Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ನಿಮ್ಮ ಮೂಗಿನ ಆಕಾರವೇ ಬಿಚ್ಚಿಡುತ್ತೆ ರಹಸ್ಯಮಯ ವ್ಯಕ್ತಿತ್ವ

ಮಾನವ ದೇಹದ ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಮೂಗು ಕೂಡ ಒಂದು. ವಾಸನೆ ಗ್ರಹಿಸುವ ಅಂಗವಾದ ಈ ಮೂಗಿನ ಆಕಾರವು ಒಬ್ಬರಿಗಿಂತ ಇನ್ನೊಬ್ಬರದ್ದು ಭಿನ್ನವಾಗಿರುತ್ತದೆ. ಕೆಲವರ ಮೂಗು ದುಂಡಗೆ ಇದ್ದರೆ, ಇನ್ನು ಕೆಲವರು ಉದ್ದವಾದ ಇಲ್ಲವಾದರೆ ನೇರವಾದ ಮೂಗನ್ನು ಹೊಂದಿರುತ್ತಾರೆ. ಕೆಲವರದ್ದು ಗಿಳಿ ಮೂಗಾಗಿರುತ್ತದೆ. ಆದರೆ ವ್ಯಕ್ತಿಯ ಅನೇಕ ರಹಸ್ಯಗಳು ಈ ಮೂಗಿನ ಮೂಲಕವೇ ಬಹಿರಂಗಗೊಳ್ಳುತ್ತದೆ. ಹಾಗಾದ್ರೆ ನಿಮ್ಮ ಮೂಗು ಯಾವ ಆಕಾರದಲ್ಲಿದೆ ಎಂದು ಒಮ್ಮೆ ಗಮನಿಸಿ, ನಿಮ್ಮ ಗುಣಸ್ವಭಾವ ತಿಳಿದುಕೊಳ್ಳಬಹುದು, ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Personality Test : ನಿಮ್ಮ ಮೂಗಿನ ಆಕಾರವೇ ಬಿಚ್ಚಿಡುತ್ತೆ ರಹಸ್ಯಮಯ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 04, 2025 | 4:54 PM

ವ್ಯಕ್ತಿಯ ನಡವಳಿಕೆಯಿಂದ ಅವನ ವ್ಯಕ್ತಿತ್ವವನ್ನು ಅಳೆಯುವ ಹಾಗೆ ನಮ್ಮ ದೇಹದ ಭಾಗಗಳಾದ ಕಣ್ಣು, ಕಿವಿ, ಮೂಗು, ಕೈ ಬೆರಳು, ತುಟಿಗಳ ಆಕಾರದಿಂದಲೂ ನಮ್ಮ ಸ್ವಭಾವ ಎಂತಹದ್ದು ಎಂಬುದನ್ನು ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೆ ಮುಖದ ಸೌಂದರ್ಯ ಹೆಚ್ಚಿಸುವ ಮೂಗು ಬಿಚ್ಚಿಡುತ್ತೆ ರಹಸ್ಯಮಯ ವ್ಯಕ್ತಿತ್ವ. ಮೂಗಿನ ಆಕಾರವು ವ್ಯಕ್ತಿ ಹೇಗೆ? ಆತನ ಗುಣಸ್ವಭಾವಗಳು ಹಾಗೂ ವ್ಯಕ್ತಿತ್ವಗಳನ್ನು ಅರಿತುಕೊಳ್ಳಬಹುದು.. ಹಾಗಾದ್ರೆ ಮೂಗಿನ ಆಕಾರದ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ.

  • ಉದ್ದನೆಯ ಮೂಗು : ಮೂಗು ಉದ್ದವಾಗಿದ್ದರೆ ಈ ವ್ಯಕ್ತಿಗಳು ನೇರ ನುಡಿಯಿಂದಲೇ ಕೆಲವೊಮ್ಮೆ ಇತರರ ಮನಸ್ಸನ್ನು ನೋಯಿಸುತ್ತಾರೆ. ಪ್ರತಿಯೊಂದು ವಿಷಯದಲ್ಲಿಯೂ ದೃಢ ನಿರ್ಧಾರವನ್ನು ಹೊಂದಿದ್ದು, ಈ ಜನರು ಸಂಬಂಧಗಳನ್ನು ಉಳಿಸಿಕೊಳ್ಳಲು ಆಸಕ್ತಿ ಹೊಂದಿರುವುದಿಲ್ಲ. ಧಾರ್ಮಿಕ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ದುಬಾರಿ ಹಾಗೂ ಅಧಿಕ ಮೌಲ್ಯದ ವಸ್ತುಗಳನ್ನು ಹೆಚ್ಚು ಬಳಸುತ್ತಾರೆ.
  • ಸಣ್ಣ ಮೂಗು : ಸಣ್ಣ ಮೂಗನ್ನು ಹೊಂದಿರುವ ಜನರು ಬಾಲಿಶತೆಯನ್ನು ಹೊಂದಿದ್ದು, ಎಲ್ಲವನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಾರೆ. ಅದಲ್ಲದೇ ತನ್ನ ಸುತ್ತಮುತ್ತಲಿನ ಜನರೊಂದಿಗೆ ಕಿಡಿಗೇಡಿತನ ಮಾಡುತ್ತಾರೆ. ಈ ಜನರು ಕುತಂತ್ರ ಬುದ್ಧಿ ಹೊಂದಿದ್ದು ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ವ್ಯಕ್ತಿಗಳಾಗಿರುತ್ತಾರೆ. ಸಂಬಂಧ ಬೆಸೆಯುವ ಜನರೊಂದಿಗೆ ಇರಲು ಹೆಚ್ಚು ಇಷ್ಟಪಡುತ್ತಾರೆ. ಅದಲ್ಲದೇ, ಸಮಾಜದ ಬಗೆಗೆ ದೂರದೃಷ್ಟಿ ಹೊಂದಿದ್ದು, ಜೀವನದಲ್ಲಿ ತಮ್ಮದೇ ಆದ ಹೆಜ್ಜೆಗುರುತು ಸಾಧಿಸುತ್ತಾರೆ. ಎಲ್ಲರೊಂದಿಗೆ ಬೆರೆತು ಸ್ನೇಹಮಯ ಜೀವನ ನಡೆಸುವ ವ್ಯಕ್ತಿಗಳಾಗಿರುತ್ತದೆ.
  • ದುಂಡಗೆ ಮೂಗು : ದುಂಡಗೆ ಮೂಗನ್ನು ಹೊಂದಿರುವವರು ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಇವರಿಗೆ ಯಾವುದೇ ರೀತಿಯ ಬೇಧಭಾವ ಇಲ್ಲ. ಮೇಲೂ ಕೀಳು ಎನ್ನುವುದನ್ನು ಮರೆತು ಎಲ್ಲರೊಂದಿಗೆ ಬೆರೆಯುತ್ತಾರೆ.ಸದಾ ಖುಷಿಯಾಗಿರಲು ಇಷ್ಟ ಪಡುವ ವ್ಯಕ್ತಿಗಳು ಇತರರನ್ನು ಖುಷಿ ಪಡಿಸುತ್ತಾರೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವ ಈ ಗುಣವೇ ಎಲ್ಲರಿಗೂ ಹತ್ತಿರವಾಗುವಂತೆ ಮಾಡುತ್ತದೆ.
  • ಚಪ್ಪಟೆ ಮೂಗು: ಚಪ್ಪಟೆಯಾಕಾರದ ಮೂಗು ಹೊಂದಿದ್ದರೆ ಈ ವ್ಯಕ್ತಿಗಳು ಭಾವನಾತ್ಮಕ ಜೀವಿಗಳು. ಇತರರ ನೋವಿಗೆ ಸ್ಪಂದಿಸುವ ಈ ವ್ಯಕ್ತಿಗಳು ಸಹಾಯ ಮಾಡುವುದರಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿ ಕೊಳ್ಳುವ ಈ ವ್ಯಕ್ತಿಗಳಿಗೆ ದೇವರ ಮೇಲೆ ಅಪಾರ ನಂಬಿಕೆಯಿರುತ್ತದೆ.
  • ಗಿಳಿ ಮೂಗು : ಕೆಲವರ ಮೂಗು ಗಿಳಿಯ ಮೂಗಿನಂತೆ ಇರುತ್ತದೆ. ಮೂಗು ಈ ರೀತಿಯ ಆಕಾರ ಹೊಂದಿದ್ದರೆ ಈ ವ್ಯಕ್ತಿಗಳು ಶ್ರಮಜೀವಿಗಳು, ಕಷ್ಟ ಪಟ್ಟು ದುಡಿಯುವ ಮೂಲಕ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ ಅದು ಪೂರ್ಣಗೊಳ್ಳುವವರೆಗೂ ವಿಶ್ರಾಂತಿ ಪಡೆಯದ ಸ್ವಭಾವ ಇವರದ್ದು. ಸ್ವಾರ್ಥವಿಲ್ಲದ ನಿಷ್ಕಲ್ಮಶ ಮನಸ್ಸಿನವರಾಗಿದ್ದು, ಇತರರ ಮಾತುಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮದೇ ಹಾದಿಯಲ್ಲಿ ಸಾಗಿ ಗುರಿ ಸಾಧಿಸಿಕೊಳ್ಳುತ್ತಾರೆ
  • ಕಿರಿದಾದ ಮೂಗು : ಕಿರಿದಾದ ಮೂಗನ್ನು ಹೊಂದಿರುವವರಿಗೆ ಮೂಗಿನ ತುದಿಯಲ್ಲಿಯೇ ಕೋಪ ಇರುತ್ತದೆ. ಈ ವ್ಯಕ್ತಿಗಳು ಮುಂಗೋಪಿಗಳಾಗಿದ್ದು, ಫ್ಯಾಷನ್ ಬಗ್ಗೆ ಹೆಚ್ಚು ಒಲವು ಹೊಂದಿರುತ್ತಾರೆ. ತಮ್ಮ ಯಶಸ್ಸಿಗೆ ಕಾರಣರಾದರನ್ನು ಹಾಗೂ ಹಳೆಯ ಸಹಪಾಠಿಗಳು ಮರೆತು ಬಿಡುವ ಗುಣ ಇವರಿಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Tue, 4 March 25

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ