ನಟಿ ರನ್ಯಾ ಹಿಂದಿದೆ ಗೋಲ್ಡ್ ಸ್ಲಗ್ಲಿಂಗ್ ಸಿಂಡಿಕೇಟ್: ಬಗೆದಷ್ಟು ಹೊರಬರುತ್ತಿವೆ ರಹಸ್ಯ
Ranya Rao case: ಚಿನ್ನ ಕಳ್ಳ ಸಾಗಣೆ ಮಾಡಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಪ್ರಕರಣವನ್ನು ಡಿಆರ್ಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತನಿಖೆ ನಡೆಸಿದಷ್ಟು ಹಲವು ಕುತೂಹಲಕಾರಿ ಮಾಹಿತಿ ಹೊರಬೀಳುತ್ತಿವೆ. ನಟಿ ರನ್ಯಾ ರಾವ್ ಬಂಧನದ ಬೆನ್ನಲ್ಲೆ ಅಂಥಹದ್ದೇ ಇನ್ನೂ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಈ ಪ್ರಕರಣಗಳಿಗೆ ಒಂದಕ್ಕೊಂದು ಲಿಂಕ್ ಇದೆ ಎನ್ನಲಾಗುತ್ತಿದೆ. ರನ್ಯಾ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನಲಾಗುತ್ತಿದೆ.

ಚಿನ್ನ ಕಳ್ಳಸಾಗಣೆ (Gold smuggling) ಮಾಡಿ ಬಂಧಿಯಾಗಿರು ನಟಿ ರಮ್ಯಾ ರಾವ್ ಪ್ರಕರಣದಲ್ಲಿ ತನಿಖೆ ನಡೆದಷ್ಟು ಹಲವು ಹೊಸ ವಿಷಯಗಳು ಹೊರಬರುತ್ತಿವೆ. ರನ್ಯಾ, ಏಕಾಂಗಿಯಾಗಿ ಈ ಕಾರ್ಯ ಮಾಡುತ್ತಿರಲಿಲ್ಲ, ನಟಿ ರನ್ಯಾ (Ranya Rao) ಹಿಂದೆ ಚಿನ್ನ ಕಳ್ಳಸಾಗಣೆ ಮಾಡುವ ದೊಡ್ಡ ಸಿಂಡಿಕೇಟ್ ಇದೆಯೆಂಬ ಅನುಮಾನ ಇದೀಗ ತನಿಖಾಧಿಕಾರಿಗಳಿಗೆ ಕಾಡುತ್ತಿದೆ. ನಟಿ ರನ್ಯಾ ರಾವ್ ಬಂಧನವಾದ ಬೆನ್ನಲ್ಲೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ ಇತರೆ ಮೂವರ ಬಂಧನ ಆಗಿದೆ. ಆ ಕಳ್ಳಸಾಗಣೆದಾರರಿಗೂ ರನ್ಯಾಗೂ ಸಂಬಂಧ ಇದೆಯೇ ಎಂಬ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ.
ಒಂದೇ ವಾರದಲ್ಲಿ ಮೂರು ಕಡೆಗಳಲ್ಲಿ ಚಿನ್ನದ ಅಕ್ರಮ ಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ. ಮೊದಲಿಗೆ ದೆಹಲಿ ಆ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಸಿಕ್ಕಿ ಬಿದ್ದಿದ್ದಾರೆ. ಅದಾದ ಬಳಿಕ ಮುಂಬೈನಲ್ಲಿ ಚಿನ್ನ ಕಳ್ಳಸಾಗಣೆ ಮಾಡತ್ತಿದ್ದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ. ಈ ಮೂರು ಪ್ರಕರಣಗಳಲ್ಲಿ ಚಿನ್ನದ ಬಿಸ್ಕೇಟುಗಳನ್ನು ಕಳ್ಳಸಾಗಣೆ ಮಾಡಲಾಗಿದೆ. ಮೂರು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿರುವ ಚಿನ್ನದ ಬಿಸ್ಕೆಟಿನ ಮಾದರಿಯೂ ಒಂದೇ ರೀತಿ ಇದೆ ಎಂಬುದು ತನಿಖಾಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ.
ಮಾರ್ಚ್ 2 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಮಯನ್ಮಾರ್ ನಿಂದ ಇವರು ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದರು. 2 ಕೆಜಿ, 158 ಗ್ರಾಂ ಚಿನ್ನವನ್ನು ಶೂನಲ್ಲಿ ಇರಿಸಿಕೊಂಡು ಇವರು ಸಾಗಾಟ ಮಾಡುತ್ತಿದ್ದರು.ನಂತರ ಮಾರ್ಚ್ 3 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅನ್ನು ವಶಕ್ಕೆ ಪಡೆದರು. ರನ್ಯಾ ರಾವ್ ಬಳಿ 14.2 ಕೆಜಿ ಚಿನ್ನದ ಬಿಸ್ಕಟ್ ಪತ್ತೆ ಆಯ್ತು, ದುಬೈನಿಂದ ಬೆಂಗಳೂರಿಗೆ ಗೋಲ್ಡ್ ಸ್ಮಗ್ಲಿಂಗ್ ಮಾಡಿದ್ದರು ರನ್ಯಾ. ಬಳಿಕ ಮುಂಬೈ ಏರ್ಪೋರ್ಟ್ ನಲ್ಲಿ ಮತ್ತೆ ಗೋಲ್ಡ್ ಸ್ಮಗ್ಲಿಂಗ್ ಪತ್ತೆ ಆಯ್ತು. ಕೆಜಿ ಗಟ್ಟಲೆ ಚಿನ್ನದ ಗಟ್ಟಿ ಸ್ಮಗ್ಲಿಂಗ್ ಮಾಡುತ್ತಿದ್ದ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಡಿಆರ್ ಐ ಅಧಿಕಾರಿಗಳು, ದುಬೈನಿಂದ ಚಿನ್ನ ಸಾಗಿಸಿದ್ದ ಇಬ್ಬರು ವ್ಯಕ್ತಿಗಳು, ಒಂದೇ ವಾರದಲ್ಲಿ ಮೂರು ಕಡೆ ಕೆಜಿ ಕೆಜಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವನ್ನು ಡಿಆರ್ಐ ಅಧಿಕಾರಿಗಳು ಪತ್ತೆ ಮಾಡಿದರು.
ಈ ಮೂರು ಪ್ರಕರಣಕ್ಕೆ ಪರಸ್ಪರ ಸಂಬಂಧ ಇದೆಯೆಂದು ಡಿಆರ್ಐ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ರನ್ಯಾ ಹಾಗೂ ವಶಪಡಿಸಿಕೊಳ್ಳಲಾಗಿರುವ ಇತರೆ ಕಳ್ಳಸಾಗಣೆದಾರರ ಹಿಂದೆ ದೊಡ್ಡ ಅಂತರಾಷ್ಟ್ರೀಯ ಸಿಂಡಿಕೇಟ್ ಇರಬಹುದು ಎಂಬ ಅನುಮಾನವೂ ಸಹ ಡಿಆರ್ಐ ಅಧಿಕಾರಿಗಳಿಗೆ ಸುಳಿದಿದೆ. ಏಕೆಂದರೆ ಈಗ ಪತ್ತೆ ಆಗಿರುವ ಮೂರು ಪ್ರಕರಣಗಳಲ್ಲಿಯೂ ಚಿನ್ನ ಕಳ್ಳಸಾಗಣೆದಾರರು ಬೇರೆ ಬೇರೆ ದೇಶಗಳಿಂದ ಚಿನ್ನವನ್ನು ತೆಗೆದುಕೊಂಡು ಭಾರತಕ್ಕೆ ಬಂದಿದ್ದಾರೆ. ಈ ಪ್ರಕರಣದಲ್ಲಿ ರನ್ಯಾ ಪಾತ್ರವೇ ಅಲ್ಲದೆ ಅವರ ಹಿಂದೆ ಹಲವರು ಇರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ನಟಿ ರನ್ಯಾರ ಎಲ್ಲ ವಿದೇಶ ಪ್ರವಾಸಗಳ ಮಾಹಿತಿಯನ್ನು ಹೊರತೆಗೆದಿದ್ದು, ರನ್ಯಾ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿರುವುದು ಇದರಿಂದ ತಿಳಿದು ಬಂದಿದೆ. ರನ್ಯಾ ಪ್ರಸ್ತುತ ಡಿಆರ್ಐ ಅಧಿಕಾರಿಗಳ ವಶದಲ್ಲಿದ್ದು, ಮಾರ್ಚ್ 10 ಅಂದರೆ ನಾಳೆ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ. ರನ್ಯಾ, ನಾಳೆ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:40 am, Sun, 9 March 25