AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Car number astrology: ವಾಹನ ಖರೀದಿಸಬೇಕು ಅಂತಿದ್ದೀರಾ? ನಿಮ್ಮ ಅದೃಷ್ಟ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ

Vehicle number astrology: ಬೈಕ್, ಕಾರು ಯಾವುದೇ ಖರೀದಿ ಮಾಡುವಾಗಲೂ ರಿಜಿಸ್ಟ್ರೇಷನ್ ಸಂಖ್ಯೆ ಬಹಳ ಮುಖ್ಯ. ಜನ್ಮ ದಿನಾಂಕದ ಆಧಾರದಲ್ಲಿ ಯಾರಿಗೆ ಯಾವ ಸಂಖ್ಯೆ ಆಗಿಬರುತ್ತದೆ ಮತ್ತು ಅದರ ಲೆಕ್ಕಾಚಾರ ಹೇಗೆ ಎಂಬ ವಿವರ ಇಲ್ಲಿದೆ.

Car number astrology: ವಾಹನ ಖರೀದಿಸಬೇಕು ಅಂತಿದ್ದೀರಾ? ನಿಮ್ಮ ಅದೃಷ್ಟ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 16, 2021 | 6:38 AM

ಒಂದು ವಾಹನ ಖರೀದಿ ಮಾಡಿದಾಗ ಅದರ ನೋಂದಣಿ ಸಂಖ್ಯೆಯ (ರಿಜಿಸ್ಟ್ರೇಷನ್ ನಂಬರ್) ಪಾಸಿಟಿವ್ ಹಾಗೂ ನೆಗೆಟಿವ್ ಪ್ರಭಾವ ಬೀರುವುದನ್ನು ನೀವು ಕಂಡಿರಬಹುದು. ಅಥವಾ ಈ ಬಗ್ಗೆ ನಂಬಿಕೆಯೇ ಇಲ್ಲದಿರಬಹುದು. ಆದರೆ ಸಂಖ್ಯಾ ಶಾಸ್ತ್ರದಲ್ಲಿ ರಿಜಿಸ್ಟ್ರೇಷನ್ ನಂಬರ್​​ಗೆ ಪ್ರಾಶಸ್ತ್ಯ ಇದೆ. ಕೆಎ-05-ಎಫ್-123 ಹೀಗೆ ಒಂದು ಉದಾಹರಣೆ ತೆಗೆದುಕೊಳ್ಳೋಣ. ಇಂಗ್ಲಿಷ್ ಅಕ್ಷರಗಳಾದ ಕೆ=2, ಎ=1, ಎಫ್​= 8 ಹಾಗೂ 1+2+3 ಇವೆಲ್ಲವನ್ನೂ ಸೇರಿಸಿದರೆ ಬರುವ ಸಂಖ್ಯೆ ಆ ವಾಹನದ ಸಂಖ್ಯೆ ಆಗುತ್ತದೆ. ಅಂದರೆ, ಈ ಮೇಲ್ಕಂಡ ಉದಾಹರಣೆಯಲ್ಲಿ 17= 1+7=8 ಆಗುತ್ತದೆ. ಅದು ಆ ವಾಹನ ಖರೀದಿ ಮಾಡುವವರ ಜನ್ಮ ಸಂಖ್ಯೆಗೆ ಆಗಿಬರುತ್ತದೆಯೇ ಎಂಬುದನ್ನು ನೋಡಬೇಕು. ಮೊದಲಿಗೆ ಯಾವ ಇಂಗ್ಲಿಷ್ ಅಕ್ಷರಕ್ಕೆ ಎಷ್ಟು ಸಂಖ್ಯೆ ಎಂಬುದನ್ನು ತಿಳಿಯಿರಿ.

a, i, j, q, y= 1 b, k, r= 2 c, g, l, s= 3 d, m, t= 4 e, h, n, x= 5 u, v, w= 6 o, z= 7 f, p= 8

ಇನ್ನು ಒಬ್ಬ ವ್ಯಕ್ತಿಯ ಜನ್ಮ ಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಅಂತ ತಿಳಿಯುವುದು ಹೇಗೆ ಅಂದರೆ, ಯಾವುದೇ ತಿಂಗಳಿನ 1, 10, 19, 28 ಈ ದಿನಗಳಲ್ಲಿ ಹುಟ್ಟಿದವರ ಜನ್ಮದಿನ 1 ಆಗುತ್ತದೆ. 1+0=1, 1+9=10, ಆಗ 1+0= 1 ಆಗುತ್ತದೆ. ಇನ್ನು 28 ಕೂಡ 2+8= 10, ಅಂದರೆ 1+0=1 ಆಗುತ್ತದೆ. ಅದೇ ರೀತಿ, ಆಯಾ ದಿನಾಂಕದಂದು ಹುಟ್ಟಿದವರು, ಎರಡಂಕಿ ಇದ್ದಲ್ಲಿ ಅದನ್ನು ಒಂದಂಕಿಗೆ ಇಳಿಸಿಕೊಳ್ಳಬೇಕು. ಈಗ ಯಾವ ದಿನಾಂಕ ಹುಟ್ಟಿದವರು ಯಾವ ವಾಹನದ ಸಂಖ್ಯೆಯನ್ನು ಆರಿಸಿಕೊಳ್ಳಬಹುದು ನೋಡೋಣವಾ? ಮೊದಲೇ ಹೇಳಿದಂತೆ ರಿಜಿಸ್ಟ್ರೇಷನ್ ಸಂಖ್ಯೆಗೆ ಇಂಗ್ಲಿಷ್ ಅಕ್ಷರ ಮತ್ತು ಸಂಖ್ಯೆ ಎರಡನ್ನೂ ಒಗ್ಗೂಡಿಸಿ ಲೆಕ್ಕ ಹಾಕಿ, ಅಂತಿಮವಾಗಿ ಅದನ್ನೂ ಒಂದಂಕಿಂಗೆ ಇಳಿಸಿಕೊಳ್ಳಬೇಕು.

ಜನ್ಮ ದಿನಾಂಕ        ಆಗಿಬರುವ ವಾಹನ ಸಂಖ್ಯೆಗಳು             ಈ ವಾಹನ ಸಂಖ್ಯೆಗಳು ಬಾರದಿದ್ದರೆ ಉತ್ತಮ 1                                        1,3,9                                                              6,8 2                                         2,7                                                                8,9 3                                       3,1,9                                                               5,6 4                                     4,3,6,8                                                             1,2 5                                         5,6                                                                2,9 6                                      6,5,8                                                                1,9 7                                         7,2                                                                 6,8 8                                      8,5,6                                                                1,2 9                                      9,1,3                                                                 5,8

ಯಾವ ಸಂಖ್ಯೆಯು ಯಾವ ಗ್ರಹವನ್ನು ಪ್ರತಿನಿಧಿಸುತ್ತದೆ? ಅದರ ಫಲ ಏನು? 1. ರವಿ- ಸರ್ಕಾರಿ ಕೆಲಸಗಳಿಗೆ ಉತ್ತಮವಾಗಿರುತ್ತದೆ 2. ಚಂದ್ರ- ಹತ್ತಿರದ ಸ್ಥಳಗಳಿಗೆ ತೆರಳಲು, ಪಿಕ್ನಿಕ್​ಗೆ ಹೋಗಲು ಚೆನ್ನಾಗಿರುತ್ತದೆ 3. ಗುರು- ರಾಜಕೀಯ, ಆಡಳಿತಾತ್ಮಲ ಸೇವೆಗಳಿಗೆ ಉತ್ತಮ 4. ರಾಹು- ದಿಢೀರ್ ಹಣದ ಗಳಿಕೆ 5. ಬುಧ- ವಾಣಿಜ್ಯ ಚಟುವಟಿಕೆಗಳಿಗೆ ಉತ್ತಮ 6. ಶುಕ್ರ- ಕಲಾತ್ಮಕ ಚಟುವಟಿಕೆಗಳಿಗೆ ಹಾಗೂ ಸಿನಿಮಾ ರಂಗಕ್ಕೆ ಉತ್ತಮ 7. ಕೇತು- ಧಾರ್ಮಿಕ ಚಿಂತನೆ ಮತ್ತು ತೀರ್ಥಕ್ಷೇತ್ರ ಪ್ರವಾಸಗಳಿಗೆ 8. ಶನಿ- ಸಂಘಟನಾತ್ಮಕ ಚಟುವಟಿಕೆಗಳಿಗೆ ಹೆಚ್ಚು ಬಳಕೆ ಆಗುತ್ತದೆ 9. ಕುಜ- ತಕ್ಷಣದ ನಿರ್ಧಾರ ಮತ್ತು ಕಾರ್ಯಪ್ರವೃತ್ತರಾಗಲು ಸಾಧ್ಯವಾಗುತ್ತದೆ

ನೆನಪಿಟ್ಟುಕೊಳ್ಳಿ, 9, 8, 4 ಈ ಮೂರು ಸಂಖ್ಯೆಗಳು ಬಹಳ ಅಪಾಯಕಾರಿ. ಹೆಚ್ಚು ಪುನರಾವರ್ತನೆ ಆದಲ್ಲಿ ಅಪಘಾತ ಸಾಧ್ಯತೆ ಹೆಚ್ಚಿರುತ್ತದೆ. 9ರ ಸಂಖ್ಯೆ ಹಾಗೂ 8ರ ಸಂಖ್ಯೆ ಮೂರು ಸಲ ಬರುವುದು ಸಹ ಅಪಾಯಕಾರಿ. ಇನ್ನು ಒಂದಕ್ಕಿಂತ ಹೆಚ್ಚು ಬಾರಿ ಸಂಖ್ಯೆ 0 ಬಾರದಂತೆ ಗಮನ ವಹಿಸಬೇಕು.

ಇದನ್ನೂ ಓದಿ: Lucky colour: ಜನ್ಮರಾಶಿಗೆ ಅನುಗುಣವಾಗಿ ಯಾರಿಗೆ ಯಾವುದು ಅದೃಷ್ಟದ ಬಣ್ಣ?

ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

(Know how to choose your lucky number for vehicles according to astrology?)