Chanakya Niti : ಸಮಯ ನಿರ್ವಹಣೆ ಹೀಗೆ ಮಾಡಿದ್ರೆ ಯಶಸ್ಸು ಖಂಡಿತ ನಿಮ್ಮದಾಗಲು ಸಾಧ್ಯ ಎನ್ನುತ್ತಾರೆ ಚಾಣಕ್ಯ
ಕೆಲವರಿಗೆ ದಿನದ ಇಪ್ಪತ್ತನಾಲ್ಕು ಗಂಟೆ ಇದ್ದರೂ ಸಾಕಾಗುವುದಿಲ್ಲ. ಕೆಲಸದ ಹೊರೆಯಿಂದಾಗಿ ಸಾಕಷ್ಟು ಸಮಯವಿಲ್ಲ ಎಂದು ದೂರುವವರನ್ನು ನೋಡಿದ್ದೇವೆ. ಆದರೆ ಇರುವ ಸಮಯದೊಂದಿಗೆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿ ಜೀವನದಲ್ಲಿ ಯಶಸ್ಸು ಗಳಿಸುವವರನ್ನು ನೋಡಿದಾಗ ಆಶ್ಚರ್ಯಚಕಿತರಾಗುತ್ತೇವೆ. ಹೀಗಾಗಿ ಚಾಣಕ್ಯರು ಕೆಲಸಕ್ಕೆ ಆದ್ಯತೆ ನೀಡುವ ಬಗ್ಗೆ ತನ್ನ ನೀತಿಯಲ್ಲಿ ತಿಳಿಸಿದ್ದಾರೆ. ಆದ್ಯತೆಯ ಅನುಗುಣವಾಗಿ ಕೆಲಸ ಮಾಡುವ ವ್ಯಕ್ತಿಗಳು ತಮ್ಮ ಗುರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಧಿಸುತ್ತರಂತೆ. ಹಾಗಾದ್ರೆ ಚಾಣಕ್ಯ

ಸಾಂದರ್ಭಿಕ ಚಿತ್ರ
ಇತ್ತೀಚೆಗಿನ ದಿನಗಳಲ್ಲಿ ಬ್ಯುಸಿಯಾದ ಜೀವನ ಶೈಲಿಯಿಂದ ಸಮಯ ಅನ್ನೋದೇ ಇಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಇದ್ದರೂ ಕೂಡ ಸಾಕಾಗದಷ್ಟು ಕೆಲಸಗಳು ಕಣ್ಣಮುಂದೆ ಇರುತ್ತದೆ. ಹೀಗಾಗಿ ವೈಯುಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸಿಕೊಂಡು ಹೋಗುವುದರೊಳಗಾಗಿ ಸಾಕಾಗಿ ಹೋಗಿ ಬಿಡುತ್ತದೆ. ಸಮಯವಿಲ್ಲ ಎನ್ನುವವರಿಗೆ ಚಾಣಕ್ಯ (Chanakya) ಸಲಹೆ ನೀಡಿದ್ದು, ಇರುವಷ್ಟು ಸಮಯದಲ್ಲೇ ಕೆಲಸಗಳನ್ನು ತುರ್ತು ಮತ್ತು ಪ್ರಾಮುಖ್ಯತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡುವಂತೆ ಸೂಚಿಸುತ್ತಾರೆ. ಈ ರೀತಿ ಮಾಡಿದರೆ ಒತ್ತಡ ಮುಕ್ತವಾಗಿ ಇರುವ ಸಮಯದಲ್ಲೇ ಕೆಲಸವನ್ನೆಲ್ಲಾ ಮಾಡಿ ಮುಗಿಸಿದರೆ ಯಶಸ್ಸು ಖಂಡಿತ ನಿಮ್ಮದಾಗುತ್ತದೆ ಎಂದಿದ್ದಾರೆ.
- ತುರ್ತು ಮತ್ತು ಪ್ರಾಮುಖ್ಯತೆ ಗಮನಿಸಿ : ಚಾಣಕ್ಯನ ಪ್ರಕಾರ, ಎಲ್ಲಾ ಕೆಲಸಗಳು ಸಮಾನ ಮೌಲ್ಯವನ್ನು ಹೊಂದಿರುವುದಿಲ್ಲ. ಹೀಗಾಗಿ ಇರುವಷ್ಟು ಸಮಯದಲ್ಲೇ ಕೆಲಸ ಪೂರ್ಣಗೊಳಿಸುವುದು ಮುಖ್ಯ. ತುರ್ತು ಹಾಗೂ ಮುಖ್ಯ ಕೆಲಸಗಳ ನಡುವೆ ವ್ಯತ್ಯಾಸವನ್ನು ಗುರುತಿಸಿ. ತುರ್ತು ಕೆಲಸಗಳನ್ನು ತಕ್ಷಣವೇ ಮಾಡಿ ಮುಗಿಸಬೇಕಾಗುತ್ತದೆ. ಮುಖ್ಯ ಕೆಲಸಗಳಿಗೆ ಗಮನಹರಿಸಿ ಸಮಯ ವಿನಿಯೋಗಿಸುವ ವ್ಯಕ್ತಿಗಳು ತಮ್ಮ ಗುರಿಗಳನ್ನು ಸಾಧಿಸಬಹುದು. ಪ್ರಯೋಜನಗಳನ್ನು ಹೊಂದಿರುವ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಮಯ ವಿನಿಯೋಗಿಸಿ ಎನ್ನುತ್ತಾರೆ ಚಾಣಕ್ಯ.
- ಅಗತ್ಯ ಕೆಲಸಗಳನ್ನು ಪಟ್ಟಿ ಮಾಡಿಕೊಳ್ಳಿ : ಚಾಣಕ್ಯನು ಹೇಳುವಂತೆ ಮಾಡಬೇಕಾದ ಎಲ್ಲಾ ಕೆಲಸಗಳನ್ನು ಪಟ್ಟಿ ಮಾಡಿಕೊಳ್ಳಿ. ತುರ್ತು ಮತ್ತು ಪ್ರಾಮುಖ್ಯತೆಯ ಆಧಾರದ ಕೆಲಸ ಕಾರ್ಯಗಳನ್ನು ವರ್ಗೀಕರಿಸಿ. ಪ್ರತಿಯೊಂದು ಕೆಲಸಕ್ಕೂ ಆದ್ಯತೆಗೆ ಅನುಗುಣವಾಗಿ ಸಮಯವನ್ನು ನಿಗದಿಪಡಿಸಿಕೊಳ್ಳುವುದು ಬಹಳ ಮುಖ್ಯ. ಈ ವಿಧಾನವು ಕೆಲಸ ಮುಗಿಸಲು ಉತ್ತಮ ಫಲಿತಾಂಶ ಪಡೆಯಲು ಸಹಾಯ ಮಾಡುತ್ತದೆ.
- ಮುಖ್ಯ ಕೆಲಸಗಳಿಗೆ ಆದ್ಯತೆ ನೀಡಿ : ಕೆಲಸಗಳಿಗೆ ಆದ್ಯತೆ ನೀಡುವುದರಿಂದ ಒತ್ತಡ ಕಡಿಮೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸಬಹುದು. ಹೀಗಾಗಿ ಯಾವ ಕೆಲಸ ಮುಖ್ಯ ಎನಿಸುತ್ತದೆಯೋ ಅದಕ್ಕೆ ಕೇಂದ್ರೀಕರಿಸುವ ಮೂಲಕ ದೈನಂದಿನ ಜೀವನದಲ್ಲಿ ಸಾಧನೆ ಮತ್ತು ತೃಪ್ತಿಯ ಅನುಭವ ಪಡೆಯಬಹುದು. ಹೀಗೆ ಮಾಡಿದರೆ ಸಮಯದ ಕೊರತೆ ಕಾಡುವುದಿಲ್ಲ.
- ಸಮಯದ ಮಿತಿ ಹೊಂದಿಸಿಕೊಳ್ಳಿ : ಚಾಣಕ್ಯ ನೀತಿ ಹೇಳುವಂತೆ ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಒಂದು ಸಮಯದ ಮಿತಿ ಹೊಂದಿಸುವುದು ಮುಖ್ಯ. ಈ ದಿನ ಈ ಕೆಲಸ ಮುಗಿಸಬೇಕು ಎಂದುಕೊಂಡರೆ ನೀವು ಅಂದುಕೊಂಡ ಸಮಯದೊಳಗೆ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕೆಲಸದ ವಿಷಯದಲ್ಲಿ ಸರಿಯಾದ ಸಮಯ ನಿರ್ವಹಣೆ ಹಾಗೂ ಸಮಯದ ಮಿತಿ ಹೊಂದಿಸಿಕೊಂಡರೆ ಯಶಸ್ಸಿನಿಂದ ವಂಚಿತರಾಗಲು ಸಾಧ್ಯವಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ