AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ ಪಿಎಸ್​ಐ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ? ಕೇಳಿ ಬಂತು ಆರೋಪ

ತುಮಕೂರು ಜಿಲ್ಲೆ ಮದುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡರ ವಿರುದ್ಧ ಚಿತ್ರದುರ್ಗ ಪಿಎಸ್ಐ ಗಾದಿಲಿಂಗಪ್ಪ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ತುರುವನೂರು ರಸ್ತೆಯಲ್ಲಿ ಘಟನೆ ನಡೆದಿದ್ದು, ಪಿಎಸ್ಐ ಗಾಯಗೊಂಡಿದ್ದಾರೆ. ಹನುಮಂತೇಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಹನುಮಂತೇಗೌಡ ಪೊಲೀಸರೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಚಿತ್ರದುರ್ಗ ಪಿಎಸ್​ಐ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ? ಕೇಳಿ ಬಂತು ಆರೋಪ
ಬಿಜೆಪಿ ಜಿಲ್ಲಾ ಅಧ್ಯಕ್ಷ ಹನುಮಂತೇಗೌಡ, ಪಿಎಸ್​ಐ ಗಾದಿಲಿಂಗಪ್ಪ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ವಿವೇಕ ಬಿರಾದಾರ

Updated on:Mar 15, 2025 | 7:41 AM

ಚಿತ್ರದುರ್ಗ, ಮಾರ್ಚ್​ 15: ಚಿತ್ರದುರ್ಗ (Chitraduraga) ನಗರ ಠಾಣೆ ಪಿಎಸ್​ಐ ಗಾದಿಲಿಂಗಪ್ಪ (PSI Gadilingappa) ಮೇಲೆ ಬಿಜೆಪಿ (BJP) ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿ ಘಟನೆ ನಡೆದಿದೆ. ಪಿಎಸ್​ಐ ಗಾದಿಲಿಂಗಪ್ಪ ಅವರ ಕೈ ಬೆರಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತುರುವನೂರು ರಸ್ತೆಯ ಖಾಸಗಿ ಹೋಟೆಲ್ ಬಳಿ ತಡರಾತ್ರಿ ರಸ್ತೆ ಮೇಲೆ ತುಮಕೂರು ಜಿಲ್ಲೆ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಗುಂಪಾಗಿ ನಿಂತಿದ್ದನ್ನು ಪಿಎಸ್​ಐ ಗಾದಿಲಿಂಗಪ್ಪ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಎಸ್ಐ ಗಾದಿಲಿಂಗಪ್ಪ ಅವರ ಮೇಲೆ ಹಲ್ಲೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಹನುಮಂತೇಗೌಡ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ, “ಪೊಲೀಸರಿಂದಲೇ‌ ನನ್ನ ಮೇಲೆ ಹಲ್ಲೆ ನಡೆದಿದೆ” ಎಂದು ಹನುಮಂತೇಗೌಡ ಪ್ರತಿ ಆರೋಪ ಮಾಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಎದೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರದುರ್ಗ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ನಿಧಿ ಆಸೆಗಾಗಿ ಚಪ್ಪಲಿ ಹೊಲೆಯುವನನ್ನು ಕರೆದೊಯ್ದು ಬಲಿ ಕೊಟ್ಟ ಖದೀಮರು

ಇದನ್ನೂ ಓದಿ
Image
ಸರ್ಕಾರಿ ಕೆಲ್ಸದಾಸೆಗೆ ಗಂಡನನ್ನೇ ಕೊಂದಳಾ ಪತ್ನಿ?
Image
ಪ್ರತಿಷ್ಠಿತ ವಿವಿ ಅಧ್ಯಯನದಿಂದ ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್
Image
ಅತ್ತಿಗೆ ನಾದಿನಿಯರ ಪರಸ್ಪರ ಡಿಕ್ಕಿ: ಚಿತ್ರದುರ್ಗದಲ್ಲಿ ವಿಶಿಷ್ಟ ಸಂಪ್ರದಾಯ
Image
19ರ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ 40 ವರ್ಷದ ವ್ಯಕ್ತಿ ಹತ್ಯೆ!

ಪಿಎಸ್​ಐ ಅವಾಚ್ಯ ಶಬ್ದಗಳಿಂದ ನಿಂದಿಸಿದರು: ಪ್ರತ್ಯಕ್ಷದರ್ಶಿ

ಘಟನೆ ಸಂಬಂಧ ಬಿಜೆಪಿ ಜಿಲ್ಲಾ ಅಧ್ಯಕ್ಷ ಹನುಮಂತೇಗೌಡರ ಕಾರು ಚಾಲಕ, ಪ್ರತ್ಯಕ್ಷದರ್ಶಿ ರಂಗಸ್ವಾಮಿ ಮಾತನಾಡಿ, ಶುಕ್ರವಾರ (ಮಾ.14) ರಾತ್ರಿ 11:30ರ ಸುಮಾರಿಗೆ ಘಟನೆ ನಡೆದಿದೆ. ಖಾಸಗಿ ಹೋಟೆಲ್​​ನಲ್ಲಿ ಊಟ ಮಾಡಿ ಹೊರಡಲು ನಿಂತಿದ್ದೆವು. ಹನುಮಂತೇಗೌಡರ ಜತೆಗೆ ಇಬ್ಬರು ಸ್ನೇಹಿತರು ಇದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಗಾದಿಲಿಂಗಪ್ಪ ಅವರು “ರಾತ್ರಿ ಇಷ್ಟೊತ್ತಾದರೂ ಏಕೆ ನಿಂತಿದ್ದೀರೋ ಎಂದು ಪ್ರಶ್ನಿಸಿದರು. ಸರ್ ಹೊರಡುತ್ತಿದ್ದೇವೆ ಎಂದರೂ ಏಕವಚನದಲ್ಲೇ ಗದರಿದರು. ನಾನು ಬಿಜೆಪಿ ಜಿಲ್ಲಾದ್ಯಕ್ಷ, ಗೌರವಯುತವಾಗಿ ಮಾತಾಡಿ ಎಂದು ಹನುಮಂತೇಗೌಡ ಹೇಳಿದರು. ಆದರೂ, ಪಿಎಸ್​ಐ ಗಾದಿಲಿಂಗಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಗ ನೂಕಾಟ ತಳ್ಳಾಟ ನಡೆಯಿತು, ಪಿಎಸ್​ಐ ಹಲ್ಲೆ ಮಾಡಿದರು. ಪಿಎಸ್​ಐ ಮೇಲೆ ಹನುಮಂತೇಗೌಡ ಹಲ್ಲೆ ಮಾಡಿಲ್ಲ. ಎದೆನೋವು ಕಾರಣಕ್ಕೆ ಹನುಮಂತೇಗೌಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ” ಎಂದು ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:31 am, Sat, 15 March 25

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ