ಅಂಬರೀಷ್ ಮಾಡಿದ ಎಡವಟ್ಟಿನಿಂದ ಮೂರು ದಿನ ಪ್ರಜ್ಞೆ ಕಳೆದುಕೊಂಡಿದ್ದ ಜಯಮಾಲಾ
Ambareesh-Jayamala: ಅಂಬರೀಶ್ ಬಗ್ಗೆ ಹಲವಾರು ಕತೆಗಳು ಕನ್ನಡ ಚಿತ್ರರಂಗದಲ್ಲಿ ಚಾಲ್ತಿಯಲ್ಲಿವೆ. ಅಂಬರೀಶ್ ಅವರ ಗೆಳೆಯರು, ಅವರ ಸಾಹಸಗಳ ಬಗ್ಗೆ ದಿನಕ್ಕೊಂದು ಕತೆಗಳನ್ನು ಹೇಳಬಲ್ಲರು. ಇದೀಗ ಹಿರಿಯ ನಟಿ ಜಯಮಾಲ, ಅಂಬರೀಶ್ ಇಂದಾಗಿ ತಾವು ಅನುಭವಿಸಿದ್ದ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.

ನಟ ಅಂಬರೀಷ್ (Ambareesh) ಅವರು ಸ್ಟಾರ್ ನಟ ಆಗಿದ್ದರು. ಅವರು ಕನ್ನಡದ ಜಲೀಲಾ ಆಗಿದ್ದರು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಹಲವು ವಿಷಯಗಳ ಬಗ್ಗೆ ಕ್ರೇಜ್ ಹೊಂದಿದ್ದರು. ಅಂಬರೀಷ್ ಯಾವುದೇ ವಿಚಾರ ಇದ್ದರೂ ನೇರವಾಗಿ ಹೇಳುತ್ತಿದ್ದರು. ಈ ಕಾರಣಕ್ಕೆ ಸಾಕಷ್ಟು ಹೈಲೈಟ್ ಆಗುತ್ತಿದ್ದರು. ಅವರ ಕುರಿತು ಹಿರಿಯ ನಟಿ ಜಯಮಾಲಾ ಅವರು ಒಂದು ಅಪರೂಪದ ಮಾಹಿತಿ ಹಂಚಿಕೊಂಡಿದ್ದಾರೆ. ಅದೇನೆಂಬುದು ಎಂಬುದನ್ನು ನಾವು ಇಂದು ನಿಮಗೆ ಹೇಳುತ್ತಿದ್ದೇವೆ.
ಇತ್ತೀಚೆಗೆ ಸೃಜನ್ ಲೋಕೇಶ್ ಅವರ ‘ಮಜಾ ಟಾಕೀಸ್’ ವೇದಿಕೆ ಮೇಲೆ ಅನೇಕ ಹಿರಿಯ ನಟಿಯರು ಆಗಮಿಸಿದ್ದರು. ಜಯಮಾಲಾ, ಗಿರಿಜಾ ಲೋಕೇಶ್, ವಿನಯಾ ಪ್ರಸಾದ್ ಮೊದಲದವರು ಈ ವೇದಿಕೆಯಲ್ಲಿ ಇದ್ದರು. ಅವರುಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ನಡೆದ ಘಟನೆಗಳನ್ನು ಅವರು ವಿವರಿಸಿದ್ದರು.
‘ಒಮ್ಮೆ ಅಂಬರೀಷ್ ಅವರು ಸ್ಕೂಟರ್ ಬೋಟ್ನಲ್ಲಿ ಕರೆದುಕೊಂಡು ಹೋದರು. ಹಿಂದೆ ನಾವು ಕುಳಿತುಕೊಳ್ಳಬೇಕಿತ್ತು. ಅವರ ಜೊತೆ ಕಾರಿನಲ್ಲಿ ಹೋಗೋಕೆ ಹೋಗೋಕೆ ಭಯ ಆಗುತ್ತಿತ್ತು, ಇನ್ನು ಸಮುದ್ರ ಎಂದರೆ ಕೇಳಬೇಕಾ? ಅಂಬರೀಷ್ ನನಗೆ ಭಯ ಆಗುತ್ತಿದೆ, ಸಮುದ್ರ ಕಂಡರೆ ಭಯ ಎಂದರೆ. ಏನೂ ಆಗಲ್ಲ ಎಂದರು. ಸ್ಪೀಡ್ ಅಲ್ಲಿ ಹೋಗ್ತಾ ಇದ್ವಿ. ನನಗೆ ಪ್ರಜ್ಞೆ ತಪ್ಪೋಯ್ತು. ಸಮುದ್ರದಲ್ಲಿ ಬಿದ್ದೋದೆ’ ಎಂದರು ಜಯಮಾಲಾ.
ಇದನ್ನೂ ಓದಿ:ಅಭಿಷೇಕ್-ಅವಿವಾ ಮಗನಿಗೆ ‘ಅಂಬರೀಷ್’ ಎಂದು ನಾಮಕರಣ? ಕಾರಣ ಇಲ್ಲಿದೆ
‘ಹೀರೋಯಿನ್ ಎಲ್ಲಿ ಎಂದು ಅಂಬರೀಷ್ ಕೇಳಿದರು. ಅವರು ಬಿದ್ದೋಗಿದಾರೆ ಎಂದು ಅಂಬರೀಷ್ ಅವರಿಗೆ ಹೇಳಲಾಯಿತು. ಮೂರು ದಿನ ಆದಮೇಲೆ ಎಚ್ಚರಿಕೆ ಆಯಿತು. ನನಗೆ ಯಾಕೆ ಸಮುದ್ರದಲ್ಲಿ ಹಾಕಿದೆ ಎಂದು ಕೇಳಿದೆ. ಹೋಗಮ್ಮೋ ನನಗೆ ಎಲ್ಲಿದ್ದೆ ಅಂತ ಗೊತ್ತಾಗಲಿಲ್ಲ ಎಂದು ಅಂಬರೀಷ್ ನನಗೆ ತಿಳಿಸಿದ್ದರು’ ಎಂದಿದ್ದಾರೆ ಜಯಮಾಲಾ.
ಅಂಬರೀಷ್ ಹಾಗೂ ಜಯಮಾಲಾ ಅವರು ಈ ಮೊದಲು ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಅಂಬರೀಷ್ ಅವರು ಈಗ ನಮ್ಮ ಜೊತೆ ಇಲ್ಲ. ಜಯಮಾಲಾ ಅವರು ಇತ್ತೀಚೆಗೆ ಸುದ್ದಿ ಆಗಿದ್ದಾರೆ. ಇತ್ತೀಚೆಗೆ ಅವರ ಮಗಳು ಸೌಂದರ್ಯಾ ವಿವಾಹವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ