ತೆಲುಗಿನ ಈ ಚಿತ್ರಕ್ಕೆ ಸ್ಫೂರ್ತಿ ಆಯ್ತಾ ಯಶ್ ಲುಕ್

ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ‘ಪುಷ್ಪ’ ಹಾಗೂ ‘ಕೆಜಿಎಫ್’ ಚಿತ್ರದ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ‘ಕೆಜಿಎಫ್’ ಚಿತ್ರಕ್ಕಿಂತ ಪುಷ್ಪ ಉತ್ತಮವಾಗಿ ಮೂಡಿ ಬರುತ್ತದೆ’ ಎಂದು ತೆಲುಗು ಮಂದಿ ಕೊಟ್ಟ ಹೇಳಿಕೆಯೇ ಇದಕ್ಕೆಲ್ಲ ಕಾರಣ. ಈಗ ‘ಕೆಜಿಎಫ್ 2’ ಚಿತ್ರ ಹಾಗೂ ‘ಪುಷ್ಪ 2’ ಚಿತ್ರಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

ತೆಲುಗಿನ ಈ ಚಿತ್ರಕ್ಕೆ ಸ್ಫೂರ್ತಿ ಆಯ್ತಾ ಯಶ್ ಲುಕ್
ಯಶ್
Follow us
ರಾಜೇಶ್ ದುಗ್ಗುಮನೆ
|

Updated on:Nov 13, 2024 | 2:54 PM

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಈ ಚಿತ್ರದ ಟ್ರೇಲರ್ ನವೆಂಬರ್ 17ರಂದು ರಿಲೀಸ್ ಆಗಲಿದೆ. ದೂರದ ಪಾಟ್ನಾದಲ್ಲಿ ತಂಡ ಈವೆಂಟ್ ಆಯೋಜನೆ ಮಾಡಿದೆ. ಹೀಗಿರುವಾಗಲೇ ಅನೇಕರು ‘ಪುಷ್ಪ 2’ ಚಿತ್ರದ ಪೋಸ್ಟರ್​ಗಳನ್ನು ‘ಕೆಜಿಎಫ್’ ಚಿತ್ರದ ಪೋಸ್ಟರ್​ಗಳಿಗೆ ಹೋಲಿಕೆ ಮಾಡಿದ್ದಾರೆ. ಇದನ್ನು ಅನೇಕರು ಒಪ್ಪಿದ್ದಾರೆ.

ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ‘ಪುಷ್ಪ’ ಹಾಗೂ ‘ಕೆಜಿಎಫ್’ ಚಿತ್ರದ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ‘ಕೆಜಿಎಫ್’ ಚಿತ್ರಕ್ಕಿಂತ ಪುಷ್ಪ ಉತ್ತಮವಾಗಿ ಮೂಡಿ ಬರುತ್ತದೆ’ ಎಂದು ತೆಲುಗು ಮಂದಿ ಕೊಟ್ಟ ಹೇಳಿಕೆಯೇ ಇದಕ್ಕೆಲ್ಲ ಕಾರಣ. ಈಗ ‘ಕೆಜಿಎಫ್ 2’ ಚಿತ್ರ ಹಾಗೂ ‘ಪುಷ್ಪ 2’ ಚಿತ್ರಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

‘ಕೆಜಿಎಫ್ 2’ ಚಿತ್ರ ಈಗಾಗಲೇ ರಿಲೀಸ್ ಆಗಿ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಡಿಸೆಂಬರ್ 5ರಂದು ‘ಪುಷ್ಪ 2’ ಚಿತ್ರ ರಿಲೀಸ್ ಆಗುತ್ತಿದೆ. ಮೊದಲ ದಿನ ಈ ಚಿತ್ರ ಭರ್ಜರಿ ಗಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಕೆಲವರು ಪೋಸ್ಟರ್ ಮಧ್ಯೆ ಹೋಲಿಕೆ ಮಾಡಿದ್ದಾರೆ.

ರಾಕಿ ಗನ್ ಹಿಡಿದು ಬರೋದು, ರಾಕಿ ಸಿಗರೇಟು ಹಚ್ಚಿಕೊಳ್ಳುದು ಸೇರಿ ಅನೇಕ ಪೋಸ್ಟರ್​ಗಳ ಜೊತೆ ಪುಷ್ಪ ಪೋಸ್ಟರ್​ಗಳನ್ನು ಹೋಲಿಕೆ ಮಾಡಲಾಗುತ್ತಿದೆ. ಇವುಗಳಲ್ಲಿ ಕೆಲವು ಸಾಮ್ಯತೆಗಳು ಕಾಣಿಸಿವೆ. ಹಾಗಂತ ಇದನ್ನು ಮಾಡುತ್ತಿರುವವರು ಕನ್ನಡದವರಲ್ಲ. ಪಕ್ಕಾ ತೆಲುಗು ಮಂದಿಯೇ ಈ ಪ್ರಶ್ನೆ ಕೇಳುತ್ತಿದ್ದಾರೆ ಅನ್ನೋದು ವಿಶೇಷ. ಈ ಬಗ್ಗೆ ಸುಕುಮಾರ್ ಅವರು ಯಾವ ರೀತಿಯ ಸ್ಪಷ್ಟನೆ ನೀಡುತ್ತಾರೆ ಎಂಬುದನ್ನು ನೋಡಬೇಕಿದೆ.

ಇದನ್ನೂ ಓದಿ: ‘ಕೋಟಿ ಖರ್ಚಾದರೂ ಉಳಿಸಿಕೊಳ್ತೀನಿ ಅಂದ್ರು’; ಯಶ್ ಸಹಾಯ ನೆನೆದು ಭಾವುಕರಾದ ‘ಕೆಜಿಎಫ್’ ಚಾಚಾ

‘ಕೆಜಿಎಫ್’ ಹಾಗೂ ‘ಪುಷ್ಪ’ ಚಿತ್ರದ ಒನ್​ಲೈನ್​ ಸ್ಟೋರಿಯ ಮಧ್ಯೆ ಹೋಲಿಕೆ ಇದೆ. ಕಷ್ಟದಿಂದ ಬರೋ ರಾಕಿ ಭಾಯ್ ನಂತರ ಸಾಮ್ರಾಜ್ಯ ಕಟ್ಟುತ್ತಾರೆ. ಎರಡನೇ ಭಾಗದಲ್ಲಿ ಈ ಸಾಮ್ರಾಜ್ಯವನ್ನು ಆಳುತ್ತಾನೆ. ‘ಪುಷ್ಪ’ ಹಾಗೂ ‘ಪುಷ್ಪ 2’ ಕಥೆ ಕೂಡ ಇದೆ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:58 pm, Tue, 12 November 24

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್