Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

ನಮ್ಮ ರಾಶಿಗೆ ಆಗಿಬರುವ ಅದೃಷ್ಟ ರತ್ನ ಯಾವುದು ಎಂಬುದು ಹಲವರ ಪಾಲಿನ ಪ್ರಶ್ನೆ. ಜನ್ಮ ರಾಶಿಗೆ ಅನುಗುಣವಾಗಿ ಯಾರಿಗೆ ಯಾವ ರತ್ನ ಆಗಿಬರುತ್ತದೆ ಎಂಬ ಪರಿಚಯಾತ್ಮಕ ಲೇಖನ ಇಲ್ಲಿದೆ.

Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?
ವಜ್ರ (ಸಾಂದರ್ಭಿಕ ಚಿತ್ರ)
Follow us
Srinivas Mata
| Updated By: Skanda

Updated on: May 19, 2021 | 6:48 AM

“ನನ್ನ ರಾಶಿಗೆ ಆಗಿಬರುವ ಅದೃಷ್ಟ ರತ್ನ ಯಾವುದು?” – ಈ ಪ್ರಶ್ನೆ ಹಲವರಲ್ಲಿ ಇರುತ್ತದೆ. ರಾಶಿ ಯಾವುದು ಅಂತ ಗೊತ್ತಾದರೆ ಆ ಜನ್ಮರಾಶಿಗೆ ಆಗಿಬರುವ ಅದೃಷ್ಟ ರತ್ನ ಯಾವುದು ಎಂದು ತಿಳಿಸುವ ಲೇಖನ ಇದು. ಆದರೆ ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದೃಷ್ಟ ರತ್ನವನ್ನು ಧರಿಸುವ ಮೊದಲು ಎಷ್ಟು ತೂಕದ್ದು ಹಾಕಬೇಕು, ಯಾವ ಲೋಹದ್ದು (ಬೆಳ್ಳಿ ಅಥವಾ ಬಂಗಾರ), ಯಾವ ಬೆರಳಿಗೆ ಮತ್ತು ಯಾವ ವಾರ ಧರಿಸಬೇಕು ಇತ್ಯಾದಿಗಳನ್ನು ತಿಳಿದುಕೊಳ್ಳಬೇಕು. ಜನ್ಮ ಜಾತಕವನ್ನು ಒಮ್ಮೆ ತೋರಿಸಿ, ಆ ನಿರ್ದಿಷ್ಟ ರತ್ನದ ಅಧಿಪತಿಯ ಅನುಗ್ರಹ ಅಗತ್ಯ ಇದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಇನ್ನೂ ಕೆಲ ಸಲ ಉಪ ರತ್ನಗಳು ಧರಿಸಿದರೆ ಸಾಕಾಗುತ್ತದೆ. ಅವುಗಳ ಬಗ್ಗೆ ಇನ್ನೊಮ್ಮೆ ಮಾಹಿತಿಯನ್ನು ನೀಡಲಾಗುತ್ತದೆ. ಈ ದಿನದ ಲೇಖನದಲ್ಲಿ ಪ್ರಮುಖ ರತ್ನಗಳ ಧಾರಣೆಯ ವಿಷಯವನ್ನು ಜನ್ಮ ರಾಶಿಗೆ ತಕ್ಕಂತೆ ತಿಳಿದುಕೊಳ್ಳಿ.

ಮೇಷ- ವೃಶ್ಚಿಕ ಈ ಎರಡೂ ರಾಶಿಗಳ ಅಧಿಪತಿ ಕುಜ ಗ್ರಹವಾದ್ದರಿಂದ ಹವಳ ಧರಿಸಬಹುದು. ಒಂದು ವೇಳೆ ಹವಳದಲ್ಲಿ ದೋಷವಿದ್ದಲ್ಲಿ ಅಥವಾ ಆ ಗ್ರಹದ ಅನುಗ್ರಹ ಇಲ್ಲದಿದ್ದಲ್ಲಿ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಕ್ತದೊತ್ತಡ ಹೆಚ್ಚಾಗುತ್ತದೆ. ಆದ್ದರಿಂದ ಉಳಿದ ಯಾವುದೇ ರಾಶಿಗೆ ಹವಳವನ್ನು ಜ್ಯೋತಿಷಿಗಳು ಸಲಹೆ ನೀಡಿದ್ದರೂ ಈ ಫಲವು ಕಂಡುಬಂದ ಕೂಡಲೇ ಎಚ್ಚೆತ್ತುಕೊಳ್ಳುವುದು ಉತ್ತಮ.

ವೃಷಭ- ತುಲಾ ಇವೆರಡು ರಾಶಿಯ ಅಧಿಪತಿ ಶುಕ್ರ. ಆದ್ದರಿಂದ ವಜ್ರವನ್ನು ಧರಿಸಬಹುದು. ಆದರೆ ಧರಿಸುವ ಮುಂಚೆ ಜಾತಕದಲ್ಲಿ ಲಗ್ನ ಯಾವುದು ಮತ್ತು ಶುಕ್ರನ ಸ್ಥಿತಿಗತಿಯನ್ನು ಅರಿತು ಆ ನಂತರವೇ ಧರಿಸಬೇಕು. ಒಂದು ವೇಳೆ ವಜ್ರ ಆಗಿಬಾರದಿದ್ದಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ, ಚರ್ಮದ ಸಮಸ್ಯೆಗಳು ಎದುರಾಗುತ್ತವೆ.

ಮಿಥುನ-ಕನ್ಯಾ ಈ ಎರಡೂ ರಾಶಿಯ ಅಧಿಪತಿ ಬುಧ. ಇವರು ಪಚ್ಚೆಯನ್ನು ಧರಿಸಬಹುದು. ಒಂದು ವೇಳೆ ಆ ರತ್ನದಲ್ಲೇ ಸಮಸ್ಯೆ ಇದ್ದಲ್ಲಿ ಅಥವಾ ಆ ರತ್ನ ಆಗಿಬರಲಿಲ್ಲ ಅಂತಾದರೆ ಮಾತಿನ ಸಮಸ್ಯೆಗಳು, ನಾಲಗೆ, ಧ್ವನಿ ಪೆಟ್ಟಿಗೆ, ಗಂಟಲು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಕರ್ಕಾಟಕ ಈ ರಾಶಿಯ ಅಧಿಪತಿ ಚಂದ್ರ. ಆದ್ದರಿಂದ ಮುತ್ತು ಧರಿಸಬಹುದು. ಒಂದು ವೇಳೆ ಮುತ್ತಿನಲ್ಲೇ ದೋಷ ಇದ್ದಲ್ಲಿ ಅಥಚಾ ಬೇರೆನಾದರೂ ಸಮಸ್ಯೆಗಳಿದ್ದಲ್ಲಿ ಮಾನಸಿಕ ತೊಳಲಾಟ ಜಾಸ್ತಿ ಆಗುತ್ತದೆ. ವಿನಾಕಾರಣದ ದುಃಖ, ಹೇಳಿಕೊಳ್ಳಲಾಗದ ಸಂಕಟ, ಮಾನಸಿಕ ಯಾತನೆ ಆಗುತ್ತದೆ.

ಸಿಂಹ ಈ ರಾಶಿಯ ಅಧಿಪತಿ ರವಿ. ಇವರು ಸ್ಟಾರ್ ರೂಬಿ ಧರಿಸಬಹುದು. ಒಂದು ವೇಳೆ ಈ ರತ್ನದಲ್ಲೇ ದೋಷ ಇದ್ದಲ್ಲಿ ಅಥವಾ ಆಗಿಬಾರದಿದ್ದಲ್ಲಿ ತಂದೆಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಥವಾ ಇದನ್ನು ಧರಿಸಿದವರಿಗೆ ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಥವಾ ಸರ್ಕಾರದ ಕಡೆಯಿಂದ ನಾನಾ ಬಗೆಯಲ್ಲಿ ತೊಂದರೆಗಳು ಎದುರಾಗಬಹುದು.

ಧನುಸ್ಸು- ಮೀನ ಈ ಎರಡೂ ರಾಶಿಗಳ ಅಧಿಪತಿ ಗುರು. ಇವರು ಕನಕ ಪುಷ್ಯರಾಗ ಧರಿಸಬಹುದು. ಒಂದು ವೇಳೆ ಈ ರತ್ನದಲ್ಲೇ ದೋಷವಿದ್ದಲ್ಲಿ ಅಥವಾ ಆಗಿಬಾರದಿದ್ದಲ್ಲಿ ಸ್ನೇಹಿತರು, ಗುರು- ಹಿರಿಯರ ಜತೆಗೆ ಅಸಮಾಧಾನ, ಮನಸ್ತಾಪಗಳು ಆಗುತ್ತವೆ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ದೊಡ್ಡ ತಪ್ಪುಗಳಾಗುತ್ತವೆ. ಹಿರಿಯ ಅಧಿಕಾರಿಗಳ ಜತೆಗೆ ವಾಗ್ವಾದ ಏರ್ಪಡುತ್ತದೆ.

ಮಕರ- ಕುಂಭ ಈ ಎರಡೂ ರಾಶಿಯ ಅಧಿಪತಿ ಶನಿ. ನೀಲವನ್ನು ಇವರು ಧರಿಸಬಹುದು. ಒಂದು ವೇಳೆ ಇವರಿಗೆ ಇದು ಆಗಿಬಾರದಿದ್ದಲ್ಲಿ ಅಥವಾ ರತ್ನದಲ್ಲೇ ದೋಷವಿದ್ದಲ್ಲಿ ಅನಿರೀಕ್ಷಿತವಾದ ನಷ್ಟ, ಅಪಘಾತ, ಕೆಟ್ಟ ಕನಸುಗಳು ಬೀಳುವುದು ಇತ್ಯಾದಿಗಳ ಮೂಲಕ ಸೂಚನೆ ದೊರೆಯುತ್ತದೆ.

ರತ್ನಗಳ ಪೈಕಿ ಎಲ್ಲಕ್ಕೂ ಶಕ್ತಿ ಇರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವಜ್ರ ಹಾಗೂ ನೀಲ ಈ ಎರಡು ರತ್ನಗಳನ್ನು ಧರಿಸುವಾಗ ಎಚ್ಚರಿಕೆಯಿಂದ ಇರಬೇಕು. ಇನ್ನು ಕಡಿಮೆ ತೂಕದ ರತ್ನ ಹಾಗೂ ಯಾವ ರತ್ನಕ್ಕೆ ಮತ್ಯಾವುದೋ ಲೋಹ ಧರಿಸಿದರೆ ಫಲ ಸಿಗುವುದಿಲ್ಲ. ಅದೇ ರೀತಿ ಧರಿಸುವುದಕ್ಕೆ ಒಂದು ಪದ್ಧತಿ ಇದೆ. ಅದನ್ನು ಸಹ ಅನುಸರಿಸಬೇಕು. ಇನ್ನೂ ಕೆಲವರು ನಕ್ಷತ್ರದ ಅಧಿದೇವತೆಗಳಿಗೆ ತಕ್ಕಂತೆ ಅದೃಷ್ಟ ರತ್ನ ಧರಿಸುವುದೂ ಉಂಟು. ಇದು ವೈಯಕ್ತಿಕ ನಂಬಿಕೆಗೆ ಬಿಟ್ಟ ಸಂಗತಿ. ಆದರೆ ಜ್ಯೋತಿಷಿಗಳಲ್ಲಿ ಜಾತಕ ಪರಿಶೀಲನೆ ಮಾಡಿಸದೆ ಅದೃಷ್ಟ ರತ್ನ ಧರಿಸುವುದು ಅಪಾಯಕಾರಿ.

ಇದನ್ನೂ ಓದಿ: Jobs according zodiac signs: ಮೇಷದಿಂದ ಮೀನದ ತನಕ ಯಾವ ರಾಶಿಗೆ ಯಾವ ಉದ್ಯೋಗ ಸೂಕ್ತ?

ಇದನ್ನೂ ಓದಿ: Money management: ಈ 5 ರಾಶಿಯವರು ದುಡ್ಡು- ಕಾಸಿನ ನಿರ್ವಹಣೆಯಲ್ಲಿ ಬಲು ಗಟ್ಟಿಗರು

( Lucky gemstones details for zodiac signs in Kannada according to astrology)

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?