AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ವಿಚಾರವನ್ನು ರಾಜ್​ಕುಮಾರ್ ಬಳಿ ಅಳುಕುತ್ತಲೇ ಹೇಳಿದ್ದ ಪುನೀತ್; ಜನರೇಶನ್ ಗ್ಯಾಪ್ ಮೀರಿ ನಿಂತಿದ್ದ ಅಣ್ಣಾವ್ರು

ಪುನೀತ್ ರಾಜ್ ಕುಮಾರ್ ಅವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದರು. ತಮ್ಮ ಪ್ರೇಮ ವಿಷಯವನ್ನು ತಂದೆ ರಾಜ್ ಕುಮಾರ್ ಅವರಿಗೆ ತಿಳಿಸುವಾಗ ಅವರು ಅನುಭವಿಸಿದ ಭಯ ಮತ್ತು ರಾಜ್ ಕುಮಾರ್ ಅವರ ಪ್ರತಿಕ್ರಿಯೆ ಬಗ್ಗೆ ಇಲ್ಲಿ ಹೇಳಲಾಗಿದೆ. ರಾಜ್ ಕುಮಾರ್ ಅವರು ತಮ್ಮ ಮಕ್ಕಳ ಭಾವನೆಗಳನ್ನು ಗೌರವಿಸಿ, ಅವರ ಮದುವೆಗೆ ಅನುಮತಿ ನೀಡಿದರು ಅನ್ನೋದು ವಿಶೇಷ.

ಪ್ರೀತಿ ವಿಚಾರವನ್ನು ರಾಜ್​ಕುಮಾರ್ ಬಳಿ ಅಳುಕುತ್ತಲೇ ಹೇಳಿದ್ದ ಪುನೀತ್; ಜನರೇಶನ್ ಗ್ಯಾಪ್ ಮೀರಿ ನಿಂತಿದ್ದ ಅಣ್ಣಾವ್ರು
ಪ್ರೀತಿ ವಿಚಾರವನ್ನು ರಾಜ್​ಕುಮಾರ್ ಬಳಿ ಅಳಕುತ್ತಲೇ ಹೇಳಿದ್ದ ಪುನೀತ್
ರಾಜೇಶ್ ದುಗ್ಗುಮನೆ
|

Updated on:Mar 15, 2025 | 6:59 AM

Share

ಪುನೀತ್ ರಾಜ್​ಕುಮಾರ್ ಅವರ ಜನ್ಮದಿನ ಸಮಿಪೀಸಿದೆ. ಮಾರ್ಚ್​ 17ರಂದು ಅವರು ಇದ್ದಿದ್ದರೆ 50ನೇ ವರ್ಷದ ಬರ್ತ್​ಡೇನ ಅವರ ಜೊತೆ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಪುನೀತ್ ರಾಜ್​ಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲದಿದ್ದರು ಆಚರರಣೆ ನಿಂತಿಲ್ಲ. ಅವರ ನಟನೆಯ ‘ಅಪ್ಪು’ ಸಿನಿಮಾ (Appu Movie) ರೀ-ರಿಲೀಸ್ ಆಗಿದೆ. ಎಲ್ಲ ಕಡೆಗಳಲ್ಲಿ ಸಿನಿಮಾ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅವರ ಬರ್ತ್​​ಡೇ ಸಂದರ್ಭದಲ್ಲಿ ಅವರ ವಿಡಿಯೋಗಳನ್ನು ಹಂಚಿಕೊಳ್ಳುವ ಕೆಲಸ ಆಗುತ್ತಿದೆ. ಈಗ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಅವರು ತಮ್ಮ ಪ್ರೀತಿ ವಿಚಾರವನ್ನು ತಂದೆಗೆ ಹೇಳಿಕೊಂಡ ಬಗ್ಗೆ ಮಾತನಾಡಿದ್ದರು.

ಪುನೀತ್ ರಾಜ್​ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್​ಕುಮಾರ್ ಪ್ರೀತಿಸಿ ಮದುವೆ ಆದವರು. ಇವರ ಪ್ರೀತಿಗೆ ಕುಟುಂಬದವರು ಕೂಡ ಒಪ್ಪಿಗೆ ಕೊಟ್ಟ ಬಳಿಕವೇ ಮದುವೆ ನಡೆಯಿತು. ಪುನೀತ್ ರಾಜ್​ಕುಮಾರ್ ಅವರು ಈ ವಿಚಾರವನ್ನು ತುಂಬಾನೇ ಭಯದಲ್ಲೇ ತಂದೆ ಬಳಿ ಹೇಳಿಕೊಂಡಿದ್ದರು. ವಿಶೇಷ ಎಂದರೆ ರಾಜ್​ಕುಮಾರ್ ನೀಡಿದ ಪುನೀತ್ ಮೊಗದಲ್ಲಿ ನಗು ತರಿಸಿತ್ತು.

ಪುನೀತ್ ರಾಜ್​ಕುಮಾರ್ ಅವರಿಗೆ ಆಗ 24 ವರ್ಷ. ರಾಜ್​ಕುಮಾರ್​ಗೆ 70+ ವರ್ಷ ಆಗಿತ್ತು. ಆದರೂ ರಾಜ್​ಕುಮಾರ್ ಅವರು ಮಕ್ಕಳ ಭಾವನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿದ್ದರು. ‘ನನ್ನ ತಾಯಿ ಬಳಿ ಪ್ರೀತಿ ವಿಚಾರ ಹೇಳಿದೆ. ಆಯ್ತಪ್ಪ, ತಂದೆಗೆ ಹೇಳಿ ಎಂದರು. ಆಗ ನನಗೆ 24 ವರ್ಷ. ಅವರಿಗೆ 72 ವರ್ಷ. ನನ್ನ ತಂದೆ ಬಳಿ ಹೋಗಿ ಒಂದು ಹುಡುಗಿಯನ್ನು ಇಷ್ಟಪಟ್ಟಿದೀನಿ ಎಂದೆ. ಅವರು ನಕ್ಕರು. ಮದುವೆ ಮಾಡ್ಕೋತಿನಿ ಎಂದರು. ನನ್ನ ತಂದೆ ಬರ್ತ್​​ಡೇ ದಿನ ಅಶ್ವಿನಿ ಬಳಿ ಕಾಲ್ ಮಾಡಿಸಿ ತಂದೆಗೆ ವಿಶ್ ಮಾಡಿಸಿದ್ದೆ. ಜನರೇಶನ್ ಗ್ಯಾಪ್ ಅನ್ನೋದಲ್ಲ ಏನೂ ಇರಲಿಲ್ಲ’ ಎಂದಿದ್ದರು ಪುನೀತ್. (ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ)

ಇದನ್ನೂ ಓದಿ
Image
ಪುನೀತ್​ ಬಯೋಪಿಕ್ ಪ್ಲ್ಯಾನ್ ಬಗ್ಗೆ ಮಾತಾಡಿದ ಸಂತೋಷ್ ಆನಂದ್​ರಾಮ್
Image
ಪುನೀತ್ ಪೋಸ್ಟರ್​ಗೆ ಹಾಲಿನ ಅಭಿಷೇಕ; ‘ಅಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ
Image
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
Image
‘ಅಪ್ಪು’ ಹಿಟ್ ಆದಾಗ ಅಣ್ಣಾವ್ರು ಮಾಡಿದ್ದೇನು? ಪುನೀತ್​ಗೆ ಖುಷಿ ಕೊಟ್ಟಿತ್ತು

ಇದನ್ನೂ ಓದಿ: ‘ಅಪ್ಪು’ ಸಿನಿಮಾ ಹಿಟ್ ಆದಾಗ ರಾಜ್​ಕುಮಾರ್ ಮಾಡಿದ್ದೇನು? ಪುನೀತ್​ಗೆ ಖುಷಿ ಕೊಟ್ಟಿತ್ತು ವಿಚಾರ

ರಾಜ್​ಕುಮಾರ್ ಅವರು ಮಕ್ಕಳ ಜೊತೆ ಮಕ್ಕಳಾಗಿ ಬೆರೆಯುತ್ತಿದ್ದರು. ಹಿರಿಯರ ಬಳಿ ಅವರ ರೀತಿಯೇ ಇರುತ್ತಿದ್ದರು. ರಾಜ್​ಕುಮಾರ್ ಒಪ್ಪಿಗೆ ಬಳಿಕ ಪುನೀತ್ ಹಾಗೂ ಅಶ್ವಿನಿ ಮದುವೆ ಅದ್ದೂರಿಯಾಗಿ ನಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:53 am, Sat, 15 March 25

ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ