಿಸುವುದಕ್ಕೆ ಆರಂಭಿಸಿದ್ದಾರೆ. ಅದರ ಪರಿಣಾಮವಾಗಿಯೇ ಈ ಬಾರಿ ದುಬಾರಿ ಶಾಲೆಗಳಲ್ಲಿ ಪ್ರವೇಶ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.

ಉದ್ಯೋಗಸ್ಥರು, ಅದರಲ್ಲೂ 30ರಿಂದ 40-45ರ ವಯೋಮಾನದವರು ಹೊಸ ಕೋರ್ಸ್​ಗಳಿಗೆ ಸೇರುತ್ತಿದ್ದಾರೆ. ಷೇರು ಮಾರ್ಕೆಟ್​, ಕಮಾಡಿಟಿ ಮಾರ್ಕೆಟ್​ಗಳಲ್ಲಿ ಹೂಡಿಕೆ ಮಾಡುವುದು ಹೇಗೆ ಎಂದು ಕಲಿಯುತ್ತಾ ವ್ಯವಹಾರ ಆರಂಭಿಸಿದ್ದಾರೆ. ಹೋಟೆಲ್- ರೆಸ್ಟೋರೆಂಟ್, ಪ್ರವಾಸೋದ್ಯಮ, ಟ್ರಾವೆಲ್ ಏಜೆನ್ಸಿ, ರಿಯಲ್​ ಎಸ್ಟೇಟ್, ಪಿ.ಜಿ.ಗಳನ್ನು ನಂಬಿಕೊಂಡು ಉದ್ಯೋಗ ಮಾಡುತ್ತಿರುವವರ ಸ್ಥಿತಿ ಮಾತ್ರ ಮತ್ತೂ ಕಷ್ಟವಾಗಿದೆ. ಎಲ್ಲರಲ್ಲೂ ಅದೇ ಪ್ರಶ್ನೆ ಕಾಡುತ್ತಿದೆ: ಕೊರೊನಾ ಹೋಗಿ, ಮತ್ತೆ ಮೊದಲಿನಂತೆಯೇ ಎಲ್ಲವೂ ಆಗುತ್ತದೆಯೇ? ಆಫೀಸಿಗೆ ಹೋಗುತ್ತೇವೆಯೇ? ಆದಾಯದ ಮೂಲ ಸರಿ ಹೋಗುತ್ತದೆಯೇ? ಸದ್ಯಕ್ಕಂತೂ ಉತ್ತರ ಇಲ್ಲ.

ಇದನ್ನೂ ಓದಿ: ಲಸಿಕೆ ಹೆಚ್ಚು ಹೆಚ್ಚು ಜನಕ್ಕೆ ನೀಡಿದಷ್ಟೂ ಕೊರೊನಾ ಮೂರನೆ ಅಲೆಯಿಂದ ಬಚಾವಾಗಬಹುದು ಅನ್ನುತ್ತಿದೆ ಅಧ್ಯಯನ ವರದಿ

ಇದನ್ನೂ ಓದಿ: ಮನೆಯಲ್ಲಿ ಕೆಲಸ, ಮನದಲ್ಲಿ ದುಗುಡ: ವರ್ಕ್​ ಫ್ರಮ್ ಹೋಮ್​ಗೆ ಒಂದು ವರ್ಷ

(Now more than one year completed by many employees in Work From Home by many employees. When will going to end and what people say about this. Here is an exclusive article)

Published On - 7:25 pm, Sat, 26 June 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ