ನಾನ್ ವೆಜ್ ಪ್ರಿಯರ ನೆಚ್ಚಿನ ಖಾದ್ಯ ಚಿಕನ್ 65, ಈ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಕುತೂಹಕಾರಿ ಸಂಗತಿ
ಚಿಕನ್ ಅಂದ್ರೆ ಯಾರಿಗೆ ತಾನೇ ಇಷ್ಟ ಹೇಳಿ, ಅದರಲ್ಲಿ ಭಾನುವಾರ ಬಂತೆಂದರೆ ಮನೆಯಲ್ಲಿ ಚಿಕನ್ ನಿಂದ ವಿವಿಧ ರೆಸಿಪಿಗಳನ್ನು ಮಾಡಿ ಸವಿಯುತ್ತಾರೆ. ಕೆಲವರಿಗಂತೂ ಚಿಕನ್ 65 ಅಂದ್ರೆ ತುಂಬಾನೇ ಇಷ್ಟ. ಹೀಗಾಗಿ ರೆಸ್ಟೋರೆಂಟ್ ಗೆ ಹೋದ್ರೆ ನಾನ್‌ವೆಜ್ ಪ್ರಿಯರ ಮೆಚ್ಚಿನ ಆಹಾರಗಳಲ್ಲಿ ಒಂದಾದ ಚಿಕನ್ 65 ಯಂತೂ ಮಿಸ್ ಮಾಡುವುದೇ ಇಲ್ಲ. ಆದರೆ ಚಿಕನ್ 65 ಹೆಸರು ಯಾಕೆ ಬಂತು ಎಂದು ಒಮ್ಮೆಯಾದ್ರೂ ಯೋಚಿಸಿದ್ದೀರಾ?. ನಾನ್ ವೆಜ್ ಪ್ರಿಯರ ಫೇವರಿಟ್ ಆಗಿರುವ ಚಿಕನ್ 65 ಗೆ ಈ ಹೆಸರು ಬರಲು ಕಾರಣವೂ ಇದ್ದು, ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ನಾನ್ ವೆಜ್ ಪ್ರಿಯರ ಫೇವರಿಟ್ ಆಗಿರುವ ಚಿಕನ್ ನಿಂದ ಸಾಕಷ್ಟು ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ರೆಸ್ಟೋರೆಂಟ್ ಗೆ ಹೋದ್ರೆ ಚಿಕನ್ ನಿಂದ ತಯಾರಿಸಿದ ಚಿಕನ್ ಬಿರಿಯಾನಿ, ಚಿಕನ್ ಲಾಲಿಪಾಪ್, ಚಿಕನ್ ತಂದೂರಿ ಹೀಗೆ ವಿವಿಧ ಭಕ್ಷ್ಯಗಳ ರುಚಿ ಸವಿಯುತ್ತಾರೆ. ಅದರಲ್ಲಿಯೂ ಈ ಚಿಕನ್ 65 ಯಂತೂ ರುಚಿ ಮಿಸ್ ಮಾಡುವುದೇ ಇಲ್ಲ. ಮಸಾಲೆ ಮಿಶ್ರಿತ ಖಾದ್ಯವೂ ಬೆಸ್ಟ್ ಸೈಡ್ ಡಿಶ್ ಗಳಲ್ಲಿ ಒಂದು, ಹೀಗಾಗಿ ಹೆಚ್ಚಿನವರಿಗೆ ಚಿಕನ್ 65 (Chiken 65) ಅಂದ್ರೆ ಇಷ್ಟ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ಚಿಕನ್ 65 ಈ ಹೆಸರು ಬಂದಿದ್ದೆ ರೋಚಕ. ಚಿಕನ್ 65 ಗೆ ಅದರ ಹೆಸರು ಹೇಗೆ ಬಂತು ಎಂಬುದರ ಕುರಿತು ಅನೇಕ ಜನಪ್ರಿಯ ಕಥೆಗಳಿದ್ದು, ಈ ಖಾದ್ಯ ಸವಿಯುವ ಮುನ್ನ ಹೆಸರಿನ ಹಿಂದಿರುವ ಕುತೂಹಲಕಾರಿ ಸಂಗತಿ ತಿಳಿದುಕೊಳ್ಳಲೇ ಬೇಕು.
ಭಾರತೀಯ ಸೇನಾ ಸೈನಿಕರ ವಿಶೇಷ ಭಕ್ಷ್ಯ
ಭಾರತೀಯ ಸೈನಿಕರಲ್ಲಿ ಚಿಕನ್ 65 ಜನಪ್ರಿಯ ಭಕ್ಷ್ಯವಾಗಿದೆಯಂತೆ. ಹೌದು, ಭಾರತೀಯ ಸೇನಾ ಸೈನಿಕರಿಗಾಗಿ ವಿಶೇಷವಾಗಿ ತಯಾರಿಸಲಾಗುತ್ತಿತ್ತಂತೆ. ಈ 65ನೇ ಸಂಖ್ಯೆಯು ಸೈನ್ಯದ ನಿರ್ದಿಷ್ಟ ಬೆಟಾಲಿಯನ್ ಗೆ ಸಂಬಂಧಿಸಿರಬಹುದು. ಹೀಗಾಗಿ ಈ ಚಿಕನ್ 65 ಎಂದು ಹೆಸರಿಡಲಾಗಿದೆ ಎನ್ನಲಾಗುತ್ತದೆ.
65 ಬಗೆಯ ಮಸಾಲೆಗಳ ಬಳಕೆ
ಚಿಕನ್ 65 ಅನ್ನು ತಯಾರಿಸಲು 65 ಬಗೆಯ ಮಸಾಲೆಗಳನ್ನು ಬಳಸಲಾಗುತ್ತಿತ್ತು, ಅದಕ್ಕಾಗಿಯೇ ಇದಕ್ಕೆ ಈ ಹೆಸರು ಬಂದಿದೆ ಎನ್ನಲಾಗುತ್ತದೆ ಆದರೆ ಈ ಚಿಕನ್ 65 ಖಾದ್ಯ ತಯಾರಿಸಲು ಕೆಲವೇ ಕೆಲವು ಪದಾರ್ಥಗಳು ಸಾಕು, ಹೀಗಾಗಿ ಈ ಹೆಸರಿನ ಹಿಂದೆ ಇರುವ ಈ ಕಥೆ ನಿಜವಲ್ಲ ಎನ್ನಬಹುದು.
ಕೋಳಿಯ ವಯಸ್ಸಿಗೂ ಈ ಹೆಸರಿಗೂ ಇದೆ ಲಿಂಕ್
ಚಿಕನ್ 65 ಹೆಸರು ಬರಲು ಕೋಳಿಯ ವಯಸ್ಸು ಕಾರಣ ಎನ್ನಲಾಗಿದೆ. ಹೌದು, ಈ ಖಾದ್ಯವನ್ನು ಮಾಡಲು 65 ದಿನಗಳಾಗಿದ್ದ ಕೋಳಿಯನ್ನು ಬಳಸಲಾಗಿತ್ತು. ಹೀಗಾಗಿ ಈ ಖಾದ್ಯಕ್ಕೆ ಈ ಹೆಸರು ಬಂತು ಎನ್ನುವ ಕಥೆಯೂ ಇದೆ.
ಮೆನು ಸಂಖ್ಯೆಯೇ ಈ ಹೆಸರು ಬರಲು ಕಾರಣ
ದಕ್ಷಿಣ ಭಾರತದ ಮಿಲಿಟರಿ ಕ್ಯಾಂಟೀನ್‌ನಲ್ಲಿನ ಮೆನುವಿನಲ್ಲಿ ಚಿಕನ್ 65 ಖಾದ್ಯವೂ 65 ನೇ ಸ್ಥಾನದಲ್ಲಿತ್ತು. ಗ್ರಾಹಕರಿಗೆ ಸುಲಭವಾಗಿ ಗುರುತಿಸಲು ಹಿಂದೆಲ್ಲಾ ಮೆನುವಿನಲ್ಲಿ ಸಂಖ್ಯೆಗಳನ್ನು ನೀಡಲಾಗುತ್ತಿತ್ತು. ಈ ಸಂಖ್ಯೆಯಿಂದಲೇ ಈ ಖಾದ್ಯಕ್ಕೆ ಚಿಕನ್ 65 ಎಂದು ಹೆಸರು ಬಂದಿತು ಎನ್ನಲಾಗಿದೆ.
ಇದನ್ನೂ ಓದಿ: ಸಮಯ ನಿರ್ವಹಣೆ ಹೀಗೆ ಮಾಡಿದ್ರೆ ಯಶಸ್ಸು ಖಂಡಿತ ನಿಮ್ಮದಾಗಲು ಸಾಧ್ಯ ಎನ್ನುತ್ತಾರೆ ಚಾಣಕ್ಯ
ಚೆನ್ನೈನ ಬುಹಾರಿ ಹೋಟೆಲ್ ಹುಟ್ಟಿಕೊಂಡ ಭಕ್ಷ್ಯ ಈ ಚಿಕನ್ 65
ಚಿಕನ್ 65 ಎಂಬ ಖಾದ್ಯವು 1965 ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿರುವ ಬುಹಾರಿ ಹೋಟೆಲ್‌ನಲ್ಲಿ ಹುಟ್ಟಿಕೊಂಡಿತು ಎನ್ನಲಾಗುತ್ತದೆ. ಬುಹಾರಿ ಹೋಟೆಲ್ ಸಂಸ್ಥಾಪಕ ಬುಹಾರಿ ಎಂಬುವವರು ಈ ಭಕ್ಷ್ಯವನ್ನು ಕಂಡುಹಿಡಿದಿದ್ದಾರೆ. ಮೊದಲಿಗೆ ಹೋಟೆಲ್‌ನಲ್ಲಿ ಇದನ್ನು ಗ್ರಾಹಕರಿಗೆ ತ್ವರಿತ ತಿಂಡಿಯಾಗಿ ಚಿಕನ್ 65 ಅನ್ನು ಬಡಿಸಲಾಯಿತು. ಇದರ ರುಚಿಯಾಗಿದ್ದ ಕಾರಣ ಜನಪ್ರಿಯತೆ ಗಳಿಸಿಕೊಂಡಿತು. ಹೀಗಾಗಿ ಈ ಖಾದ್ಯಕ್ಕೆ ಚಿಕನ್ 65 ಹೆಸರಿಡಲಾಯಿತು ಎನ್ನಲಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







