Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಪ್ಪು’ ಸಿನಿಮಾ ಹಿಟ್ ಆದಾಗ ರಾಜ್​ಕುಮಾರ್ ಮಾಡಿದ್ದೇನು? ಪುನೀತ್​ಗೆ ಖುಷಿ ಕೊಟ್ಟಿತ್ತು ವಿಚಾರ

ಪುನೀತ್ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರ "ಅಪ್ಪು" 2002ರಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತ್ತು. ಈಗ ಪುನೀತ್ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್ 14 ರಂದು ಚಿತ್ರ ಮರುಬಿಡುಗಡೆಯಾಗುತ್ತಿದೆ. ಪುನೀತ್ ಅವರು ತಮ್ಮ ತಂದೆ ರಾಜ್ ಕುಮಾರ್ ಅವರೊಂದಿಗೆ ಚಿತ್ರ ವೀಕ್ಷಣೆ ಅನುಭವವನ್ನು ಹಂಚಿಕೊಂಡಿದ್ದರು.

‘ಅಪ್ಪು’ ಸಿನಿಮಾ ಹಿಟ್ ಆದಾಗ ರಾಜ್​ಕುಮಾರ್ ಮಾಡಿದ್ದೇನು? ಪುನೀತ್​ಗೆ ಖುಷಿ ಕೊಟ್ಟಿತ್ತು ವಿಚಾರ
ರಾಜ್​ಕುಮಾರ್ ಕುಟುಂಬ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 09, 2025 | 6:30 AM

ಪುನೀತ್ ರಾಜ್​ಕುಮಾರ್ ನಟನೆಯ ‘ಅಪ್ಪು’ ಸಿನಿಮಾ 2002ರ ಏಪ್ರಿಲ್ 26ರಂದು ರಿಲೀಸ್ ಆಯಿತು. ಈ ಚಿತ್ರ ಆಗಿನ ಕಾಲಕ್ಕೆ ಸೂಪರ್ ಹಿಟ್ ಸಿನಿಮಾ ಆಗಿ ಮಾರ್ಪಟ್ಟಿತು. ಪುನೀತ್ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ಇದು ಅನ್ನೋದು ವಿಶೇಷ. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರ ಭರ್ಜರಿ ಯಶಸ್ಸು ಕಂಡಿತು. ಈ ಚಿತ್ರ ಈಗ ರೀ ರಿಲೀಸ್ ಆಗುತ್ತಿದೆ. ಪುನೀತ್ ರಾಜ್​ಕುಮಾರ್ ಜನ್ಮದಿನದ (ಮಾರ್ಚ್ 17) ಪ್ರಯುಕ್ತ ಈ ಚಿತ್ರ ಮಾರ್ಚ್ 14ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಪುನೀತ್ ಅಪರೂಪದ ಮಾಹಿತಿ ಹಂಚಿಕೊಂಡಿದ್ದರು.

ಪುನೀತ್ ರಾಜ್​ಕುಮಾರ್ ಅವರು ಬಾಲ ಕಲಾವಿದನಾಗಿ ಕಾಣಿಸಿಕೊಂಡರು. ಆ ಬಳಿಕ ಅವರು ಶಿಕ್ಷಣ ಪಡೆದರು. ಒಂದು ಗ್ಯಾಪ್ ಪಡೆದು ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಹೀರೋ ಆಗಿ ನಟಿಸಿದ ಮೊದಲ ಚಿತ್ರವೇ ‘ಅಪ್ಪು’. ಈ ಸಿನಿಮಾದಲ್ಲಿ ರಕ್ಷಿತಾ ಅವರು ಪುನೀತ್​ಗೆ ಜೊತೆಯಾಗಿ ನಟಿಸಿದರು. ಈ ಸಿನಿಮಾನ ಫ್ಯಾನ್ಸ್ ಬಹುವಾಗಿ ಮೆಚ್ಚಿಕೊಂಡರು. ಆಗಿನ ಕಾಲಕ್ಕೆ ಚಿತ್ರ ದೊಡ್ಡ ಹಿಟ್ ಆಯಿತು. ರಾಜ್​ಕುಮಾರ್ ಕೂಡ ಸಿನಿಮಾ ನೋಡಿ ಖುಷಿಪಟ್ಟಿದ್ದರು.

ರಾಜ್​ಕುಮಾರ್ ಅವರಿಗೆ ಪುನೀತ್ ಬಗ್ಗೆ ಅಪಾರ ಪ್ರೀತಿ ಇತ್ತು. ಇದು ಗೊತ್ತಿರೋ ವಿಚಾರ. ಈ ಕಾರಣಕ್ಕೆ ಪುನೀತ್ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ಬಗ್ಗೆ ರಾಜ್​ಕುಮಾರ್ ಹಾಗೂ ಪಾರ್ವತಮ್ಮ ವಿಶೇಷ ಪ್ರೀತಿ ತೋರಿಸಿದ್ದರು. ಅಂತೆಯೇ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರವನ್ನು ರಾಜ್​ಕುಮಾರ್ ಹಲವು ಬಾರಿ ನೋಡಿದ್ದರು.

ಇದನ್ನೂ ಓದಿ
Image
ಪುನೀತ್ ರಾಜ್​ಕುಮಾರ್​ ಅಭಿಮಾನಿಗಳ ಪರವಾಗಿ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ
Image
‘ಕಣ್ಣಪ್ಪ’ ಎಂದೊಡನೆ ನನಗೆ ರಾಜ್​ಕುಮಾರ್ ನೆನಪಾಗ್ತಾರೆ: ಟಾಲಿವುಡ್ ಹಿರಿಯ ನಟ
Image
ಪುನೀತ್ ಬರ್ತ್​ಡೇಗೆ ಬಿಗ್ ಸರ್​ಪ್ರೈಸ್; ಹಿಟ್ ಚಿತ್ರ ರೀ-ರಿಲೀಸ್
Image
ದ್ವಾರಕೀಶ್ ವಿಧಿವಶ ಬಗ್ಗೆ ಶಿವಮೊಗ್ಗದಿಂದಲೇ ಶಿವರಾಜ್​​ಕುಮಾರ್ ಭಾವುಕ ಮಾತು

‘ತಂದೆ ಆ್ಯಕ್ಷನ್ ಸಿನಿಮಾ ನೋಡ್ತಾ ಇದ್ರು. ಅವರನ್ನು ಥಿಯೇಟರ್​ನಲ್ಲಿ ಕೂರಿಸಿ ನಾನು ಮಾಡಿದ ಸಿನಿಮಾನ ಒಮ್ಮೆ ಅವರಿಗೆ ತೋರಿಸಬೇಕು ಎಂದುಕೊಂಡಿದ್ದೆ. ಅಪ್ಪು ಸಿನಿಮಾ 100 ದಿನ ಎಲ್ಲೆಲ್ಲಿ ಓಡಿತ್ತೋ ಅಲ್ಲಿ ನನ್ನ ತಂದೆ ಹೋಗಿ ಸಿನಿಮಾ ನೋಡಿದ್ದರು’ ಎಂದಿದ್ದರು ಅಪ್ಪು. ಈ ವಿಡಿಯೋ ಈಗ ವೈರಲ್ ಆಗಿದೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಅಭಿಮಾನಿಗಳ ಪರವಾಗಿ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ

ಪುನೀತ್ ರಾಜ್​ಕುಮಾರ್ ನಟನೆಯ ಈ ಸಿನಿಮಾ ಈಗ ರೀರಿಲೀಸ್ ಕಾಣುತ್ತಿದ್ದು, ಇದಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಪಿಆರ್​ಕೆ ಪ್ರೊಡಕ್ಷನ್ ಮೂಲಕ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾನ ಮತ್ತೆ ದೊಡ್ಡ ಪರದೆಮೇಲೆ ನೋಡಲು ಫ್ಯಾನ್ಸ್ ಬಹುವಾಗಿ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.