ಆಲಿಯಾ ಭಟ್ ಗೆ ಕಾಡುತ್ತಿದೆ ಗಂಭೀರ ಕಾಯಿಲೆ; ಆಘಾತಕಾರಿ ವಿಷಯ ಬಹಿರಂಗಪಡಿಸಿದ ನಟಿ
ಆಲಿಯಾ ಭಟ್ ನಟನೆಯ ಜಿಗ್ರಾ ಚಿತ್ರ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಚರ್ಚೆಯಲ್ಲಿದೆ. ಇದೊಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಆಲಿಯಾ ಇದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಈ ಸಿನಿಮಾದಲ್ಲಿ ಆಲಿಯಾ ಅವರ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಈ ಮಧ್ಯೆ ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ನಟಿ ಇತ್ತೀಚೆಗೆ ತಾನು ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಏನಿದು ಕಾಯಿಲೆ? ಇದರ ರೋಗಲಕ್ಷಣಗಳೇನು? ಇಲ್ಲಿದೆ ಮಾಹಿತಿ.
ಖ್ಯಾತ ನಟಿ ಆಲಿಯಾ ಭಟ್ ನಟನೆಯ ಜಿಗ್ರಾ ಚಿತ್ರ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಚರ್ಚೆಯಲ್ಲಿದೆ. ಇದೊಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಆಲಿಯಾ ಇದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಈ ಸಿನಿಮಾದಲ್ಲಿ ಆಲಿಯಾ ಅವರ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಈ ಮಧ್ಯೆ ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ನಟಿ ಇತ್ತೀಚೆಗೆ ತಾನು ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಏನಿದು ಕಾಯಿಲೆ? ಇದರ ರೋಗಲಕ್ಷಣಗಳೇನು? ಇಲ್ಲಿದೆ ಮಾಹಿತಿ.
ಕರೀನಾ ಕಪೂರ್ ಜೊತೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಿರುವಾಗ ಆಲಿಯಾ ಭಟ್ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ. “ನಾನು ಯಾವುದೇ ವಿಷಯವಾಗಲಿ ಅದರ ಬಗ್ಗೆ ಅತಿಯಾಗಿ ಯೋಚಿಸುತ್ತೇನೆ. ನನಗೆ ಚಿಕ್ಕ ಚಿಕ್ಕ ವಿಷಯಕ್ಕೂ ಹೆಚ್ಚು ಆತಂಕವಾಗುತ್ತದೆ” ಎಂದಿದ್ದಾರೆ. “ಬಾಲ್ಯದಿಂದಲೂ ನನಗೆ ಅಟೆನ್ಶನ್ ಡೆಫಿಸಿಟ್ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಇತ್ತು. ಆದರೆ ಈ ವಿಷಯ ಕೆಲವು ತಿಂಗಳುಗಳ ಹಿಂದೆ ನನ್ನ ಅರಿವಿಗೆ ಬಂದಿದೆ. ಎಲ್ಲರಿಗೂ ಆತಂಕ ಇರುವುದು ಸಾಮಾನ್ಯ. ಆದರೆ ನನಗೆ ಅದು ತುಂಬಾ ಹೆಚ್ಚಾಗಿದೆ.” ಎಂದು ಹೇಳಿದ್ದಾರೆ.
“ಬಾಲ್ಯದಿಂದಲೂ ಈ ಕಾಯಿಲೆ ಇರುವುದು ನನ್ನ ಗಮನಕ್ಕೆ ಬರಲಿಲ್ಲ. ಶಾಲೆಯಲ್ಲಿಯೂ ಸ್ನೇಹಿತರೊಂದಿಗೆ ಮಾತನಾಡುವಾಗ ಸಂಭಾಷಣೆಯ ಮಧ್ಯದಲ್ಲಿ ನನ್ನ ಗಮನ ನೂರೆಂಟು ವಿಚಾರಗಳನ್ನು ಯೋಚಿಸುತ್ತಿತ್ತು” ಎಂದು ತಮ್ಮ ಅನುಭವ ಹಂಚಿಕೊಂಡಿದ್ದು, “ನನಗೆ ಕ್ಯಾಮೆರಾ ಮುಂದೆ ಈ ರೀತಿ ಅನುಭವ ಆಗುವುದಿಲ್ಲ. ಕ್ಯಾಮೆರಾದ ಹೊರತಾಗಿ, ನಾನು ರಾಹಾ ಜೊತೆ ಇರುವಾಗ ಹೆಚ್ಚು ಆರಾಮವಾಗಿರುತ್ತೇನೆ. ಇವು ನನ್ನ ಜೀವನದ ಎರಡು ಪ್ರಮುಖ ಕ್ಷಣಗಳು, ಆ ಸಮಯದಲ್ಲಿ ನನ್ನ ಮನಸ್ಸು ಶಾಂತವಾಗಿರುತ್ತದೆ” ಎಂದಿದ್ದಾರೆ.
ಏನಿದು ಎಡಿಎಚ್‌ಡಿ ಡಿಸಾರ್ಡರ್?
ಎಡಿಎಚ್‌ಡಿ ಎನ್ನುವುದು ಎಲ್ಲಾ ವಯೋಮಾನದ ವ್ಯಕ್ತಿಗಳ ಮೇಲೆ ಪರಿಣಾಮ ಬೀರುವ ನರಗಳ ಬೆಳವಣಿಗೆಯ ಸ್ಥಿತಿಯಾಗಿದೆ. ಇದು ಮೆದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಗಮನದ ಕೊರತೆಯ ಅಸ್ವಸ್ಥತೆ ಎಂದು ಕರೆಯಲಾಗುತ್ತದೆ. ಅದಲ್ಲದೆ ಕೆಲವು ತಿಂಗಳುಗಳ ಹಿಂದೆ ಮಲಯಾಳಂನ ಸ್ಟಾರ್ ಹೀರೋ ಫಹಾದ್ ಫಾಜಿಲ್ ಅವರಿಗೆ ಎಡಿಎಚ್ ಡಿ ಇರುವುದು ಪತ್ತೆಯಾಗಿತ್ತು.
ರೋಗ ಲಕ್ಷಣಗಳೇನು?
- 15 ನಿಮಿಷಗಳಿಗಿಂತ ಹೆಚ್ಚು ಕಾಲ ಯಾವುದೇ ಒಂದು ವಿಷಯದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗದಿರುವುದು.
- ಚಡಪಡಿಕೆ
- ಅತಿಯಾದ ಮಾತು
- ಎಡಿಎಚ್‌ಡಿ ಇರುವವರು ಹೆಚ್ಚು ಮರೆವಿನ ಪ್ರವೃತ್ತಿಯನ್ನು ಹೊಂದಿರುತ್ತಾರೆ.
- ಕೈ -ಕಾಲುಗಳನ್ನು ಕೆಲವು ನಿಮಿಷಗಳ ಕಾಲ ಶಾಂತವಾಗಿಟ್ಟುಕೊಳ್ಳಲು ಆಗದಿರುವುದು.
ನಿಮ್ಮ ಮಕ್ಕಳಲ್ಲಿಯೂ ಈ ರೀತಿ ಲಕ್ಷಣ ಕಂಡು ಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ