ಬಡ್ತಿ ಬೇರೆಯವರ ಪಾಲಾಯಿತೆಂಬ ಹೊಟ್ಟೆ ಕಿಚ್ಚಿಗೆ ಸಹದ್ಯೋಗಿ ಕುಡಿಯುವ ನೀರಿಗೆ ವಿಷ ಹಾಕಿದ ಮಹಿಳೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ
ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ ಅಂತಾರೆ. ಹೀಗೆ ಕೆಲವರು ಬೇರೊಬ್ಬರ ಬಗ್ಗೆ ಅನಗತ್ಯವಾಗಿ ವಿಷ ಕಾರುವ ಮೂಲಕ ಅವರಿಗೆ ಕೇಡು ಬಯಸಲು ನೋಡ್ತಾರೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ತನಗೆ ಸಿಗಬೇಕಾದ ಬಡ್ತಿ ಬೇರೊಬ್ಬರ ಪಾಯಿತೆಂಬ ಹೊಟ್ಟೆ ಕಿಚ್ಚಿಗೆ ಸಹದ್ಯೋಗಿಗೆ ವಿಷ ಪ್ರಾಶನ ಮಾಡಲು ಮುಂದಾಗಿದ್ದಾಳೆ. ಸಹದ್ಯೋಗಿ ಕುಡಿಯುವ ನೀರಿಗೆ ಆಕೆ ವಿಷ ಬೆರೆಸಿದ್ದು, ಈಕೆಯ ಈ ಕೃತ್ಯ ಕಂಪೆನಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೇರೊಬ್ಬರ ಏಳಿಗೆಯನ್ನು ಸಹಿಸಲಾರದೆ ಹೊಟ್ಟೆ ಕಿಚ್ಚು ಪಡುವವರು, ಅನಗತ್ಯವಾಗಿ ವಿಷ ಕಾರುವವರು ಸಮಾಜದಲ್ಲಿ ಬಹಳಷ್ಟು ಜನ ಇದ್ದಾರೆ. ವಿಶೇಷವಾಗಿ ಕೆಲಸದ ಸ್ಥಳಗಳಲ್ಲಿ ಸಹಸದ್ಯೋಗಿಗಳ ನಡುವೆ ಇಂತಹ ಸಣ್ಣಪುಟ್ಟ ಅಸೂಯೆ, ಹೊಟ್ಟೆ ಕಿಚ್ಚು ಇದ್ದೇ ಇರುತ್ತದೆ. ಇನ್ನೂ ಏಳಿಗೆಯನ್ನು ಸಹಿಸಲಾರದೆ ಪ್ರಾಣವನ್ನೇ ತೆಗೆಯುವ ಮಟ್ಟಕ್ಕೆ ಹೋಗುವವರೂ ಇದ್ದಾರೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ತನ್ನನ್ನು ಬಿಟ್ಟು ಬಡ್ತಿ ಬೇರೆಯವರ ಪಾಲಾಯಿತಲ್ಲ ಎಂಬ ಕೋಪಕ್ಕೆ ಮಹಿಳೆಯೊಬ್ಬಳು ತನ್ನ ಸಹದ್ಯೋಗಿಗೆ ವಿಷಪ್ರಾಶನ ಮಾಡಲು ಮುಂದಾಗಿದ್ದಾಳೆ. ಹೌದು ಆಕೆ ಬಡ್ತಿ ಪಡೆದ ಸಹದ್ಯೋಗಿ ಕುಡಿಯುವಂತಹ ನೀರಿನ ಬಾಟಲಿಗೆ ವಿಷ ಹಾಕಿದ್ದು, ಈ ಕೃತ್ಯ ಕಂಪೆನಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ಬ್ರೆಜಿಲ್‌ನ ಅಬೈಡಾ ಡಿ ಗೋಯಾಸ್ ನಗರದಲ್ಲಿ ನಡೆದಿದ್ದು, ಬಡ್ತಿ ವಿಚಾರದ ಹೊಟ್ಟೆ ಕಿಚ್ಚಿಗೆ ಮಹಿಳೆಯೊಬ್ಬಳು ತನ್ನ ಸಹದ್ಯೋಗಿಯ ನೀರಿನ ಬಾಟಲಿಗೆ ವಿಷ ಹಾಕಿದ್ದಾಳೆ. ಆಕೆ ವಿಷ ಬೆರೆಸುತ್ತಿರುವ ದೃಶ್ಯ ಕಂಪೆನಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಡ್ತಿ ವಿಚಾರಕ್ಕೆ ಆಕೆ ಈ ಕೃತ್ಯ ಎಸಗಿದ್ದಾಳೆ ಎಂಬುದು ತಿಳಿದು ಬಂದಿದೆ.
⏯️ Mulher tenta envenenar colega de trabalho recém-promovida
Segundo a polícia, solvente foi colocado na água da vítima, logo depois de a suspeita descobrir a promoção da colega
Leia: https://t.co/ddRy85JCdx pic.twitter.com/5ymDt4aETS
— Metrópoles (@Metropoles) February 28, 2025
ಫೆಬ್ರವರಿ 14 ರಂದು ತನ್ನ ಸಹೋದ್ಯೋಗಿಗೆ ಬಡ್ತಿ ನೀಡಲಾಗಿದೆ ಎಂದು ಆಕೆಯ ಬಾಸ್ ಘೋಷಿಸಿದ ನಂತರ ಆರೋಪಿ ಮಹಿಳೆ ಕಚೇರಿಯಲ್ಲಿ ಗದ್ದಲ ಸೃಷ್ಟಿಸಿದ್ದಾಳೆ ಎಂದು ಯುನೈಟೆಡ್ ಕಿಂಗ್‌ಡಂನ ಡೈಲಿ ಮೇಲ್ ಪತ್ರಿಕೆ ತಿಳಿಸಿದೆ. ಆರೋಪಿ ಮಹಿಳೆ, ಬಡ್ತಿ ಪಡೆದ ತನ್ನ ಮಹಿಳಾ ಸಹೋದ್ಯೋಗಿಯ ಮೇಲೆ ದ್ವೇಷ ಸಾಧಿಸಿ, ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದಳು, ಬಡ್ತಿ ಪಡೆದ ಮಹಿಳಾ ಸಹೋದ್ಯೋಗಿ ತನ್ನ ಮೇಜಿನಿಂದ ಎದ್ದು ಅತ್ತಕಡೆ ಹೋದಾಗ, ಆರೋಪಿ ಮಹಿಳೆ ತನ್ನ ಸಹೋದ್ಯೋಗಿಯ ಮೇಜಿನ ಬಳಿಗೆ ಹೋಗಿ ಆಕೆಯ ನೀರಿನ ಬಾಟಲಿಯಲ್ಲಿ ವಿಷ ಬೆರೆಸಿದ್ದಾಳೆ.
ಇದನ್ನೂ ಓದಿ: ಕನ್ನಡವನ್ನು ಬೆಳೆಸುವ ಅಗತ್ಯವಿಲ್ಲ, ಬಳಸಬೇಕು : ಆಂಧ್ರ ವ್ಯಕ್ತಿಗೆ ಕನ್ನಡದಲ್ಲೇ ವ್ಯಾಪಾರ ಮಾಡುವ ಟ್ರಿಕ್ಸ್ ಹೇಳಿಕೊಟ್ಟ ಕನ್ನಡಿಗ
ಈಕೆಯ ಈ ಕೃತ್ಯವನ್ನು ಅರಿಯದ ಸಹದ್ಯೋಗಿ ವಿಷ ಬೆರೆಸಿದ್ದ ಬಾಟಲಿಯ ನೀರು ಕುಡಿದಿದ್ದು, ಇದಾದ ಬಳಿಕ ಆಕೆಯ ಅವಳ ಬಾಯಿ ಉರಿಯಲು ಪ್ರಾರಂಭಿಸಿತು. ಕೊನೆಗೂ ಅವಳು ವೈದ್ಯಕೀಯ ಸಹಾಯ ಪಡೆಯಬೇಕಾಯಿತು. ಅದೃಷ್ಟವಶಾತ್, ಸಕಾಲಿಕ ಚಿಕಿತ್ಸೆಯಿಂದಾಗಿ ಆಕೆಯ ಜೀವ ಉಳಿದಿದೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾದ ನಂತರ ಆರೋಪಿ ಮಹಿಳೆಯನ್ನು ಕೊಲೆ ಯತ್ನ ಆರೋಪದಡಿ ಬಂಧಿಸಲಾಗಿದೆ. ಆರೋಪ ಸಾಬೀತಾದರೆ, ಮಹಿಳೆಗೆ 6 ರಿಂದ 20 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಪೊಲೀಸರು ಈಗ ಆರೋಪಿ ಮಹಿಳೆಯನ್ನು ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
Metrapoles ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಸಿಸಿಟಿವಿ ದೃಶ್ಯದಲ್ಲಿ ಆರೋಪಿ ಮಹಿಳೆ ಸಹದ್ಯೋಗಿಯ ಟೆಬಲ್ ಬಳಿ ಹೋಗಿ ಆಕೆಯ ಕುಡಿಯುವ ನೀರಿನ ಬಾಟಲಿಗೆ ವಿಷ ಬೆರೆಸುತ್ತಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು. ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಯ ಈ ಕೃತ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ