ಗಾಯಕ್ಕೆ ಚಿಕಿತ್ಸೆ ಪಡೆಯಲು ಬಾಂಗ್ಲಾದೇಶದ ಮೆಡಿಕಲ್ ಶಾಪ್‌ಗೆ ನುಗ್ಗಿದ ಮಂಗ!
ಗಾಯಗೊಂಡ ಮಂಗವು ಗಾಯಕ್ಕೆ ಚಿಕಿತ್ಸೆ ಪಡೆಯಲು ಸ್ವತಃ ಮೆಡಿಕಲ್ ಶಾಪಿಗೆ ನಡೆದುಕೊಂಡು ಹೋಯಿತು. ಒಬ್ಬ ವ್ಯಕ್ತಿ ಮಂಗನ ಗಾಯಕ್ಕೆ ಮುಲಾಮು ಹಚ್ಚುತ್ತಿರುವುದು ಕಂಡುಬಂದರೆ, ಮತ್ತೊಬ್ಬ ವ್ಯಕ್ತಿ ತನ್ನ ಕೈಗಳಿಂದ ಮಂಗವನ್ನು ಹಿಡಿದುಕೊಂಡು ಉಪಚಾರ ಮಾಡುವುದನ್ನು ನೋಡಬಹುದು. ನಂತರ, ಜನರು ಗಾಯಗೊಂಡ ಮಂಗಕ್ಕೆ ಎಚ್ಚರಿಕೆಯಿಂದ ಬ್ಯಾಂಡೇಜ್ ಸುತ್ತುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗಿದೆ.

ಢಾಕಾ: ಬಾಂಗ್ಲಾದೇಶದ ಮೆಹೆರ್‌ಪುರದಲ್ಲಿ ಕೋತಿಯೊಂದು ಮೆಡಿಕಲ್ ಶಾಪ್ ಒಳಗೆ ನುಗ್ಗಿದ್ದು, ಔಷಧ ವ್ಯಾಪಾರಿ ಮತ್ತು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ. ಒಬ್ಬ ವ್ಯಕ್ತಿ ಮಂಗನ ಗಾಯಕ್ಕೆ ಮುಲಾಮು ಹಚ್ಚುತ್ತಿರುವುದು ಕಂಡುಬಂದರೆ, ಮತ್ತೊಬ್ಬ ವ್ಯಕ್ತಿ ತನ್ನ ಕೈಗಳಿಂದ ಮಂಗವನ್ನು ಹಿಡಿದುಕೊಂಡು ಉಪಚಾರ ಮಾಡುವುದನ್ನು ನೋಡಬಹುದು. ನಂತರ, ಜನರು ಗಾಯಗೊಂಡ ಮಂಗಕ್ಕೆ ಎಚ್ಚರಿಕೆಯಿಂದ ಬ್ಯಾಂಡೇಜ್ ಸುತ್ತುತ್ತಿರುವುದನ್ನು ಕಾಣಬಹುದು.
ಈ ತಿಂಗಳು ಬಾಂಗ್ಲಾದೇಶದ ಮೆಹೆರ್‌ಪುರ್ ಪಟ್ಟಣದಲ್ಲಿ ಒಂದು ವಿಲಕ್ಷಣ ಆದರೆ ಹೃದಯಸ್ಪರ್ಶಿ ಘಟನೆ ನಡೆಯಿತು. ಗಾಯಗೊಂಡ ಮಂಗವೊಂದು ಅಗತ್ಯ ಆರೈಕೆಗಾಗಿ ವೈದ್ಯಕೀಯ ಅಂಗಡಿಗೆ ಧಾವಿಸಿತು. ಆ ಪ್ರದೇಶದ ಅಲ್ಹೆರಾ ಫಾರ್ಮಸಿಯಲ್ಲಿ ಈ ದೃಶ್ಯಗಳು ಕಂಡುಬಂದವು. ಆ ಪ್ರಾಣಿ ಗಾಯಕ್ಕೆ ಚಿಕಿತ್ಸೆ ಪಡೆಯಲು ಅಲ್ಲಿಗೆ ಬಂದಿರುವುದನ್ನು ತೋರಿಸುತ್ತದೆ.
ಗಾಯಗೊಂಡ ಮಂಗವು ಗಾಯಕ್ಕೆ ಚಿಕಿತ್ಸೆ ಪಡೆಯಲು ಸ್ವತಃ ಮೆಡಿಕಲ್ ಶಾಪಿಗೆ ನಡೆದುಕೊಂಡು ಹೋಯಿತು. ಅಂಗಡಿಯನ್ನು ಪ್ರವೇಶಿಸುವ ಮೊದಲು ಮಂಗಕ್ಕೆ ಗಾಯ ಹೇಗೆ ಆಯಿತು ಅಥವಾ ಅದು ಎಲ್ಲಿಂದ ಬಂದಿತು ಎಂಬುದು ತಿಳಿದಿಲ್ಲ.
View this post on Instagram
ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಅದರ ಗಾಯಕ್ಕೆ ಮುಲಾಮು ಹಚ್ಚುವುದನ್ನು ನೋಡಬಹುದು. ಮತ್ತೊಬ್ಬ ವ್ಯಕ್ತಿ ಕೋತಿಯನ್ನು ತನ್ನ ಕೈಗಳಿಂದ ಹಿಡಿದುಕೊಂಡು ಸಹಾಯ ಮಾಡುತ್ತಿದ್ದರು. ಆ ಕೋತಿ ಬ್ಯಾಂಡೇಜ್ ಸುತ್ತಲು ಸುಮ್ಮನೆ ಸಹಕರಿಸಿದ್ದನ್ನು ನೋಡಿ ಸುತ್ತಮುತ್ತಲಿನ ಜನರು ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ: ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ; ವಿಡಿಯೋ ವೈರಲ್
ವೀಡಿಯೊದಲ್ಲಿ, ಕೋತಿ ನೋವಿನಿಂದ ಔಷಧಾಲಯಕ್ಕೆ ಕಾಲಿಟ್ಟ ನಂತರ ವ್ಯಕ್ತಿಗಳು ಅದನ್ನು ಸಾಂತ್ವನ ಹೇಳುವುದನ್ನು ಸಹ ಕಾಣಬಹುದು. ಪ್ರಥಮ ಚಿಕಿತ್ಸಾ ಡ್ರೆಸ್ಸಿಂಗ್ ನೀಡುವ ಮೊದಲು ಕೋತಿಯನ್ನು ನಿಧಾನವಾಗಿ ತಟ್ಟುವುದನ್ನು ಕೂಡ ನೋಡಬಹುದು. ಈ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:23 pm, Fri, 14 March 25