Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ; ಗಿನ್ನೆಸ್‌ ದಾಖಲೆಗೆ ಭಾಜನರಾದ ಕ್ಷೌರಿಕ ವೃತ್ತಿಯನ್ನೇ ಬದುಕಾಗಿಸಿಕೊಂಡ ಹಿರಿ ಜೀವ

ವಯಸ್ಸು ಕೇವಲ ಒಂದು ಸಂಖ್ಯೆ, ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂದು ಹೇಳ್ತಾರೆ. ಈ ಮಾತನ್ನು ಜಪಾನ್‌ನ 108 ವರ್ಷದ ಅಜ್ಜಿ ನಿಜವೆಂದು ಸಾಬೀತುಪಡಿಸಿದ್ದಾರೆ. 108 ರ ಇಳಿ ವಯಸ್ಸಿನಲ್ಲೂ ಕೌರಿಕ ವೃತ್ತಿಯನ್ನು ಮಾಡುತ್ತಾ ಸ್ವಾವಲಂಬಿ ಬದುಕನ್ನು ನಡೆಸುತ್ತಿರುವ ಶತಾಯುಷಿ ಅಜ್ಜಿ ವಿಶ್ವ ಹಿರಿಯ ಮಹಿಳಾ ಕ್ಷೌರಿಕ ಎಂಬ ಬಿರುದನ್ನು ಗಳಿಸಿದ್ದಾರೆ. 94 ವರ್ಷಗಳಿಂದ ಈ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿರುವ ಇವರು ಇದೀಗ ಗಿನ್ನೆಸ್‌ ದಾಖಲೆಗೆ ಭಾಜನರಾಗಿದ್ದಾರೆ. ಈ ಸುದ್ದಿ ಇದೀಗ ವೈರಲ್‌ ಆಗುತ್ತಿದೆ.

Viral: ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ; ಗಿನ್ನೆಸ್‌ ದಾಖಲೆಗೆ ಭಾಜನರಾದ ಕ್ಷೌರಿಕ ವೃತ್ತಿಯನ್ನೇ ಬದುಕಾಗಿಸಿಕೊಂಡ ಹಿರಿ ಜೀವ
ವೈರಲ್​ ಪೋಸ್ಟ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 14, 2025 | 5:43 PM

ಜಪಾನ್‌, ಮಾ. 14: ಸಣ್ಣ ಪುಟ್ಟ ಕಷ್ಟಗಳು ಬಂದರೂ ಸಾಕೂ ಜೀವವನೇ (Life) ಸಾಕಾಗಿದೆ ಎಂದು ತಲೆ ಕೆಡಿಸಿಕೊಳ್ಳುವ ಯುವಜನತೆಯ ಮಧ್ಯೆ, ವಯಸ್ಸಾದ್ರೂ (age) ಕೂಡಾ ತಮ್ಮ ಜೀವನೋತ್ಸಾಹದ ಮೂಲಕವೇ ಚಿರ ಯುವಕರಂತೆ ಜೀವನ ಸಾಗಿಸುತ್ತಿರುವ ಅದೆಷ್ಟೋ ಹಿರಿಯರಿದ್ದಾರೆ. ಅವರುಗಳಲ್ಲಿ ಜಪಾನಿನ ಈ ಶತಾಯುಷಿ ಅಜ್ಜಿ (Elderly woman) ಕೂಡಾ ಒಬ್ಬ್ರು. 108 ರ ಇಳಿ ವಯಸ್ಸಿನಲ್ಲೂ ಕೌರಿಕ (baeber) ವೃತ್ತಿಯನ್ನು ಮಾಡುತ್ತಾ ಸ್ವಾವಲಂಬಿ ಬದುಕನ್ನು ನಡೆಸುತ್ತಿರುವ ಈ ಶತಾಯುಷಿ ಅಜ್ಜಿ ವಿಶ್ವ ಹಿರಿಯ ಮಹಿಳಾ ಕ್ಷೌರಿಕ (world’s oldest female barber) ಎಂಬ ಬಿರುದನ್ನು ಗಳಿಸಿದ್ದಾರೆ. 94 ವರ್ಷಗಳಿಂದ ಈ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿರುವ ಇವರು ಇದೀಗ ಗಿನ್ನೆಸ್‌ (Guinness) ದಾಖಲೆಗೆ (record) ಭಾಜನರಾಗಿದ್ದಾರೆ. ಈ ಸುದ್ದಿ ಇದೀಗ ವೈರಲ್‌ ಆಗುತ್ತಿದೆ.

ಸುದೀರ್ಘ 94 ವರ್ಷಗಳಿಂದ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿರುವ ಜಪಾನಿನ ಶಿಟ್ಸುಯಿ ಹಕೋಯಿಶಿ ಎಂಬ 108 ವರ್ಷ ವಯಸ್ಸಿನ ಅಜ್ಜಿ ವಿಶ್ವದ ಅತ್ಯಂತ ಹಿರಿಯ ಮಹಿಳಾ ಕ್ಷೌರಿಕ ಎಂಬ ಬಿರುದನ್ನು ಗಳಿಸಿದ್ದಾರೆ. ಮಾರ್ಚ್‌ 05 ರಂದು ಜಪಾನಿನ ತೋಚಿಗಿ ಪ್ರಾಂತ್ಯದ ನಕಗಾವಾದಲ್ಲಿ ನಡೆದ ಸಮಾರಂಭದಲ್ಲಿ ಗಿನ್ನೆಸ್‌ ದಾಖಲೆಗೆ ಭಾಜನರಾಗಿದ್ದಾರೆ.

1931 ರಲ್ಲಿ ಕ್ಷೌರಿಕ ವೃತ್ತಿಯನ್ನು ಆರಂಭಿಸಿದ ಇವರು ಇಂದಿಗೂ ಈ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 1939 ರಲ್ಲಿ ತಮ್ಮ ಪತಿಯ ಜೊತೆ ಸೇರಿ ಟೋಕಿಯೋದಲ್ಲಿ ಕ್ಷೌರದಂಗಡಿಯನ್ನು ತೆರೆದರು. ಆದ್ರೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡರು ನಂತರ ಇವರು ನಕಗಾವಾಗೆ ಬಂದು ಅಲ್ಲೊಂದು ಸಲೂನ್‌ ತೆರೆಯುತ್ತಾರೆ. ಪ್ರಸ್ತುತ ಇವರು ಒಂದು ಸಣ್ಣ ಸಲೂನ್‌ನ ಮಾಲೀಕರಾಗಿದ್ದು, ಅಲ್ಲಿ ಅವರು ದಶಕಗಳಿಂದ ಕ್ಷೌರಿಕ ಕೆಲಸವನ್ನು ಮಾಡುತ್ತಿದ್ದಾರೆ. ಈ ವೃತ್ತಿಯನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿರುವ ಈ ಶತಾಯುಷಿ ಅಜ್ಜಿ ಇಂದಿಗೂ ಅದೇ ಶಕ್ತಿ, ಉತ್ಸಾಹದಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕೆಲಸವನ್ನು ತುಂಬಾ ಪ್ರೀತಿಸುವ ಇವರು ಇದುವೇ ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯದ ರಹಸ್ಯ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಛೀ ಛೀ…. ರೆಸ್ಟೋರೆಂಟಲ್ಲಿ ಗ್ರಾಹಕರು ಕುಡಿಯೋ ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿದ ಪುಂಡ ಯುವಕರು; ವಿಡಿಯೋ ವೈರಲ್‌

ಶತಾಯುಷಿ ಅಜ್ಜಿ ದೀರ್ಘಾಯುಷ್ಯದ ರಹಸ್ಯವೇನು?

• ಇವರು ಪ್ರತಿದಿನ ಬೇಗನೆ ಎದ್ದು ಲಘು ವ್ಯಾಯಾಮ ಮಾಡಿ ನಂತರ ತನ್ನ ಸಲೂನ್ ಕೆಲಸವನ್ನು ನೋಡಿಕೊಳ್ಳುತ್ತಾರೆ.

• ಆರೋಗ್ಯಕರ ಆಹಾರ: ಜಪಾನಿನ ಆಹಾರವನ್ನು ವಿಶ್ವದ ಅತ್ಯಂತ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಇವರು ಕೂಡಾ ಮನೆಯಲ್ಲಿ ಬೇಯಿಸಿದ ಸಮತೋಲಿತ ಆಹಾರವನ್ನು ಸೇವಿಸುತ್ತಾರೆ.

• ಸಕಾರಾತ್ಮಕ ಚಿಂತನೆ: ಈ ವಯಸ್ಸಿನಲ್ಲೂ ಅವರ ಆತ್ಮವಿಶ್ವಾಸ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಸಕಾರಾತ್ಮಕ ಯೋಚನೆ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಗುಟ್ಟಾಗಿದೆ.

• ಕೆಲಸದ ಮೇಲಿನ ಸಮರ್ಪಣೆ: ತನ್ನ ದೇಹವು ತನಗೆ ಬೆಂಬಲ ನೀಡುವವರೆಗೆ, ತನ್ನ ಗ್ರಾಹಕರಿಗೆ ಸೇವೆ ಸಲ್ಲಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಅವರು ಹೇಳುತ್ತಾರೆ. ತಮ್ಮ ಕೆಲಸವನ್ನು ತುಂಬಾ ಪ್ರೀತಿಸುವ ಇವರು ಇದುವೇ ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯದ ರಹಸ್ಯ ಎಂದು ಅವರು ಹೇಳುತ್ತಾರೆ.

ಶತಾಯುಷಿ ಅಜ್ಜಿಯ ಈ ಸ್ಪೂರ್ತಿದಾಯಕ ಕಥೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಅನೇಕರು ಅವರನ್ನು ಇವರೇ ನಿಜವಾದ ಸ್ಫೂರ್ತಿ ಎಂದು ಹೇಳಿದರೆ ಇನ್ನೂ ಅನೇಕರು ಈ ಶತಾಯುಷಿ ಅಜ್ಜಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ತಲೆ ಬಾಗಿದ್ದಾರೆ. ಹೀಗೆ ಇಳಿ ವಯಸ್ಸಿನಲ್ಲಿ ವಿಶ್ವ ದಾಖಲೆ ಮಾಡುವ ಮೂಲಕ ಕನಸುಗಳು ಮತ್ತು ಕೆಲಸಕ್ಕೆ ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಜಪಾನಿನ ಈ ಅಜ್ಜಿ ಸಾಬೀತುಪಡಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾರಿನಿಂದ ಗುದ್ದಿ ಕೊಲ್ಲಲು ಯತ್ನ: ಬಚಾವಾದ ಬಗ್ಗೆ ಮುರಳಿ ಪ್ರಸಾದ್ ಮಾತು
ಕಾರಿನಿಂದ ಗುದ್ದಿ ಕೊಲ್ಲಲು ಯತ್ನ: ಬಚಾವಾದ ಬಗ್ಗೆ ಮುರಳಿ ಪ್ರಸಾದ್ ಮಾತು
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?