AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್-ಅವಿವಾ ಮಗನಿಗೆ ‘ಅಂಬರೀಷ್’ ಎಂದು ನಾಮಕರಣ? ಕಾರಣ ಇಲ್ಲಿದೆ

ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದಪ್ಪ ದಂಪತಿಗೆ ಗಂಡು ಮಗು ಜನಿಸಿದೆ. ಈ ಸಂತೋಷದ ಸುದ್ದಿಯಿಂದ ಅಂಬರೀಷ್ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮಗುವಿಗೆ ಅಂಬರೀಷ್ ಎಂದು ನಾಮಕರಣ ಮಾಡುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

ಅಭಿಷೇಕ್-ಅವಿವಾ ಮಗನಿಗೆ ‘ಅಂಬರೀಷ್’ ಎಂದು ನಾಮಕರಣ? ಕಾರಣ ಇಲ್ಲಿದೆ
ಅಭಿಷೇಕ್ ಅಂಬರೀಷ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 12, 2024 | 12:48 PM

Share

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ್ಪ ಕುಟುಂಬದಲ್ಲಿ ಖುಷಿ ಮೂಡಿದೆ. ಅವಿವಾ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿ ಕೇಳಿ ಅಂಬರೀಷ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಒಂದೊಮ್ಮೆ ಅಂಬರೀಷ್ ಇಂದು ಬದುಕಿದ್ದರೆ ನಿಜಕ್ಕೂ ಖುಷಿಪಡುತ್ತಿದ್ದರು. ಈಗ ಗಂಡುಮಗುವಿಗೆ ಅಂಬರೀಷ್ ಎಂದು ನಾಮಕರಣ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೂ ಕಾರಣವಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ನಾಮಕರಣ ಶಾಸ್ತ್ರದಲ್ಲಿ ಹಲವು ಪದ್ಧತಿಗಳು ಚಾಲ್ತಿಯಲ್ಲಿ ಇವೆ. ಅದರಲ್ಲಿ ತಾತನ ಹೆಸರನ್ನು ಇಡುವುದು ಕೂಡ ಒಂದು. ಆದರೆ, ಇದು ಶಾಸ್ತ್ರೀಯ ವಿಧಾನ ಅಲ್ಲ ಎನ್ನುತ್ತಾರೆ ಬಲ್ಲವರು. ಕೆಲವು ಕಡೆಗಳಲ್ಲಿ ಹುಟ್ಟಿದ 11 ದಿನಕ್ಕೆ ಹೆಸರನ್ನು ಇಡಲಾಗುತ್ತದೆ. ಈ ವೇಳೆ ಹಿರಿಯರ ಹೆಸರು ಹಾಗೂ ಕುಲದೇವರ ಹೆಸರನ್ನು ಮಗುವಿಗೆ ಇಡಲಾಗುತ್ತದೆ. ಇದು ತಾತ್ಕಾಲಿಕ ಮಾತ್ರ.

ನಾಮಕರಣದ ದಿನ 4 ಹೆಸರುಗಳನ್ನು ಮಗುವಿಗೆ ಇಡಲಾಗುತ್ತದೆ. ನಕ್ಷತ್ರದ ಮೇಲೆ ಒಂದು ಹೆಸರು, ಕುಲದೇವರ ಹೆಸರು, ಮಾಸದ ಮೇಲೆ ಒಂದು ಹೆಸರು ಮತ್ತು ವ್ಯಾವಹಾರಿಕ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಅಂತಿಮವಾಗಿ ವ್ಯಾವಹಾರಿಕ ಹೆಸರು ಬಳಕೆಗೆ ಬರುತ್ತದೆ.

ಹಳೆಯ ಕಾಲದಲ್ಲಿ ತಾತನ ಹೆಸರನ್ನೇ ಮಗುವಿಗೆ ಇಡಲಾಗುತ್ತಿತ್ತು ಮತ್ತು ಅದನ್ನೇ ವ್ಯಾವಾಹಾರಿಕವಾಗಿಯೂ ಬಳಕೆ ಮಾಡಲಾಗುತ್ತಿತ್ತು. ಈ ಕಾರಣಕ್ಕೆ ಮನೆಯ ಹಿರಿ ಮಗನಿಗೆ ತಾತನ ಹೆಸರನ್ನು ಇಟ್ಟು ಕರೆಯುತ್ತಿದ್ದರು. ಮಗಳಿಗೆ ಅಜ್ಜಿಯ ಹೆಸರನ್ನು ಇಟ್ಟ ಉದಾಹರಣೆ ಇದೆ. ನಟ ಶಿವರಾಜ್​ಕುಮಾರ್ ಅವರ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ ಎಂದು. ಸಿಂಗನಲ್ಲೂರು ಪುಟ್ಟಸ್ವಾಮಿ ಅನ್ನೋದು ಅವರ ಅಜ್ಜನ ಹೆಸರಾಗಿತ್ತು. ಈ ಕಾರಣಕ್ಕೆ ಪುಟ್ಟಸ್ವಾಮಿ ಅನ್ನೋದು ಅವರ ಜೊತೆ ಸೇರಿಕೊಂಡಿತ್ತು.

ಈಗ ಅಂಬರೀಷ್ ಪುತ್ರನಿಗೂ ಸಾಂಪ್ರದಾಯಿಕವಾಗಿ ಅಂಬರೀಷ್ ಎಂದು ಹೆಸರು ಇಡುವ ಸಾಧ್ಯತೆ ಇದೆ. ಇದು ವ್ಯಾವಹಾರಿಕವಾಗಿ ಕರೆಯಲ್ಪಡದೇ ಇದ್ದರೂ ಈ ಹೆಸರನ್ನು ಮಗುವಿಗೆ ಪ್ರೀತಿಯಿಂದ ಕರೆಯಬಹುದು. ಅಂಬರೀಷ್​ ಮೇಲೆ ಇಡೀ ಕುಟುಂಬಕ್ಕೆ ಅಪಾರ ಪ್ರೀತಿ ಇದೆ. ಈ ಕಾರಣದಿಂದಲೂ ಅಂಬರೀಷ್ ಎಂದು ನಾಮಕರಣ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಭಿಷೇಕ್-ಅವಿವಾ ಕಡೆಯಿಂದ ಗುಡ್​ನ್ಯೂಸ್; ಮಗುವನ್ನು ಮುದ್ದಾಡಿದ ಸುಮಲತಾ

2023ರಲ್ಲಿ ಅಭಿಷೇಕ್ ಹಾಗೂ ಅವಿವಾ ಮದುವೆ ಆದರು. ಅಭಿಷೇಕ್ ವೃತ್ತಿಯಲ್ಲಿ ಹೀರೋ ಆದರೆ, ಅವಿವಾ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಈಗ ಇವರ ಕುಟುಂಬಕ್ಕೆ ಮಗುವಿನ ಆಗಮನ ಆಗಿರುವುದು ಕುಟುಂಬದ ಖುಷಿ ಹೆಚ್ಚಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ