ಬಾದಾಮಿಯಲ್ಲಿ ಕಾಲಿಗೆ ಬಿದ್ದ ಪೊಲೀಸ್ ಸಿಬ್ಬಂದಿ ನಮ್ಮ ಮಠದ ಭಕ್ತರು: ಸಿದ್ದನಕೊಳ್ಳ ಸ್ವಾಮೀಜಿ
ಸುಮಾರು ಎರಡು ವಾರಗಳ ಹಿಂದೆ ಬಾದಾಮಿಯ ಬನಶಂಕರಿ ದೇವಸ್ಥಾನದ ಬಳಿ ಸ್ವಾಮೀಜಿಯವರು ಕಾರಲ್ಲಿ ಹೋಗುತ್ತಿದ್ದಾಗ ಒಂದಷ್ಟು ಪೊಲೀಸ್ ಸಿಬ್ಬಂದಿ ಧಾವಿಸಿಬಂದು ಇವರ ಕಾಲಿಗೆ ಬಿದ್ದಿದ್ದಾರೆ. ಮಠದ ಭಕ್ತರಾಗಿರುವ ಅವರು ಹಾಗೆ ಮಾಡುವಾಗ ತಲೆಮೇಲಿಮ ಹ್ಯಾಟ್ ತೆಗೆದಿದ್ದರು ಮತ್ತು ಆಶಿರ್ವಾದದ ರೂಪದಲ್ಲಿ ಹಣ ನೀಡುವುದು ತಮ್ಮ ಮಠದ ಸಂಪ್ರದಾಯ ಎಂದು ಸ್ವಾಮೀಜಿ ಹೇಳುತ್ತಾರೆ.
ಬಾಗಲಕೋಟೆ, ಮಾರ್ಚ್ 14: ಪೊಲೀಸ್ ಸಮವಸ್ತ್ರ (police uniform) ಧರಿಸಿಯೇ ಬಾಗಲಕೋಟೆಯ ಸಿದ್ದನಕೊಳ್ಳ ಶಿವಕುಮಾರ್ ಸ್ವಾಮೀಜಿಯವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದದ ರೂಪದಲ್ಲಿ ಅವರಿಂದ ಹಣ ಪಡೆದ ಪ್ರಕರಣದ ವಿಡಿಯೋ ರಾಜ್ಯದಾದ್ಯಂತ ಚರ್ಚೆಯಾಗುತ್ತಿದೆ. ನಮ್ಮ ಬಾಗಲಕೋಟೆಯ ವರದಿಗಾರ ಶಿವಕುಮಾರ್ ಸ್ವಾಮೀಜಿ ಅವರೊಂದಿಗೆ ಮಾತಾಡಿ ಅಸಲಿಗೆ ಅವತ್ತು ನಡೆದಿದ್ದೇನು ಅಂತ ಕೇಳಿದ್ದಾರೆ. ನಮ್ಮ ವರದಿಗಾರ ಕೇಳಿದ ಎಲ್ಲ ಪ್ರಶ್ನೆಗಳಿಗೆ ಸ್ವಾಮೀಜಿ ಉತ್ತರ ನೀಡಿದ್ದಾರೆ. ಕಾಲಿಗೆ ಬಿದ್ದ ಪೊಲೀಸ್ ಸಿಬ್ಬಂದಿಯನ್ನು ಶಿಸ್ತು ಕ್ರಮವಾಗಿ ಟ್ರಾನ್ಸ್ಫರ್ ಮಾಡಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರನ್ಯಾ ರಾವ್ ಚಿನ್ನ ಕಳ್ಳಸಾಗಾಣೆ ಹಿಂದೆ ಖಾವಿ ಕೃಪಾಕಟಾಕ್ಷ: ಪ್ರಭಾವಿ ಸ್ವಾಮೀಜಿ ಶಾಮೀಲು
Latest Videos