ಮನೆ ಮಾಲೀಕನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಸುರಿಸುತ್ತಿರುವ ಶ್ವಾನ, ಯಾರು ಸಮಾಧಾನ ಮಾಡಿದ್ರು ಈ ಶ್ವಾನದ ದುಃಖ ನಿಲ್ತಿಲ್ಲ
ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ ಎಂಬ ಮಾತಿದೆ. ಮನುಷ್ಯರಿಗೆ ನಾಯಿಗಿಂತ ಹೆಚ್ಚು ಆಪ್ತರು ಬೇರಾರೂ ಇರಲಿಕ್ಕೆ ಸಾಧ್ಯವಿಲ್ಲ. ಶ್ವಾನಗಳು ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದ ಪ್ರಾಣಿಯಾಗಿದ್ದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮನೆ ಮಾಲೀಕನು ಮೃತ ಪಟ್ಟಿದ್ದಾನೆ. ಕುಟುಂಬದ ಸದಸ್ಯರು ದುಃಖದಲ್ಲಿ ಮುಳುಗಿದ್ದು, ಇತ್ತ ಶ್ವಾನ ಕೂಡ ಮೃತ ದೇಹದ ಮುಂದೆ ಕುಳಿತುಕೊಂಡು ರೋಧಿಸುತ್ತಿದೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಈ ಆಧುನಿಕ ಯುಗದಲ್ಲಿ ಮನುಷ್ಯತ್ವಕ್ಕೆ, ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಆದರೆ ಮನುಷ್ಯನಿಗೆ ಇಲ್ಲದ ಮಾನವೀಯತೆ, ಸ್ನೇಹ ಮನೋಭಾವವನ್ನು ಪ್ರಾಣಿಗಳಲ್ಲಿ ಕಾಣಬಹುದು. ಅದರಲ್ಲೂ ಶ್ವಾನ (Dog) ಗಳಿಗೆ ತುಸು ಹೆಚ್ಚೇ ನಿಯತ್ತು ಇರುತ್ತದೆ. ಹೌದು ಅವುಗಳಿಗೆ ಒಂದು ತುತ್ತು ಅನ್ನ ನೀಡಿದರೆ ಸಾಕು ಅದರ ಕೊನೆಯುಸಿರು ಇರುವವವರೆಗೂ ಅನ್ನ ಹಾಕಿದವರಿಗೆ ನಿಯತ್ತಿನಿಂದ ಇರುತ್ತದೆ. ಮೃತ ಪಟ್ಟ ಮಾಲೀಕನ ಬರುವಿಕೆಗಾಗಿ ಕಾದ ಶ್ವಾನದ ಉದಾಹರಣೆಗಳು ಸಾಕಷ್ಟು ಇವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮನೆ ಮಾಲೀಕನು ಮೃತ ಪಟ್ಟಿದ್ದು, ಕುಟುಂಬದ ಸದಸ್ಯರು ದುಃಖದಲ್ಲಿ ಮುಳುಗಿದ್ದಾರೆ, ಇತ್ತ ಶ್ವಾನ ಕೂಡ ಮೃತ ದೇಹದ ಮುಂದೆ ಕುಳಿತುಕೊಂಡು ಜೋರಾಗಿ ಅಳುತ್ತಿದೆ.
ತನ್ನ ಮಾಲೀಕ ಇನ್ನಿಲ್ಲ.. ಆತ ಮರಳಿ ಬಾರದ ಲೋಕಕ್ಕೆ ಹೋಗಿದ್ದಾನೆ ಎಂದು ಅರಿಯದ ಈ ಮೂಕಜೀವಿಯ ರೋಧನೆ ಮುಗಿಲು ಮುಟ್ಟಿದೆ. ಈ ವಿಡಿಯೋವನ್ನು rakibul hasan rashel ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆ ಮಾಲೀಕ ಮೃತ ಪಟ್ಟಿದ್ದು, ಕುಟುಂಬ ಸದಸ್ಯರೆಲ್ಲರೂ ಮೃತದೇಹದ ಮುಂದೆ ಕುಳಿತು ಅಳುತ್ತಿದ್ದೂ, ಇತ್ತ ಶ್ವಾನ ಕೂಡ ದುಃಖದಲ್ಲಿ ಕಣ್ಣೀರು ಸುರಿಸುತ್ತಿದ್ದು, ಅಲ್ಲೇ ಇದ್ದ ವ್ಯಕ್ತಿyಯೂ ಶ್ವಾನದ ತಲೆ ಸವರುವ ಮೂಲಕ ಸಮಾಧಾನ ಪಡಿಸುತ್ತಿದ್ದಾರೆ.
ಇದನ್ನೂ ಓದಿ: ಸಂಪೂರ್ಣವಾಗಿ ವಿವಸ್ತ್ರಗೊಂಡು ವಿಮಾನದೊಳಗೆ ಅಸಭ್ಯ ವರ್ತನೆ ತೋರಿದ ಮಹಿಳೆ; ಬೆಚ್ಚಿ ಬಿದ್ದ ಸಹ ಪ್ರಯಾಣಿಕರು
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋ ಎಪ್ಪತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಪವಿತ್ರವಾದ ಪ್ರೀತಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಈ ವಿಡಿಯೋ ಮನಕಲುಕುವಂತಿದೆ, ಮನುಷ್ಯರಿಗಿಂತ ಶ್ವಾನವೇ ಮೇಲು’ ಎಂದಿದ್ದಾರೆ. ಮತ್ತೊಬ್ಬರು, ‘ ಈ ವಿಡಿಯೋ ಹೃದಯಕ್ಕೆ ಹತ್ತಿರವಾದಂತಿದೆ’ ಎಂದು ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








