IPL 2021: ಯುಜ್ವೇಂದ್ರ ಜೊತೆಗಿನ ಸ್ನೇಹದ ಕುರಿತು ಮನಬಿಚ್ಚಿ ಮಾತಾಡಿರುವ ‘ಕೋಟಿವೀರ’ ಗ್ಲೆನ್ ಮ್ಯಾಕ್ಸ್ವೆಲ್!
2021 ಸೀಸನ್ನಿನ ಉಳಿದ ಭಾಗದಲ್ಲೂ ಮ್ಯಾಕ್ಸ್ವೆಲ್ ಇದೇ ಬಗೆಯ ಪ್ರದರ್ಶನಗಳನ್ನು ನೀಡಲಿ ಎಂಬ ಆಶಯವನ್ನು ಆರ್ಸಿಬಿ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಮ್ಯಾಕ್ಸ್ವೆಲ್ ಮತ್ತು ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ನಡುವೆ ಪರಸ್ಪರ ಆದರ, ಅಭಿಮಾನ ಮತ್ತು ಮೆಚ್ಚುಗೆಗಳಿವೆ.
ಇಂಡಿಯನ್ ಪ್ರಿಮೀಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಪ್ರತಿಬಾರಿ ಭಾರೀ ಮೊತ್ತಕ್ಕೆ ಬಿಕರಿಯಾಗುವ ಅಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಈ ಬಾರಿಯ ಸೀಸನ್ ಅನ್ನು ಪಾಸಿಟಿವ್ ನೋಟ್ನೊಂದಿಗೆ ಆರಂಭಿಸಿದ್ದಾರೆ. ನಿಮಗೆ ನೆನಪಿರಬಹುದು, ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ (ಆಗಿನ ಕಿಂಗ್ಸ್ ಇಲೆವೆನ್ ಪಂಜಾಬ್) ಪರ ಆಡಿದ್ದ ಮ್ಯಾಕ್ಸ್ವೆಲ್ಗೆ ಇಡೀ ಸೀಸನ್ನಲ್ಲಿ ಒಂದೇ ಒಂದು ಸಿಕ್ಸ್ ಬಾರಿಸಲು ಸಾಧ್ಯವಾಗಿರಲಿಲ್ಲ. ಬೌಲಿಂಗ್ನಲ್ಲೂ ಅವರು ಯಾವುದೇ ಕರಾಮತ್ತು ತೋರದ ಕಾರಣ ಫ್ರಾಂಚೈಸಿಯ ಮಾಲೀಕರಾಗಿರುವ ಪ್ರೀತಿ ಜಿಂಟಾ ಮತ್ತು ಇತರರು ಅವರನ್ನು ಕೈಬಿಡುವ ನಿರ್ಧಾರ ತೆಗೆದುಕೊಂಡರು. ಆದರೆ ಫೆಬ್ರವರಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾಲೀಕರು ಬೃಹತ್ ಮೊತ್ತ ಎನ್ನಬಹುದಾದ 14.25 ಕೋಟಿ ರೂಪಾಯಿಗಳಿಗೆ ಅವರನ್ನು ಖರೀದಿಸಿದರು. ಈ ತಂಡದ ಪರ ಅವರ ಈ ಸೀಸನ್ ಉತ್ತಮವಾಗಿಯೇ ಅರಂಭಗೊಂಡಿದೆ. ಅವರು ಮುಂಬೈ ವಿರುದ್ಧ ಆಡಿದ ಪಂದ್ಯದಲ್ಲಿ 28 ಎಸೆತಗಳಲ್ಲಿ 39 ರನ್ (3 ಬೌಂಡರಿ 2 ಸಿಕ್ಸ್) ಬಾರಿಸಿದರು.
2021 ಸೀಸನ್ನಿನ ಉಳಿದ ಭಾಗದಲ್ಲೂ ಮ್ಯಾಕ್ಸ್ವೆಲ್ ಇದೇ ಬಗೆಯ ಪ್ರದರ್ಶನಗಳನ್ನು ನೀಡಲಿ ಎಂಬ ಆಶಯವನ್ನು ಆರ್ಸಿಬಿ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಮ್ಯಾಕ್ಸ್ವೆಲ್ ಮತ್ತು ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ನಡುವೆ ಪರಸ್ಪರ ಆದರ, ಅಭಿಮಾನ ಮತ್ತು ಮೆಚ್ಚುಗೆಗಳಿವೆ. ಹಾಗೆಯೇ, ಟೀಮಿನ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಜೊತೆ ಅವರ ದೋಸ್ತಿ ಜೋರಾಗಿದೆ, ಚಹಲ್ ಜೊತೆಗಿನ ಸ್ನೇಹದ ಬಗ್ಗೆ ಮ್ಯಾಕ್ಸ್ವೆಲ್ ಮನಬಿಚ್ಚಿ ಮಾತಾಡಿದ್ದಾರೆ.
‘ನನ್ನ ಈ ಪುಟ್ಟ ಸ್ನೇಹಿತನೊಂದಿಗೆ ಆಡುವುದನ್ನು ನಾನು ಎದುರು ನೋಡುತ್ತಿದ್ದೇನೆ. ಇಲ್ಲಿಗೆ ಬಂದ ಎರಡೇ ದಿನಗಳ ನಂತರ ಅವರು ನನ್ನನ್ನು ಕೀಟಲೆ ಮಾಡುವುದು, ಕಾಲೆಳೆಯುವುದನ್ನು ಆರಂಭಿಸಿದ್ದಾರೆ,’ ಎಂದು ಆರ್ಸಿಬಿ ನೀಡಿದ ಸಂದರ್ಶನದಲ್ಲಿ ಮ್ಯಾಕ್ಸ್ವೆಲ್ ಹೇಳಿದ್ದಾರೆ.
‘2013ರಲ್ಲಿ ನಾವಿಬ್ಬರೂ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದೆವು. ಹಾಗಾಗಿ ನಾವು ಬಹಳ ವರ್ಷಗಳಿಂದ ಸ್ನೇಹಿತರು. ಅಲ್ಲಿಂದೀಚೆಗೆ ಈ ಸ್ನೇಹ ಗಾಢವಾಗುತ್ತಾ ಸಾಗಿದೆ. ನಾವು ಭೇಟಿಯಾದಾಗೆಲ್ಲ ಮಾಡುವ ಮೊದಲ ಕೆಲಸವೆಂದರೆ ಬಿಗಿಯಾಗಿ ತಬ್ಬಿಕೊಳ್ಳುವುದು. ನಾವು ಮೈದಾನದಲ್ಲಿ ಜೊತೆಯಾಗಿ ಆಡುತ್ತೇವೆ, ಅವರು ಬೌಲಿಂಗ್ ಮಾಡಿದರೆ ನಾನು ಬ್ಯಾಟಿಂಗ್ ಮಾಡುತ್ತೇನೆ,’ ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ.
“That six was a 100 meters, mate!” ?#PlayBold #WeAreChallengers #MIvRCB pic.twitter.com/qvwAFBBFvq
— Royal Challengers Bangalore (@RCBTweets) April 10, 2021
‘ನಮ್ಮಿಬ್ಬರ ನಡುವೆ ತಮಾಷೆ ಕೀಟಲೆ ನಡೆಯುತ್ತಲೇ ಇರುತ್ತದೆ, ಮುಗುಳ್ನಗು ನಮ್ಮ ಮುಖದಲ್ಲಿ ಸದಾ ಮನೆ ಮಾಡಿರುತ್ತದೆ. ತೀವ್ರ ಪೈಪೋಟಿ ಹೊರತಾಗಿಯೂ, ತಮಾಷೆ ಮಾಡಿಕೊಳ್ಳುತ್ತಾ ಆಟವಾಡುತ್ತಿದ್ದರೆ, ಕ್ರಿಕೆಟ್ ನಿಜಕ್ಕೂ ಮೋಜೆನಿಸುತ್ತದೆ,’ ಎಂದು ಮಾಕ್ಸ್ವೆಲ್ ಹೇಳಿದ್ದಾರೆ.
ಬುಧವಾರದಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುವ ಪಂದ್ಯದಲ್ಲೂ ಮ್ಯಾಕ್ಸ್ವೆಲ್ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ.
IPL 2021: 63 ವರ್ಷದ ಈ ಉದ್ಯಮಿಗೂ ಐಪಿಎಲ್ನಲ್ಲಿ ಆಡುವ ಆಸೆಯಂತೆ! ಆದರೆ ಷರತ್ತುಗಳು ಅನ್ವಯ