ಕನ್ನಡವನ್ನು ಬೆಳೆಸುವ ಅಗತ್ಯವಿಲ್ಲ, ಬಳಸಬೇಕು : ಆಂಧ್ರ ವ್ಯಕ್ತಿಗೆ ಕನ್ನಡದಲ್ಲೇ ವ್ಯಾಪಾರ ಮಾಡುವ ಟ್ರಿಕ್ಸ್ ಹೇಳಿಕೊಟ್ಟ ಕನ್ನಡಿಗ
ಕರ್ನಾಟಕದಲ್ಲಿ ಹಲವಾರು ಮಂದಿ ಪರಭಾಷಿಕರಿದ್ದಾರೆ. ಆದರೆ ಹೆಚ್ಚಿನವರು ಕನ್ನಡ ಕಲಿಯುವುದು ತುಂಬಾನೇ ಕಷ್ಟಕರ ಎಂದುಕೊಳ್ಳುತ್ತಾರೆ. ಕೆಲವರು ಕನ್ನಡ ಭಾಷೆ ಕಲಿಯುವ ಪ್ರಯತ್ನ ಮಾಡುವುದೇ ಇಲ್ಲ. ಇದೀಗ ಈ ವಿಡಿಯೋದಲ್ಲಿ ಕಡ್ಲೆ ಕಾಯಿ ಮಾರುತ್ತಿರುವ ಆಂಧ್ರ ವ್ಯಕ್ತಿಗೆ ಕನ್ನಡವನ್ನು ಬೆಳೆಸುವ ಅಗತ್ಯವಿಲ್ಲ, ಬಳಸಬೇಕು ಎಂದು ರಾಜೇಶ್ ಎನ್ನುವ ವ್ಯಕ್ತಿಯೂ ಕನ್ನಡ ಪಾಠ ಮಾಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾವು ಯಾವ ನೆಲದಲ್ಲಿ ನೆಲೆಸಿರುತ್ತೇವೋ ಅಲ್ಲಿನ ಭಾಷೆ ಕಲಿಯುವುದು, ಅಲ್ಲಿನ ಭಾಷೆಗೆ ಗೌರವ ಕೊಡುವುದು ಮುಖ್ಯ. ಆದರೆ ಕರ್ನಾಟಕದಲ್ಲಿ ನೆಲೆಸಿರುವ ಅದೆಷ್ಟೋ ಪರಭಾಷಿಕರು ಕನ್ನಡವನ್ನು ಮಾತನಾಡುತ್ತಿಲ್ಲ, ಕನ್ನಡವನ್ನು ಕಲಿಯುವ ಪ್ರಯತ್ನವನ್ನು ಮಾಡುತ್ತಲೇ ಇದೆ. ಇಷ್ಟು ಮಾತ್ರವಲ್ಲದೇ ಕೆಲವು ಕನ್ನಡದವರೇ ಕನ್ನಡವನ್ನು ಮಾತನಾಡಲು ಹಿಂದೆ ಮುಂದೆ ನೋಡುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕರ್ನಾಟಕದಲ್ಲಿ ಕಡ್ಲೆ ಕಾಯಿ ವ್ಯಾಪಾರಿಯಾಗಿರುವ ಆಂಧ್ರ ವ್ಯಕ್ತಿಗೆ ರಾಜೇಶ್ ಎನ್ನುವ ಕನ್ನಡಿಗ ಕನ್ನಡ ಪಾಠ ಮಾಡಿದ್ದು, ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Vinodkumark205 ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ವಿಡಿಯೋದಲ್ಲಿ ಕನ್ನಡ ಬೆಳೆಸುವ ಅಗತ್ಯವಿಲ್ಲ, ಬಳಸಬೇಕು ಆಂಧ್ರ ವ್ಯಕ್ತಿಗೆ ಕನ್ನಡ ಪಾಠ ಮಾಡಿದ ರಾಜೇಶ್ ಎಂಬುವ ಕನ್ನಡಿಗ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಆಂಧ್ರ ಮೂಲಕ ವ್ಯಕ್ತಿಯೊಬ್ಬರು ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ನೋಡಬಹುದು. ಆದರೆ ಮತ್ತೊಂದು ವಿಶೇಷವೆಂದರೆ ಮೈಕ್ ನಲ್ಲಿ ಕಡ್ಲೆಕಾಯಿ ಕಡ್ಲೆ ಕಾಯಿ ತಕೊಳ್ರಣ್ಣ ಬಡವರ ಬಾದಾಮಿ ತಿನ್ರಣ್ಣ. ದಾನವ ಧರ್ಮವಾ ಮಾಡಿಲ್ಲ ಅಂದ್ರು ನಮ್ಮತ್ರ ವ್ಯಾಪಾರ ಮಾಡ್ರಣ್ಣ, ಪುಣ್ಯವ ಬರುತ್ತೆ ನೋಡ್ರಣ್ಣ. ನಮ್ಮತ್ರ ವ್ಯಾಪಾರ ಮಾಡ್ರಣ್ಣ, ಒಳ್ಳೆಯ ಪುಣ್ಯವಾ ಬರುತ್ತೆ ನೋಡ್ರಣ್ಣ. ಒಳ್ಳೆಯ ಪುಣ್ಯ ಬಂದ್ರಣ್ಣ ನಿಮ್ಮ ಮಕ್ಕಳಿಗೆ ಅದೇ ಕಾಯುತ್ತಣ್ಣ ಎನ್ನುವ ಹಾಡು ಪ್ಲೇ ಆಗುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ: ಮನೆ ಮಾಲೀಕನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಸುರಿಸುತ್ತಿರುವ ಶ್ವಾನ, ಯಾರು ಸಮಾಧಾನ ಮಾಡಿದ್ರು ಈ ಶ್ವಾನದ ದುಃಖ ನಿಲ್ತಿಲ್ಲ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವಿಡಿಯೋ ಹಂಚಿಕೊಂಡಿರುವ ವ್ಯಕ್ತಿಯೂ ಕಡ್ಲೆ ಕಾಯಿ ವ್ಯಾಪಾರಿಯ ಬಳಿ ಮಾತನಾಡಿದ್ದು, ಆಂಧ್ರ ವ್ಯಕ್ತಿಯೂ ಎಂದು ತಿಳಿದಿದೆ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತದೆ ಎಂದಿದ್ದಾರೆ. ಈ ಐಡಿಯಾ ಯಾರದು ಎಂದು ವ್ಯಾಪಾರಿ ಬಳಿ ಕೇಳಿದಾಗ ರಾಜೇಶ್ ಎನ್ನುವ ವ್ಯಕ್ತಿಯೂ ಈ ಹಾಡನ್ನು ಹಾಡಿಸಿದ್ದಾರೆದ್ದಾರೆ ಎಂದು ವ್ಯಾಪಾರಿ ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ವ್ಯಕ್ತಿಯೂ ಈ ಬಗ್ಗೆ ವಿವರಿಸುತ್ತಾ ರಾಜೇಶ್ ಎನ್ನುವ ವ್ಯಕ್ತಿಯೂ ಈ ರೀತಿ ಕನ್ನಡದಲ್ಲಿ ವ್ಯಾಪಾರ ಮಾಡಿ ಒಳ್ಳೆಯ ವ್ಯಾಪಾರ ಚೆನ್ನಾಗಿ ಆಗುತ್ತದೆ ಕನ್ನಡ ಬೆಳೆಸುವ ಪ್ರಯತ್ನ ಮಾಡಿದ್ದಾರೆ ನಿಜಕ್ಕೂ ಅವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಈ ವಿಡಿಯೋ ಇಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಲೈಕ್ಸ್ ಗಳು ಬಂದಿವೆ. ಈ ವಿಡಿಯೋಗೆ ಬಳಕೆದಾರರೊಬ್ಬರು, ಈ ವ್ಯಕ್ತಿಯ ಕನ್ನಡಾಭಿಮಾನವನ್ನು ಮೆಚ್ಚಿಕೊಂಡಿದ್ದಾರೆ. ಇನ್ನೊಬ್ಬರು, ‘ಪರಭಾಷಿಕರೆಲ್ಲರೂ ಕನ್ನಡ ಕಲಿಯುವಂತಾಗಲಿ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ