IPL 2021: 63 ವರ್ಷದ ಈ ಉದ್ಯಮಿಗೂ ಐಪಿಎಲ್​ನಲ್ಲಿ ಆಡುವ ಆಸೆಯಂತೆ! ಆದರೆ ಷರತ್ತುಗಳು ಅನ್ವಯ

Harsh Goenka: ಅವರ ಟ್ವೀಟ್​ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆಗಳೂ ಒಂದಕ್ಕಿಂತ ಒಂದು  ಮಜ ಮಜಾ ಆಗಿವೆ. ಅವರ ಟ್ವೀಟ್​ನಲ್ಲಿನ ಚಿತ್ರದಲ್ಲಿ ಸಮುದ್ರ ಕಾಣಿಸುತ್ತದೆ. ನೀವು ಹೊಡೆದ ಬಾಲ್ ಆ ಸಮುದ್ರಕ್ಕೆ ಹೋದರೆ ಹೆಕ್ಕಿ ತರುವವರು ಯಾರು ಎಂದು ಓರ್ವರು ಟ್ವೀಟ್ ಮಾಡಿದ್ದಾರೆ!

IPL 2021: 63 ವರ್ಷದ ಈ ಉದ್ಯಮಿಗೂ ಐಪಿಎಲ್​ನಲ್ಲಿ ಆಡುವ ಆಸೆಯಂತೆ! ಆದರೆ ಷರತ್ತುಗಳು ಅನ್ವಯ
ಹರ್ಷ ಗೋಯೆಂಕಾಗೂ ಐಪಿಎಲ್​ನಲ್ಲಿ ಆಡುವ ಆಸೆಯಂತೆ!
Follow us
guruganesh bhat
| Updated By: Digi Tech Desk

Updated on: Apr 13, 2021 | 5:01 PM

ಇಂಡಿಯನ್ ಪ್ರೀಮಿಯರ್ ಲೀಗ್​ ಮತ್ತೊಮ್ಮೆ ವಿಶ್ವದ ಕ್ರೀಡಾಪ್ರೇಮಿಗಳ ಪಾಲಿಗೆ ಹಬ್ಬದ ಔತಣ ಮಾಡಿಸುತ್ತಿದೆ. ಎಷ್ಟೋ ಆಟಗಾರರಿಗೆ ಐಪಿಎಲ್​ ಎಂದರೆ ಅದೊಂದು ಅವಕಾಶಗಳ ಹೆಬ್ಬಾಗಿಲು. ಕ್ರಿಕೆಟ್ ಎಂಬೋ ಮಹಾಸಾಗರದಲ್ಲಿ ಧುಮುಕಲು ಐಪಿಎಲ್ ಅತಿ ದೊಡ್ಡ ದಾರಿ. ಐಪಿಎಲ್​ನಲ್ಲಿ ಮಿಂಚಿದ ಎಷ್ಟೋ ಕ್ರಿಕೆಟಿಗರು ಮುಂದೆ ಅಂತರಾಷ್ಟ್ರೀಯ ದರ್ಜೆಯ ಕ್ರಿಕೆಟ್​ಗೂ ಪದಾರ್ಪಣೆ ಮಾಡಿದ್ದಾರೆ. ಅಂತಹ ಉದಾಹರಣೆಗಳು ಪುಷ್ಕಳವಾಗಿ ದೊರೆಯುತ್ತದೆ. ಮುಂಚೆ ರಣಜಿ ಪಂದ್ಯಾವಳಿಗಳ ಮೂಲಕ ಹೇಗೆ ರಾಷ್ಟ್ರೀಯ ಕ್ರಿಕೆಟ್ ತಂಡ್ಕಕೆ ಸೇರುತ್ತಿದ್ದರೋ ಹಾಗೇ ಇಂದು ಐಪಿಎಲ್​ಗೆ ಕಾಲಿಟ್ಟು ಮಿಂಚಲು ಪ್ರಯತ್ನಿಸುತ್ತಾರೆ. ಅಲ್ಲಿ ಮಿಂಚಿದರೆ ಮುಂದೆ ಭವಿಷ್ಯ ಪ್ರಜ್ವಲವಾದಂತೆಯೇ ಎಂಬ ಮನೋಭಾವ ಎಲ್ಲರಲ್ಲಿದೆ.

ಇಷ್ಟೆಲ್ಲ ಇರುವಾಗ ಭಾರತೀಯ ಉದ್ಯಮಿಯೋರ್ವರಿಗೂ ಐಪಿಎಲ್​ನಲ್ಲಿ ಆಡುವ ಮನಸಾಗಿದೆ. ಯಾರು ಅಂತೀರಾ? ಅವರೇ ಆರ್​ಪಿಜಿ ಸಮೂಹ ಸಂಸ್ಥೆಗಳ ಒಡೆಯ ಹರ್ಷ ಗೋಯೆಂಕಾ. ಟ್ವಿಟರ್​ನಲ್ಲಿ ಸಕ್ರಿಯರಾಗಿರುವ ಅವರ ಟ್ವೀಟ್​ಗಳು ಬಹಳ ಕುತೂಹಲಕರ ಮತ್ತು ಸ್ವಾರಸ್ಯಕರ. ಈ ಬಾರಿ ಸಂಚಲನ ಮೂಡಿಸಿರುವ ಐಪಿಎಲ್​ನಲ್ಲಿ ಆಡುವ ಅಪೇಕ್ಷೆಯನ್ನು 63 ವರ್ಷದ ಹರ್ಷ ಗೋಯೆಂಕಾ ವ್ಯಕ್ತಪಡಿಸಿದ್ದಾರೆ.

ನನ್ನ ಹೊಸ ಜೀವನವೇ, ನಿನಗೆ ಧನ್ಯವಾದಗಳು. ಪ್ರತಿದಿನ ಸಂಜೆ ನಾನು ಕ್ರಿಕೆಟ್ ಆಡುತ್ತೇನೆ. ಕೊನೆಗೂ ಆಟದಲ್ಲಿ ಒಂದು ಫಾರ್ಮ್​ ಸಾಧಿಸಿದ್ದೇನೆ. ಐಪಿಎಲ್​ ತಂಡಗಳ ಒಡೆತನ ಹೊಂದಿರುವ ಮಾಲೀಕರೇ ಗಮನಿಸಿ. ನಾನು ನಿಮಗಾಗಿ ಉಚಿತವಾಗಿ ಆಡಲು ಸಿದ್ಧನಿದ್ದೇನೆ. ಆದರೆ ನಾನು ಆಡಬೇಕೆಂದಿದ್ದರೆ ಎರಡೇ ಎರಡು ಮನವಿಗಳಿಗೆ ನೀವು ಒಪ್ಪಬೇಕಾಗುತ್ತದೆ ಎಂದು ಅವರ ಟ್ವೀಟ್​ನ ಮೊದಲಾರ್ಧದಲ್ಲಿ ಬರೆದಿದ್ದಾರೆ.

ಹಾಗಾದರೆ ಅವರು ಐಪಿಎಲ್​ನಲ್ಲಿ ಆಡಲು ಕೋರಿರುವ ಮನವಿಗಳೇನು ಎಂದು ನಿಮಗೂ ಕುತೂಹಲವಾಯಿತು ಅಲ್ಲವೇ? ಅದನ್ನು ತಿಳಿಯಲು ಟ್ವೀಟ್​ನ ಮುಂದಿನ ಭಾಗವನ್ನು ಓದಲೇಬೇಕು. ಹರ್ಷ ಗೋಯೆಂಕಾ ಕ್ರಿಕೆಟ್ ಆಡಬೇಕೆಂದರೆ ಆಡಲು ಟೆನಿಸ್ ಬಾಲ್​ ಬಳಸಬೇಕು. ಮತ್ತು 50 ರನ್​ಗಳ ನಂತರ ರನ್ನರ್ ಒಬ್ಬನನ್ನು ಅವರಿಗೆ ಒದಗಿಸಬೇಕು’ ಎಂದು ಅವರು ಕೇಳಿಕೊಂಡಿದ್ದಾರೆ.

ಅವರ ಟ್ವೀಟ್​ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆಗಳೂ ಒಂದಕ್ಕಿಂತ ಒಂದು  ಮಜ ಮಜಾ ಆಗಿವೆ. ಅವರ ಟ್ವೀಟ್​ನಲ್ಲಿನ ಚಿತ್ರದಲ್ಲಿ ಸಮುದ್ರ ಕಾಣಿಸುತ್ತದೆ. ನೀವು ಹೊಡೆದ ಬಾಲ್ ಆ ಸಮುದ್ರಕ್ಕೆ ಹೋದರೆ ಹೆಕ್ಕಿ ತರುವವರು ಯಾರು ಎಂದು ಓರ್ವರು ಟ್ವೀಟ್ ಮಾಡಿದ್ದಾರೆ!

ಇದನ್ನೂ ಓದಿ: Petrol Price Today: ಏಪ್ರಿಲ್ 13ನೇ ತಾರೀಕು ವಿವಿಧ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್ ದರ!

ಕೊರೊನಾ ಕಡಿಮೆ ಮಾಡಲು ಕೆಂಪಿರುವೆಯ ಚಟ್ನಿ; ಅರ್ಜಿ ತಿರಸ್ಕರಿಸಿದ ಒಡಿಶಾ ಹೈಕೋರ್ಟ್

(Harsh Goenka wants to play IPL 2021 for free but have 2 conditions)

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್