Jobs according zodiac signs: ಮೇಷದಿಂದ ಮೀನದ ತನಕ ಯಾವ ರಾಶಿಗೆ ಯಾವ ಉದ್ಯೋಗ ಸೂಕ್ತ?

ಯಾವ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ ಎಂದು ತಿಳಿಸುವ ಲೇಖನ ಇದು. ನೆನಪಿನಲ್ಲಿಡಿ, ಉದ್ಯೋಗವನ್ನು ಮಾತ್ರ ತಿಳಿಸಲಾಗುತ್ತದೆ, ವ್ಯಾಪಾರದ ವಿಚಾರವಾಗಿ ಇನ್ನೊಂದು ಲೇಖನದಲ್ಲಿ ಮಾಹಿತಿ ನೀಡಲಾಗುತ್ತದೆ. ಈ ಲೇಖನವನ್ನು ಓದಿದ ಮೇಲೂ ಅನುಮಾನಗಳಿದ್ದಲ್ಲಿ ಜ್ಯೋತಿಷಿಗಳಲ್ಲಿ ಒಮ್ಮೆ ಜಾತಕ ಪರಿಶೀಲನೆ ಮಾಡಿಸಿ.

Apr 14, 2021 | 5:14 PM
Srinivas Mata

|

Apr 14, 2021 | 5:14 PM

ಮೇಷ: ಇವರಿಗೆ ಒಂದೇ ಥರದ ಕೆಲಸ ಬಹಳ ಬೇಗ ಬೋರ್ ಆಗಿಬಿಡುತ್ತದೆ. ಆದ್ದರಿಂದ ಪದೇಪದೇ ಕೆಲಸ ಬದಲಿಸುತ್ತಾರೆ. ಇನ್ನು ಚಾಲೆಂಜ್​ಗಳು ಸಹ ಇರಬೇಕು. ಆದ್ದರಿಂದ ಮಾರ್ಕೆಟಿಂಗ್, ಪ್ರಾಜೆಕ್ಟ್ ಎಂಜಿನಿಯರಿಂಗ್, ಕಂಪೆನಿಗೆ ಹೊಸ ಯೋಜನೆಗಳನ್ನು ತರುವುದು, ಕ್ರೈಸಿಸ್ ಮ್ಯಾನೇಜ್​ಮೆಂಟ್ ವಿಭಾಗ, ಕಲ್ಲಿದ್ದಲು ಕಂಪೆನಿಗಳು, ಅಪಾಯಕಾರಿ ಶಿಖರಗಳನ್ನು ಏರುವ ಕಡೆ ಗೈಡ್​ಗಳಾಗಿರುವವರು ಇವರೇ ಜಾಸ್ತಿ. ಆರಾಮವಾಗಿ ಒಂದು ಕಡೆ ಕೂತು ಕೆಲಸ ಮಾಡುವ ಜಾಯಮಾನದವರು ಇವರಲ್ಲ. ತೀಕ್ಷ್ಣವಾದ ಮಾತುಗಳಿಂದ ಸಮಾನ ಸಂಖ್ಯೆಯ ಮಿತ್ರರು ಹಾಗೂ ಶತ್ರುಗಳನ್ನು ಸಂಪಾದಿಸುವ ಇವರು, ವೃತ್ತಿ ಬದುಕಿನ ಆರಂಭದಲ್ಲಿ ಯಶಸ್ಸು ಪಡೆಯುವುದಕ್ಕೆ ತುಂಬ ಶ್ರಮಿಸುತ್ತಾರೆ.

ಮೇಷ: ಇವರಿಗೆ ಒಂದೇ ಥರದ ಕೆಲಸ ಬಹಳ ಬೇಗ ಬೋರ್ ಆಗಿಬಿಡುತ್ತದೆ. ಆದ್ದರಿಂದ ಪದೇಪದೇ ಕೆಲಸ ಬದಲಿಸುತ್ತಾರೆ. ಇನ್ನು ಚಾಲೆಂಜ್​ಗಳು ಸಹ ಇರಬೇಕು. ಆದ್ದರಿಂದ ಮಾರ್ಕೆಟಿಂಗ್, ಪ್ರಾಜೆಕ್ಟ್ ಎಂಜಿನಿಯರಿಂಗ್, ಕಂಪೆನಿಗೆ ಹೊಸ ಯೋಜನೆಗಳನ್ನು ತರುವುದು, ಕ್ರೈಸಿಸ್ ಮ್ಯಾನೇಜ್​ಮೆಂಟ್ ವಿಭಾಗ, ಕಲ್ಲಿದ್ದಲು ಕಂಪೆನಿಗಳು, ಅಪಾಯಕಾರಿ ಶಿಖರಗಳನ್ನು ಏರುವ ಕಡೆ ಗೈಡ್​ಗಳಾಗಿರುವವರು ಇವರೇ ಜಾಸ್ತಿ. ಆರಾಮವಾಗಿ ಒಂದು ಕಡೆ ಕೂತು ಕೆಲಸ ಮಾಡುವ ಜಾಯಮಾನದವರು ಇವರಲ್ಲ. ತೀಕ್ಷ್ಣವಾದ ಮಾತುಗಳಿಂದ ಸಮಾನ ಸಂಖ್ಯೆಯ ಮಿತ್ರರು ಹಾಗೂ ಶತ್ರುಗಳನ್ನು ಸಂಪಾದಿಸುವ ಇವರು, ವೃತ್ತಿ ಬದುಕಿನ ಆರಂಭದಲ್ಲಿ ಯಶಸ್ಸು ಪಡೆಯುವುದಕ್ಕೆ ತುಂಬ ಶ್ರಮಿಸುತ್ತಾರೆ.

1 / 12
ವೃಷಭ: ಈ ರಾಶಿಯವರಿಗೆ ಮಾಡಿದ ಕೆಲಸದ ಬಗ್ಗೆ ಫೀಡ್ ಬ್ಯಾಕ್ ನೀಡುತ್ತಲೇ ಇರಬೇಕು. ಇವರ ಕೆಲಸ ಗುರುತಿಸದೇ ಹೋದಲ್ಲಿ ಸಟಕ್ಕನೆ ಸಿಟ್ಟು ಬಂದುಬಿಡುತ್ತದೆ. ಸುಗಂಧ ದ್ರವ್ಯ, ಸೌಂದರ್ಯವರ್ಧಕಗಳ ಮಾರಾಟ, ಹಣಕಾಸು ಸಂಸ್ಥೆಗಳು, ಎನ್​ಜಿಒಗಳು, ಡೇರಿ, ಚಿತ್ರರಂಗದಲ್ಲಿ ಪ್ರೊಡಕ್ಷನ್ ವಿಭಾಗ, ಶಾಲೆ- ಕಾಲೇಜುಗಳಲ್ಲಿ ಆಡಳಿತ ವಿಭಾಗದಲ್ಲಿ ಕಾಣಸಿಗುವವರು ಇವರೇ ಹೆಚ್ಚು. ಇವರಿಗೆ ತಮ್ಮ ಕೆಲಸದ ಮಾರ್ಕೆಟಿಂಗ್ ಹೇಗೆ ಮಾಡಬೇಕು ಅನ್ನೋದೇ ಗೊತ್ತಿರಲ್ಲ. ದುಡಿಯುವುದಕ್ಕೇ ಹೆಚ್ಚಿನ ಸಮಯ ಮೀಸಲಿಟ್ಟು, ತಮ್ಮನ್ನು ಯಾರೂ ಗುರುತಿಸುತ್ತಿಲ್ಲ ಎಂದು ವೃಥಾ ಹಲಬುತ್ತಾರೆ. ಈ ವಿಷಯದಲ್ಲಿ ಲೋಕಜ್ಞಾನ ಕಡಿಮೆ ಇರುವ ಎತ್ತಿನಂಥ ಸ್ವಭಾವ ಇವರದು.

ವೃಷಭ: ಈ ರಾಶಿಯವರಿಗೆ ಮಾಡಿದ ಕೆಲಸದ ಬಗ್ಗೆ ಫೀಡ್ ಬ್ಯಾಕ್ ನೀಡುತ್ತಲೇ ಇರಬೇಕು. ಇವರ ಕೆಲಸ ಗುರುತಿಸದೇ ಹೋದಲ್ಲಿ ಸಟಕ್ಕನೆ ಸಿಟ್ಟು ಬಂದುಬಿಡುತ್ತದೆ. ಸುಗಂಧ ದ್ರವ್ಯ, ಸೌಂದರ್ಯವರ್ಧಕಗಳ ಮಾರಾಟ, ಹಣಕಾಸು ಸಂಸ್ಥೆಗಳು, ಎನ್​ಜಿಒಗಳು, ಡೇರಿ, ಚಿತ್ರರಂಗದಲ್ಲಿ ಪ್ರೊಡಕ್ಷನ್ ವಿಭಾಗ, ಶಾಲೆ- ಕಾಲೇಜುಗಳಲ್ಲಿ ಆಡಳಿತ ವಿಭಾಗದಲ್ಲಿ ಕಾಣಸಿಗುವವರು ಇವರೇ ಹೆಚ್ಚು. ಇವರಿಗೆ ತಮ್ಮ ಕೆಲಸದ ಮಾರ್ಕೆಟಿಂಗ್ ಹೇಗೆ ಮಾಡಬೇಕು ಅನ್ನೋದೇ ಗೊತ್ತಿರಲ್ಲ. ದುಡಿಯುವುದಕ್ಕೇ ಹೆಚ್ಚಿನ ಸಮಯ ಮೀಸಲಿಟ್ಟು, ತಮ್ಮನ್ನು ಯಾರೂ ಗುರುತಿಸುತ್ತಿಲ್ಲ ಎಂದು ವೃಥಾ ಹಲಬುತ್ತಾರೆ. ಈ ವಿಷಯದಲ್ಲಿ ಲೋಕಜ್ಞಾನ ಕಡಿಮೆ ಇರುವ ಎತ್ತಿನಂಥ ಸ್ವಭಾವ ಇವರದು.

2 / 12
ಮಿಥುನ

ಏಕಕಾಲಕ್ಕೆ ಹಲವು ವಿಷಯಗಳನ್ನು ಯೋಚಿಸಬಲ್ಲ ಇವರು, ಬಹಳ ಬೇಗ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣುತ್ತಾರೆ. ತಮ್ಮ ಮಾತಿನ ಮೂಲಕ ಮೇಲಧಿಕಾರಿಗಳ ಜತೆಗೆ ಸಂಬಂಧ ಹಾಳು ಮಾಡಿಕೊಳ್ಳುವ ಇವರು, ಆ ಎಲ್ಲ ಅಡೆತಡೆಗಳನ್ನು ಮೀರಿ, ಮಾನಸಿಕ ಹಿಂಸೆಯ ಆಚೆಗೂ ತಮ್ಮ ಗುರಿಯನ್ನು ತಲುಪುತ್ತಾರೆ. ಅಕೌಂಟೆಂಟ್, ಸಂಶೋಧಕರು, ಪತ್ರಕರ್ತರು, ಕೌನ್ಸೆಲಿಂಗ್, ಕೆರಿಯರ್ ಅಡ್ವೈಸರ್​ಗಳು, ಟ್ಯಾಕ್ಸ್ ಕನ್ಸಲ್ಟೆಂಟ್, ಆರ್ಕಿಟೆಕ್ಟ್​ಗಳಾಗಿ ಈ ರಾಶಿಯವರನ್ನು ಕಾಣಬಹುದು. ಸದಾ ಒಂದಿಲ್ಲೊಂದು ಕೆಲಸವನ್ನು ತಲೆಯಲ್ಲಿ ಇಟ್ಟುಕೊಂಡು, ಏನನ್ನಾದರೂ ಮರೆತು, ಯಾರನ್ನಾದರೂ ದೂರುತ್ತಿದ್ದಲ್ಲಿ ಅದು ಶೇ 100ರಷ್ಟು ಮಿಥುನ ರಾಶಿಯವರಾಗಿರುತ್ತಾರೆ.

3 / 12
ಕರ್ಕಾಟಕ

ತಮ್ಮ ಶಕ್ತಿ ಮೀರಿ ಮೈ ಮೇಲೆ ಕೆಲಸವನ್ನು ಹಾಕಿಕೊಂಡು, ಕೆಲಸದ ಅವಧಿಯನ್ನೂ ಮೀರಿ ಆಫೀಸಿನಲ್ಲಿ ಇರುವ ಜೀವ ಕರ್ಕಾಟಕ ರಾಶಿ ಅವರದು. ಅದರಲ್ಲೂ ಇವರ ಸಾಮರ್ಥ್ಯದ ಬಗ್ಗೆ ಏನಾದರೂ ಹೇಳಿಬಿಟ್ಟರೆ ಮಾನಸಿಕವಾಗಿ ಪೂರ್ತಿ ಕೆಳಗೆ ಇಳಿದು ಹೋಗುತ್ತಾರೆ. ಉಪನ್ಯಾಸಕರು, ವಿಜ್ಞಾನಿಗಳು, ವೈದ್ಯರು, ಪರಿಸರಶಾಸ್ತ್ರಜ್ಞರು, ಸಿವಿಲ್ ಎಂಜಿನಿಯರ್​ಗಳು, ಬ್ಯಾಂಕ್ ಅಧಿಕಾರಿಗಳು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಇವರೇ ಹೆಚ್ಚು. ಏನನ್ನೂ ಬಾಯಿ ಬಿಟ್ಟು ಹೇಳದ ಇವರು, ಎಲ್ಲರೂ ತಮ್ಮಂತೆಯೇ ಸೂಕ್ಷ್ಮವಾಗಿ ಇರಬೇಕು ಎಂದು ಬಯಸುತ್ತಾರೆ. ಆ ಕಾರಣಕ್ಕೆ ಇವರ ಸ್ವಭಾವಕ್ಕೆ ಹೊಂದಾಣಿಕೆ ಆಗುವವರು ಸಿಗದೆ ಏಕಾಂಗಿಯಾಗಿ ಕೆಲಸ ಮಾಡುವಂತಾಗುತ್ತದೆ.

4 / 12
ಸಿಂಹ

ಇನ್ನೊಬ್ಬರು ಮಾತು ಕೇಳುವುದು, ಅವರು ಹೇಳಿದಂತೆ ಕೆಲಸ ಮಾಡುವುದು ಇವರಿಗೆ ಅಸಾಧ್ಯದ ವಿಷಯ. ಆ ಕಾರಣಕ್ಕೆ ಹೇಗಾದರೂ ಮಾಡಿ, ಉಳಿದವರಿಗೆ ಗೊತ್ತಿಲ್ಲದ ಅಥವಾ ಇತರರಿಗೆ ಹೇಳಿಕೊಡದ ರೀತಿಯಲ್ಲಿ ವಿದ್ಯೆಯನ್ನು ಕಲಿತು, ಆ ಮೂಲಕ ಸದಾ ತಾವು ಬೇಡಿಕೆಯಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಸರ್ಕಾರದ ಉದ್ಯೋಗ, ಹೃದಯಕ್ಕೆ, ಕಣ್ಣಿಗೆ ಸಂಬಂಧಿಸಿದ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಇವರು ಕಾಣಸಿಗುತ್ತಾರೆ. ಇನ್ನು ಷೇರು ದಲ್ಲಾಳಿಗಳು, ರಾಜಕೀಯ ವ್ಯಕ್ತಿಗಳ ಸಲಹೆಗಾರರು, ಸೋಷಿಯಲ್ ಮೀಡಿಯಾ ನೋಡಿಕೊಳ್ಳುವಂಥವರು, ಸಾರ್ವಜನಿಕ ಸಂಪರ್ಕಾಧಿಕಾರಿಗಳು ಇಂಥ ಹುದ್ದೆಗಳಲ್ಲಿ ಕಾಣಸಿಗುತ್ತಾರೆ.

5 / 12
ಕನ್ಯಾ

ಎಲ್ಲವೂ ಅಚ್ಚುಕಟ್ಟಾಗಿ, ಒಪ್ಪ- ಓರಣವಾಗಿ ಇರಬೇಕು ಎಂದು ಬಯಸುವ ಇವರು, ಡೆಡ್​ಲೈನ್​ನೊಳಗೆ ಕೆಲಸ ಮಾಡಿ ಮುಗಿಸುವುದು ಅಸಾಧ್ಯದ ಸಂಗತಿ. ಇವರು ಒಂದು ತಂಡವಾಗಿ ಕೆಲಸ ಮಾಡುವುದು ಸಹ ಅಷ್ಟೇ ಕಷ್ಟದ ಕೆಲಸ. ಇಷ್ಟು ಜವಾಬ್ದಾರಿ ಎಂದು ಅವರಿಗೆ ನೀಡಿದ ಮೇಲೆ, ತಮ್ಮಷ್ಟಕ್ಕೆ ಬಿಟ್ಟು ಬಿಡಬೇಕು. ಅಡ್ವರ್ಟೈಸಿಂಗ್ ಏಜೆನ್ಸಿಗಳು, ಈವೆಂಟ್ ಮ್ಯಾನೇಜ್​ಮೆಂಟ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ, ಡೇಟಾ ಸೈನ್ಸ್... ಇಂಥ ಕಡೆಗಳಲ್ಲಿ ಇವರನ್ನು ಕಾಣಬಹುದು. ಇನ್ನು ಮಾಧ್ಯಮಗಳಲ್ಲಿ ಪುರವಣಿ ವಿಭಾಗಗಳಲ್ಲಿ ಮುಖ್ಯಸ್ಥರಾಗಿ, ಕಲಾವಿದರಾಗಿಯೂ ಇವರನ್ನು ಕಾಣಬಹುದು. ತಂತ್ರಜ್ಞಾನದ ವಿಪರೀತ ಕುತೂಹಲಿಗಳಾದ ಕನ್ಯಾ ರಾಶಿಯವರು ಬಹಳ ಸಮಯ ಒಂದೇ ಹುದ್ದೆಯಲ್ಲಿ ಇದ್ದುಬಿಡುತ್ತಾರೆ.

6 / 12
ತುಲಾ

ನನಗೆ ಸಂಬಳ ಎಷ್ಟು ಬರುತ್ತದೋ ಅಥವಾ ನನಗೆ ಎಷ್ಟು ಮಾನ್ಯತೆ ಇರುತ್ತದೋ ಅಷ್ಟು ಮಾತ್ರ ಕೆಲಸ ಮಾಡ್ತೀನಿ ಎನ್ನುವಂಥ ಲೆಕ್ಕಾಚಾರದ ಜನ ಇವರು. ಕೆಲಸ ಮಾತ್ರ ಅಲ್ಲ, ಮಾತು ಕೂಡ ಅಷ್ಟೇ. ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುತ್ತಾರೆ. ಆಕ್ರಮಣಕಾರಿ ಸ್ವಭಾವದ ತುಲಾ ರಾಶಿಯವರು ಕಾನೂನು ಸೇವೆಗಳನ್ನು ನೀಡುವ ವಿಭಾಗದಲ್ಲಿ, ಐ.ಟಿ., ಭಾರೀ ಯಂತ್ರಗಳ ನಿರ್ವಹಣೆ ವಿಭಾಗದಲ್ಲಿ, ಬ್ಯಾಂಕ್​ಗಳ ಕರೆನ್ಸಿ ಸಾಗಾಟ, ಕರೆನ್ಸಿ ಮುದ್ರಣ, ಎಟಿಎಂಗಳ ನಿರ್ವಹಣೆ ಇಂಥ ಕಡೆಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಕಾಣಬಹುದು. ಐಷಾರಾಮಿ ಹೋಟೆಲ್​ಗಳಲ್ಲಿ ಅಡುಗೆ ವಿಭಾಗದಲ್ಲೂ ಇವರದೇ ಮೇಲುಗೈ ಆಗಿರುತ್ತದೆ.

7 / 12
ವೃಶ್ಚಿಕ

ಅಪರಾಧ ತನಿಖಾ ವಿಭಾಗದಲ್ಲಿ ಇವರ ಸಂಖ್ಯೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲ, ಇನ್ವೆಸ್ಟಿಗೇಟಿವ್ ಜರ್ನಲಿಸಂ, ಸ್ಟಿಂಗ್ ಆಪರೇಷನ್​ಗಳು ಇವುಗಳಲ್ಲಿ ಸಹ ಇವರು ಪಾಲ್ಗೊಳ್ಳುವುದು ಹೆಚ್ಚು. ಸೈನ್ಯ, ಪೊಲೀಸ್ ಇಲಾಖೆ, ರೆಸ್ಟೋರೆಂಟ್​ಗಳಲ್ಲಿ ಮ್ಯಾನೇಜರ್​ಗಳು, ಫೈನಾನ್ಸ್ ಕಂಟ್ರೋಲರ್​ಗಳು, ಜನರಲ್ ಮ್ಯಾನೇಜರ್​ಗಳು ಇಂಥ ಹುದ್ದೆಗಳಲ್ಲಿ ಕಾಣಸಿಗುವವರು ಇವರೇ. ಸಾಮಾನ್ಯವಾಗಿ ಈ ರಾಶಿಯವರು ಕೆಲಸದ ವಿಚಾರದಲ್ಲಿ ಅಯ್ಯೋ- ಪಾಪ ಎನ್ನುವ ಪೈಕಿ ಅಲ್ಲ. ಇವರಿಗೆ ಸ್ವಾನುಕಂಪ ಹೆಚ್ಚು. ಇದನ್ನೇ ಇತರರಿಗೆ ಅನ್ವಯಿಸುವವರಲ್ಲ. ಜೀವನದಲ್ಲಿ ಬಹಳ ತಡವಾಗಿ ಯಶಸ್ಸನ್ನು ಕಾಣುತ್ತಾರೆ. ಇವರ ಬಗ್ಗೆ ಇತರರು ಆಸೆಯೇ ಬಿಟ್ಟ ನಂತರ ಗೆಲುವು- ಯಶಸ್ಸನ್ನು ಕಂಡುಕೊಳ್ಳುತ್ತಾರೆ.

8 / 12
ಧನುಸ್ಸು

ಹೊಂದಾಣಿಕೆ ಸ್ವಭಾವದ ಈ ರಾಶಿಯವರು ಸಾಮಾನ್ಯವಾಗಿ ಶಾಲೆ- ಕಾಲೇಜುಗಳ ಉಪನ್ಯಾಸಕರು, ಪ್ರಾಚಾರ್ಯರಾಗಿ ಕಾಣಸಿಗುತ್ತಾರೆ. ಇನ್ನು ದೇವಾಲಯ- ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಸ್ಥಳಗಳು, ವೈದ್ಯಕೀಯ ಕಾಲೇಜುಗಳಲ್ಲಿ ಆಡಳಿತಾಧಿಕಾರಿಗಳಾಗುವ ಅವಕಾಶಗಳು ಸಹ ಇರುತ್ತವೆ. ಈ ರಾಶಿಯವರಲ್ಲಿ ಆತ್ಮಾಭಿಮಾನ ವಿಪರೀತ ಹೆಚ್ಚು. ಅಷ್ಟೇ ಅಲ್ಲ, ಸಿಟ್ಟು- ಸೆಡವು ಕೂಡ ಜಾಸ್ತಿ. ಯಾವುದು ತಮಾಷೆ ಹಾಗೂ ಯಾವುದು ನಿಜ ಎಂದು ಗುರುತಿಸಲು ಇವರಿಗೆ ಸಾಧ್ಯವಾಗದೆ ಕೆಲವು ಸಲ ಗೊಂದಲಗಳು ಏರ್ಪಡುತ್ತವೆ. ಆದರೆ ಎಲ್ಲರೂ ತಮ್ಮನ್ನು ಒಪ್ಪಿಕೊಳ್ಳಬೇಕು ಎಂಬ ಪ್ರಯತ್ನ ಸದಾ ಜಾರಿಯಲ್ಲಿ ಇರುತ್ತದೆ.

9 / 12
ಮಕರ

ಆಲಸ್ಯ ಇವರ ಪಾಲಿನ ಅತಿ ದೊಡ್ಡ ಶತ್ರು. ಇದರ ಜತೆಗೆ ಎಲ್ಲ ವಿಚಾರದ ಬಗ್ಗೆಯೂ ಒಂದು ಉಡಾಫೆ, ಅಸಡ್ಡೆ ಇರುತ್ತದೆ. ಆದರೆ ಶ್ರಮ ಎಂದು ಬಂದಾಗ ಸಿಕ್ಕಾಪಟ್ಟೆ ಶ್ರಮ ಹಾಕುತ್ತಾರೆ. ಆದರೆ ಪ್ರಯೋಜನಕ್ಕೆ ಬರಲ್ಲ. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಚರಂಡಿ ನಿರ್ಮಾಣ, ಕಬ್ಬಿಣ, ಸಿಮೆಂಟ್ ಮಾರಾಟ ಮಾಡುವ ಕಂಪೆನಿಗಳು ಇಂಥ ಕಡೆ ಉದ್ಯೋಗದಲ್ಲಿ ಇರುತ್ತಾರೆ. ಆದರೆ ಇವರು ಬೇರೆ ಯಾವುದೇ ಕ್ಷೇತ್ರದಲ್ಲಿ ಇದ್ದರೂ ಆ ಸಂಸ್ಥೆಯ ವ್ಯಾಪಾರ- ವ್ಯವಹಾರದಲ್ಲಿ ಭಾಗಿ ಆಗಿರುತ್ತಾರೆ. ಪ್ಲ್ಯಾನಿಂಗ್, ಆಡಳಿತ ವ್ಯವಹಾರಗಳು, ಬ್ಯಾಂಕಿಂಗ್ ವ್ಯವಹಾರ ಇಂಥವುಗಳ ಕಡೆ ಸದಾ ಸೆಳೆತ ಇದ್ದೇ ಇರುತ್ತದೆ. ಆದರೆ ಜವಾಬ್ದಾರಿ ವಹಿಸಿಕೊಳ್ಳುವುದರಲ್ಲಿ ಹಿಂದೆ ಉಳಿದುಕೊಂಡು ಬಿಡುತ್ತಾರೆ.

10 / 12
ಕುಂಭ

ಕೃಷಿಗೆ ಸಂಬಂಧಪಟ್ಟ ಇಲಾಖೆ, ಕಂಪೆನಿ, ಸಂಸ್ಥೆ, ಮಾರುಕಟ್ಟೆಗಳಲ್ಲಿ ಇವರ ಉದ್ಯೋಗ ಹೆಚ್ಚಿನ ಪಕ್ಷ ಇರುತ್ತದೆ. ಇತರರ ಮಾತಿಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳದ ಇವರಿಗೆ ತಮ್ಮದೇ ನೀತಿ, ನಿಯಮಗಳು ಇರುತ್ತವೆ. ಇವರ ಸಾಮರ್ಥ್ಯವನ್ನು ಇತರರು ಇರಲಿ, ಸ್ವತಃ ಇವರಿಗೆ ಅಳೆಯುವುದು ಕಷ್ಟವಾಗಿ ಬಿಡುತ್ತದೆ. ಹತ್ತರಲ್ಲಿ ಹನ್ನೊಂದು ಎನ್ನುವಂತೆ ಇದ್ದುಬಿಡುವ ಕುಂಭ ರಾಶಿಯವರು, ಕೆಲವು ಅವಕಾಶಗಳನ್ನು ತಮ್ಮ ಅನುಮಾನದ ಸ್ವಭಾವದಿಂದಲೇ ಕಳೆದುಕೊಳ್ಳುತ್ತಾರೆ. ರಿಯಲ್ ಎಸ್ಟೇಟ್ ಕಂಪೆನಿಗಳಲ್ಲೂ ಇವರು ಕೆಲಸ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

11 / 12
ಮೀನ

ವೈಟ್ ಕಾಲರ್ ಜಾಬ್​ಗಳಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತಾರೆ. ಮೀನ ರಾಶಿಯವರು ಜಲ ಸಾರಿಗೆಯ ಮುಖ್ಯ ಹುದ್ದೆಗಳಲ್ಲಿ ಕಾಣಸಿಗುತ್ತಾರೆ. ಅಷ್ಟೇ ಅಲ್ಲ, ಏರ್​ಫೋರ್ಸ್, ನೇವಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು ಇವರೇ. ವಿದೇಶಗಳಲ್ಲಿ ಶಾಶ್ವತವಾಗಿ ಉಳಿದುಹೋಗುವಂತಹ ಕೆಲಸಗಳು ಸಹ ಇವರನ್ನು ಹುಡುಕಿಕೊಂಡು ಬರುತ್ತವೆ. ಸಾಮಾನ್ಯವಾಗಿ ಯಾರಿಗೂ ಮಾತಿಗೆ ಸಿಕ್ಕಿಹಾಕಿಕೊಳ್ಳುವ ಜನರಲ್ಲ ಇವರು. ಈ ಸ್ವಭಾವದಿಂದ ಇವರಿಗೆ ಜವಾಬ್ದಾರಿ ಇಲ್ಲ ಎಂಬ ಆರೋಪ ಹೊರಬೇಕಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರು ತುಂಬ ಎತ್ತರವನ್ನು ತಲುಪಿಕೊಳ್ಳುವುದು ನೋಡಬಹುದು.

12 / 12

Follow us on

Most Read Stories

Click on your DTH Provider to Add TV9 Kannada