ಶೂಟಿಂಗ್​ ವೇಳೆ ಯಶ್ ಹಾಕುವ ಶ್ರಮ ಹೇಗಿರುತ್ತದೆ? ಇಲ್ಲಿದೆ ವಿಡಿಯೋ

‘ಕೆಜಿಎಫ್ 2’ ಯಶ್ ವೃತ್ತಿ ಜೀವನದ ಹಾಗೂ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಬಿಸ್ನೆಸ್ ಮಾಡಿದ ಸಿನಿಮಾ. ಈ ಚಿತ್ರದಿಂದ ಯಶ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಈಗ ‘ಕೆಜಿಎಫ್’ ಚಿತ್ರದ ಒಂದು ದೃಶ್ಯವನ್ನು ಈಗ ವೈರಲ್ ಮಾಡಲಾಗಿದೆ. ಇದು ಮೇಕಿಂಗ್ ವಿಡಿಯೋ. ಈ ವಿಡಿಯೋದಲ್ಲಿ ಯಶ್ ಹಾಕಿರೋ ಶ್ರಮ ಎದ್ದು ಕಾಣುತ್ತಿದೆ.

ಶೂಟಿಂಗ್​ ವೇಳೆ ಯಶ್ ಹಾಕುವ ಶ್ರಮ ಹೇಗಿರುತ್ತದೆ? ಇಲ್ಲಿದೆ ವಿಡಿಯೋ
ಯಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 12, 2024 | 7:44 AM

ಯಶ್ ಅವರು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದರ ಹಿಂದೆ ಸಾಕಷ್ಟು ಶ್ರಮ ಇದೆ. ಅವರು ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟವರು. ಸಾಕಷ್ಟು ಕಷ್ಟ ನೋಡಿ ಬಂದವರು. ಅವರ ಸಂದರ್ಶನಗಳನ್ನು ಹಾಕಲು ಆರಂಭದಲ್ಲಿ ಕೆಲ ವಾಹಿನಿಯವರು ನಿರಾಕರಿಸಿದ್ದರಂತೆ. ಈಗ ಅವರು ಸಂದರ್ಶನ ನೀಡುತ್ತಾರೆ ಎಂದರೆ ಎಲ್ಲರೂ ನಿಲ್ಲುತ್ತಾರೆ. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಯಶ್ ಅವರು ಹಾಕುವ ಶ್ರಮ ಎಂಥದ್ದು ಎಂಬ ವಿಡಿಯೋ ಒಂದು ವೈರಲ್ ಆಗಿದೆ.

‘ಕೆಜಿಎಫ್ 2’ ಯಶ್ ವೃತ್ತಿ ಜೀವನದ ಹಾಗೂ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಬಿಸ್ನೆಸ್ ಮಾಡಿದ ಸಿನಿಮಾ. ಈ ಚಿತ್ರದಿಂದ ಯಶ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಈಗ ‘ಕೆಜಿಎಫ್’ ಚಿತ್ರದ ಒಂದು ದೃಶ್ಯವನ್ನು ಈಗ ವೈರಲ್ ಮಾಡಲಾಗಿದೆ. ಇದು ಮೇಕಿಂಗ್ ವಿಡಿಯೋ. ಈ ವಿಡಿಯೋದಲ್ಲಿ ಯಶ್ ಹಾಕಿರೋ ಶ್ರಮ ಎದ್ದು ಕಾಣುತ್ತಿದೆ.

ಗಣಿಗಾರಿಕೆ ನಡೆಯುವ ನರಾಚಿಗೆ ಯಶ್ ತೆರಳಿರುತ್ತಾರೆ. ಅಲ್ಲಿ ಮ್ಯಾಪ್ ಇರೋ ಜಾಗಕ್ಕೆ ಯಶ್ ಹೋಗಿರುತ್ತಾರೆ. ಈ ವೇಳೆ ಅವರು ತಪ್ಪಿಸಿಕೊಂಡು ಬರುವಾಗ ಯಶ್ ಟ್ರಕ್ ಅಡಿಗೆ ಹೋಗುವ ದೃಶ್ಯ ಇದೆ. ಇದನ್ನು ಮಾಡುವಾಗ ಯಶ್ ಸಾಕಷ್ಟು ತೊಂದರೆ ಅನುಭವಿಸಿದ್ದರು. ಯಶ್ ಕಿವಿಗೆ ಮರಳು ಕೂಡ ಹೋಗಿತ್ತು. ಆ ದೃಶ್ಯವನ್ನು ಈಗ ವೈರಲ್ ಮಾಡಲಾಗಿದೆ. ‘ಯಶ್ ಅವರ ಶ್ರಮ ನೋಡಿ’ ಎಂದು ಅನೇಕರು ಹೇಳಿದ್ದಾರೆ. ಯಶ್ ಅವರು ಇಲ್ಲಿ ಡೂಪ್​ ಬಳಸಬಹುದಿತ್ತು. ಆದರೆ, ಆ ರೀತಿ ಮಾಡಿಲ್ಲ.

ಯಶ್ ಅವರು ಪ್ರತಿ ದೃಶ್ಯವನ್ನು ಇಷ್ಟಪಟ್ಟು ಮಾಡುತ್ತಾರೆ. ಆ್ಯಕ್ಷನ್ ದೃಶ್ಯಗಳನ್ನು ಅವರು ಕಷ್ಟಪಟ್ಟು ಮಾಡುತ್ತಾರೆ. ಇದಕ್ಕಾಗಿ ಸಾಕಷ್ಟು ಸಿದ್ಧತೆ ಕೂಡ ಮಾಡುತ್ತಾರೆ. ಯಶ್ ಅವರು ಶೂಟಿಂಗ್ ವೇಳೆ ಹಾಕಿದ ಶ್ರಮ ಎದ್ದು ಕಾಣಿಸುತ್ತದೆ.

ಇದನ್ನೂ ಓದಿ: ಯಶ್​ಗೆ ಕನ್ನಡದಲ್ಲೇ ಪ್ರಶ್ನೆ ಕೇಳಿದ ಮುಂಬೈ ವ್ಯಕ್ತಿ; ರಾಕಿಂಗ್ ಸ್ಟಾರ್ ಉತ್ತರ ಹೇಗಿತ್ತು?

ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಮಲಯಾಳಂನ ಗೀತು ಮೋಹನ್​ದಾಸ್ ಅವರು ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಇದರ ನಿರ್ಮಾಣ ಮಾಡುತ್ತಿದೆ. ತಮಿಳಿನ ನಯನತಾರಾ ಹಾಗೂ ಹಿಂದಿಯ ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಹಿಂದಿಯ ರಾಮಾಯಣ ಚಿತ್ರಕ್ಕೆ ಅವರು ನಿರ್ಮಾಪಕರು ಕೂಡ ಹೌದು. ಈ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಹಲವು ಪಾರ್ಟ್​​ಗಳಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ದರ್ಶನ್​ಗೆ ಜಾಮೀನು: ತೂಗುದೀಪ ನಿಲಯದ ಬಳಿ ಅಭಿಮಾನಿಗಳ ಸಂಭ್ರಮ
ದರ್ಶನ್​ಗೆ ಜಾಮೀನು: ತೂಗುದೀಪ ನಿಲಯದ ಬಳಿ ಅಭಿಮಾನಿಗಳ ಸಂಭ್ರಮ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ