ಆಲಿಯಾ ಭಟ್ ಕಂಡ ಬ್ರೇಕಪ್ಗಳು ಒಂದೆರಡಲ್ಲ; ಶಾಲೆಯಲ್ಲೇ ಆಗಿತ್ತು ಹಾರ್ಟ್ಬ್ರೇಕ್
Alia Bhatt Birthday: ಚಿತ್ರರಂಗದಲ್ಲಿ ಆ್ಯಕ್ಟೀವ್ ಆದ ಬಳಿಕ ಅವರ ವೈಯಿಕ್ತ ಜೀವನವು ಸಾಕಷ್ಟು ಚರ್ಚೆಯಲ್ಲಿ ಇರುತ್ತದೆ. ಸೆಲೆಬ್ರಿಟಿಗಳ ಜೊತೆ ಹೊಸದಾಗಿ ಯಾರಾದರೂ ಕಾಣಿಸಿಕೊಂಡರೆ ಅವರ ಮಧ್ಯೆ ಲವ್ ಸ್ಟೋರಿ ಇದೆ ಎಂದು ಹೇಳಲಾಗುತ್ತದೆ. ಆಲಿಯಾ ಭಟ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರ ಹೆಸರು ಸಾಕಷ್ಟು ಸೆಲೆಬ್ರಿಟಿಗಳ ಜೊತೆ ತಳುಕು ಹಾಕಿಕೊಂಡಿತ್ತು.

ಬಾಲಿವುಡ್ ನಟಿ ಆಲಿಯಾ ಭಟ್ ಅವರಿಗೆ ಇಂದು (ಮಾರ್ಚ್ 15) ಜನ್ಮ ದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಬರ್ತ್ಡೇಗೂ ಮೊದಲೇ ಆಲಿಯಾ ಭಟ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಈ ಸಂದರ್ಭದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಲಿಯಾ ಭಟ್ ಅವರು ರಣಬೀರ್ ಕಪೂರ್ (Ranbir Kapoor) ಅವರನ್ನು ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಆದರೆ, ಆಲಿಯಾ ಭಟ್ ಹೆಸರು ಈ ಮೊದಲು ಅನೇಕ ಸೆಲೆಬ್ರಿಟಿಗಳ ಜೊತೆ ತಳುಕು ಹಾಕಿಕೊಂಡಿತ್ತು. ಆ ಬಗ್ಗೆ ಇಲ್ಲಿದೆ ವಿವರ.
ಚಿತ್ರರಂಗದಲ್ಲಿ ಆ್ಯಕ್ಟೀವ್ ಆದ ಬಳಿಕ ಅವರ ವೈಯಿಕ್ತ ಜೀವನವು ಸಾಕಷ್ಟು ಚರ್ಚೆಯಲ್ಲಿ ಇರುತ್ತದೆ. ಸೆಲೆಬ್ರಿಟಿಗಳ ಜೊತೆ ಹೊಸದಾಗಿ ಯಾರಾದರೂ ಕಾಣಿಸಿಕೊಂಡರೆ ಅವರ ಮಧ್ಯೆ ಲವ್ ಸ್ಟೋರಿ ಇದೆ ಎಂದು ಹೇಳಲಾಗುತ್ತದೆ. ಆಲಿಯಾ ಭಟ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರ ಹೆಸರು ಸಾಕಷ್ಟು ಸೆಲೆಬ್ರಿಟಿಗಳ ಜೊತೆ ತಳುಕು ಹಾಕಿಕೊಂಡಿತ್ತು.
ರಮೇಶ್ ದೂಬೆ
ರಮೇಶ್ ದೂಬೆ ಹೆಸರು ಆಲಿಯಾ ಭಟ್ ಅವರು ಶಾಲಾ ದಿನಗಳಲ್ಲಿ ಇದ್ದ ಸಂದರ್ಭದಲ್ಲಿ ಚರ್ಚೆ ಆಗಿತ್ತು. ಆ ಸಂದರ್ಭದಲ್ಲಿ ಇವರು ಪ್ರೀತಿಯಲ್ಲಿ ಇದ್ದರು ಎನ್ನಲಾಗಿದೆ. ಅಲ್ಲಿಗೆ ಇವರ ಪ್ರೀತಿ ಕೊನೆ ಆಯಿತು.
ಅಲಿ ದಡ್ಕರ್
ಅಲಿ ದಡ್ಕರ್ ಹಾಗೂ ಆಲಿಯಾ ಭಟ್ ಅವರ ಹೆಸರು ಚರ್ಚೆಯಲ್ಲಿ ಇತ್ತು. ಇವರು ರಾತ್ರಿಯ ಊಟಕ್ಕಾಗಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಕೆಲ ಸಮಯದ ಬಳಿಕ ಇವರ ಪ್ರೀತಿ ಬ್ರೇಕಪ್ ಆಯಿತು.
ಸಿದ್ದಾರ್ಥ್ ಮಲ್ಹೋತ್ರಾ
ಆಲಿಯಾ ಭಟ್ ಅವರ ಹೆಸರು ಸಾಕಷ್ಟು ಚರ್ಚೆಯಲ್ಲಿ ಇದ್ದಿದ್ದು ಸಿದ್ದಾರ್ಥ್ ಮಲ್ಹೋತ್ರಾ ಅವರ ಕಾರಣಕ್ಕೆ. ಸಿದ್ದಾರ್ಥ್ ಹಾಗೂ ಆಲಿಯಾ ಭಟ್ ಅವರು ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಸಮಯದಲ್ಲಿ ಇವರ ಮಧ್ಯೆ ಪ್ರೀತಿ ಹುಟ್ಟಿತ್ತು. ಆದರೆ, ಈ ಪ್ರೀತಿ ಹೆಚ್ಚು ದಿನ ಉಳಿದುಕೊಳ್ಳಲೇ ಇಲ್ಲ. ಆಲಿಯಾಗೆ ಸಿದ್ದಾರ್ಥ್ ಅವರು ಬೆಕ್ಕನ್ನು ಗಿಫ್ಟ್ ಆಗಿ ಕೊಟ್ಟಿದ್ದರು. ಆಲಿಯಾ ಬಳಿ ಈ ಬೆಕ್ಕು ಈಗಲೂ ಇದೆ.
ಕವಿನ್ ಮಿತ್ತಲ್
ಆಲಿಯಾ ಭಟ್ ಅವರು ಹೈಕ್ ಮೆಸೆಂಜರ್ ಸ್ಥಾಪಕ ಕವಿನ್ ಮಿತ್ತಲ್ ಜೊತೆ ಸುತ್ತಾಡಿದ್ದರು ಎನ್ನಲಾಗಿದೆ. ಸೆಮಿನಾರ್ ಒಂದರಲ್ಲಿ ಇವರ ಭೇಟಿ ಆಗಿತ್ತು. ಮೊದಲು ಆಪ್ತ ಗೆಳೆಯರಾದರು. ಆ ಬಳಿಕ ಪ್ರೀತಿ ಬೆಳೆಯಿತು. ನಂತರ ಇವರು ಬೇರೆ ಆಗುವ ಪರಿಸ್ಥಿತಿ ಬಂತು.
ಇದನ್ನೂ ಓದಿ: ಆಲಿಯಾ ಭಟ್ ಗೆ ಕಾಡುತ್ತಿದೆ ಗಂಭೀರ ಕಾಯಿಲೆ; ಆಘಾತಕಾರಿ ವಿಷಯ ಬಹಿರಂಗಪಡಿಸಿದ ನಟಿ
ರಣಬೀರ್ ಕಪೂರ್
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ಈ ಸಿನಿಮಾ ಪೂರ್ಣಗೊಳ್ಳುವ ಮೊದಲೇ ಇವರ ಮದುವೆ ಆಗಿದೆ. ಇವರು ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:51 am, Sat, 15 March 25







