ಕೊರೊನಾ ಕಡಿಮೆ ಮಾಡಲು ಕೆಂಪಿರುವೆಯ ಚಟ್ನಿ; ಅರ್ಜಿ ತಿರಸ್ಕರಿಸಿದ ಒಡಿಶಾ ಹೈಕೋರ್ಟ್

ಕೊರೊನಾ ಕಡಿಮೆ ಮಾಡಲು ಕೆಂಪಿರುವೆಯ ಚಟ್ನಿ; ಅರ್ಜಿ ತಿರಸ್ಕರಿಸಿದ ಒಡಿಶಾ ಹೈಕೋರ್ಟ್
ಒಡಿಶಾ ಹೈಕೋರ್ಟ್ ಮತ್ತು ಕೆಂಪಿರುವೆ

ಕೊರೊನಾ ಲಸಿಕೆ ಕುರಿತು ಓಡಿಶಾ ಹೈಕೋರ್ಟ್​ನಲ್ಲಿ ಸ್ವಾರಸ್ಯಕರ ಪ್ರಸಂಗವೊಂದು ನಡೆದಿದೆ. ಕೊರೊನಾ ಕಡಿಮೆ ಮಾಡಲು ಔಷಧವಾಗಿ ಕೆಂಪಿರುವೆಯ ಚಟ್ನಿಯನ್ನು ಸೋಂಕಿತರಿಗೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆದಿದೆ.

guruganesh bhat

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 13, 2021 | 3:09 PM

ಭುವನೇಶ್ವರ: ಕೊವಿಡ್ 19 ಸೋಂಕಿನ ಲಸಿಕೆ ಕುರಿತು ದೇಶದಲ್ಲೆಡೆ ಗಲಾಟೆ ಆರಂಭವಾಗಿದೆ. ಒಂದಡೆ ಕೆಲವು ರಾಜ್ಯಗಳು ತಮಗೆ ಲಸಿಕೆ ಕೊರತೆಯಾಗಿದೆ ಎಂದು ದೂರುತ್ತಿದ್ದರೆ ಇನ್ನೊಂದೆಡೆ ‘ರಾಜ್ಯಗಳು ಬೇಕಂದೇ ಲಸಿಕೆ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ’ ಎಂದು ಕೇಂದ್ರ ಸರ್ಕಾರ ದೂರಿದೆ. ಇನ್ನೂ ಕೆಲವು ಲಸಿಕೆಗಳು ಸೆಪ್ಟೆಂಬರ್ ವೇಳೆಗೆ ಭಾರತಕ್ಕೆ ದೊರೆಯುವ ಕುರಿತೂ ಮಾತು ಕೇಳಿಬರುತ್ತಿದೆ. ಈ ಬೆನ್ನಲ್ಲೇ ಕೊರೊನಾ ಲಸಿಕೆ ಕುರಿತು ಒಡಿಶಾ ಹೈಕೋರ್ಟ್​ನಲ್ಲಿ ಸ್ವಾರಸ್ಯಕರ ಪ್ರಸಂಗವೊಂದು ನಡೆದಿದೆ. ಕೊರೊನಾ ಕಡಿಮೆ ಮಾಡಲು ಔಷಧವಾಗಿ ಕೆಂಪಿರುವೆಯ ಚಟ್ನಿಯನ್ನು ಸೋಂಕಿತರಿಗೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಒಡಿಶಾ ಹೈಕೋರ್ಟ್ ವಜಾ ಮಾಡಿದೆ.  ಅಲ್ಲದೇ, ‘ಸಾಂಪ್ರದಾಯಿಕ ಜ್ಞಾನಾಧಾರಿತ ಆಹಾರ ಪದ್ಧತಿಯ ಬಗ್ಗೆ ಪ್ರತಿಕ್ರಿಯೆ ನೀಡಲು ಕೋರ್ಟ್ ಸಮರ್ಥವಾಗಿಲ್ಲ’ ಎಂದು ತಿಳಿಸಿದೆ.

ಬತುಡಿ ಎಂಬ ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಸೇರಿರುವ ನಾಯಧರ್ ಪಧಿಯಲ್ ಎಂಬುವವರು ಕೊರೊನಾ ಸೋಂಕು ತಡೆಯಲು ಕೆಂಪಿರುವೆಯ ಚಟ್ನಿ ಬಳಕೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಎಂಜಿನಿಯರ್ ಮತ್ತು ಸಂಶೋಧಕರೂ ಆಗಿರುವ ಅವರು ಕೆಂಪುಚಟ್ನಿ ಕೊವಿಡ್-19 ಸೋಂಕಿಗೆ ಪರಮೌಷಧ ಎಂದು ವಾದಿಸಿದ್ದರು. ನಾಯಧರ್ ಪಧಿಯಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಈಗಾಗಲೇ ಕೇಂದ್ರ ಆಯುಷ್ ಸಚಿವಾಲಯ ತಿರಸ್ಕರಿಸಿತ್ತು. ಕೌನ್ಸಿಲ್ ಆಫ್ ಇಂಡಸ್ಟ್ರಿಯಲ್ ಆ್ಯಂಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆ ಸಹ ಈ ಸರ್ಜಿಯನ್ನು ತಿರಸ್ಕರಿಸಿತ್ತು. ಈ ಅಂಶಗಳನ್ನು ಪರಿಗಣಿಸಿದ ಒಡಿಶಾ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.

ಕೆಂಪಿರುವೆ ಚಟ್ನಿ ಕೊರೊನಾ ವೈರಾಣುವಿನ ವಿರುದ್ಧ ಹೋರಾಡುತ್ತದೆ ಎಂದು ಕಳೆದ ಜೂನ್​ ತಿಂಗಳಲ್ಲಿ ಇಂಜಿನಿಯರ್​ ಮತ್ತು ಸಂಶೋಧಕ ನಾಯಧರ್ ಪಡಿಯಾಲ್ ಪ್ರತಿಪಾದಿಸಿದ್ದರು. ಒಡಿಶಾ ಮತ್ತು ಛತ್ತೀಸ್​ಗಡ ರಾಜ್ಯಗಳಲ್ಲಿ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಔಷಧಿಯಾಗಿ ಕೆಂಪಿರುವೆ ಮತ್ತು ಹಸಿಮೆಣಸನ್ನು ಹಾಕಿ ಮಾಡಲಾದ ಚಟ್ನಿ ಸೇವಿಸಲಾಗುತ್ತದೆ. ಆದ್ದರಿಂದ ಇದು ಕೊರೊನಾಕ್ಕೂ ರಾಮಬಾಣ ಎಂದು ಹೇಳಿದ್ದರು.

ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸ್ ಹೇಳುವ ಪ್ರಕಾರ ಕೊವಿಡ್ ಸೋಂಕು ಅಥವಾ ಇನ್ನಾವುದೇ ರೋಗಕ್ಕೆ ಕೆಂಪಿರುವೆಯ ಚಟ್ನಿ ಔಷಧ ಎಂದು ಯಾವುದೇ ಆಯುರ್ವೇದಕ್ಕೆ ಸಂಬಂಧಿಸಿದ ಗ್ರಂಥಗಳಲ್ಲೂ ಇಲ್ಲವಂತೆ. ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ  1940 ಮತ್ತು 1945ರಲ್ಲಿ ಉಲ್ಲೇಖಿಸಿದ ಆಯುರ್ವೇದಕ್ಕೆ ಸಂಬಂಧಿಸಿದ ಯಾವುದೇ ಗ್ರಂಥದಲ್ಲೂ ಕೆಂಪಿರುವೆಯ ಬಳಕೆಯ ಉಲ್ಲೆಖವಿಲ್ಲ. ಇದರ ಪ್ರಕಾರ ಕೊವಿಡ್ ಸೋಂಕು ತಗುಲಿದ ರೋಗಿಗಳಿಗೆ ಕೆಂಪಿರುವೆಯ ಚಟ್ನಿ ಅಥವಾ ಕೆಂಪಿರುವೆಯ ಸೂಪ್​ನ್ನು ಕುಡಿಸುವುದು ಆಯುರ್ವೇದದ ವ್ಯಾಪ್ತಿಯಲ್ಲಿ ಒಳಪಡುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

ಕೆಂಪಿರುವೆ ಚಟ್ನಿಯಲ್ಲಿ ಫಾರ್ಮಿಕ್ ಆ್ಯಸಿಡ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್​ ಬಿ12, ಜಿಂಕ್ ಮತ್ತು ಕಬ್ಬಿಣಾಂಶ ಅಧಿಕವಾಗಿರುತ್ತದೆ. ಇದು ಆರೋಗ್ಯ ವರ್ಧನೆಗೆ ಸಹಕಾರಿ ಮತ್ತು ಕೊವಿಡ್​ ಕಾಯಿಲೆಗೆ ಪರಿಣಾಮಕಾರಿ ಮದ್ದು ಎಂಬ ವಿಷಯದ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

ಇದನ್ನೂ ಓದಿ: ‘ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಸುತ್ತೀರಿ?‘: ಸುಪ್ರೀಂಕೋರ್ಟ್

ಕುರಾನ್​ನಲ್ಲಿನ ಕೆಲವು ಭಾಗಗಳು ದೇಶದ ಕಾನೂನಿಗೆ ವಿರುದ್ಧ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿ 50 ಸಾವಿರ ದಂಡ ವಿಧಿಸಿದ ಸುಪ್ರೀಂಕೋರ್ಟ್

(Orissa High Court dismissed use of Red ant chutney as Covid 19 cure)

Follow us on

Related Stories

Most Read Stories

Click on your DTH Provider to Add TV9 Kannada