Tax free interest income: ಈ ಐದು ಹೂಡಿಕೆಗಳ ಮೇಲಿನ ಬಡ್ಡಿ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ ಎಂಬ ಸಂಗತಿ ಗೊತ್ತೆ?

ಇಲ್ಲಿರುವ ಐದು ಸರಳ ಹೂಡಿಕೆ ಯೋಜನೆಗಳ ಮೇಲೆ ಬಡ್ಡಿ ಆದಾಯಕ್ಕೆ ಯಾವುದೇ ತೆರಿಗೆ ಬೀಳುವುದಿಲ್ಲ. ಯಾವುದು ಆ ಬಡ್ಡಿ ಆದಾಯಗಳು ಎಂಬ ಬಗ್ಗೆ ವಿವರಗಳು ಇಲ್ಲಿವೆ.

Tax free interest income: ಈ ಐದು ಹೂಡಿಕೆಗಳ ಮೇಲಿನ ಬಡ್ಡಿ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ ಎಂಬ ಸಂಗತಿ ಗೊತ್ತೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 15, 2021 | 10:28 PM

ನಿಮ್ಮ ಬಳಿ ಇರುವ ಹಣವು ತಕ್ಷಣಕ್ಕೆ ಸಿಗುವಂತಾಗಬೇಕು. ಅದೇ ಸಮಯಕ್ಕೆ ಉತ್ತಮ ರಿಟರ್ನ್ಸ್ ಜತೆಗೆ ಆದಾಯ ತೆರಿಗೆ ಭಾರ ಕೂಡ ಬೀಳದಂತೆ ನೋಡಿಕೊಳ್ಳುವುದು ಹೇಗೆ ಎಂದು ತಿಳಿಸುವ ಲೇಖನ ಇದೆ. ಸರಳವಾದ ಉಳಿತಾಯಕ್ಕೆ ಯಾವ ಆಯ್ಕೆ ಉತ್ತಮ ಎಂಬ ಮಾಹಿತಿ ಇಲ್ಲಿದೆ. ಈ ಐದು ಉಳಿತಾಯ ಯೋಜನೆಗಳ ಬಗ್ಗೆ ನೀವು ಈಗಾಗಲೇ ಕೇಳಿದ್ದಲ್ಲಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಅನುಕೂಲ ಆಗುತ್ತದೆ. ಈ ಐದು ಹೂಡಿಕೆಗಳ ಮೇಲಿನ ಬಡ್ಡಿಗೆ ಯಾವುದೇ ಆದಾಯ ತೆರಿಗೆ ಬೀಳುವುದಿಲ್ಲ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್​) ಪಿಪಿಎಫ್​ ಮೂಲಕ ಗಳಿಸುವ ಬಡ್ಡಿಗೆ ಯಾವುದೇ ತೆರಿಗೆ ಬೀಳುವುದಿಲ್ಲ. ಇದರ ಜತೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಅನುಕೂಲಗಳಿವೆ. ನಿವೃತ್ತಿಗೆ ಇದು ಉತ್ತಮ ತೆರಿಗೆ ಉಳಿತಾಯ ಹೂಡಿಕೆ.

ವಾಲಂಟರಿ ಪ್ರಾವಿಡೆಂಟ್ ಫಂಡ್ ವಿಪಿಎಫ್​ ಎಂಬುದು ಇಪಿಎಫ್​ಗೂ ಮೇಲ್ಪಟ್ಟು ಜಮೆ ಮಾಡುವ ಮೊತ್ತ. ಇದಕ್ಕೆ ವೇತನದಾರ ಇಪಿಎಫ್​ಒ ಸದಸ್ಯರು ಮಾತ್ರ ಹೂಡಿಕೆ ಮಾಡಲು ಸಾಧ್ಯ. ಸೆಕ್ಷನ್ 80C ಅಡಿಯಲ್ಲಿ ವಿಪಿಎಫ್​ಗೆ ತೆರಿಗೆ ವಿನಾಯಿತಿ ಇದೆ. ವಿಪಿಎಫ್​ ಮೇಲೆ ಬಡ್ಡಿ ಗಳಿಕೆ, ಮೆಚ್ಯೂರಿಟಿ ಮೊತ್ತದ ಮೇಲೆ ತೆರಿಗೆಯಿಂದ ವಿನಾಯಿತಿ ಇದೆ.

ಟ್ಯಾಕ್ಸ್- ಫ್ರೀ ಬಾಂಡ್​ಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಹುಡ್ಕೋ, ಆರ್​ಇಸಿ, ಪಿಎಫ್​ಸಿ, ಇಂಡಿಯನ್ ರೈಲ್ವೇಸ್ ಫೈನಾನ್ಸ್ ಕಾರ್ಪೊರೇಷನ್ ಮುಂತಾದವು ತೆರಿಗೆ-ಮುಕ್ತ ಬಾಂಡ್​ಗಳ ಮೂಲಕ ಹಣ ಸಂಗ್ರಹಿಸುತ್ತದೆ. ಈ ಬಾಂಡ್​ಗಳ ಮೇಲೆ ಗಳಿಸುವ ಬಡ್ಡಿಯು ಭಾರತದಲ್ಲಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.

ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ಸ್​ (ULIP) ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್​ಗಳಲ್ಲಿ ಪ್ರೀಮಿಯಂ ಪಾವತಿಸುವ ಹತ್ತು ಪಟ್ಟಿನಷ್ಟು ಇನ್ಷೂರೆನ್ಸ್ ಸಿಗುತ್ತದೆ. ಹೂಡಿಕೆದಾರರಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿವರೆಗಿನ ಕಡಿತಕ್ಕೆ ತೆರಿಗೆ ಅನುಕೂಲಗಳಿವೆ. ಲಾಕ್​-ಇನ್ ಅವಧಿ ಐದು ವರ್ಷಗಳಿವೆ. ಕೆಲವು ಪ್ರಕರಣಗಳಲ್ಲಿ ಅದು ಇನ್ನೂ ಹೆಚ್ಚಿನ ಅವಧಿಯದಾಗಿರುತ್ತದೆ.

ಉಳಿತಾಯ ಖಾತೆ ಮೇಲೆ ರೂ. 10,000ವರೆಗಿನ ಬಡ್ಡಿ ಉಳಿತಾಯ ಖಾತೆ ಮೇಲಿನ ಬಡ್ಡಿಗೆ ಯಾವುದೇ ತೆರಿಗೆ ಬೀಳುವುದಿಲ್ಲ. ಒಂದು ವರ್ಷದಲ್ಲಿ ರೂ. 10,000 ಅಥವಾ ಅದರೊಳಗೆ ಉಳಿತಾಯ ಬ್ಯಾಂಕ್​ ಖಾತೆಗೆ ಬಡ್ಡಿ ಬಂದಲ್ಲಿ ಯಾವ ಆದಾಯ ತೆರಿಗೆ ಕಟ್ಟುವ ಅಗತ್ಯ ಇಲ್ಲ.

ಇದನ್ನೂ ಓದಿ: ITR Filing: ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು

(Here is the 5 investments which earn interest income are tax free)

Published On - 10:25 pm, Tue, 15 June 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ