Viral: ಬೀದಿ ನಾಯಿಗಳ ದಾಳಿಯಿಂದ ಪಾರಾಗಲು ಯತ್ನಿಸುತ್ತಿದ್ದ ಸೆಕ್ಯುರಿಟಿ ಗಾರ್ಡ್ ಮೇಲೆ ದರ್ಪ ತೋರಿದ ಶ್ವಾನ ಪ್ರೇಮಿ; ವಿಡಿಯೋ ವೈರಲ್
ಬೀದಿ ನಾಯಿಗಳ ಮನುಷ್ಯರ ಮೇಲೆ ದಾಳಿ ಮಾಡುವಂತಹ ಪ್ರಕರಣಗಳು ಇತ್ತೀಚಿಗೆ ತೀರಾ ಹೆಚ್ಚಾಗುತ್ತಿದೆ. ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಬೀದಿ ನಾಯಿಗಳ ಹಿಂಡೊಂದು ಸೆಕ್ಯುರಿಟಿ ಗಾರ್ಡ್ ಮೇಲೆ ದಾಳಿ ಮಾಡಲು ಮುಂದಾಗಿದೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಲುವಾಗಿ ಕೈಯಲ್ಲಿದ್ದ ಕೋಲು ತೆಗೆದುಕೊಂಡು ನಾಯಿಗಳಿಗೆ ಹೊಡೆಯಲು ಮುಂದಾದಾಗ ಯುವಕನೊಬ್ಬ ಬಂದು ರಕ್ಷಣೆ ನೀಡುವ ಬದಲು ಸೆಕ್ಯುರಿಟಿ ಗಾರ್ಡ್ ಮೇಲೆ ಕೈ ಮಾಡಿ ಅಮಾನವೀಯ ವರ್ತನೆ ತೋರಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಮುಂಬೈ, ಮಾ. 09: ಕಷ್ಟಕಾಲದಲ್ಲಿ ಮನುಷ್ಯನಾದವನು ಇನ್ನೊಬ್ಬ ಮನುಷ್ಯನಿಗೆ ಸಹಾಯ ಮಾಡ್ಬೇಕು ಎಂದು ಹೇಳ್ತಾರೆ. ಆದ್ರೆ ಇಂದಿನ ದಿನಗಳಲ್ಲಿ ಮನುಷ್ಯ ಸಹಾಯ ಮಾಡುವ ಬದಲು ಅಮಾನವೀಯ ವರ್ತನೆಯನ್ನು ತೋರುವುದೇ ಹೆಚ್ಚಾಗಿದೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಕಷ್ಟದಲ್ಲಿರುವ ಸೆಕ್ಯುರಿಟಿ ಗಾರ್ಡ್‌ಗೆ ಸಹಾಯ ಮಾಡುವುದು ಬಿಟ್ಟು, ಆ ಬಡ ಜೀವದ ಮೇಲೆಯೇ ಯುವಕನೊಬ್ಬ ದರ್ಪ ತೋರಿದ್ದಾನೆ. ಹೌದು ಬೀದಿ ನಾಯಿಗಳ ಹಿಂಡೊಂದು ಸೆಕ್ಯುರಿಟಿ ಗಾರ್ಡ್ ಮೇಲೆ ದಾಳಿ ಮಾಡಲು ಮುಂದಾದ ಸಂದರ್ಭದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಲುವಾಗಿ ಕೈಯಲ್ಲಿದ್ದ ಕೋಲು ತೆಗೆದುಕೊಂಡು ನಾಯಿಗಳಿಗೆ ಹೊಡೆಯಲು ಮುಂದಾದಾಗ ಶ್ವಾನ ಪ್ರೇಮಿಯೊಬ್ಬ ಬಂದು ರಕ್ಷಣೆ ನೀಡುವ ಬದಲು ಸೆಕ್ಯುರಿಟಿ ಗಾರ್ಡ್ ಮೇಲೆ ಕೈ ಮಾಡಿ ಅಮಾನವೀಯ ವರ್ತನೆ ತೋರಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ಅಮಾನವೀಯ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದ್ದು, ಅಪಾರ್ಟ್‌ಮೆಂಟ್ ಆವರಣದಲ್ಲಿ ಬೀದಿ ನಾಯಿಗಳ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಾಯಿಗಳ ಮೇಲೆ ಕೋಲು ಬೀಸಿದ ಸೆಕ್ಯುರಿಟ್ ಗಾರ್ಡ್ ಮೇಲೆ ಕೈ ಮಾಡಿ ಶ್ವಾನ ಪ್ರೇಮಿಯೊಬ್ಬ ಅಮಾನವೀಯ ವರ್ತನೆ ತೋರಿದ್ದಾನೆ. ಸಿಸಿ ಟಿವಿಯಲ್ಲಿ ಸೆರೆಯಾದ ಈ ದೃಶ್ಯ ಇದೀಗ ವೈರಲ್ ಆಗುತ್ತಿದೆ.
A guy Beats innocent Watchman for Defending himself Against Dogs Attack, Andheri Mumbai pic.twitter.com/G5CrGxf2g5
— Ghar Ke Kalesh (@gharkekalesh) March 6, 2025
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸೆಕ್ಯುರಿಟಿ ಗಾರ್ಡ್ ತನ್ನ ಪಾಡಿಗೆ ನಿಂತಿದ್ದ ಸಂದರ್ಭದಲ್ಲಿ ಏಳೆಂಟು ಬೀದಿ ನಾಯಿಗಳು ಆ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾದಂತಹ ದೃಶ್ಯವನ್ನು ಕಾಣಬಹುದು. ಈ ದಾಳಿಯಿಂದ ಪಾರಾಗಲು ಗಾರ್ಡ್ ತನ್ನ ಕೈಯಲ್ಲಿದ್ದ ಕೋಲನ್ನು ಬೀಸಿದ್ದು, ಇದರಿಂದ ಕೋಪಗೊಂಡ ಶ್ವಾನ ಪ್ರೇಮಿಯೊಬ್ಬ ನಾಯಿಗಳನ್ನು ಓಡಿಸುವ ಬದಲು ಗಾರ್ಡ್ ಮೇಲೆಯೇ ಕೈ ಮಾಡಿ, ದರ್ಪ ತೋರಿದ್ದಾನೆ.
ಇದನ್ನೂ ಓದಿ: ಕನ್ನಡವನ್ನು ಬೆಳೆಸುವ ಅಗತ್ಯವಿಲ್ಲ, ಬಳಸಬೇಕು : ಆಂಧ್ರ ವ್ಯಕ್ತಿಗೆ ಕನ್ನಡದಲ್ಲೇ ವ್ಯಾಪಾರ ಮಾಡುವ ಟ್ರಿಕ್ಸ್ ಹೇಳಿಕೊಟ್ಟ ಕನ್ನಡಿಗ
ಮಾರ್ಚ್ 06 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವರಿಗೆ ಬೀದಿ ನಾಯಿಗಳ ಮೇಲಿರುವ ಕಾಳಜಿ ಮನುಷ್ಯರ ಮೇಲಿಲ್ಲʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼತನ್ನನ್ನು ತಾನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಗಾರ್ಡ್ ಮೇಲೆ ಕೈ ಮಾಡುವ ಅಧಿಕಾರ ಇವನಿಗ್ಯಾರು ಕೊಟ್ಟಿದ್ದು, ಇವನ ವಿರುದ್ಧ ಕ್ರಮ ಕೈಗೊಳ್ಳಿʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸೆಕ್ಯುರಿಗಾರ್ಡ್ ಜೀವದ ಬದಲು ಇವನಿಗೆ ಬೀದಿ ನಾಯಿಗಳೇ ಹೆಚ್ಚಾಯಿತೇʼ ಎಂದು ಕೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Sun, 9 March 25