AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಭ್ ಪಂತ್ ವಿಚಾರವಾಗಿ ಆಮಿರ್, ರಣ್​ಬೀರ್ ನಡುವೆ ಪಾರ್ಟಿಯಲ್ಲೇ ಜಗಳ..! ಅಂತದ್ದೇನಾಯ್ತು? ವಿಡಿಯೋ ನೋಡಿ

ರಿಷಭ್ ಪಂತ್ ವಿಚಾರವಾಗಿ ಆಮಿರ್, ರಣ್​ಬೀರ್ ನಡುವೆ ಪಾರ್ಟಿಯಲ್ಲೇ ಜಗಳ..! ಅಂತದ್ದೇನಾಯ್ತು? ವಿಡಿಯೋ ನೋಡಿ

ಪೃಥ್ವಿಶಂಕರ
|

Updated on:Mar 14, 2025 | 7:21 PM

Dream11 IPL Ad: ಐಪಿಎಲ್ ಆರಂಭಕ್ಕೂ ಮುನ್ನ ಡ್ರೀಮ್ 11ನ ಹೊಸ ಜಾಹೀರಾತು ಬಿಡುಗಡೆಯಾಗಿದೆ. ರಿಷಭ್ ಪಂತ್, ಅಮೀರ್ ಖಾನ್, ರಣಬೀರ್ ಕಪೂರ್, ಹಾರ್ದಿಕ್ ಪಾಂಡ್ಯ ಮುಂತಾದ ಕ್ರಿಕೆಟ್ ಮತ್ತು ಬಾಲಿವುಡ್ ತಾರೆಗಳು ನಟಿಸಿದ ಈ ಜಾಹೀರಾತು ಹಾಸ್ಯಮಯವಾಗಿದೆ. ಅಮೀರ್ ಖಾನ್ ಮತ್ತು ರಣಬೀರ್ ಕಪೂರ್ ನಡುವಿನ ಮೋಜಿನ ಸಂಭಾಷಣೆಗಳು ಹಾಗೂ ಪಂತ್ ಅವರ ಹಾಸ್ಯ ಪ್ರಯತ್ನಗಳು ಜಾಹೀರಾತನ್ನು ಆಕರ್ಷಕವಾಗಿಸಿವೆ. ನಿತೇಶ್ ತಿವಾರಿ ನಿರ್ದೇಶನದ ಈ ಜಾಹೀರಾತು ವೈರಲ್ ಆಗುತ್ತಿದೆ.

ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಆನ್​ಲೈನ್ ಗೇಮಿಂಗ್ ಆ್ಯಪ್ ಡ್ರೀಮ್ 11 ಹೊಸದಾಗಿ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ. ಈ ಜಾಹೀರಾತಿನಲ್ಲಿ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಲ್ಲದೆ, ಬಾಲಿವುಡ್​ನ ಸ್ಟಾರ್​ಗಳ ದಂಡೆ ಸೇರಿದೆ. ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್, ಆಮೀರ್ ಖಾನ್ ಬಳಿ ಕೇಳುವ ಒಂದು ಸೆಲ್ಫಿಯೊಂದಿಗೆ ಆರಂಭವಾಗುವ ಈ ಜಾಹೀರಾತು, ಆ ಬಳಿಕ ಇಬ್ಬರು ಸೂಪರ್ ಸ್ಟಾರ್​ಗಳಾದ ಆಮೀರ್ ಖಾನ್ ಹಾಗೂ ರಣ್​ಬೀರ್ ಕಪೂರ್ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿಬಿಡುತ್ತದೆ.

ಈ ಜಾಹೀರಾತಿನಲ್ಲಿರುವಂತೆ ದೇಶದ ಸ್ಟಾರ್ ಸೆಲೆಬ್ರಿಟಿಗಳು ಪಾರ್ಟಿಯೊಂದರಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ರಿಷಬ್ ಪಂತ್, ಆಮೀರ್ ಖಾನ್ ಬಳಿ ಹೋಗಿ ಸೆಲ್ಫಿ ಕೇಳುತ್ತಾರೆ. ಇದಕ್ಕೆ ಆಮೀರ್ ಕೂಡ ಸಮ್ಮತ್ತಿಸುತ್ತಾರೆ. ಆದರೆ ಪಂತ್​ಗೆ ಆಮೀರ್ ಬದಲು ರಣ್​ಬೀರ್ ಕಪೂರ್ ಜೊತೆಗೆ ಸೆಲ್ಫಿ ಬೇಕಾಗಿರುತ್ತದೆ. ಇದನ್ನು ಪಂತ್, ಆಮೀರ್ ಬಳಿ ಹೇಳಿಕೊಳ್ಳುತ್ತಾರೆ. ನಾನವರ ದೊಡ್ಡ ಅಭಿಮಾನಿ, ಹೀಗಾಗಿ ಅವರೊಂದಿಗೆ ನನಗೊಂದು ಸೆಲ್ಫಿ ಬೇಕೆಂದು ಪಂತ್ ಕೇಳುತ್ತಾರೆ. ಈ ವೇಳೆ ಅಲ್ಲೆ ಇದ್ದ ರೋಹಿತ್ ಮುಸಿ ಮುಸಿ ನಗುತ್ತಾರೆ. ಇದನ್ನು ನೋಡಿ ಕಸಿವಿಸಿಗೊಂಡ ಆಮೀರ್, ಸೆಲ್ಫಿ ಏನು ಮುತ್ತನ್ನೇ ಕೊಡಿಸುವೆ ಬಾ ಎಂದು ರಣ್​ಬೀರ್ ಬಳಿ ಕರೆದುಕೊಂಡು ಹೋಗುತ್ತಾರೆ.

ರಣ್​ಬೀರ್ ಬಳಿಗೆ ಬಂದ ಆಮೀರ್, ನೋಡು ರಿಷಬ್ ಈತ ಈ ತಲೆಮಾರಿನ ಸೂಪರ್ ಸ್ಟಾರ್ ರಣ್​ಬೀರ್ ಸಿಂಗ್ ಎಂದು ಪರಿಚಯಿಸುತ್ತಾರೆ. ಆಮೀರ್, ರಣ್​ಬೀರ್​ ಕಪೂರ್ ಎನ್ನುವ ಬದಲು ರಣ್​ಬೀರ್ ಸಿಂಗ್ ಎಂದಿದ್ದು, ರಣ್​ಬೀರ್ ಬೇಸರಗೊಳ್ಳುವಂತೆ ಮಾಡುತ್ತದೆ. ಅಲ್ಲಿಂದ ಹೊರಟು ಹೋದ ರಣ್​ಬೀರ್,​ ಹಾರ್ದಿಕ್ ಪಾಂಡ್ಯ ಬಳಿ ಹೋಗಿ ಆಮೀರ್, ಕಪೂರ್ ಬದಲು ಸಿಂಗ್ ಎಂದು ಹೇಗೆ ಹೇಳುತ್ತಾರೆ. ನಾನವರನ್ನು ಸಲ್ಮಾನ್ ಎನ್ನಬಹುದಾ? ಎಂದಿದ್ದಾರೆ.

ಇದಕ್ಕೆ ಆಮೀರ್, ನನ್ನನ್ನು ಸಲ್ಮಾನ್​ಗೆ ಹೊಲಿಸಿದರೆ ಯಾವ ಅಭ್ಯಂತರವಿಲ್ಲ. ಸದ್ಯಕ್ಕೆ ನನ್ನ ಅರ್ಬಾಜ್​ಗೆ ಹೊಲಿಸಲಿಲ್ಲವಲ್ಲ ಎಂದಿದ್ದಾರೆ. ಆಮೀರ್ ಅವರ ಇಡೀ ಸಂಭಾಷಣೆಯನ್ನು ಅರ್ಬಾಜ್ ಪಕ್ಕದಲ್ಲೇ ನಿಂತು ಕೇಳಿಸಿಕೊಂಡಿದ್ದಾರೆ. ಹೀಗೆ ಮುಂದುವರೆಯುವ ಈ ಜಾಹೀರಾತಿನಲ್ಲಿ ಜಾಕಿ ಶ್ರಾಫ್, ಆರ್. ಅಶ್ವಿನ್ ಸೇರಿದಂತೆ ಅನೇಕ ಕ್ರಿಕೆಟಿಗರು ಮತ್ತು ನಟರು ಕಾಣಿಸಿಕೊಂಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಮಾಡಲಾದ ಈ ಜಾಹೀರಾತು ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 14, 2025 07:18 PM