KKR vs MI, IPL 2021: ರೋಚಕ ಪಂದ್ಯದಲ್ಲಿ ಗೆದ್ದ ಮುಂಬೈ; ಗೆಲುವಿನ ಸನಿಹದಲ್ಲಿ ಎಡವಿದ ಕೋಲ್ಕತ್ತಾ

TV9 Web
| Updated By: ganapathi bhat

Updated on:Apr 05, 2022 | 12:36 PM

KKR vs MI Match Report in Kannada: ಮುಂಬೈ ಇಂಡಿಯನ್ಸ್ ರೋಚಕ ಜಯ ದಾಖಲಿಸಿದ ಈ ಪಂದ್ಯದಲ್ಲಿ ಗೆಲುವಿನ ಸನಿಹಕ್ಕೆ ತಲುಪಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಕೊನೆಯ ಹಂತದಲ್ಲಿ ಎಡವಿದೆ.

KKR vs MI, IPL 2021: ರೋಚಕ ಪಂದ್ಯದಲ್ಲಿ ಗೆದ್ದ ಮುಂಬೈ; ಗೆಲುವಿನ ಸನಿಹದಲ್ಲಿ ಎಡವಿದ ಕೋಲ್ಕತ್ತಾ
ನಾಲ್ಕು ವಿಕೆಟ್ ಪಡೆದು ಕೊಲ್ಕತ್ತಾ ನೈಟ್​ ರೈಡರ್ಸ್​ ಬ್ಯಾಟಿಂಗ್ ಬೆನ್ನೆಲುಬು ಮುರಿದ ರಾಹುಲ್ ಚಹರ್

ಚೆನ್ನೈ: ಐಪಿಎಲ್ 2021ರ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರೋಚಕ ಜಯ ದಾಖಲಿಸಿದೆ. ಗೆಲುವಿನ ಸನಿಹಕ್ಕೆ ತಲುಪಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಕೊನೆಯ ಹಂತದಲ್ಲಿ ಎಡವಿದೆ.

ಕೋಲ್ಕತ್ತಾ ಪರ ಆರಂಭಿಕರಾದ ನಿತೀಶ್ ರಾಣಾ 57 (47) ಹಾಗೂ ಶುಬ್​ಮನ್ ಗಿಲ್ 33 (24) ದಾಖಲಿಸಿದ್ದಾರೆ. ಉಳಿದಂತೆ ಮಧ್ಯಮ ಕ್ರಮಾಂಕ ತಕ್ಷಣಕ್ಕೆ ಕುಸಿತ ಕಂಡು ಹೀನಾಯ ಸೋಲು ಕಾಣುವಂತಾಗಿದೆ. ಮುಂಬೈ ಪರ ರಾಹುಲ್ ಚಹರ್ 4 ಓವರ್ ಗೆ 27 ರನ್ ನೀಡಿ, 4 ವಿಕೆಟ್ ಕಬಳಿಸಿದ್ದಾರೆ. ಬೋಲ್ಟ್ 2 ವಿಕೆಟ್ ಪಡೆದಿದ್ದಾರೆ.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಅಂತ್ಯಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್​ಗೆ 153 ಮೊತ್ತದ ಟಾರ್ಗೆಟ್ TV ನೀಡಿತ್ತು. ಕೋಲ್ಕತ್ತಾ ಪರ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದರು. ರಸ್ಸೆಲ್ 2 ಓವರ್ ಬೌಲ್ ಮಾಡಿ 15 ರನ್ ನೀಡಿ ಬರೋಬ್ಬರಿ 5 ವಿಕೆಟ್ ಕಬಳಿಸಿದ್ದರು. ಕಮಿನ್ಸ್ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದಿದ್ದರು.

ಮುಂಬೈ ಪರ ಸೂರ್ಯಕುಮಾರ್ ಯಾದವ್ 56 (36) ಹಾಗೂ ನಾಯಕ ರೋಹಿತ್ ಶರ್ಮಾ 43 (32) ಹೊರತುಪಡಿಸಿ ಉಳಿದೆಲ್ಲರೂ ಎರಡಂಕಿ ದಾಟಲು ಪರದಾಡಿದ್ದರು. ಜಾನ್ಸೆನ್, ಬುಮ್ರಾ, ಬೋಲ್ಟ್ ಡಕ್​ಗೆ ಔಟ್ ಆಗಿದ್ದರು. ಮುಂಬೈ ದಾಂಡಿಗ ಸಮೂಹ ಪೆವಿಲಿಯನ್ ಪರೇಡ್ ನಡೆಸಿ ಕೋಲ್ಕತ್ತಾಗೆ ಕಡಿಮೆ ಮೊತ್ತದ ಟಾರ್ಗೆಟ್ ನೀಡಿತ್ತು.

LIVE NEWS & UPDATES

The liveblog has ended.
  • 13 Apr 2021 11:20 PM (IST)

    ಮುಂಬೈಗೆ 10 ರನ್ ಗೆಲುವು !

    ಮುಂಬೈ ಇಂಡಿಯನ್ಸ್ ಈ ಸೀಸನ್ನಿನ ತನ್ನ ಎರಡನೇ ಪಂದ್ಯವನ್ನು 10 ರನ್​ಗಳಿಂದ ಗೆದ್ದಿದೆ, ಗೆಲ್ಲಲು 153 ರನ್ ಗಳಿಸಬೇಕಿದ್ದ ಕೆಕೆಅರ್ ನಿಗದಿತ 20 ಓವರ್ಗ​ಳಲ್ಲಿ 142/7 ಗಳಿಸಲು ಮಾತ್ರ ಶಕ್ತವಾಯಿತು

  • 13 Apr 2021 11:16 PM (IST)

    ಮತ್ತೊಂದು ವಿಕೆಟ್ ಪತನ

    ಟ್ರೆಂಟ್ ಬೌಲ್ಟ್ ಮತ್ತೊಂದು ವಿಕೆಟ್​ ಪಡೆದಿದ್ದಾರೆ, ಪ್ಯಾಟ್ ಕಮ್ಮಿನ್ಸ್ ಅವರು ಕ್ಲೀನ್ ಬೌಲ್ಡ್ ಆಗಿದ್ದಾರೆ

  • 13 Apr 2021 11:14 PM (IST)

    ರಸ್ಸೆಲ್ ಔಟ್!

    ಆಂದ್ರೆ ರಸೆಲ್ ಅವರು ಟ್ರೆಂಟ್ ಬೌಲ್ಟ್ ಅವರಿಗೆ ಕಾಟ್​ ಅಂಡ್ ಬೌಲ್ಡ್ ಆಗಿದ್ದಾರೆ, ಕೆಕೆಆರ್ 140/6

  • 13 Apr 2021 11:11 PM (IST)

    19ನೇ ಓವರ್​ನಲ್ಲಿ ಕೇವಲ 4 ರನ್

    ಜಸ್ಪ್ರೀತ್ ಬುಮ್ರಾ ಸಹ ಅದ್ಭುತವಾಗಿ ಬೌಲ್ ಮಾಡಿ 19ನೇ ಓವರ್​ನಲ್ಲಿ ಕೇವಲ 4 ರನ್ ನೀಡಿದರು, ಕೊನೆಯ ಓವರ್​ನಲ್ಲಿ ಕೆಕೆಆರ್​ಗೆ 15 ರನ್ ಬೇಕು

  • 13 Apr 2021 11:07 PM (IST)

    18ನೇ ಓವರ್​ನಲ್ಲಿ ಕೇವಲ 3 ರನ್

    ಕೃಣಾಲ್ ಪಾಂಡೆ 18 ನೇ ಓವರ್​ನಲ್ಲಿ ಕೇವಲ 3 ರನ್​ ನೀಡಿದರು, ಕೊನೆಯ 12 ಎಸೆತಗಳಲ್ಲಿ ಕೆಕೆಆರ್​ಗೆ 18 ರನ್ ಬೇಕು

  • 13 Apr 2021 11:05 PM (IST)

    ಕ್ಯಾಚ್​ ಬಿಟ್ಟ ಬುಮ್ರಾ

    ಆಂದ್ರೆ ರಸ್ಸೆಲ್ ನೀಡಿದ ಕ್ಯಾಚನ್ನು ಬುಮ್ರಾ ಬಿಟ್ಟಿದ್ದಾರೆ, ಇದು ದುಬಾರಿಯಾಗಬಹುದು

  • 13 Apr 2021 11:02 PM (IST)

    18 ಎಸೆತಗಳಲ್ಲಿ 22 ರನ್

    ಕೆಕೆಆರ್ ತಂಡಕ್ಕೆ ಕೊನೆಯ ಮೂರು ಓವರ್​ಗಳಲ್ಲಿ 22 ರನ್ ಬೇಕು. ಆಂದ್ರೆ ರಸ್ಸೆಲ್ ಮತ್ತು ದಿನೇಶ್ ಕಾರ್ತಿಕ್ ಆಡುತ್ತಿದ್ದಾರೆ

  • 13 Apr 2021 10:54 PM (IST)

    ಮುಂಬೈ ಪರ ಮಿಂಚಿದ ಚಹರ್

    ಕೋಲ್ಕತ್ತಾಗೆ ಗೆಲ್ಲಲು 24 ಬಾಲ್​ಗೆ 30 ರನ್ ಬೇಕಿದೆ. ಕೋಲ್ಕತ್ತಾ 16 ಓವರ್​ಗೆ 123 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. ಮುಂಬೈ ಪರ ಚಹರ್ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

  • 13 Apr 2021 10:52 PM (IST)

    ಕೋಲ್ಕತ್ತಾ ಗೆಲ್ಲಲು 28 ಬಾಲ್​ಗೆ 31 ರನ್ ಬೇಕು

    ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ 28 ಬಾಲ್​ಗೆ 31 ರನ್ ಬೇಕಾಗಿದೆ. ದಿನೇಶ್ ಕಾರ್ತಿಕ್ ಹಾಗೂ ರಸ್ಸೆಲ್ ಕ್ರೀಸ್​ನಲ್ಲಿದ್ದಾರೆ.

  • 13 Apr 2021 10:50 PM (IST)

    ಮತ್ತೊಂದು ವಿಕೆಟ್ ಪತನ

    ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಆಟವಾಡಿ ಗೆಲುವು ಸಾಧಿಸುತ್ತದೆ ಎಂಬ ವೇಳೆ ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿ ದಾಂಡಿಗರು ನಿರ್ಗಮಿಸುತ್ತಿದ್ದಾರೆ. ರಾಣಾ ಬಳಿಕ ಶಕೀಬ್ ಅಲ್ ಹಸನ್ ಕೆಟ್ಟ ಶಾಟ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಶಕೀಬ್ 9 ಬಾಲ್​ಗೆ 9 ರನ್ ನೀಡಿ ನಿರ್ಗಮಿಸಿದ್ದಾರೆ. ಕೃನಾಲ್ ಪಾಂಡ್ಯ ಬಾಲ್​ನ್ನು ಸೂರ್ಯಕುಮಾರ್ ಯಾದವ್ ಕ್ಯಾಚ್ ಹಿಡಿದಿದ್ದಾರೆ.

  • 13 Apr 2021 10:46 PM (IST)

    ರಾಣಾ ಸ್ಟಂಪ್ ಔಟ್

    ನಿತೀಶ್ ರಾಣಾ 47 ಬಾಲ್​ಗೆ 57 ರನ್ ದಾಖಲಿಸಿ ನಿರ್ಗಮಿಸಿದ್ದಾರೆ. ಚಹರ್ ಎಸೆತಕ್ಕೆ ಕ್ರೀಸ್ ಬಿಟ್ಟು ಹೊಡೆಯಲು ಬಂದ ರಾಣಾರನ್ನು ಡಿ ಕಾಕ್ ಸ್ಟಂಪ್ ಔಟ್ ಮಾಡಿದ್ದಾರೆ. ಚಹರ್ 4 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸದ್ಯ, ಕೋಲ್ಕತ್ತಾ ಮೊತ್ತ 15 ಓವರ್​ಗೆ 122 ಆಗಿದೆ.

  • 13 Apr 2021 10:44 PM (IST)

    ಕೋಲ್ಕತ್ತಾ 113/3 (14 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 14 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 113 ರನ್ ದಾಖಲಿಸಿದೆ. ರಾಣಾ ಅರ್ಧಶತಕ ಬಾರಿಸಿ ಕ್ರೀಸ್​ನಲ್ಲಿದ್ದಾರೆ. ಶಕೀಬ್ ಅಲ್ ಹಸನ್ ಕೂಡ ಬ್ಯಾಟ್ ಮಾಡುತ್ತಿದ್ದಾರೆ. ಚಹರ್ ಹೊರತಾಗಿ ಉಳಿದ ಬೌಲರ್​ಗಳು ವಿಕೆಟ್ ಪಡೆಯಲು ವಿಫಲರಾಗುತ್ತಿದ್ದಾರೆ.

  • 13 Apr 2021 10:35 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 104/3 (13 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 13 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ. ತಂಡ ಗೆಲ್ಲಲು 42 ಬಾಲ್​ಗೆ 49 ರನ್ ಬೇಕಾಗಿದೆ. ರಾಣಾ ಜೊತೆ ಶಕೀಬ್ ಅಲ್ ಹಸನ್ ಕ್ರೀಸ್​ನಲ್ಲಿದ್ದಾರೆ.

  • 13 Apr 2021 10:34 PM (IST)

    ಮೋರ್ಗನ್ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಇಯಾನ್ ಮೋರ್ಗನ್ ಚಹರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಣಾ ಅರ್ಧಶತಕದ ಸಂಭ್ರಮದ ಬೆನ್ನಲ್ಲೇ ಮೋರ್ಗನ್ ಔಟ್ ಆಗಿದ್ದಾರೆ. 7 ಬಾಲ್​ಗೆ 7 ರನ್ ಪೇರಿಸಿ, ಜಾನ್ಸೆನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

  • 13 Apr 2021 10:32 PM (IST)

    ನಿತೀಶ್ ರಾಣಾ ಅರ್ಧಶತಕ

    ಕೋಲ್ಕತ್ತಾ ನೈಟ್ ರೈಡರ್ಸ್ ಪರ ನಿತೀಶ್ ರಾಣಾ ಅರ್ಧಶತಕ ದಾಖಲಿಸಿದ್ದಾರೆ. 40 ಬಾಲ್​ಗೆ 2 ಸಿಕ್ಸರ್, 6 ಬೌಂಡರಿ ಸಹಿತ 51 ರನ್ ಕಲೆಹಾಕಿದ್ದಾರೆ.

  • 13 Apr 2021 10:30 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 97/2 (12 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 12 ಓವರ್​ಗಳ ಅಂತ್ಯ್ಕಕೆ 2 ವಿಕೆಟ್ ಕಳೆದುಕೊಂಡು 97 ರನ್ ಗಳಿಸಿದೆ. ಕೋಲ್ಕತ್ತಾ ಪರ ನಾಯಕ ಮಾರ್ಗನ್ ಹಾಗೂ ರಾಣಾ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೋಲ್ಕತ್ತಾಗೆ ಗೆಲ್ಲಲು 48 ಬಾಲ್​ಗೆ 56 ರನ್ ಬೇಕಿದೆ. ರಾಣಾ 45 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿ ಇದ್ದಾರೆ.

  • 13 Apr 2021 10:25 PM (IST)

    ಕೋಲ್ಕತ್ತಾ 85/2 (11 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 11 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 85 ರನ್ ದಾಖಲಿಸಿದೆ. ಕೋಲ್ಕತ್ತಾ ಪರ ರಾಣಾ ಹಾಗೂ ನಾಯಕ ಮೋರ್ಗನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 13 Apr 2021 10:23 PM (IST)

    ತ್ರಿಪಾಠಿ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ದಾಂಡಿಗ ರಾಹುಲ್ ತ್ರಿಪಾಠಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. 5 ಬಾಲ್​ಗೆ 5 ರನ್ ಗಳಿಸಿ ರಾಹುಲ್ ನಿರ್ಗಮಿಸಿದ್ದಾರೆ. ಈ ಮೂಲಕ ಕೋಲ್ಕತ್ತಾದ 2ನೇ ವಿಕೆಟ್ ನಷ್ಟವಾಗಿದೆ. ಎರಡೂ ವಿಕೆಟ್​ಗಳನ್ನು ರಾಹುಲ್ ಚಹರ್ ಪಡೆದಿದ್ದಾರೆ.

  • 13 Apr 2021 10:15 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 73/1 (9 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 9 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 73 ರನ್ ದಾಖಲಿಸಿದೆ. ಕೋಲ್ಕತ್ತಾ ಪರ ಆರಂಭಿಕ ನಿತೀಶ್ ರಾಣಾ ಹಾಗೂ ಈಗ ಬಂದ ತ್ರಿಪಾಠಿ ಬ್ಯಾಟ್ ಮಾಡುತ್ತಿದ್ದಾರೆ. ಕೋಲ್ಕತ್ತಾ ಗೆಲ್ಲಲು 66 ಬಾಲ್​ಗೆ 80 ರನ್ ಬೇಕಿದೆ.

  • 13 Apr 2021 10:12 PM (IST)

    ಕೋಲ್ಕತ್ತಾದ ಮೊದಲ ವಿಕೆಟ್ ಪತನ

    ಕೋಲ್ಕ್ತತಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಬ್​ಮನ್ ಗಿಲ್ 24 ಬಾಲ್​​ಗೆ 33 ರನ್ ಗಳಿಸಿ ಚಹರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಚಹರ್ ಎಸೆತವನ್ನು ಸಿಕ್ಸರ್​ಗೆ ಎತ್ತಿದ ಗಿಲ್, ಪೊಲಾರ್ಡ್​ಗೆ ಕ್ಯಾಚ್ ನೀಡಿದ್ದಾರೆ.

  • 13 Apr 2021 10:10 PM (IST)

    ರಾಣಾ ಫೋರ್-ಸಿಕ್ಸರ್ ಆಟ

    ಕೋಲ್ಕತ್ತಾ ಪರ ನಿತೀಶ್ ರಾಣಾ ಅಬ್ಬರದ ಆಟಕ್ಕೆ ಮುಂದಾಗಿದ್ದಾರೆ. ಪೊಲಾರ್ಡ್ ಓವರ್​ನ ಸತತ ಎರಡು ಬಾಲ್​ಗಳನ್ನು ಸಿಕ್ಸರ್ ಹಾಗೂ ಫೋರ್​ ಬಾರಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 8 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 62 ರನ್ ದಾಖಲಿಸಿದೆ.

  • 13 Apr 2021 10:02 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 50/0 (7 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 7 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 50 ರನ್ ಕಲೆಹಾಕಿದೆ. ಕೋಲ್ಕತ್ತಾ ಗೆಲುವಿಗೆ 78 ಬಾಲ್​ಗೆ 103 ರನ್ ಬೇಕಾಗಿದೆ. ಯಾವುದೇ ಅವಸರವಿಲ್ಲದ ಸುಲಭ ಆಟವನ್ನು ಕೋಲ್ಕತ್ತಾ ಆಡುತ್ತಿದ್ದು ಗೆಲ್ಲುವ ನಿರೀಕ್ಷೆಗಳು ದಟ್ಟವಾಗಿದೆ.

  • 13 Apr 2021 09:59 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 45/0 (6 ಓವರ್)

    ಪವರ್ ಪ್ಲೇ ಅಂತ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ವಿಕೆಟ್ ನಷ್ಟವಿಲ್ಲದೆ 45 ರನ್ ಕಲೆಹಾಕಿದೆ. ಕೋಲ್ಕತ್ತಾ ಪರ ರಾಣಾ 24 (21) ಹಾಗೂ ಗಿಲ್ 20 (16) ಬಾಲ್ ಆಟವಾಡುತ್ತಿದ್ದಾರೆ. ಕೋಲ್ಕತ್ತಾಗೆ ಗೆಲ್ಲಲು 84 ಬಾಲ್​ಗೆ 108 ರನ್ ಬೇಕಿದೆ.

  • 13 Apr 2021 09:18 PM (IST)

    ಕೋಲ್ಕತ್ತಾಗೆ 153 ರನ್ ಟಾರ್ಗೆಟ್

    ಇನ್ನಿಂಗ್ಸ್ ಮುಗಿಸಿರುವ ಮುಂಬೈ ಇಂಡಿಯನ್ಸ್ ತಂಡ 20 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 152 ರನ್ ಗಳಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್​ಗೆ 153 ರನ್​ಗಳ ಗುರಿ ನೀಡಿದೆ.

  • 13 Apr 2021 09:17 PM (IST)

    ಚಹಾರ್ ಔಟ್; ಮುಂಬೈ ಆಲ್ ಔಟ್

    ರಸ್ಸೆಲ್ ಮತ್ತೊಂದು ವಿಕೆಟ್ ಕಿತ್ತುಕೊಂಡು ಮ್ಯಾಜಿಕ್ ಮಾಡಿದ್ದಾರೆ. 2 ಓವರ್ ಎಸೆದ ರಸ್ಸೆಲ್ 15 ರನ್ ನೀಡಿ ಬರೋಬ್ಬರಿ 5 ವಿಕೆಟ್ ಕಬಳಿಸಿದ್ದಾರೆ.

  • 13 Apr 2021 09:13 PM (IST)

    ಬುಮ್ರಾ ಡಕ್ ಔಟ್!!

    ಬುಮ್ರಾ ಬಂದಂತೆ ಹೋಗಿದ್ದಾರೆ. ರಸ್ಸೆಲ್ ಈ ಪಂದ್ಯದಲ್ಲಿ ಎರಡನೇ ಬಾರಿಗೆ ಸತತ 2 ವಿಕೆಟ್ ಒಟ್ಟೊಟ್ಟಿಗೆ ಪಡೆದುಕೊಂಡಿದ್ದಾರೆ. ಮುಂಬೈ ಪರ ಅತ್ಯುತ್ತಮ ಪ್ರದರ್ಶನ ತೋರಿದ ರಸ್ಸೆಲ್ 4 ವಿಕೆಟ್ ಕಿತ್ತಿದ್ದಾರೆ.

  • 13 Apr 2021 09:12 PM (IST)

    ಕೃನಾಲ್ ಪಾಂಡ್ಯ ವಿಕೆಟ್!

    ರಸ್ಸೆಲ್ ಮತ್ತೊಂದು ವಿಕೆಟ್ ಕಿತ್ತುಕೊಂಡಿದ್ದಾರೆ. ಕೃನಾಲ್ ಪಾಂಡ್ಯ 9 ಬಾಲ್​ಗೆ 15 ರನ್ ಗಳಿಸಿ ನಿರ್ಗಮಿಸಿದ್ದಾರೆ.

  • 13 Apr 2021 09:11 PM (IST)

    ಮುಂಬೈ ಇಂಡಿಯನ್ಸ್ 142/7 (19 ಓವರ್)

    ಮುಂಬೈ ಇಂಡಿಯನ್ಸ್ ತಂಡ 19 ಓವರ್​ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 142 ರನ್ ಕಲೆಹಾಕಿದೆ. ಮುಂಬೈ ಪರ ಕೃನಾಲ್ ಹಾಗೂ ಚಹರ್ ಬ್ಯಾಟ್ ಬೀಸುತ್ತಿದ್ದಾರೆ. ಕೋಲ್ಕತ್ತಾ ಉತ್ತಮ ಬೌಲಿಂಗ್ ಮೂಲಕ ಮುಂದಿನ ಇನ್ನಿಂಗ್ಸ್​ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

  • 13 Apr 2021 09:05 PM (IST)

    ಮುಂಬೈ ಇಂಡಿಯನ್ಸ್ 130/7 (18 ಓವರ್)

    ಮುಂಬೈ ಇಂಡಿಯನ್ಸ್ ತಂಡ 18 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 130 ರನ್ ಕಲೆಹಾಕಿದ್ದಾರೆ. ಕೋಲ್ಕತ್ತಾ ಪರ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹರ್ಭಜನ್ ಸಿಂಗ್, ಪ್ರಸಿದ್ಧ್ ಕೃಷ್ಣ ಹೊರತುಪಡಿಸಿ ಉಳಿದ ಎಸೆತಗಾರರು 6ಕ್ಕಿಂತ ಕಡಿಮೆ ಎಕನಮಿಯಲ್ಲಿ ಬಾಲ್ ಮಾಡಿದ್ದಾರೆ. ರಸ್ಸೆಲ್, ಕಮಿನ್ಸ್ ತಲಾ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದಿದ್ದಾರೆ.

  • 13 Apr 2021 09:03 PM (IST)

    ಡಕ್ ಔಟ್ ಆದ ಜಾನ್ಸೆನ್!

    ಜಾನ್ಸೆನ್ ಮೊದಲ ಎಸೆತವನ್ನು ಮೇಲಕ್ಕೆ ಬಾರಿಸಿ ಕ್ಯಾಚ್ ನೀಡಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ರಸೆಲ್ ಸತತ ಎರಡು ವಿಕೆಟ್ ಪಡೆದು ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಮುಂಬೈ ಪರ ಕೃನಾಲ್ ಪಾಂಡ್ಯಗೆ, ಚಹರ್ ಜೊತೆಯಾಗಿದ್ದಾರೆ.

  • 13 Apr 2021 08:59 PM (IST)

    ಪೊಲಾರ್ಡ್ ಔಟ್!

    ಮುಂಬೈ ತಂಡದಲ್ಲಿ ಯಾವುದೇ ಚೇತರಿಕೆಯ ಆಟ ಕಂಡುಬರುತ್ತಿಲ್ಲ. ಪೊಲಾರ್ಡ್ ಕೂಡ ಬಂದಂತೆಯೇ ಔಟ್ ಆಗಿದ್ದಾರೆ. 17. 2 ಓವರ್​ಗೆ ಮುಂಬೈ 125 ರನ್​ಗೆ 6 ವಿಕೆಟ್ ಕಳೆದುಕೊಂಡಿದೆ. ರಸ್ಸೆಲ್ ಎಸೆತವನ್ನು ಕೀಪರ್ ಕಾರ್ತಿಕ್​ಗೆ ಕ್ಯಾಚ್ ನೀಡಿ ಪೊಲಾರ್ಡ್ ಔಟ್ ಆಗಿದ್ದಾರೆ. ಪೊಲಾರ್ಡ್ 8 ಬಾಲ್​ಗೆ 5 ರನ್ ಬಾರಿಸಿ ನಿರ್ಗಮಿಸಿದ್ದಾರೆ.

  • 13 Apr 2021 08:57 PM (IST)

    ಮುಂಬೈ ಇಂಡಿಯನ್ಸ್ 125/5 (7 ಓವರ್)

    ಮುಂಬೈ ಇಂಡಿಯನ್ಸ್ ತಂಡ 7 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 125 ರನ್ ದಾಖಲಿಸಲಷ್ಟೇ ಶಕ್ತವಾಗಿದೆ. ರೋಹಿತ್ ಹಾಗೂ ಹಾರ್ದಿಕ್ ಪಾಂಡ್ಯ ಔಟಾದ ಬಳಿಕ, ರಸ್ಸೆಲ್ ಹಾಗೂ ಕೃನಾಲ್ ಪಾಂಡ್ಯ ಕ್ರೀಸ್​ಗೆ ಇಳಿದಿದ್ದಾರೆ.

  • 13 Apr 2021 08:55 PM (IST)

    ಹಾರ್ದಿಕ್ ಪಾಂಡ್ಯ ಔಟ್

    ಮುಂಬೈ ಇಂಡಿಯನ್ಸ್ ತಂಡಕ್ಕೆ ಮೇಲಿಂದ ಮೇಲೆ ಏಟು ಬೀಳುತ್ತಿದೆ. ನೀರಸ ಆಟ ತೋರುತ್ತಿರುವ ಮುಂಬೈ ಇಂಡಿಯನ್ಸ್​ನ ಮತ್ತೊಂದು ವಿಕೆಟ್ ಪತನವಾಗಿದೆ. ಮುಂಬೈ ಪರ ದಾಂಡಿಗ ಹಾರ್ದಿಕ್ ಪಾಂಡ್ಯ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದ್ದಾರೆ. ಅವರು 17 ಬಾಲ್​ಗೆ 15 ರನ್ ಬಾರಿಸಿ ನಿರ್ಗಮಿಸಿದ್ದಾರೆ.

  • 13 Apr 2021 08:49 PM (IST)

    ರೋಹಿತ್ ಶರ್ಮಾ ವಿಕೆಟ್ ಪತನ!

    ಆರಂಭಿಕರಾಗಿ ಆಗಮಿಸಿದ ರೋಹಿತ್ ಶರ್ಮಾ 15 ಓವರ್​ಗಳ ವರೆಗೆ ಆಟವಾಡಿ, 43 ರನ್ ದಾಖಲಿಸಿ ಔಟ್ ಆಗಿದ್ದಾರೆ. ಕಮಿನ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಮೇಲಿಂದ ಮೇಲೆ ವಿಕೆಟ್ ಪತನವಾಗುತ್ತಿರುವ ಕಾರಣ ಮುಂಬೈ ಇಂಡಿಯನ್ಸ್ ಸುಸ್ತಾಗಿದೆ. ವಿಕೆಟ್ ಉಳಿಸಿಕೊಂಡು ರನ್ ಮೊತ್ತ ಸುಧಾರಿಸಿಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದೆ.

  • 13 Apr 2021 08:47 PM (IST)

    ಮುಂಬೈ ಇಂಡಿಯನ್ಸ್ 114/3 (15 ಓವರ್)

    ಮುಂಬೈ ಇಂಡಿಯನ್ಸ್ ತಂಡ 15 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 114 ರನ್ ದಾಖಲಿಸಿದೆ. ನಾಯಕ ರೋಹಿತ್ ಶರ್ಮಾ 43 ರನ್ ಗಳಿಸಿ ಆಡುತ್ತಿದ್ದಾರೆ. ನಿಧಾನ ಗತಿಯ ಆಟವನ್ನು ಮುಂಬೈ ನೆಚ್ಚಿಕೊಂಡಿದ್ದು, ಯಾವುದೇ ಭರ್ಜರಿ ಪ್ರದರ್ಶನ ಕಂಡುಬರುತ್ತಿಲ್ಲ.

  • 13 Apr 2021 08:38 PM (IST)

    ಮುಂಬೈ ಇಂಡಿಯನ್ಸ್ 106/3 (14 ಓವರ್)

    ಮುಂಬೈ ಇಂಡಿಯನ್ಸ್ ತಂಡ 14 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿದೆ. ತಂಡದ ಪರ ರೋಹಿತ್ ಶರ್ಮಾ 36 (27) ಹಾಗೂ ಹಾರ್ದಿಕ್ ಪಾಂಡ್ಯ 9 (12) ಕಣದಲ್ಲಿದ್ದಾರೆ.

  • 13 Apr 2021 08:36 PM (IST)

    ರೋಹಿತ್ ಸಿಕ್ಸರ್

    ಮುಂಬೈ ಇಂಡಿಯನ್ಸ್ ಕೊನೆಯ ಓವರ್​ನಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದೆ. ಪ್ರಸಿದ್ಧ್ ಕೃಷ್ಣ ಎಸೆತವನ್ನು ರೋಹಿತ್ ಶರ್ಮಾ ಸಿಕ್ಸರ್​ಗೆ ಎತ್ತಿದ್ದಾರೆ.

  • 13 Apr 2021 08:31 PM (IST)

    ಮುಂಬೈ ಇಂಡಿಯನ್ಸ್ 91/3 (12 ಓವರ್)

    ಮುಂಬೈ ಇಂಡಿಯನ್ಸ್ ಬೆನ್ನುಬೆನ್ನಿಗೆ 2 ವಿಕೆಟ್ ಕಳೆದುಕೊಂಡು ರನ್ ವೇಗ ಕಡಿಮೆ ಮಾಡಿಕೊಂಡಿದೆ. 12 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 91 ರನ್ ದಾಖಲಿಸಿದೆ. ಮುಂಬೈ ಪರ ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಆಟವಾಡುತ್ತಿದ್ದಾರೆ.

  • 13 Apr 2021 08:26 PM (IST)

    ಬಂದಂತೆ ಹೋದ ಇಶಾನ್ ಕಿಶನ್

    ಸೂರ್ಯಕುಮಾರ್ ಯಾದವ್ ಬಳಿಕ ಕ್ರೀಸ್​ಗೆ ಇಳಿದ ಇಶಾನ್ ಕಿಶನ್ ಕೂಡ ಔಟ್ ಆಗಿದ್ದಾರೆ. 3 ಬಾಲ್​ಗೆ 1 ರನ್ ಅಷ್ಟೇ ನೀಡಿ ನಿರ್ಗಮಿಸಿದ್ದಾರೆ. ಕಮಿನ್ಸ್ ಬಾಲ್​ಗೆ ಪ್ರಸಿದ್ಧ್ ಕೃಷ್ಣ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದ್ದಾರೆ.

  • 13 Apr 2021 08:23 PM (IST)

    ಮುಂಬೈ ಇಂಡಿಯನ್ಸ್ 88/1 (11 ಓವರ್)

    11 ಓವರ್​ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್ ಕಳೆದುಕೊಂಡು 88 ರನ್ ದಾಖಲಿಸಿದೆ. ಮುಂಬೈ ಪರ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಆಟವಾಡುತ್ತಿದ್ದಾರೆ.

  • 13 Apr 2021 08:21 PM (IST)

    50 ಬೆನ್ನಲ್ಲೇ ಔಟಾದ ಸೂರ್ಯಕುಮಾರ್ ಯಾದವ್

    ಶಕೀಬ್ ಅಲ್ ಹಸನ್ ಎಸೆತವನ್ನು ಸಿಕ್ಸರ್​ಗೆ ಎತ್ತಲು ಹೊರಟ ಸೂರ್ಯಕುಮಾರ್ ಯಾದವ್, ಶುಬ್​ಮನ್ ಗಿಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಯಾದವ್ 36 ಬಾಲ್​ಗೆ 56 ರನ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ಇಶಾನ್ ಕಿಶನ್, ರೋಹಿತ್ ಶರ್ಮಾಗೆ ಜೊತೆಯಾಗಿದ್ದಾರೆ.

  • 13 Apr 2021 08:19 PM (IST)

    ಮುಂಬೈ ಇಂಡಿಯನ್ಸ್ 81/1 (10 ಓವರ್)

    ಮುಂಬೈ ಇಂಡಿಯನ್ಸ್ ತಂಡ 10 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 81 ರನ್​ಗಳ ಮೊತ್ತ ದಾಖಲಿಸಿದೆ. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಕ್ರೀಸ್​ನಲ್ಲಿದ್ದಾರೆ.

  • 13 Apr 2021 08:17 PM (IST)

    ಸಿಕ್ಸರ್ ಮೂಲಕ 50 ದಾಖಲಿಸಿದ ಸೂರ್ಯಕುಮಾರ್

    ಸೂರ್ಯಕುಮಾರ್ ಯಾದವ್ ಕಮಿನ್ಸ್ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ದಾಖಲಿಸಿದ್ದಾರೆ. ಅವರು 33 ಬಾಲ್​ನಲ್ಲಿ 50 ರನ್ ಪೇರಿಸಿದ್ದಾರೆ. ಇದರಲ್ಲಿ 2 ಸಿಕ್ಸರ್ 6 ಬೌಂಡರಿ ಸೇರಿದೆ.

  • 13 Apr 2021 08:09 PM (IST)

    ಮುಂಬೈ ಇಂಡಿಯನ್ಸ್ 64/1 (8 ಓವರ್)

    ಮುಂಬೈ ಇಂಡಿಯನ್ಸ್ ತಂಡ 8 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 64 ರನ್ ಕಲೆಹಾಕಿದೆ. ಸೂರ್ಯಕುಮಾರ್ ಯಾದವ್ ಸ್ಫೋಟಕ ಆಟ ಆರಂಭಿಸಿದ್ದಾರೆ. ಅವರು 27 ಬಾಲ್​ಗೆ 40 ರನ್ ಕೂಡಿಸಿದ್ದಾರೆ. 1 ಸಿಕ್ಸರ್, 6 ಬೌಂಡರಿ ಬಾರಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಹಾಗೂ ರೋಹಿತ್ ಶರ್ಮಾ ಅರ್ಧಶತಕದ ಜೊತೆಯಾಟ ನೀಡಿದ್ದಾರೆ.

  • 13 Apr 2021 08:03 PM (IST)

    ಮುಂಬೈ ಇಂಡಿಯನ್ಸ್ 48/1 (7 ಓವರ್)

    7 ಓವರ್ ಅಂತ್ಯಕ್ಕೆ ಮುಂಬೈ ತಂಡ 1 ವಿಕೆಟ್ ನಷ್ಟಕ್ಕೆ 48 ರನ್ ಸಂಪಾದಿಸಿದೆ. ಮುಂಬೈ ಪರ ರೋಹಿತ್ ಶರ್ಮಾ 15 ಬಾಲ್ 20 ಹಾಗೂ ಸೂರ್ಯಕುಮಾರ್ ಯಾದವ್ 22 ಬಾಲ್ 25 ರನ್ ಪೇರಿಸಿದ್ದಾರೆ.

  • 13 Apr 2021 07:59 PM (IST)

    ಮುಂಬೈ ಇಂಡಿಯನ್ಸ್ 42/1 (6 ಓವರ್)

    ಮುಂಬೈ ಇಂಡಿಯನ್ಸ್ ತಂಡ 6 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 42 ರನ್ ಕಲೆಹಾಕಿದೆ. ಕೊನೆಯ ಓವರ್​ನ್ನು ವೇಗಿ ಕಮಿನ್ಸ್ ಬೌಲ್ ಮಾಡಿದ್ದಾರೆ. 6 ಓವರ್ ಮೂಲಕ ಪವರ್​ಪ್ಲೇ ಮುಕ್ತಾಯವಾಗಿದೆ. ಮುಂಬೈ ನಿಧಾನ ಆಟ ಆಡುತ್ತಿದೆ.

  • 13 Apr 2021 07:53 PM (IST)

    ಮುಂಬೈ ಇಂಡಿಯನ್ಸ್ 37/1 (5 ಓವರ್)

    ಮುಂಬೈ ಇಂಡಿಯನ್ಸ್ 5 ಓವರ್​ಗಳ ಅಂತ್ಯಕ್ಕೆ 37 ರನ್ ಕಲೆಹಾಕಿದೆ. ಆರಂಭಿಕವಾಗಿ ಡಿ ಕಾಕ್ ಔಟ್ ಆದ ಬಳಿಕ ಮುಂಬೈ ನಿಧಾನ ಗತಿಯ ಆಟವನ್ನು ನೆಚ್ಚಿಕೊಂಡಿದೆ.

  • 13 Apr 2021 07:49 PM (IST)

    ಮುಂಬೈ ಇಂಡಿಯನ್ಸ್ 28/1 (4 ಓವರ್)

    ಮುಂಬೈ ಇಂಡಿಯನ್ಸ್ ತಂಡ 4 ಓವರ್​ಗೆ 1 ವಿಕೆಟ್ ಕಳೆದುಕೊಂಡು 28 ರನ್ ದಾಖಲಿಸಿದೆ. ಮುಂಬೈ ಪರ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಕಣದಲ್ಲಿದ್ದಾರೆ. ಕೋಲ್ಕತ್ತಾ ಪರ ಕೊನೆಯ ಓವರ್​ನ್ನು ಶಕೀಬ್ ಅಲ್ ಹಸನ್ ಬೌಲ್ ಮಾಡಿದ್ದಾರೆ. ಕೋಲ್ಕತ್ತಾ ಪರ ಸ್ಪಿನ್ನರ್​ಗಳು ಬೌಲಿಂಗ್ ಆರಂಭಿಸಿದ್ದಾರೆ.

  • 13 Apr 2021 07:44 PM (IST)

    ಹರ್ಭಜನ್ ಓವರ್​ಗೆ 3 ಬೌಂಡರಿ

    ಕೋಲ್ಕತ್ತಾ ಪರ ಮೂರನೇ ಓವರ್ ಎಸೆದ ಹರ್ಭಜನ್ ಸಿಂಗ್ 3 ಬೌಂಡರಿ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಮುಂಬೈ ಮೊತ್ತ 3 ಓವರ್​ಗೆ 1 ವಿಕೆಟ್ ಕಳೆದುಕೊಂಡು 24 ರನ್ ಆಗಿದೆ. ಸೂರ್ಯಕುಮಾರ್ ಯಾದವ್ ಕ್ರೀಸ್​ನಲ್ಲಿದ್ದಾರೆ.

  • 13 Apr 2021 07:41 PM (IST)

    ಡಿ ಕಾಕ್ ಔಟ್

    ವರುಣ್ ಚಕ್ರವರ್ತಿ ಎಸೆತವನ್ನು ಸಿಕ್ಸರ್​ಗೆ ಅಟ್ಟಲು ಯತ್ನಸಿದ ಡಿ ಕಾಕ್ ತ್ರಿಪಾಠಿಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. 6 ಬಾಲ್​ಗೆ 2 ರನ್ ನೀಡಿ ನಿರ್ಗಮಿಸಿದ್ದಾರೆ.

  • 13 Apr 2021 07:38 PM (IST)

    ಮುಂಬೈ ಇಂಡಿಯನ್ಸ್ 10/1 (2 ಓವರ್)

    2 ಓವರ್​ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 10 ರನ್ ಕಲೆಹಾಕಿ ಮುಖ್ಯ 1 ವಿಕೆಟ್ ಕಳೆದುಕೊಂಡಿದೆ. ಮುಂಬೈ ಪರ ನಾಯಕ ರೋಹಿತ್ ಹಾಗೂ ವಿಕೆಟ್ ಕೀಪರ್ ಡಿ ಕಾಕ್ ಬ್ಯಾಟ್ ಬೀಸುತ್ತಿದ್ದರು. 2ನೇ ಓವರ್​ನ ಕೊನೆಯ ಎಸೆತದಲ್ಲಿ ವರುಣ್ ಚಕ್ರವರ್ತಿಗೆ ಡಿ ಕಾಕ್ ವಿಕೆಟ್ ಒಪ್ಪಿಸಿದ್ದಾರೆ.

  • 13 Apr 2021 07:36 PM (IST)

    ರೋಹಿತ್ ಶರ್ಮಾ ಫೋರ್

    ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮಾ ಮೊದಲ ಬೌಂಡರಿ ಸಿಡಿಸಿದ್ದಾರೆ. ಎರಡನೇ ಓವರ್​ನ ಮೊದಲ ಎಸೆತವನ್ನು ಫೋರ್ ಬಾರಿಸಿದ್ದಾರೆ. ವರುಣ್ ಚಕ್ರವರ್ತಿ ಬೌಲಿಂಗ್ ಮಾಡುತ್ತಿದ್ದಾರೆ.

  • 13 Apr 2021 07:34 PM (IST)

    ಬ್ಯಾಟಿಂಗ್ ಆರಂಭಿಸಿದ ರೋಹಿತ್- ಡಿ ಕಾಕ್

    ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮಾ, ಡಿ ಕಾಖ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಹರ್ಭಜನ್ ಸಿಂಗ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ. 1 ಓವರ್​ನ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ಮುಂಬೈ 3 ರನ್ ಕಲೆಹಾಕಿದೆ.

  • 13 Apr 2021 07:19 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್

    ನಿತೀಶ್ ರಾಣಾ, ಶುಬ್​ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯೊನ್ ಮೋರ್ಗಾನ್ (ನಾಯಕ), ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ಪ್ಯಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ಪ್ರಸಾದ್ ಕೃಷ್ಣ, ವರುಣ್ ಚಕ್ರವರ್ತಿ

    ಕೋಲ್ಕತ್ತಾ ಭಾನುವಾರ ಸನ್​ರೈಸರ್ಸ್ ವಿರುದ್ಧದ ತಂಡವನ್ನೇ ಇಂದೂ ಉಳಿಸಿಕೊಂಡಿದೆ. ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ

  • 13 Apr 2021 07:17 PM (IST)

    ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

    ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ

  • 13 Apr 2021 07:08 PM (IST)

    ಪಂದ್ಯಕ್ಕೂ ಮುನ್ನ ಕೋಲ್ಕತ್ತಾ ಆಟಗಾರರು

    ಶಕೀಬ್ ಅಲ್ ಹಸನ್ ಇಂದು ಕೋಲ್ಕತ್ತಾ ಪರ 50ನೇ ಪಂದ್ಯ ಆಡುತ್ತಿದ್ದಾರೆ.

  • 13 Apr 2021 07:05 PM (IST)

    ಕೋಲ್ಕತ್ತಾ ಟಾಸ್ ವಿನ್- ಬೌಲಿಂಗ್ ಆಯ್ಕೆ

    ಮುಂಬೈ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯಾಟ 7.30ಕ್ಕೆ ಆರಂಭವಾಗಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡಲಿದೆ. ಇದಕ್ಕೂ ಮೊದಲಿನ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡಗಳು ಬೌಲ್ ಮಾಡಲು ಒಲವು ತೋರಿವೆ. ಇಂದೂ ಹಾಗೇ ಆಗಿದೆ.

  • 13 Apr 2021 06:38 PM (IST)

    ಗೆಲುವಿನ ಲೆಕ್ಕಾಚಾರ ಹೀಗಿದೆ

    ಕೋಲ್ಕತ್ತಾ ಹಾಗೂ ಮುಂಬೈ ನಡುವಿನ ಇದುವರೆಗೆ ಆಡಿದ ಪಂದ್ಯಾಟಗಳ ಪೈಕಿ, ಮುಂಬೈ ಇಂಡಿಯನ್ಸ್ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದೆ. ಮುಂಬೈ 21 ಸಲ ಗೆಲುವು ಸಾಧಿಸಿದ್ದರೆ, ಕೋಲ್ಕತ್ತಾ ತಂಡ ಕೇವಲ 6 ಬಾರಿ ಗೆದ್ದಿದೆ. ಇಂದಿನ ಗೆಲುವು ಯಾರಿಗೆ?

  • 13 Apr 2021 06:36 PM (IST)

    ಕೆಕೆಆರ್-ಎಮ್​ಐ ಪಂದ್ಯದ ಲೈವ್ ಅಪ್ಡೇಟ್ ನೋಡಲು ಸಿದ್ಧರಾಗಿ..

    ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಾಟಕ್ಕೆ ಚೆನ್ನೈನ ಎಮ್.ಎ. ಚಿದಂಬರಂ ಕ್ರೀಡಾಂಗಣ ಸಿದ್ಧವಾಗಿದೆ..

  • Published On - Apr 13,2021 11:24 PM

    Follow us
    29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
    29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
    ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
    ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
    ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
    ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
    ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
    ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
    ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
    ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
    ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
    ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
    ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
    ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
    ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
    ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
    ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
    ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
    ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
    ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ